Watch: ಸ್ವಚ್ಛ ಮಾಡಲು ಚರಂಡಿಗಿಳಿದ ಪೂರ್ವ ದೆಹಲಿಯ ಎಎಪಿ ಕೌನ್ಸಿಲರ್, ನಂತರ ಸಿನಿಮಾ ಶೈಲಿಯಲ್ಲಿ ಕ್ಷೀರ ಸ್ನಾನ

ಬಿಳಿ ಕುರ್ತಾ ಧರಿಸಿ ಎದೆವರೆಗೆ ಕೊಳಚೆ ನೀರಿನಲ್ಲಿ ನಿಂತು ಅದರಲ್ಲಿ ತೇಲುತ್ತಿದ್ದ ತ್ಯಾಜ್ಯವಸ್ತುಗಳನ್ನು ಹಸನ್ ತೆಗೆದು ಹಾಕುತ್ತಿರುವುದು ಮೊಬೈಲ್​ನಲ್ಲಿ ಚಿತ್ರೀಕರಿಸಿದ ವಿಡಿಯೊದಲ್ಲಿದೆ.

Watch: ಸ್ವಚ್ಛ ಮಾಡಲು ಚರಂಡಿಗಿಳಿದ ಪೂರ್ವ ದೆಹಲಿಯ ಎಎಪಿ  ಕೌನ್ಸಿಲರ್, ನಂತರ ಸಿನಿಮಾ ಶೈಲಿಯಲ್ಲಿ ಕ್ಷೀರ ಸ್ನಾನ
ಆಮ್ ಆದ್ಮಿ ಪಕ್ಷದ ಕೌನ್ಸಿಲರ್‌ ಹಸೀಬ್-ಉಲ್-ಹಸನ್
Follow us
TV9 Web
| Updated By: ರಶ್ಮಿ ಕಲ್ಲಕಟ್ಟ

Updated on:Mar 23, 2022 | 3:00 PM

ದೆಹಲಿ: ಮುನ್ಸಿಪಲ್ ಚುನಾವಣೆಯ ರಾಜಕೀಯ ಗದ್ದಲದ ನಡುವೆ ದೆಹಲಿಯ ಆಡಳಿತಾರೂಢ ಆಮ್ ಆದ್ಮಿ ಪಕ್ಷದ  (Aam Aadmi Party) ಕೌನ್ಸಿಲರ್‌ ಹಸೀಬ್-ಉಲ್-ಹಸನ್ (Haseeb-ul-Hasan), ಶಾಸ್ತ್ರಿ ಪಾರ್ಕ್‌ನಲ್ಲಿ ತುಂಬಿ ಹರಿಯುವ ಚರಂಡಿಗೆ ಹಾರಿ ಅದನ್ನು ಸ್ವಚ್ಛಗೊಳಿಸಿದ ಘಟನೆ ಮಂಗಳವಾರ ನಡೆದಿದೆ. ಪೂರ್ವ ದೆಹಲಿಯ ಕೌನ್ಸಿಲರ್ ಆಗಿದ್ದಾರೆ ಹಸನ್. ಬಿಳಿ ಕುರ್ತಾ ಧರಿಸಿ ಎದೆವರೆಗೆ ಕೊಳಚೆ ನೀರಿನಲ್ಲಿ ನಿಂತು ಅದರಲ್ಲಿ ತೇಲುತ್ತಿದ್ದ ತ್ಯಾಜ್ಯವಸ್ತುಗಳನ್ನು ಹಸನ್ ತೆಗೆದು ಹಾಕುತ್ತಿರುವುದು ಮೊಬೈಲ್​ನಲ್ಲಿ ಚಿತ್ರೀಕರಿಸಿದ ವಿಡಿಯೊದಲ್ಲಿದೆ. ಅವರ ಸಹಾಯಕರು ಪಕ್ಕದಲ್ಲಿ ನಿಂತು ವಿವಿಧ ಉಪಕರಣಗಳನ್ನು ಕೊಡುತ್ತಿರುವುದು ಕಂಡುಬರುತ್ತದೆ.  ಚರಂಡಿ ಸ್ವಚ್ಛ ಮಾಡಿದ ನಂತರ ಹಾಸನ್ ಅವರ ಬೆಂಬಲಿಗರು ಅವರಿಗೆ ಹಾಲಿನಲ್ಲಿ ಸ್ನಾನ ಮಾಡಿಸಿದರು . ಇದು ಬಾಲಿವುಡ್ ಬ್ಲಾಕ್ ಬಸ್ಟರ್ “ನಾಯಕ್” ಸಿನಿಮಾದಲ್ಲಿ ನಟ ಅನಿಲ್ ಕಪೂರ್ ಅವರ ರೀತಿಯಲ್ಲಿತ್ತು . ಕ್ಷೀರ ಸ್ನಾನ ಮಾಡುತ್ತಿರುವ ವಿಡಿಯೊಗಳು ವೈರಲ್ ಆಗಿವೆ. ಎಎಪಿಯ ನಾಮನಿರ್ದೇಶಿತ ಕೌನ್ಸಿಲರ್ ಹಾಸನ್ ಅವರು, ಚರಂಡಿ ತುಂಬಿ ಹರಿಯುತ್ತಿದೆ. ಅಧಿಕಾರಿಗಳಿಗೆ ಪದೇ ಪದೇ ದೂರು ನೀಡಿದರೂ, ಬಿಜೆಪಿ ಕೌನ್ಸಿಲರ್ ಮತ್ತು ಸ್ಥಳೀಯ ಶಾಸಕರು ಸಹಾಯ ಮಾಡಿಲ್ಲ. ಆದ್ದರಿಂದ ನಾನೇ ಈ ಕೆಲಸ ಮಾಡಲು ಮುಂದಾದೆ ಎಂದು ಹೇಳಿದ್ದಾರೆ. ಸ್ಥಳೀಯ ಶಾಸಕ ಅನಿಲ್ ಕುಮಾರ್ ಬಾಜಪೇಯಿ ಬಿಜೆಪಿ ಸದಸ್ಯರಾಗಿದ್ದಾರೆ.  ಪೂರ್ವ ದೆಹಲಿಯ ಗಾಂಧಿ ನಗರ ವಿಧಾನಸಭೆಯಲ್ಲೂ ಈ ವಿಷಯ ಚರ್ಚೆಯಾಗಿದೆ.

ರಾಷ್ಟ್ರ ರಾಜಧಾನಿಯ ಮೂರು ನಾಗರಿಕ ಸಂಸ್ಥೆಗಳನ್ನು ವಿಲೀನಗೊಳಿಸುವ ಕೇಂದ್ರದ ಯೋಜನೆಗೆ ಸಂಬಂಧಿಸಿದಂತೆ ಆಡಳಿತಾರೂಢ ಎಎಪಿ ಮತ್ತು ಬಿಜೆಪಿ ವಾರಗಳಿಂದ ಘರ್ಷಣೆಯಲ್ಲಿ ತೊಡಗಿವೆ. ಮಂಗಳವಾರ, ಕೇಂದ್ರ ಸಚಿವ ಸಂಪುಟದಿಂದ ಈ ಮಸೂದೆ ಒಪ್ಪಿಗೆ ನೀಡಿದೆ.

ದೆಹಲಿ ಮುನ್ಸಿಪಲ್ ಕಾರ್ಪೊರೇಷನ್ (ತಿದ್ದುಪಡಿ) ಮಸೂದೆಯು ದಕ್ಷಿಣ ದೆಹಲಿ ಮುನ್ಸಿಪಲ್ ಕಾರ್ಪೊರೇಶನ್, ಉತ್ತರ ದೆಹಲಿ ಮುನ್ಸಿಪಲ್ ಕಾರ್ಪೊರೇಷನ್ ಮತ್ತು ಪೂರ್ವ ದೆಹಲಿ ಮುನ್ಸಿಪಲ್ ಕಾರ್ಪೊರೇಶನ್ ಅನ್ನು ವಿಲೀನಗೊಳಿಸುತ್ತದೆ. ಪ್ರಸ್ತುತ ನಡೆಯುತ್ತಿರುವ ಸಂಸತ್ತಿನ ಬಜೆಟ್ ಅಧಿವೇಶನದಲ್ಲಿ ಈ ಮಸೂದೆ ಮಂಡನೆಯಾಗುವ ನಿರೀಕ್ಷೆಯಿದೆ.

ಎಎಪಿ ಮಸೂದೆಯ ಸಮಯವನ್ನು ಪ್ರಶ್ನಿಸಿದೆ, ಇದು ನಾಗರಿಕ ಚುನಾವಣೆಯನ್ನು ಹಳಿತಪ್ಪಿಸುವ ಸಾಧ್ಯತೆಯಿದೆ. ಪೌರ ಸಂಸ್ಥೆಗಳ ಚುನಾವಣೆಯನ್ನು ಮುಂದೂಡಬೇಡಿ ಎಂದು ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮನವಿ ಮಾಡಿದ್ದಾರೆ.

“ಪ್ರಧಾನಿ, ಸರ್ಕಾರಗಳು ಬರುತ್ತವೆ ಮತ್ತು ಹೋಗುತ್ತವೆ. ನೀವು ಇರುವುದಿಲ್ಲ, ನಾನು ಕೂಡ ಇರುವುದಿಲ್ಲ. ಆದರೆ ದೇಶದ ಸಂಸ್ಥೆಗಳನ್ನು ದುರ್ಬಲಗೊಳಿಸಬೇಡಿ. ಎಂಸಿಡಿ ಚುನಾವಣೆಗಳನ್ನು ಮುಂದೂಡಬೇಡಿ” ಎಂದು ಕೇಜ್ರಿವಾಲ್ ಈ ಹಿಂದೆ ವಿಡಿಯೊ ಸಂದೇಶದಲ್ಲಿ ಹೇಳಿದ್ದಾರೆ. ಈ ತಿಂಗಳು, ಇದನ್ನು ಎಎಪಿ ಈ ವಿಡಿಯೊವನ್ನು ತನ್ನ ಅಧಿಕೃತ ಹ್ಯಾಂಡಲ್‌ನಿಂದ ಟ್ವೀಟ್ ಮಾಡಿದೆ.

ಇದನ್ನೂ ಓದಿ: ದೆಹಲಿಯ ಮೂರು ಕಾರ್ಪೊರೇಷನ್‌ಗಳನ್ನು ವಿಲೀನಗೊಳಿಸುವ ಮಸೂದೆಗೆ ಕೇಂದ್ರ ಸಚಿವ ಸಂಪುಟ ಒಪ್ಪಿಗೆ

Published On - 2:54 pm, Wed, 23 March 22

‘ನನಗೂ ಹೊಟ್ಟೆ ಉರಿಯುತ್ತಿದೆ’; ಕಳಪೆ ಪಡೆದ ರಜತ್​ನಿಂದ ಮನೆಯವರಿಗೆ ಕಿರಿಕಿರಿ
‘ನನಗೂ ಹೊಟ್ಟೆ ಉರಿಯುತ್ತಿದೆ’; ಕಳಪೆ ಪಡೆದ ರಜತ್​ನಿಂದ ಮನೆಯವರಿಗೆ ಕಿರಿಕಿರಿ
Daily Devotional: ದೇವಾಲಯದ ಅನ್ನ ಪ್ರಸಾದ ಮಹತ್ವ ತಿಳಿಯಿರಿ
Daily Devotional: ದೇವಾಲಯದ ಅನ್ನ ಪ್ರಸಾದ ಮಹತ್ವ ತಿಳಿಯಿರಿ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ನೋಡಲು ಜನ ಬರಲಿಲ್ಲ: ಕಾರಣ ತಿಳಿಸಿದ ವಿತರಕ
‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ನೋಡಲು ಜನ ಬರಲಿಲ್ಲ: ಕಾರಣ ತಿಳಿಸಿದ ವಿತರಕ
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್
ಭಾರತದ ಸ್ಟೀಲ್ ಉದ್ಯಮದಲ್ಲಿ ಹೆಚ್ಚು ಇಂಗಾಲದ ಡೈ ಆಕ್ಸೈಡ್ ಉತ್ಪತ್ತಿ: ಗೋಯಲ್
ಭಾರತದ ಸ್ಟೀಲ್ ಉದ್ಯಮದಲ್ಲಿ ಹೆಚ್ಚು ಇಂಗಾಲದ ಡೈ ಆಕ್ಸೈಡ್ ಉತ್ಪತ್ತಿ: ಗೋಯಲ್
5 ಲಕ್ಷ ರೂಪಾಯಿ ಪಡೆದು ಮೋಸ ಮಾಡಿದ ಸ್ಟಾರ್​ ನಟಿ; ನಿರ್ಮಾಪಕಿ ಆರೋಪ
5 ಲಕ್ಷ ರೂಪಾಯಿ ಪಡೆದು ಮೋಸ ಮಾಡಿದ ಸ್ಟಾರ್​ ನಟಿ; ನಿರ್ಮಾಪಕಿ ಆರೋಪ
ಶಿಕ್ಷಣ ಸಾರ್ಥಕವಾಗಲು ಮೂರು ಅಂಶಗಳ ಮನನವಾಗಬೇಕು: ಸಿದ್ದರಾಮಯ್ಯ
ಶಿಕ್ಷಣ ಸಾರ್ಥಕವಾಗಲು ಮೂರು ಅಂಶಗಳ ಮನನವಾಗಬೇಕು: ಸಿದ್ದರಾಮಯ್ಯ
ಸ್ಕೂಟಿಗೆ ಡಿಕ್ಕಿ ಹೊಡೆದು 1 ಕಿ.ಮೀ ಎಳೆದೊಯ್ದ ಕಾರು; ಚಿಮ್ಮಿದ ಬೆಂಕಿ ಕಿಡಿ
ಸ್ಕೂಟಿಗೆ ಡಿಕ್ಕಿ ಹೊಡೆದು 1 ಕಿ.ಮೀ ಎಳೆದೊಯ್ದ ಕಾರು; ಚಿಮ್ಮಿದ ಬೆಂಕಿ ಕಿಡಿ