ಸಣ್ಣ ವ್ಯಾಪಾರಿಗಳಿಗೆ ಕಮರ್ಷಿಯಲ್ ಟ್ಯಾಕ್ಸ್ ಶಾಕ್, ಭಾರೀ ಮೊತ್ತಗಳ ತೆರಿಗೆ ಕಟ್ಟುವಂತೆ ನೋಟೀಸ್!
ವಿಜಯ ಶೆಟ್ಟಿ ಮತ್ತು ರಾಘವೇಂದ್ರ ಶೆಟ್ಟಿ ಹೆಸರಿನ ವ್ಯಾಪಾರಿಗಳಿಗೆ ಗೂಗಲ್ ಪೇ ಅಥವಾ ಫೋನ್ ಪೇ ಸಂಸ್ಥೆಗಳಿಂದಾಗಲೀ, ವ್ಯಾಪಾರಿಗಳು ಖಾತೆ ಹೊಂದಿರುವ ಬ್ಯಾಂಕ್ನವರಿಂದಾಗಲೀ ತೆರಿಗೆ ಕಟ್ಟಬೇಕಿರುವ ಬಗ್ಗೆ ಮಾಹಿತಿ ಸಿಕ್ಕಿಲ್ಲ. ವಿಜಯ ಶೆಟ್ಟಿ ₹41 ಲಕ್ಷಕ್ಕೂ ಹೆಚ್ಚು ಮತ್ತು ರಾಘವೇಂದ್ರ ಶೆಟ್ಟಿ ₹ 63 ಲಕ್ಷಕ್ಕೂ ಹೆಚ್ಚು ತೆರಿಗೆ ಹಣ ಕಟ್ಟಬೇಕೆಂದು ಇಲಾಖೆಯಿಂದ ನೋಟೀಸ್ ಬಂದಿದ್ದು ಇವರಿಬ್ಬರಿಗೆ ದಿಕ್ಕುತೋಚದಂತಾಗಿದೆ.
ಬೆಂಗಳೂರು, ಜುಲೈ 10: ನಗರದಲ್ಲಿ ಬೇಕರಿ, ಜ್ಯೂಸ್ ಅಂಗಡಿ, ಕಾಂಡಿಮೆಂಟ್ಸ್ ಅಂಗಡಿ ಇಟ್ಟುಕೊಂಡು ಬದುಕು ನಡೆಸುತ್ತಿರುವ ಸಣ್ಣ ವ್ಯಾಪಾರಿಗಳಿಗೆ ಕಮರ್ಷಿಯಲ್ ಟ್ಯಾಕ್ಸ್ ಇಲಾಖೆ ಅವರ ಬದುಕಿನ ಅತಿ ದೊಡ್ಡ ಶಾಕ್ ನೀಡಿದೆ. ವ್ಯಾಪಾರಿಗಳ ಅಪರಾಧವೆಂದರೆ ಗ್ರಾಹಕರಿಂದ ಆನ್ಲೈನ್ ಮುಖಾಂತರ ಹಣ ಸ್ವೀಕರಿಸಿರುವುದು. ವ್ಯಾಪಾರಿಗಳು ವ್ಯಾಪಾರ ಶುರುಮಾಡಿದಾಗಿನಿಂದ ಇದುವರೆಗೆ ನಡೆಸಿರುವ ವಹಿವಾಟಿನ ಮೇಲೆ ವಾಣಿಜ್ಯ ತೆರಿಗೆ ಕಟ್ಟಬೇಕೆಂದು ಇಲಾಖೆ ನೋಟೀಸ್ ಕಳಿಸಿದೆ. ಇವರು ಕಟ್ಟಬೇಕಿರುವ ಟ್ಯಾಕ್ಸ್ ಗಳ ಮೊತ್ತ ಕೇಳಿದರೆ ಬೆಚ್ಚಿಬೀಳುವ ಸರದಿ ನಿಮ್ಮದಾಗುತ್ತದೆ. ನಮ್ಮ ವರದಿಗಾರ ನಾಗರಭಾವಿಯ ಇಬ್ಬರು ಸಣ್ಣ ವ್ಯಾಪಾರಿಗಳೊಂದಿಗೆ ಮಾತಾಡಿದ್ದು ಅವರು ತಮ್ಮ ನೋವು ಮತ್ತು ನೋಟೀಸ್ ನೋಡಿದ ಮೇಲೆ ಆಗಿರುವ ಆಘಾತವನ್ನು ತೋಡಿಕೊಂಡಿದ್ದಾರೆ.
ಇದನ್ನೂ ಓದಿ: ಬನ್ನೇರುಘಟ್ಟ ಜೂ, ಸಫಾರಿ, ಚಿಟ್ಟೆ ಪಾರ್ಕ್ಗೆ ಆನ್ಲೈನ್ ಮೂಲಕ ಟಿಕೆಟ್ ಬುಕ್ ಮಾಡುವಾಗ ಎಚ್ಚರ
ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ

