ಕಾಂಗ್ರೆಸ್‌ಗೆ ಭಾರೀ ಹಿನ್ನಡೆ; 199 ಕೋಟಿ ರೂ. ದೇಣಿಗೆಗೆ ತೆರಿಗೆ ವಿನಾಯಿತಿ ಕೋರಿ ಸಲ್ಲಿಸಿದ್ದ ಅರ್ಜಿ ವಜಾ
199 ಕೋಟಿ ರೂ. ದೇಣಿಗೆಗೆ ತೆರಿಗೆ ವಿನಾಯಿತಿಯ ನಿರೀಕ್ಷೆಯಲ್ಲಿದ್ದ ಕಾಂಗ್ರೆಸ್ ಪಕ್ಷಕ್ಕೆ ಭಾರೀ ಹಿನ್ನಡೆಯಾಗಿದೆ. 2018-19ರ ಹಣಕಾಸು ವರ್ಷದಲ್ಲಿ 199.15 ಕೋಟಿ ರೂ. ಆದಾಯಕ್ಕೆ ತೆರಿಗೆ ವಿನಾಯಿತಿ ಕೋರಿ ಕಾಂಗ್ರೆಸ್ ಸಲ್ಲಿಸಿದ್ದ ಅರ್ಜಿಯನ್ನು ಆದಾಯ ತೆರಿಗೆ ಮೇಲ್ಮನವಿ ನ್ಯಾಯಮಂಡಳಿ (ITAT) ವಜಾಗೊಳಿಸಿದೆ. ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 13ಎಯಲ್ಲಿರುವ ಷರತ್ತುಗಳ ಉಲ್ಲಂಘನೆಯಾಗಿದೆ ಎಂಬ ಕಾರಣ ನೀಡಿ ಅರ್ಜಿಯನ್ನು ವಜಾಗೊಳಿಸಲಾಗಿದೆ.

ನವದೆಹಲಿ, ಜುಲೈ 22: ದೇಣಿಗೆ ನೀಡಿದ್ದರಿಂದ 199 ಕೋಟಿ ರೂ. ಆದಾಯ ತೆರಿಗೆ ವಿನಾಯಿತಿಯ ನಿರೀಕ್ಷೆಯಲ್ಲಿದ್ದ ಕಾಂಗ್ರೆಸ್ ಪಕ್ಷಕ್ಕೆ (Congress Party) ಭಾರೀ ಹಿನ್ನಡೆಯಾಗಿದೆ. 2018-19ನೇ ವರ್ಷದಲ್ಲಿ 199.15 ಕೋಟಿ ರೂ. ಆದಾಯಕ್ಕೆ ತೆರಿಗೆ ವಿನಾಯಿತಿ ನೀಡಿ ಕಾಂಗ್ರೆಸ್ ಸಲ್ಲಿಸಿದ್ದ ಅರ್ಜಿಯನ್ನು ಆದಾಯ ತೆರಿಗೆ ಮೇಲ್ಮನವಿ ನ್ಯಾಯಮಂಡಳಿ (ITAT) ವಜಾಗೊಳಿಸಿದೆ. ಐಟಿ ರಿಟರ್ನ್ಸ್‌ಗಳನ್ನು ತಡವಾಗಿ ಸಲ್ಲಿಸಿದ ಕಾರಣ ಮತ್ತು ನಗದು ದೇಣಿಗೆ ಮಿತಿಗಳ ಉಲ್ಲಂಘನೆಯಿಂದಾಗಿ ವಿನಾಯಿತಿಗಾಗಿ ಕಾಂಗ್ರೆಸ್ ಸಲ್ಲಿಸಿದ್ದ ಅರ್ಜಿಯನ್ನು ಆದಾಯ ತೆರಿಗೆ ಮೇಲ್ಮನವಿ ನ್ಯಾಯಮಂಡಳಿ ವಜಾಗೊಳಿಸಿದೆ.
2018-19ರಿಂದ ಬಾಕಿ ಇರುವ ಕಾಂಗ್ರೆಸ್ ಪಕ್ಷದ ನಿಧಿಯ 199 ಕೋಟಿ ರೂ.ಗಳವರೆಗಿನ ಆದಾಯ ತೆರಿಗೆಗೆ ಕಾಂಗ್ರೆಸ್‌ಗೆ ಯಾವುದೇ ಪರಿಹಾರ ಸಿಗುವುದಿಲ್ಲ. ದೇಣಿಗೆ ಪಡೆದ ಹಣಕ್ಕೆ ರಾಜಕೀಯ ಪಕ್ಷ ಆದಾಯ ತೆರಿಗೆ ವಿನಾಯಿತಿ ಪಡೆಯಲು ಅವಕಾಶವಿದೆ. ಆದರೆ, ಕಾಂಗ್ರೆಸ್ ತಡವಾಗಿ ಐಟಿ ರಿಟರ್ನ್ ಸಲ್ಲಿಸಿರುವುದರಿಂದ ಹಾಗೂ ನಗದು ರೂಪದಲ್ಲಿ ದೇಣಿಗೆ ಪಡೆಯುವ ಮಿತಿಯನ್ನು ಉಲ್ಲಂಘಿಸಿರುವುದರಿಂದ ಕಾಂಗ್ರೆಸ್ ಪಕ್ಷಕ್ಕೆ ತೆರಿಗೆ ವಿನಾಯಿತಿ ನೀಡಲು ಸಾಧ್ಯವಿಲ್ಲ ಎಂದು ನ್ಯಾಯಮಂಡಳಿ ತಿಳಿಸಿದೆ.
ಇದನ್ನೂ ಓದಿ: ಬ್ಯಾಗ್ ಪ್ಯಾಕ್ ಮಾಡಿಕೊಳ್ಳಿ; ಆರ್ಎಸ್ಎಸ್ ಮುಖ್ಯಸ್ಥರ ಹೇಳಿಕೆ ಬೆನ್ನಲ್ಲೇ ಮೋದಿ ಕಾಲೆಳೆದ ಕಾಂಗ್ರೆಸ್
ಕಾಂಗ್ರೆಸ್ ಫೆಬ್ರವರಿ 2, 2019ರಂದು ತನ್ನ ಆದಾಯ ತೆರಿಗೆ ರಿಟರ್ನ್ ಅನ್ನು ಸಲ್ಲಿಸಿತ್ತು. ಆದರೆ, 2018ರ ಡಿಸೆಂಬರ್ 31ರಂದೇ ಗಡುವು ಮೀರಿತ್ತು. ಕಾಂಗ್ರೆಸ್ 199.15 ಕೋಟಿ ರೂ.ಗಳ ತೆರಿಗೆ ವಿನಾಯಿತಿಯನ್ನು ಸಹ ಕೋರಿತ್ತು. ಸೆಪ್ಟೆಂಬರ್ 2019ರಲ್ಲಿ, ಮೌಲ್ಯಮಾಪನ ಅಧಿಕಾರಿ ಪರಿಶೀಲನೆಯ ಸಮಯದಲ್ಲಿ ಕಾಂಗ್ರೆಸ್ ಪಕ್ಷವು 14.49 ಲಕ್ಷ ರೂ.ಗಳನ್ನು ನಗದು ರೂಪದಲ್ಲಿ ಸ್ವೀಕರಿಸಿದೆ ಎಂದು ಕಂಡುಹಿಡಿದರು. ಪ್ರತಿ ದಾನಿಯ ಮಿತಿಯಾದ ರೂ. 2,000 ಕ್ಕಿಂತ ಹೆಚ್ಚಿನ ದೇಣಿಗೆಗಳನ್ನು ಚೆಕ್‌ಗಳು ಅಥವಾ ಬ್ಯಾಂಕ್ ವರ್ಗಾವಣೆಯಂತಹ ಬ್ಯಾಂಕಿಂಗ್ ಮಾರ್ಗಗಳ ಮೂಲಕ ಪಾವತಿಸಬೇಕು ಎಂಬ ಕಾನೂನು ಇದೆ. ಹೀಗಾಗಿ, ಅದಕ್ಕೆ ಅನುಗುಣವಾಗಿ ಇಡೀ ಮೊತ್ತದ ಮೇಲೆ ತೆರಿಗೆ ವಿಧಿಸಲಾಗಿತ್ತು.
ಇದನ್ನೂ ಓದಿ: ಕಾಂಗ್ರೆಸ್ ಶಾಸಕರಿಗೆ 50 ಕೋಟಿ, ವಿಪಕ್ಷ ಶಾಸಕರಿಗೆ 25 ಕೋಟಿ ರೂ. ಅನುದಾನ: ಸಿಎಂ ವಿರುದ್ಧ ವಿಪಕ್ಷಗಳ ವಾಗ್ದಾಳಿ
ಕಾಂಗ್ರೆಸ್ ವಿನಾಯಿತಿ ಕೋರಿದಾಗ, ಐಟಿ ಇಲಾಖೆ 2021ರಲ್ಲಿ ಅದಕ್ಕೆ ನಿರಾಕರಿಸಿತು. ಮಾರ್ಚ್ 2023ರಲ್ಲಿ ಆದಾಯ ತೆರಿಗೆ ಆಯುಕ್ತರು ಮೇಲ್ಮನವಿ ನಿರ್ಧಾರವನ್ನು ಎತ್ತಿಹಿಡಿದರು. ಅದಾದ ನಂತರ ಕಾಂಗ್ರೆಸ್ ಸಂಪರ್ಕಿಸಿದ್ದ ಮೇಲ್ಮನವಿ ನ್ಯಾಯಮಂಡಳಿ ಕೂಡ ಯಾವುದೇ ಮಧ್ಯಂತರ ಪರಿಹಾರವನ್ನು ನೀಡಲು ನಿರಾಕರಿಸಿದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




