ದೆಹಲಿಯಲ್ಲಿ ಸುರ್ಜೇವಾಲಾ ಜೊತೆ ನಡೆದ ಅಸಲಿ ಚರ್ಚೆಯ ಬಗ್ಗೆ ಸಿಎಂ ಸಿದ್ದರಾಮಯ್ಯ ಮಾತಾಡಲ್ಲ
ನಿಮಗೆ ನೆನಪಿರಬಹುದು, 2023 ರ ಚುನಾವಣೆಯಲ್ಲಿ ಕಾಂಗ್ರೆಸ್ 135 ಸೀಟುಗಳನ್ನು ಕಾಂಗ್ರೆಸ್ ಗೆದ್ದಾಗ ದೆಹಲಿಯಲ್ಲಿ ಹೆಚ್ಚು ಕಡಿಮೆ ಇಂಥ ದೃಶ್ಯಗಳು ಕಾಣುತ್ತಿದ್ದವು. ಆಗ ತಾನೇ ಮುಖ್ಯಮಂತ್ರಿಯಾಗಬೇಕೆಂಬ ಜಿದ್ದು ಸಿದ್ದರಾಮಯ್ಯ ಮತ್ತು ಶಿವಕುಮಾರ್ ನಡುವೆ ಇತ್ತು, ಈಗ ಅದೇ ಜಿದ್ದು ಕೊಂಚ ಭಿನ್ನ ರೀತಿಯಲ್ಲಿ ಮುಂದುವರಿದೆ. ಸ್ಥಾನ ಉಳಿಸಿಕೊಳ್ಳಲು ಮತ್ತು ಪಡೆದುಕೊಳ್ಳಲು ಸಂಘರ್ಷ ನಡೆದಿದೆ.
ದೆಹಲಿ, ಜುಲೈ 11: ದೆಹಲಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಮತ್ತು ಡಿಕೆ ಶಿವಕುಮಾರ್ ಇಂದು ಬೆಳಗ್ಗೆ ರಾಜ್ಯದ ಎಐಸಿಸಿ ಉಸ್ತುವಾರಿ ರಂದೀಪ್ ಸುರ್ಜೆವಾಲಾ ಅವರನ್ನು ಭೇಟಿಯಾದರು. ನಂತರ ಮಾಧ್ಯಮಗಳೊಂದಿಗೆ ಮತಾಡಿದ ಸಿದ್ದರಾಮಯ್ಯ, ಬಾಕಿಯುಳಿದಿರುವ ನಿಗಮ, ಮಂಡಳಿಗಳಿಗೆ ಅಧ್ಯಕ್ಷರ ನೇಮಕಾತಿ ವಿಷಯವನ್ನು ಸುರ್ಜೇವಾಲಾ ಅವರೊಂದಿಗೆ ಚರ್ಚಿಸಲಾಯಿತು, ಅದರೆ ಚರ್ಚೆ ಅಪೂರ್ಣವಾಗಿದೆ; ಹಾಗಾಗೇ ಅವರು ಜುಲೈ 16 ರಂದು ಪುನಃ ಬೆಂಗಳೂರಿಗೆ ಬರಲಿದ್ದಾರೆ, ಅವರ ಭೇಟಿಯ ಸಂದರ್ಭದಲ್ಲಿ ಅಧ್ಯಕ್ಷರ ಹೆಸರುಗಳನ್ನು ಅಂತಿಮಗೊಳಿಸಲಾಗುವುದು ಎಂದರು.
ಇದನ್ನೂ ಓದಿ: ನಾಯಕತ್ವ ಬದಲಾವಣೆ ಇಲ್ಲ: ಸಿಎಂ ಸಿದ್ದರಾಮಯ್ಯಗೆ ಸ್ಪಷ್ಟ ಸಂದೇಶ ರವಾನಿಸಿರುವ ಕಾಂಗ್ರೆಸ್ ಹೈಕಮಾಂಡ್
ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ
Latest Videos