SilverLine Project ಕೇರಳ ಸರ್ಕಾರ ದಾರಿ ತಪ್ಪಿಸುತ್ತಿದೆ: ರಾಜ್ಯಸಭೆಯಲ್ಲಿ ಕೇಂದ್ರ ಸಚಿವ ವಿ.ಮುರಳೀಧರನ್

ರಾಜ್ಯಸಭೆಯಲ್ಲಿ ಮಾತನಾಡಿದ ಮುರಳೀಧರನ್ ಈ ಯೋಜನೆಗೆ ರೈಲ್ವೆ ಸಚಿವಾಲಯದ ಒಪ್ಪಿಗೆ ಇದೆ ಎಂಬ ವದಂತಿ ಹಬ್ಬಿದೆ.ಯಾವುದೇ ಸಾಮಾಜಿಕ ಪರಿಣಾಮದ ಮೌಲ್ಯಮಾಪನ ನಡೆಸಿಲ್ಲ. ಮನೆಗಳ ಮೇಲೆ ದಾಳಿ ಮಾಡಿ ಈ ಯೋಜನೆಗೆ ಸರ್ವೇ ಕಲ್ಲುಗಳನ್ನು ಸ್ಥಾಪನೆ ಮಾಡಲಾಗುತ್ತದೆ.

SilverLine Project ಕೇರಳ ಸರ್ಕಾರ ದಾರಿ ತಪ್ಪಿಸುತ್ತಿದೆ:  ರಾಜ್ಯಸಭೆಯಲ್ಲಿ ಕೇಂದ್ರ ಸಚಿವ ವಿ.ಮುರಳೀಧರನ್
ರಾಜ್ಯಸಭೆಯಲ್ಲಿ ವಿ ಮುರಳೀಧರನ್
Follow us
| Updated By: ರಶ್ಮಿ ಕಲ್ಲಕಟ್ಟ

Updated on: Mar 23, 2022 | 7:48 PM

ನವದೆಹಲಿ: ಸಿಲ್ವರ್​​ಲೈನ್ ಯೋಜನೆಗೆ (SilverLine Project)ಸಂಬಂಧಿಸಿದಂತೆ ಕೇರಳ (Kerala) ಸರ್ಕಾರವು ಜನರನ್ನು ದಾರಿ ತಪ್ಪಿಸುತ್ತಿದೆ ಎಂದು ಕೇಂದ್ರ ಸಚಿವ ವಿ.ಮುರಳೀಧರನ್ (V Muraleedharan) ಆರೋಪಿಸಿದ್ದಾರೆ. ರಾಜ್ಯಸಭೆಯಲ್ಲಿ ಮಾತನಾಡಿದ ಅವರು ಈ ಯೋಜನೆಗೆ ರೈಲ್ವೆ ಸಚಿವಾಲಯದ ಒಪ್ಪಿಗೆ ಇದೆ ಎಂಬ ವದಂತಿ ಹಬ್ಬಿದೆ.ಯಾವುದೇ ಸಾಮಾಜಿಕ ಪರಿಣಾಮದ ಮೌಲ್ಯಮಾಪನ ನಡೆಸಿಲ್ಲ. ಮನೆಗಳ ಮೇಲೆ ದಾಳಿ ಮಾಡಿ ಈ ಯೋಜನೆಗೆ ಸರ್ವೇ ಕಲ್ಲುಗಳನ್ನು ಸ್ಥಾಪನೆ ಮಾಡಲಾಗುತ್ತದೆ. ನಿಯಮಗಳನ್ನು ಪಾಲಿಸದೆಯೇ ಪ್ರಕ್ರಿಯೆ ಮುಂದುವರಿದಿದೆ. ಕೇರಳದಲ್ಲಿ ಗಂಭೀರ ಕಾನೂನು ಸುವ್ಯವಸ್ಥೆ ಸಮಸ್ಯೆ ಇದೆ ಎಂದು ಹೇಳಿದ್ದಾರೆ. ಇದೇ ವೇಳೆ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಸಿಲ್ವರ್ ಲೈನ್ ಯೋಜನೆ ನಿಲ್ಲಿಸಲು ಕೇಂದ್ರ ಮಧ್ಯಸ್ಥಿಕೆ ವಹಿಸಬೇಕು ಎಂದು ಆಗ್ರಹಿಸಿದರು. ಕೇಂದ್ರ ಸರ್ಕಾರದ ಹೆಸರಲ್ಲಿ ಸರ್ವೇ ಕಲ್ಲುಗಳನ್ನು ಸ್ಥಾಪಿಸಲಾಗುತ್ತಿದೆ ಎಂದು ಅವರು ಹೇಳಿದ್ದಾರೆ.

ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರ ರಾಜಕೀಯ ಜೀವನದಲ್ಲಿ ಸಿಲ್ವರ್​ಲೈನ್ ‘ವಾಟರ್ ಲೂ’ ಆಗಲಿದೆ ಎಂದು ಕೆಪಿಸಿಸಿ ಮಾಜಿ ಅಧ್ಯಕ್ಷ ಮುಲ್ಲಪ್ಪಳ್ಳಿ ರಾಮಚಂದ್ರನ್ ಹೇಳಿದ್ದಾರೆ. ಶಬರಿಮಲೆ ವಿಚಾರದಲ್ಲಿ ತಳೆದ ನಿಲುವಿಗೆ ದೊಡ್ಡ ಹಿನ್ನಡೆ ಮರುಕಳಿಸಲಿದೆ. ಸಚಿವರು ಮತ್ತು ಮುಖಂಡರ ಪ್ರತಿಕ್ರಿಯೆಗಳು ಡಿಪಿಆರ್‌ನಂತೆ ಅಸ್ಪಷ್ಟವಾಗಿದೆ ಎಂದು ಮುಲ್ಲಪ್ಪಳ್ಳಿ ಹೇಳಿದರು.

ರಾಜ್ಯಸಭೆಯಲ್ಲಿ  ಕೈ  ರೈಲ್ ವಿಷಯ ಪ್ರಸ್ತಾಪಿಸಿದ ಸಂಸದ ಜಾನ್ ಬ್ರಿಟಾಸ್

ಸಂಸದ ಜಾನ್ ಬ್ರಿಟಾಸ್ ಕೆ ರೈಲ್ ಯೋಜನೆಯ ವಿವರಗಳನ್ನು  ರಾಜ್ಯಸಭೆಯಲ್ಲಿ ಪ್ರಸ್ತುತಪಡಿಸಿದರು. ಕೆ ರೈಲ್ ಯೋಜನೆಗೆ ಕೇಂದ್ರ ಏಕೆ ಅಡ್ಡಿಪಡಿಸುತ್ತಿದೆ ಎಂದು ಪ್ರಶ್ನಿಸಿದ  ಅವರು ಕೇಂದ್ರ ಮಾಡುತ್ತಿರುವ ಕೀಳುಮಟ್ಟದ ರಾಜಕಾರಣ ಕೊನೆಗೊಳಿಸಬೇಕು ಎಂದು ಹೇಳಿದ್ದಾರೆ. ಅದೇ ವೇಳೆ ಕಾಂಗ್ರೆಸ್ ಮತ್ತು ಬಿಜೆಪಿ ಜತೆಯಾಗಿ ನಮ್ಮ ವಿರುದ್ಧ ಕೆಲಸ ಮಾಡುತ್ತಿದ್ದೆ ಎಂದಿದ್ದಾರೆ.  ಜಾನ್ ಬ್ರಿಟಾಸ್ ಭಾಷಣಕ್ಕೆ ಕೇಂದ್ರ ಸಚಿವ ವಿ ಮುರಳೀಧರನ್ ವಿರೋಧ ವ್ಯಕ್ತಪಡಿಸಿದ್ದು, ಜಾನ್ ಬ್ರಿಟಾಸ್ ಕೂಡಾ ಮುರಳೀಧರನ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಮುರಳೀಧರನ್ ಪ್ರತಿಭಟನಾಕಾರರನ್ನು ಸೇರಿಕೊಂಡು ಕೆ ರೈಲ್ ವಿರುದ್ಧ ಪ್ರತಿಭಟಿಸಲು ದೇಶಾದ್ಯಂತ ಮೆರವಣಿಗೆ ನಡೆಸಿದರು ಎಂದಿದ್ದಾರೆ ಬ್ರಿಟಾಸ್.  ಇ ಶ್ರೀಧರನ್ ಅವರದ್ದು ದ್ವಂದ್ವ ನೀತಿಯಾಗಿದ್ದು, ಕೊಂಕಣ ರೈಲ್ವೆ ನಿರ್ಮಾಣವಾದಾಗ ಇಲ್ಲದ ಪರಿಸರ ಸಮಸ್ಯೆ ಅವರಿಗೆ ಈಗ ಎದುರಾಗಿದೆ. ರೈಲ್ವೆ ಅಭಿವೃದ್ಧಿಯಲ್ಲಿ ಕೇರಳ ಅತ್ಯಂತ ನಿರ್ಲಕ್ಷ್ಯಕ್ಕೆ ಒಳಗಾಗಿರುವ ರಾಜ್ಯ ಎಂದು ಬ್ರಿಟಾಸ್ ಹೇಳಿದ್ದಾರೆ.

ಸಿಲ್ವರ್​​ಲೈನ್​​ನಲ್ಲಿ ಪಾಲು ಹೊಂದಿರುವ ರೈಲ್ವೇ ಸಚಿವರು ಯೋಜನೆ ವಿರೋಧಿಸುವವರ ಜತೆ ಕೈಜೋಡಿಸುತ್ತಿದ್ದಾರೆ. ಸಚಿವರು ಬೆಂಕಿಗೆ ಎಣ್ಣೆ ಸುರಿಯುತ್ತಿದ್ದಾರೆ. ರೈಲ್ವೆ ಅಭಿವೃದ್ಧಿಯಲ್ಲಿ ರಾಜ್ಯಗಳು ಭಾಗಿಯಾಗಬಹುದು ಎಂದು ಮೋದಿ ಸಂಪುಟ ನಿರ್ಧರಿಸಿದೆ. ಶೇ 49 ರಷ್ಟು ಪಾಲು ಹೊಂದಿರುವ ರೈಲ್ವೆ ಸಚಿವರು ಯೋಜನೆಯಿಂದ ದೂರ ಸರಿಯುತ್ತಿದ್ದಾರೆ ಎಂದು ಬ್ರಿಟಾಸ್ ರಾಜ್ಯಸಭೆಯಲ್ಲಿ ಆರೋಪಿಸಿದರು. ದೇಶಕ್ಕೆ ಎಕ್ಸ್‌ಪ್ರೆಸ್‌ವೇಗಳು ಬೇಕು ಎಂದು ಸಚಿವರು ಹೇಳುತ್ತಿದ್ದು, ಸಿಲ್ವರ್ ಲೈನ್ ಅನ್ನು ಸಚಿವರು ಏಕೆ ವಿರೋಧಿಸುತ್ತಿದ್ದಾರೆ? ಎಂದು ಬ್ರಿಟಾಸ್ ಪ್ರಶ್ಶಿಸಿದ್ದಾರೆ.  ಇ ಶ್ರೀಧರನ್ ಬಿಜೆಪಿ ಮುಖ್ಯಮಂತ್ರಿ ಅಭ್ಯರ್ಥಿಯಾಗಿದ್ದರು. ಪಾಲಕ್ಕಾಡ್ ನಲ್ಲಿ ಕಚೇರಿಯನ್ನು ತೆರೆಯಲಾಯಿತು. ಬೆಟ್ಟಗಳನ್ನು ಅಗೆದು, ಜಲಾಶಯಗಳನ್ನು ಮುಚ್ಚಿ  ಕೊಂಕಣ ಮಾರ್ಗವನ್ನು ಮಾಡಿದ ಇ ಶ್ರೀಧರನ್ ಅವರೇ ಈಗ ಕೆ ರೈಲಿನಿಂದ ಪರಿಸರಕ್ಕೆ ಹಾನಿ ಎಂದು ಹೇಳುತ್ತಿರುವುದು. ಇಂತಹ ಪಕ್ಷದ ರಾಜಕೀಯ ಒತ್ತಡಕ್ಕೆ ರೈಲ್ವೆ ಸಚಿವರು ಮಣಿಯಬಾರದು ಎಂದು ಸಂಸದ ಜಾನ್ ಬ್ರಿಟಾಸ್ ಆಗ್ರಹಿಸಿದ್ದಾರೆ.

ಇದನ್ನೂ ಓದಿ: Watch: ಸ್ವಚ್ಛ ಮಾಡಲು ಚರಂಡಿಗಿಳಿದ ಪೂರ್ವ ದೆಹಲಿಯ ಎಎಪಿ ಕೌನ್ಸಿಲರ್, ನಂತರ ಸಿನಿಮಾ ಶೈಲಿಯಲ್ಲಿ ಕ್ಷೀರ ಸ್ನಾನ

ಶಿವರಾಜ್​ಕುಮಾರ್​ ಆರೋಗ್ಯ ಸಮಸ್ಯೆ; ಕರೆ ಮಾಡಿ ವಿಚಾರಿಸಿದ ಯಶ್, ಸುದೀಪ್
ಶಿವರಾಜ್​ಕುಮಾರ್​ ಆರೋಗ್ಯ ಸಮಸ್ಯೆ; ಕರೆ ಮಾಡಿ ವಿಚಾರಿಸಿದ ಯಶ್, ಸುದೀಪ್
ಕೆರೆ ಹಾಡಿಯ ಪಡಸಾಲೆಯಲ್ಲಿ ಕುಳಿತು ಜನದ ಸಮಸ್ಯೆ ಆಲಿಸಿದ ಸಿದ್ದರಾಮಯ್ಯ
ಕೆರೆ ಹಾಡಿಯ ಪಡಸಾಲೆಯಲ್ಲಿ ಕುಳಿತು ಜನದ ಸಮಸ್ಯೆ ಆಲಿಸಿದ ಸಿದ್ದರಾಮಯ್ಯ
ಜನಾಂಗೀಯ ನಿಂದನೆಯಾಗಿದೆ ಅಂತ ಕುಮಾರಸ್ವಾಮಿ ಯಾಕೆ ದೂರು ನೀಡಿಲ್ಲ? ಶಿವಕುಮಾರ್
ಜನಾಂಗೀಯ ನಿಂದನೆಯಾಗಿದೆ ಅಂತ ಕುಮಾರಸ್ವಾಮಿ ಯಾಕೆ ದೂರು ನೀಡಿಲ್ಲ? ಶಿವಕುಮಾರ್
ಜಮೀರ್ ಅಹ್ಮದ್​​ರನ್ನು ಸೃಷ್ಟಿ ಮಾಡಿದ್ದೇ ದೇವೇಗೌಡರ ಕುಟುಂಬ: ವಿ ಸೋಮಣ್ಣ
ಜಮೀರ್ ಅಹ್ಮದ್​​ರನ್ನು ಸೃಷ್ಟಿ ಮಾಡಿದ್ದೇ ದೇವೇಗೌಡರ ಕುಟುಂಬ: ವಿ ಸೋಮಣ್ಣ
ಹನುಮಂತನ ಪಂಚೆ ಧರಿಸಿದ ಗೌತಮಿ ಜಾದವ್; ಬಟ್ಟೆ ಮಹಿಮೆಯಿಂದ ಬದಲಾಯ್ತು ವರ್ತನೆ
ಹನುಮಂತನ ಪಂಚೆ ಧರಿಸಿದ ಗೌತಮಿ ಜಾದವ್; ಬಟ್ಟೆ ಮಹಿಮೆಯಿಂದ ಬದಲಾಯ್ತು ವರ್ತನೆ
ಸಿದ್ದರಾಮಯ್ಯ ವಿರುದ್ಧ ಯಾವತ್ತೂ ವೈಯಕ್ತಿಕ ಟೀಕೆ ಮಾಡಿಲ್ಲ: ಎ ಮಂಜು
ಸಿದ್ದರಾಮಯ್ಯ ವಿರುದ್ಧ ಯಾವತ್ತೂ ವೈಯಕ್ತಿಕ ಟೀಕೆ ಮಾಡಿಲ್ಲ: ಎ ಮಂಜು
ಚನ್ನಪಟ್ಟಣದಲ್ಲಿ ನಾನೇ ಮುಖ್ಯಮಂತ್ರಿ ಅಂತ ಶಿವಕುಮಾರ್ ಹೇಳುತ್ತಾರೆ: ಅಶೋಕ
ಚನ್ನಪಟ್ಟಣದಲ್ಲಿ ನಾನೇ ಮುಖ್ಯಮಂತ್ರಿ ಅಂತ ಶಿವಕುಮಾರ್ ಹೇಳುತ್ತಾರೆ: ಅಶೋಕ
ನಾನು ತಪ್ಪು ಮಾಡಿದ್ರೆ ಕ್ಷೇತ್ರದಲ್ಲಿ ರಕ್ತ ಕಾರಿ ಸಾಯಬೇಕು ಎಂದ ಮುನಿರತ್ನ
ನಾನು ತಪ್ಪು ಮಾಡಿದ್ರೆ ಕ್ಷೇತ್ರದಲ್ಲಿ ರಕ್ತ ಕಾರಿ ಸಾಯಬೇಕು ಎಂದ ಮುನಿರತ್ನ
ಕುಮಾರಸ್ವಾಮಿಯನ್ನು ಸಿಎಂ ಮಾಡಲು ನಾನು ಬಸ್ ಓಡಿಸಿದ್ದು: ಜಮೀರ್ ಅಹ್ಮದ್
ಕುಮಾರಸ್ವಾಮಿಯನ್ನು ಸಿಎಂ ಮಾಡಲು ನಾನು ಬಸ್ ಓಡಿಸಿದ್ದು: ಜಮೀರ್ ಅಹ್ಮದ್
ಮಹಿಳೆಯ ಎದೆ ಸ್ಪರ್ಶಿಸಿ ಪರಾರಿಯಾದ ಯುವಕನ ಬಂಧನ; ವಿಡಿಯೋ ವೈರಲ್​​
ಮಹಿಳೆಯ ಎದೆ ಸ್ಪರ್ಶಿಸಿ ಪರಾರಿಯಾದ ಯುವಕನ ಬಂಧನ; ವಿಡಿಯೋ ವೈರಲ್​​