AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನೀವೇ ಏಕೆ ದುಡಿಯಬಾರದು?; ವಿಚ್ಛೇದನದ ವೇಳೆ 12 ಕೋಟಿ ರೂ., ಮನೆ, ಬಿಎಂಡಬ್ಲ್ಯೂ ಕೇಳಿದ ಮಹಿಳೆಗೆ ಸುಪ್ರೀಂ ಕೋರ್ಟ್ ತರಾಟೆ

ಇತ್ತೀಚೆಗೆ ಒಂದೆಡೆ ಮದುವೆಯಾಗಿ ಗಂಡನನ್ನು ಕೊಲ್ಲುತ್ತಿರುವ ಮಹಿಳೆಯರ ಸಂಖ್ಯೆ ಹೆಚ್ಚಾಗುತ್ತಿದ್ದರೆ ಇನ್ನೊಂದೆಡೆ ಮದುವೆಯಾಗಿ ತಿಂಗಳು ಕಳೆಯುವಷ್ಟರಲ್ಲಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸುತ್ತಿರುವವರ ಸಂಖ್ಯೆಯೂ ಹೆಚ್ಚುತ್ತಿದೆ. ಸುಪ್ರೀಂ ಕೋರ್ಟ್​ನಲ್ಲಿ ಇಂದು ವಿಚಾರಣೆಗೆ ಬಂದ ಪ್ರಕರಣವೊಂದರಲ್ಲಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದ ಮಹಿಳೆಯೊಬ್ಬರು ತಮ್ಮ ಗಂಡನಿಂದ ಜೀವನಾಂಶವಾಗಿ 12 ಕೋಟಿ ರೂ. ಹಣ, ಮುಂಬೈನಲ್ಲಿ ಒಂದು ಮನೆ, ಬಿಎಂಡಬ್ಲು ಕಾರು ಬೇಕೆಂದು ಬೇಡಿಕೆಯಿಟ್ಟಿದ್ದಾರೆ.

ನೀವೇ ಏಕೆ ದುಡಿಯಬಾರದು?; ವಿಚ್ಛೇದನದ ವೇಳೆ 12 ಕೋಟಿ ರೂ., ಮನೆ, ಬಿಎಂಡಬ್ಲ್ಯೂ ಕೇಳಿದ ಮಹಿಳೆಗೆ ಸುಪ್ರೀಂ ಕೋರ್ಟ್ ತರಾಟೆ
Alimony
ಸುಷ್ಮಾ ಚಕ್ರೆ
|

Updated on: Jul 22, 2025 | 9:11 PM

Share

ನವದೆಹಲಿ, ಜುಲೈ 22: ಅವರಿಬ್ಬರೂ ಮದುವೆಯಾಗಿ ಕೇವಲ 18 ತಿಂಗಳಾಗಿತ್ತು. ಅಷ್ಟರಲ್ಲೇ ಹೆಂಡತಿಗೆ ಅವರಿಬ್ಬರಿಗೆ ದಾಂಪತ್ಯ ಬೇಸರವಾಗಿ ವಿಚ್ಛೇದನಕ್ಕೆ (Divorce) ಅರ್ಜಿ ಸಲ್ಲಿಸಿದ್ದಾರೆ. ಈ ವೇಳೆ ಆಕೆ ಜೀವನಾಂಶವಾಗಿ 12 ಕೋಟಿ ರೂ. ಹಣ, ಮುಂಬೈನಲ್ಲಿ ಮನೆ, ಬಿಎಂಡಬ್ಲು ಕಾರು ಬೇಕೆಂದು ಬೇಡಿಕೆಯಿಟ್ಟಿದ್ದಾರೆ. ಈ ಪ್ರಕರಣದ ವಿಚಾರಣೆಯ ಸಮಯದಲ್ಲಿ ಆಕೆಯ ಬೇಡಿಕೆಯನ್ನು ಕೇಳಿದ ಸುಪ್ರೀಂ ಕೋರ್ಟ್ (Supreme Court) ಮುಖ್ಯ ನ್ಯಾಯಮೂರ್ತಿ (ಸಿಜೆಐ) ಬಿ.ಆರ್ ಗವಾಯಿ ಆಕೆಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. “ನಿಮ್ಮ ಮದುವೆಯಾಗಿ ಕೇವಲ 18 ತಿಂಗಳಾಯಿತು. ಈಗ ನೀವು 12 ಕೋಟಿ ರೂ. ಹಣ ಮಾತ್ರವಲ್ಲದೆ ಬಿಎಂಡಬ್ಲ್ಯೂ ಕೂಡ ಬಯಸುತ್ತೀರಾ? ಅಂದರೆ, ನೀವು ಸಂಸಾರ ಮಾಡಿದ ಪ್ರತಿ ತಿಂಗಳಿಗೆ ಒಂದು ಕೋಟಿ ರೂ. ನೀಡಬೇಕಾ? ವಿದ್ಯಾವಂತರಾದ ನೀವೇ ಏಕೆ ಸಂಪಾದಿಸಬಾರದು?” ಎಂದು ಪ್ರಶ್ನಿಸಿದ್ದಾರೆ.

ವಿವಾಹವಾದ 18 ತಿಂಗಳ ನಂತರ ವಿಚ್ಛೇನದಕ್ಕೆ ಒಪ್ಪಿಕೊಳ್ಳಲು ಆ ಮಹಿಳೆ 12 ಕೋಟಿ ರೂ., ಮುಂಬೈನಲ್ಲಿ ಮನೆ ಮತ್ತು ಬಿಎಂಡಬ್ಲ್ಯೂ ಕಾರನ್ನು ಬೇಡಿಕೆ ಇಟ್ಟ ನಂತರ ಸುಪ್ರೀಂ ಕೋರ್ಟ್ ಈ ಹೈಪ್ರೊಫೈಲ್ ವಿಚ್ಛೇದನ ಪ್ರಕರಣದ ತೀರ್ಪನ್ನು ಕಾಯ್ದಿರಿಸಿದೆ. ಮಹಿಳೆಯ ವಕೀಲರು ಈ ಪ್ರಸ್ತಾಪವು ಪರಸ್ಪರ ಇತ್ಯರ್ಥದ ಭಾಗವಾಗಿದೆಯೇ ವಿನಃ ದಾನ-ಧರ್ಮದ ಭಾಗವಲ್ಲ ಎಂದು ವಾದಿಸಿದರು. ಸುಪ್ರೀಂ ಕೋರ್ಟ್ ಮುಂದೆ ನಡೆದ ಈ ಹೈಪ್ರೊಫೈಲ್ ವಿಚ್ಛೇದನ ಪ್ರಕರಣಕ್ಕೆ ಭಾರತದ ಮುಖ್ಯ ನ್ಯಾಯಮೂರ್ತಿ ಬಿಆರ್ ಗವಾಯಿ ಅವರಿಂದ ತೀಕ್ಷ್ಣವಾದ ಟೀಕೆ ಮಾಡಿದರು. ಅವರು ಆ ಮಹಿಳೆಯ ಅತಿಯಾದ ಜೀವನಾಂಶ ಬೇಡಿಕೆಯನ್ನು ಆಲಿಸಿದಾಗ ಕೆಲಕಾಲ ಗೊಂದಲಕ್ಕೊಳಗಾದರು.

ಇದನ್ನೂ ಓದಿ: ‘ನನ್ನ ಗೆಳತಿಯರ ಜೊತೆಯೇ ಪತಿ ಮಲಗಿದ್ದಾನೆ’; ನಟಿಯ ವಿಚ್ಛೇದನಕ್ಕೆ ಕಾರಣ ಆಯ್ತು ಗಂಡನ ಕಳ್ಳಾಟ

ಕೇವಲ 18 ತಿಂಗಳ ಕಾಲ ಸಂಸಾರ ನಡೆಸಿದ್ದ ಆ ಮಹಿಳೆ, ವಿಚ್ಛೇದನಕ್ಕೆ ಒಪ್ಪಿಗೆ ನೀಡಲು 12 ಕೋಟಿ ರೂ. ಪರಿಹಾರ, ಮುಂಬೈನಲ್ಲಿ ಮನೆ ಮತ್ತು BMW ಕಾರು ನೀಡುವಂತೆ ಬೇಡಿಕೆ ಇಟ್ಟಿದ್ದರು. ಈ ಪ್ರಕರಣದ ವಿಚಾರಣೆ ನಡೆಸಿದ ಸಿಜೆಐ ಗವಾಯಿ ಅವರು, ಆ ಮಹಿಳೆಯನ್ನು ನೇರವಾಗಿ ಪ್ರಶ್ನಿಸಿದ್ದಾರೆ. “ನೀವು ತುಂಬಾ ವಿದ್ಯಾವಂತರು. ನೀವು ಈ ರೀತಿ ಇಷ್ಟು ದೊಡ್ಡ ಮೊತ್ತದ ಜೀವನಾಂಶಗಳನ್ನು ಕೇಳಬಾರದು. ನೀವು ಯಾಕೆ ಒಳ್ಳೆಯ ಉದ್ಯೋಗ ಪಡೆದು ಸಂಪಾದಿಸಿ, ಸ್ವತಂತ್ರವಾಗಿ ಬದುಕಬಾರದು? ಬೇಡಿಕೆಗಳನ್ನು ಇಡುವ ವಿಧಾನ ಇದಲ್ಲ. ನೀವು ವಿದ್ಯಾವಂತರಾಗಿರುವುದರಿಂದ ನೀವು ನಿಮಗಾಗಿ ಭಿಕ್ಷೆ ಬೇಡಬಾರದು. ನೀವು ಸಂಪಾದಿಸಿ ತಿನ್ನಬೇಕು” ಎಂದು ಸಿಜೆಐ ಆಕೆಗೆ ಹೇಳಿದ್ದಾರೆ.

ನ್ಯಾಯಾಲಯವು ಅಲ್ಪಾವಧಿಯ ಮದುವೆಗೆ ಹೆಚ್ಚಿನ ಜೀವನಾಂಶ ಕೋರಿದ್ದಕ್ಕೆ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಈ ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದಾರೆ. ಆಕೆಯ ಪರವಾಗಿ ವಾದಿಸಿದ ಮಹಿಳಾ ವಕೀಲರು, “ಇದನ್ನು ವಿಚ್ಛೇದನಕ್ಕೆ ಪರಸ್ಪರ ಇತ್ಯರ್ಥದ ಪ್ರಸ್ತಾವನೆ ಎಂದು ಭಾವಿಸಬೇಕೇ ವಿನಃ ಭಿಕ್ಷೆ ಎಂಬಂತೆ ನೋಡಬಾರದು” ಎಂದಿದ್ದಾರೆ. ಎರಡೂ ಕಡೆಯ ವಾದಗಳ ಹೊರತಾಗಿಯೂ ಸಿಜೆಐ ನೇತೃತ್ವದ ನ್ಯಾಯ ಪೀಠವು ಈ ವಿಷಯದಲ್ಲಿ ತನ್ನ ಆದೇಶವನ್ನು ಕಾಯ್ದಿರಿಸಿದೆ. ಮುಂಬರುವ ದಿನಗಳಲ್ಲಿ ಅಂತಿಮ ನಿರ್ಧಾರಕ್ಕೆ ಅವಕಾಶ ಮಾಡಿಕೊಟ್ಟಿದೆ.

ಇದನ್ನೂ ಓದಿ: ಮುಂಬೈ ರೈಲು ಸ್ಫೋಟ ಪ್ರಕರಣದ 12 ಆರೋಪಿಗಳ ಖುಲಾಸೆ ಪ್ರಶ್ನಿಸಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ ಮಹಾರಾಷ್ಟ್ರ ಸರ್ಕಾರ

ವಿಚ್ಛೇದನ ಪ್ರಕ್ರಿಯೆಗಳಲ್ಲಿ, ವಿಶೇಷವಾಗಿ ಶ್ರೀಮಂತ ಪಕ್ಷಗಳನ್ನು ಒಳಗೊಂಡ ಪ್ರಕರಣಗಳಲ್ಲಿ, ಹಣಕಾಸಿನ ಇತ್ಯರ್ಥಗಳ ಸುತ್ತಲಿನ ನೀತಿಶಾಸ್ತ್ರ ಮತ್ತು ನಿರೀಕ್ಷೆಗಳ ಕುರಿತು ಈ ಪ್ರಕರಣವು ಸಾರ್ವಜನಿಕ ಚರ್ಚೆಯನ್ನು ಹುಟ್ಟುಹಾಕಿದೆ. ಮಹಿಳೆಯ ಬೇಡಿಕೆಗಳು ಪ್ರತಿಕ್ರಿಯೆಗಳನ್ನು ಹುಟ್ಟುಹಾಕಿದ್ದರೂ, ಸಿಜೆಐ ಅವರ ಹೇಳಿಕೆಯು ಪ್ರತ್ಯೇಕತಾ ಪ್ರಕ್ರಿಯೆಗಳಲ್ಲಿ ಸ್ವಾವಲಂಬನೆ ಮತ್ತು ಘನತೆಯ ಬಗ್ಗೆ ಚರ್ಚೆಯನ್ನು ಮತ್ತೆ ಹುಟ್ಟುಹಾಕಿದೆ.

“ನಿಮ್ಮ ಮದುವೆ ಕೇವಲ 18 ತಿಂಗಳುಗಳ ಕಾಲ ಉಳಿದಿತ್ತು. ಈಗ ನೀವು BMW ಕೂಡ ಬಯಸುತ್ತೀರಾ? ನಿಮ್ಮ ಸಂಸಾರಕ್ಕೆ ಪ್ರತಿ ತಿಂಗಳು 1 ಕೋಟಿ ರೂ. ಕೊಡಬೇಕಾ?” ಎಂದು ಸಿಜೆಐ ಪ್ರಶ್ನಿಸಿದ್ದಾರೆ. ಆ ಮಹಿಳೆಯ ಅರ್ಹತೆಗಳು, ಆಕೆ ಎಂಬಿಎ ಪದವಿ ಮತ್ತು ಐಟಿ ತಜ್ಞರಾಗಿ ಅನುಭವವನ್ನು ಹೊಂದಿದ್ದಾರೆ ಎಂದು ಎತ್ತಿ ತೋರಿಸಿದ ಮುಖ್ಯ ನ್ಯಾಯಮೂರ್ತಿ ಬಿ.ಆರ್ ಗವಾಯಿ ಗಂಡ ನೀಡುವ ಜೀವನಾಂಶವನ್ನು ನೀವು ಅವಲಂಬಿಸಬಾರದು ಎಂದು ಹೇಳಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಕಾಡಾನೆಗಳ ಹಿಂಡು ಡ್ರೋನ್ ಕ್ಯಾಮರಾದಲ್ಲಿ ಸೆರೆ
ಕಾಡಾನೆಗಳ ಹಿಂಡು ಡ್ರೋನ್ ಕ್ಯಾಮರಾದಲ್ಲಿ ಸೆರೆ
Video: ಹಾಸ್ಟೆಲ್​ನಲ್ಲಿ ಮಗನ ಕಾಲಿಗೆ ಸರಪಳಿ ಹಾಕಿ ಕೂರಿಸಿದ ತಂದೆ
Video: ಹಾಸ್ಟೆಲ್​ನಲ್ಲಿ ಮಗನ ಕಾಲಿಗೆ ಸರಪಳಿ ಹಾಕಿ ಕೂರಿಸಿದ ತಂದೆ
ಕೆಟ್ಟ ಪ್ರಪಂಚದಲ್ಲಿ ಸ್ವರ್ಗ ತೋರಿಸ್ತೀನಿ; ಉಪ್ಪಿ ಡೈಲಾಗ್​ ಹೇಳಿದ ಗಿಲ್ಲಿ
ಕೆಟ್ಟ ಪ್ರಪಂಚದಲ್ಲಿ ಸ್ವರ್ಗ ತೋರಿಸ್ತೀನಿ; ಉಪ್ಪಿ ಡೈಲಾಗ್​ ಹೇಳಿದ ಗಿಲ್ಲಿ