ದೆಹಲಿಯಂತೆ ಭೋಗ ನಂದೀಶ್ವರ ದೇವಸ್ಥಾನದಲ್ಲೂ ಸಿದ್ದರಾಮಯ್ಯ 5-ವರ್ಷ ತಾವೇ ಸಿಎಂ ಎಂದಿದ್ದಾರೆ: ಪರಮೇಶ್ವರ್
ಧಾರ್ಮಿಕ ಕೆಲಸಕ್ಕೆ ಬಂದಿದ್ದೇನೆ ಹಾಗಾಗಿ ರಾಜಕೀಯ ವಿಷಯಗಳನ್ನು ಮಾತಾಡಲಾರೆ ಎನ್ನುತ್ತಲೇ ಪರಮೇಶ್ವರ್ ಕೆಲ ರಾಜಕೀಯ ಸಂಗತಿಗಳನ್ನು ಹೇಳಿದರು. ತಮ್ಮ ಧರ್ಮಪತ್ನಿಯೊಂದಿಗೆ ಪ್ರಾರ್ಥನೆ ಸಲ್ಲಿಸಿದ ಪರಮೇಶ್ವರ್, ನಾಡಿನಲ್ಲಿ ಮಳೆ ಬೆಳೆ ಚೆನ್ನಾಗಿ ಆಗಲಿ, ಎಲ್ಲರೂ ಸಮೃದ್ಧಿಯ ಜೀವನ ನಡೆಸಲಿ, ಎಲ್ಲರನ್ನೂ ಹರಸು ತಾಯಿ ಅಂತ ಕೇಳಿಕೊಂಡಾಗ ಅದರಲ್ಲಿ ತಾನೂ ಸೇರಿಕೊಂಡಂತಾಯಿತು ಎಂದು ನಗುತ್ತಾ ಹೇಳಿದರು.
ಮೈಸೂರು, ಜುಲೈ 11: ಚಾಮುಂಡೇಶ್ವರಿ ದೇವಿಯ ದರ್ಶನ ಪಡೆದ ಬಳಿಕ ಮಾಧ್ಯಮಗಳೊಂದಿಗೆ ಮಾತಾಡಿದ ಗೃಹ ಸಚಿವ ಜಿ ಪರಮೇಶ್ವರ್ (G Parameshwar), ಸಿದ್ದರಾಮಯ್ಯನವರು 5-ವರ್ಷ ಅವಧಿಗೆ ನಾನೇ ಸಿಎಂ ಅಂತ ದೆಹಲಿಯಲ್ಲಿ ಹೇಳಿರುವುದಕ್ಕೆ ಪ್ರತಿಕ್ರಿಯೆಯನ್ನು ನೀಡಿ ಅವರು ದೆಹಲಿಯಲ್ಲಿ ಹೇಳಿರುವುದಲ್ಲದೆ, ಮೊನ್ನೆ ನಂದಿಬೆಟ್ಟದ ಕೆಳಭಾಗದಲ್ಲಿರುವ ಭೋಗ ನಂದೀಶ್ವರ ದೇವಸ್ಥಾನದಲ್ಲೂ ಆ ಮಾತನ್ನು ಹೇಳಿದ್ದಾರೆ, ಆಗ ತಾನು ಅವರೊಂದಿಗಿದ್ದೆ ಎಂದರು. ಅಧಿಕಾರಕ್ಕೆ ಬರುವ ಮೊದಲು ಚುನಾವಣೆ ಸಮಯದಲ್ಲಿ 5 ವರ್ಷ ಕಾಲ ಜನಪರ ಆಡಳಿತ ನೀಡುವ ಭರವಸೆ ನೀಡಿದ್ದೇವೆ ಮತ್ತು ಅದನ್ನೇ ಮಾಡುತ್ತಿದ್ದೇವೆ ಎಂದು ಪರಮೇಶ್ವರ್ ಹೇಳಿದರು.
ಇದನ್ನೂ ಓದಿ: ಸಿದ್ರಾಮಣ್ಣನತ್ರ ದುಡ್ಡಿಲ್ಲ: ಪರಮೇಶ್ವರ್ ಹೇಳಿಕೆ ವೈರಲ್
ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ
Latest Videos

