ಬೆಂಗಳೂರು ಕಾಲ್ತುಳಿತ, ಸರ್ಕಾರಕ್ಕೆ ಮುಖಭಂಗ: ಸಿಎಟಿ ಆದೇಶ ಪ್ರತಿ ಇನ್ನೂ ನೋಡಿಲ್ಲವೆಂದ ಜಿ ಪರಮೇಶ್ವರ್!
ಎಐಸಿಸಿ ಕರ್ನಾಟಕ ಉಸ್ತುವಾರಿ ರಂದೀಪ್ ಸುರ್ಜೆವಾಲಾ ಬೆಂಗಳೂರುಗೆ ಬಂದು ಕಾಂಗ್ರೆಸ್ ಶಾಸಕರನ್ನು ಮಾತಾಡಿಸುತ್ತಿದ್ದಾರೆ. ಪರಮೇಶ್ವರ್ ಅವರಿನ್ನೂ ಸುರ್ಜೆವಾಲಾರನ್ನು ಭೇಟಿಯಾಗಿಲ್ಲ, ತನ್ನನ್ನು ಕರೆದರೆ ಹೋಗುತ್ತೇನೆ ಎಂದು ಹೇಳುತ್ತಾರೆ. ಕಾಂಗ್ರೆಸ್ ಶಾಸಕರಲ್ಲಿರುವ ಗುಂಪುಗಾರಿಕೆ, ಅಸಮಾಧಾನ ಮತ್ತು ಭಿನ್ನಮತವನ್ನು ಪರಿಹರಿಸಲು, ಸುರ್ಜೆವಾಲಾ ನಗರಕ್ಕೆ ಆಗಮಿಸಿದ್ದಾರೆ. ನಿನ್ನೆಯಿಂದ ಅವರು ಶಾಸಕರನ್ನು ಭೇಟಿಯಾಗುತ್ತಿದ್ದಾರೆ.
ಬೆಂಗಳೂರು, ಜುಲೈ 1: ಜೂನ್ 4 ರಂದು ನಗರದಲ್ಲಿ ನಡೆದ ಕಾಲ್ತುಳಿತ (Bengaluru stampede) ಪ್ರಕರಣದಲ್ಲಿ ವಿನಾಕಾರಣ ಪೊಲೀಸ್ ಅಧಿಕಾರಿಗಳನ್ನು ಅಮಾನತ್ತು ಮಾಡಿ ತನ್ನ ಮಾನ ಉಳಿಸಿಕೊಳ್ಳಲು ಪ್ರಯತ್ನಿಸಿದ ಸರ್ಕಾರದ ಪ್ರಯತ್ನಕ್ಕೆ ಮುಖಭಂಗವಾಗಿದೆ. ಪೊಲೀಸ್ ಅಧಿಕಾರಿಗಳನ್ನು ಆಧಾರವಿಲ್ಲದೆ ಸಸ್ಪೆಂಡ್ ಮಾಡಿರುವುದು ತಪ್ಪೆಂದು ಕೇಂದ್ರ ಆಡಳಿತಾತ್ಮಕ ನ್ಯಾಯಾಧಿಕರಣ ಹೇಳಿದೆ. ಇದೇ ಹಿನ್ನೆಲೆಯಲ್ಲಿ ಗೃಹ ಸಚಿವ ಜಿ ಪರಮೇಶ್ವರ್ ಅವರಿಗೆ ಪ್ರಶ್ನೆ ಕೇಳಿದಾಗ ಅವರು ತಮ್ಮ ಎಂದಿನ ಗೊತ್ತಿಲ್ಲ, ಆದೇಶ ಪ್ರತಿ ನೋಡಿಲ್ಲ ಪ್ರತಿಕ್ರಿಯೆಗಳಿಗೆ ಶರಣಾದರು. ಸಿಎಟಿ ಚಾಟಿ ಬೀಸಿ ಮೂರುದಿನ ಕಳೆದರೂ ಪರಮೇಶ್ವರ್ ತಾನಿನ್ನೂ ಆದೇಶದ ಪ್ರತಿ ನೋಡಿಲ್ಲ ಅಂತ ಹೇಳಿರುವುದು ಆಶ್ಚರ್ಯ ಮೂಡಿಸುತ್ತದೆ.
ಇದನ್ನೂ ಓದಿ: ಸಿದ್ರಾಮಣ್ಣನತ್ರ ದುಡ್ಡಿಲ್ಲ: ಪರಮೇಶ್ವರ್ ಹೇಳಿಕೆ ವೈರಲ್
ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ