AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಭೋಪಾಲ್‌ನಲ್ಲಿ ಆದಿ ಕರ್ಮಯೋಗಿ ಅಭಿಯಾನದಡಿ 2ನೇ ಪ್ರಾದೇಶಿಕ ಪ್ರಕ್ರಿಯೆ ಪ್ರಯೋಗಾಲಯ ಆರಂಭ

ಕೇಂದ್ರ ಬುಡಕಟ್ಟು ವ್ಯವಹಾರಗಳ ಸಚಿವಾಲಯವು ಭೋಪಾಲ್‌ನಲ್ಲಿ 7 ದಿನಗಳ 'ಆದಿ ಕರ್ಮಯೋಗಿ'  ಅಭಿಯಾನವನ್ನು ಪ್ರಾರಂಭಿಸಿದೆ. 20 ಲಕ್ಷ ಗ್ರಾಮ ಮಟ್ಟದ ಕಾರ್ಯಕರ್ತರಿಗೆ ತರಬೇತಿ ನೀಡುವ ಮೂಲಕ ಸಮಗ್ರ ಅಭಿವೃದ್ಧಿಯನ್ನು ಉತ್ತೇಜಿಸುವುದು ಇದರ ಉದ್ದೇಶವಾಗಿದೆ. ಈ ಕಾರ್ಯಕ್ರಮವು 2047ರ ವೇಳೆಗೆ ಅಭಿವೃದ್ಧಿ ಹೊಂದಿದ ಭಾರತದ ಗುರಿಯನ್ನು ಸಾಧಿಸಲು ಮಧ್ಯಪ್ರದೇಶ, ಛತ್ತೀಸ್‌ಗಢ ಮತ್ತು ಉತ್ತರ ಪ್ರದೇಶದ ರಾಜ್ಯ ಮಟ್ಟದ ತರಬೇತುದಾರರಿಗೆ ತರಬೇತಿ ನೀಡುತ್ತದೆ.

ಭೋಪಾಲ್‌ನಲ್ಲಿ ಆದಿ ಕರ್ಮಯೋಗಿ ಅಭಿಯಾನದಡಿ 2ನೇ ಪ್ರಾದೇಶಿಕ ಪ್ರಕ್ರಿಯೆ ಪ್ರಯೋಗಾಲಯ ಆರಂಭ
Aadi Karmayogi Event In Bhopal
ಸುಷ್ಮಾ ಚಕ್ರೆ
|

Updated on: Jul 22, 2025 | 8:15 PM

Share

ಭೋಪಾಲ್, ಜುಲೈ 22: 2047ರ ವೇಳೆಗೆ ವಿಕಸಿತ ಭಾರತವನ್ನು ಸಾಧಿಸುವತ್ತ ಒಂದು ಮಹತ್ವದ ಹೆಜ್ಜೆಯಾಗಿ ಪ್ರಧಾನಿ ನರೇಂದ್ರ ಮೋದಿಯವರ ನಾಯಕತ್ವದಲ್ಲಿ ಬುಡಕಟ್ಟು ವ್ಯವಹಾರಗಳ ಸಚಿವಾಲಯವು ಇಂದು ಭೋಪಾಲ್‌ನಲ್ಲಿ ಆದಿ ಕರ್ಮಯೋಗಿ (Aadi Karmayogi) – ರಾಷ್ಟ್ರೀಯ ಮಿಷನ್ ಫಾರ್ ರೆಸ್ಪಾನ್ಸಿವ್ ಗವರ್ನೆನ್ಸ್‌ನ 2ನೇ ಪ್ರಾದೇಶಿಕ ಪ್ರಕ್ರಿಯೆ ಪ್ರಯೋಗಾಲಯ (RPL) ಅನ್ನು ಪ್ರಾರಂಭಿಸಿತು. ಕಳೆದ 7 ದಿನಗಳ ಅವಧಿಯಲ್ಲಿ ಇದು 2ನೇ ಆರ್​​ಪಿಎಲ್ ಆಗಿದೆ. ದೇಶದ ಸಮಗ್ರ ಅಭಿವೃದ್ಧಿಯನ್ನು ವೇಗಗೊಳಿಸುವ 20 ಲಕ್ಷ ತಳಮಟ್ಟದ ಕಾರ್ಮಿಕರು ಮತ್ತು ಗ್ರಾಮ ಮಟ್ಟದ ಪರಿವರ್ತನಾ ನಾಯಕರ ಕೇಡರ್ ಅನ್ನು ಸಿದ್ಧಪಡಿಸುವುದು ಇದರ ಉದ್ದೇಶವಾಗಿದೆ.

ಬುಡಕಟ್ಟು ಪ್ರದೇಶಗಳಲ್ಲಿ ಸೌಲಭ್ಯಗಳು ತಲುಪದ ಹಂತದಲ್ಲಿರುವ ಜನರಿಗೆ ಸಹಾಯ ಮಾಡಿ, 2047ರ ವೇಳೆಗೆ ಅಭಿವೃದ್ಧಿ ಹೊಂದಿದ ಭಾರತದ ಗುರಿಯನ್ನು ಸಾಧಿಸುವ ಉದ್ದೇಶ ಈ ಅಭಿಯಾನದ್ದು. RPL ಮಧ್ಯಪ್ರದೇಶ, ಛತ್ತೀಸ್‌ಗಢ ಮತ್ತು ಉತ್ತರ ಪ್ರದೇಶದ ರಾಜ್ಯ ಮಾಸ್ಟರ್ ತರಬೇತುದಾರರಿಗೆ (SMTs) ತರಬೇತಿ ನೀಡುತ್ತದೆ.

ಇದನ್ನೂ ಓದಿ: ಶೈಕ್ಷಣಿಕ ಸಾಧನೆ ಮಾಡಿದ ಬುಡಕಟ್ಟು ವಿದ್ಯಾರ್ಥಿಗಳಿಗೆ ರಾಷ್ಟ್ರಪತಿಯಿಂದ 62.40 ಲಕ್ಷ ರೂ. ಬಿಡುಗಡೆ

ಆದಿ ಕರ್ಮಯೋಗಿ ಕೇವಲ ಒಂದು ಕಾರ್ಯಕ್ರಮವಲ್ಲ ಇದು ದೇಶದ ಬುಡಕಟ್ಟು ಸಮಾಜಕ್ಕೆ ಸಂಬಂಧಿಸಿದ ಹೊಸ ಚಿಂತನೆಯಾಗಿದೆ ಎಂದು ಬುಡಕಟ್ಟು ವ್ಯವಹಾರಗಳ ಸಚಿವಾಲಯ ಹೇಳಿದೆ. ಈ ಕಾರ್ಯಕ್ರಮದಲ್ಲಿ ಮಾತನಾಡಿದ ಮಧ್ಯಪ್ರದೇಶದ ಬುಡಕಟ್ಟು ಸಚಿವ ಡಾ. ಕುನ್ವರ್ ವಿಜಯ್ ಶಾ, “ವಿವಿಧ ಯೋಜನೆಗಳನ್ನು ಸಂಪರ್ಕಿಸುವುದು ಮತ್ತು ಜನರ ಕೌಶಲ್ಯಗಳನ್ನು ಉತ್ತೇಜಿಸುವುದು ಬಹಳ ಮುಖ್ಯ. ರಾಜ್ಯ ಸರ್ಕಾರವು ತರಬೇತಿ ಕೇಂದ್ರಗಳು ಮತ್ತು ಪಂಚಾಯತ್ ಮಟ್ಟದ ಸೌಲಭ್ಯಗಳ ಮೂಲಕ ಈ ಮಿಷನ್‌ಗೆ ಸಹಾಯ ಮಾಡುತ್ತದೆ. ಸ್ಥಳೀಯ ಕಾರ್ಮಿಕರಿಗೆ ತರಬೇತಿ ನೀಡುವ ಮೂಲಕ ಗ್ರಾಮ ಮಟ್ಟದಲ್ಲಿ ಆಡಳಿತವನ್ನು ಬಲಪಡಿಸುವುದು ಮಿಷನ್‌ನ ಉದ್ದೇಶವಾಗಿದೆ” ಎಂದು ಹೇಳಿದ್ದಾರೆ.

ಬುಡಕಟ್ಟು ವ್ಯವಹಾರಗಳ ಸಚಿವಾಲಯದ ಕಾರ್ಯದರ್ಶಿ ವಿಭು ನಾಯರ್ ಈ ಕಾರ್ಯಕ್ರಮವನ್ನು ಐತಿಹಾಸಿಕ ಎಂದು ಕರೆದಿದ್ದಾರೆ. ಬುಡಕಟ್ಟು ಆಡಳಿತಕ್ಕೆ ಹೊಸ ರೂಪ ನೀಡುವ ನಿಟ್ಟಿನಲ್ಲಿ ಇದು ಒಂದು ಬೃಹತ್ ಹೆಜ್ಜೆಯಾಗಿದೆ ಎಂದು ಅವರು ಹೇಳಿದ್ದಾರೆ. ಎಸ್‌ಎಂಟಿ (ರಾಜ್ಯ ಮಾಸ್ಟರ್ ಟ್ರೈನರ್) ಸರ್ಕಾರಿ ಯೋಜನೆಗಳನ್ನು ಹಳ್ಳಿಗಳಿಗೆ ಕೊಂಡೊಯ್ಯುವಲ್ಲಿ ದೊಡ್ಡ ಪಾತ್ರ ವಹಿಸುತ್ತಾರೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಮೋದಿ ಸರ್ಕಾರದ ಅವಧಿಯಲ್ಲಿ ದೇಶದ ಬುಡಕಟ್ಟು ಸಮುದಾಯದ ಜೀವನ ಮಟ್ಟ ಸಂಪೂರ್ಣ ಬದಲು

ಈ ಕಾರ್ಯಕ್ರಮದಲ್ಲಿ ಬಿಆರ್‌ಎಲ್‌ಎಫ್ ಅಧ್ಯಕ್ಷ ಗಿರೀಶ್ ಪ್ರಭುಣೆ, ಉತ್ತರ ಪ್ರದೇಶದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಎಲ್. ವೆಂಕಟೇಶ್ವರಲು, ಛತ್ತೀಸ್‌ಗಢದ ಮುಖ್ಯ ಕಾರ್ಯದರ್ಶಿ ಸೋನಮ್ನಿ ಬೋರಾ, ಮಧ್ಯಪ್ರದೇಶದ ಮುಖ್ಯ ಕಾರ್ಯದರ್ಶಿ ಗುಲ್ಶನ್ ಬಮ್ರಾ, ಬುಡಕಟ್ಟು ವ್ಯವಹಾರಗಳ ಸಚಿವಾಲಯದ ಜಂಟಿ ಕಾರ್ಯದರ್ಶಿ ಅಜಿತ್ ಶ್ರೀವಾಸ್ತವ ಮುಂತಾದವರು ಉಪಸ್ಥಿತರಿದ್ದರು.

ಆದಿ ಕರ್ಮಯೋಗಿ ಮಿಷನ್:

ಆದಿ ಕರ್ಮಯೋಗಿ ಮಿಷನ್ ಗ್ರಾಮ ಮಟ್ಟದಿಂದ ಯೋಜನೆ ರೂಪಿಸುವ ಮೂಲಕ ದೂರುಗಳನ್ನು ಪರಿಹರಿಸುತ್ತದೆ. ಇದರಲ್ಲಿ, ಬುಡಕಟ್ಟು ವ್ಯವಹಾರಗಳು, ಗ್ರಾಮೀಣಾಭಿವೃದ್ಧಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ನೀರು, ಶಿಕ್ಷಣ ಮತ್ತು ಅರಣ್ಯ ಇಲಾಖೆಯಂತಹ ಹಲವು ಸಚಿವಾಲಯಗಳು ಒಟ್ಟಾಗಿ ಕೆಲಸ ಮಾಡುತ್ತವೆ. ಪ್ರಾದೇಶಿಕ ಪ್ರಕ್ರಿಯೆ ಪ್ರಯೋಗಾಲಯ (RPL) ಈ ಕಾರ್ಯಾಚರಣೆಯ ಬೆನ್ನೆಲುಬಾಗಿದೆ. ಇದರಲ್ಲಿ, ರಾಜ್ಯ ಮಟ್ಟದ ತರಬೇತುದಾರರು (SMT) ಜಿಲ್ಲಾ ಮಟ್ಟದ ಮಾಸ್ಟರ್ ತರಬೇತುದಾರರಿಗೆ (DMT) ತರಬೇತಿ ನೀಡುತ್ತಾರೆ. ಜುಲೈ ಮತ್ತು ಆಗಸ್ಟ್ 2025ರ ನಡುವೆ ದೇಶದಲ್ಲಿ 7 ಪ್ರಾದೇಶಿಕ ಪ್ರಕ್ರಿಯೆ ಪ್ರಯೋಗಾಲಯಗಳನ್ನು ಸ್ಥಾಪಿಸಲಾಗುವುದು. ಈಗಾಗಲೇ ಮೊದಲ ಪ್ರಯೋಗಾಲಯವನ್ನು ಬೆಂಗಳೂರಿನಲ್ಲಿ ಸ್ಥಾಪಿಸಲಾಗಿದೆ. ಇದೀಗ ಭೋಪಾಲ್​​ನಲ್ಲಿ ಎರಡನೇ ಪ್ರಯೋಗಾಲಯವನ್ನು ಸ್ಥಾಪಿಸಲಾಗಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

ಸಿನಿಮಾ ಸಾಹಸಕ್ಕೆ ಕೈ ಹಾಕಿದ ‘ಅಮೃತಾಂಜನ್’ ಕಿರುಚಿತ್ರದ ಹುಡುಗರು
ಸಿನಿಮಾ ಸಾಹಸಕ್ಕೆ ಕೈ ಹಾಕಿದ ‘ಅಮೃತಾಂಜನ್’ ಕಿರುಚಿತ್ರದ ಹುಡುಗರು
ಬಾನು ಮುಸ್ತಾಕ್ ಮನೆಯಲ್ಲಿ ಕುರಾನ್ ಜತೆ ಭಗವದ್ಗೀತೆ
ಬಾನು ಮುಸ್ತಾಕ್ ಮನೆಯಲ್ಲಿ ಕುರಾನ್ ಜತೆ ಭಗವದ್ಗೀತೆ
ದರ್ಶನ್ ನೋವು ನೋಡಿ ಖುಷಿಪಡುವ ಕೆಲವರು ಇದ್ದಾರೆ: ನಿರ್ದೇಶಕ ಪ್ರೇಮ್
ದರ್ಶನ್ ನೋವು ನೋಡಿ ಖುಷಿಪಡುವ ಕೆಲವರು ಇದ್ದಾರೆ: ನಿರ್ದೇಶಕ ಪ್ರೇಮ್
ಮೈಸೂರು ದಸರಾ ಉದ್ಘಾಟನೆ: ಫಲತಾಂಬೂಲ ನೀಡಿ ಬಾನು ಮುಸ್ತಾಕ್​ಗೆ ಆಹ್ವಾನ
ಮೈಸೂರು ದಸರಾ ಉದ್ಘಾಟನೆ: ಫಲತಾಂಬೂಲ ನೀಡಿ ಬಾನು ಮುಸ್ತಾಕ್​ಗೆ ಆಹ್ವಾನ
ದರ್ಶನ್ ಅವರನ್ನು ಭೇಟಿ ಮಾಡಿದ್ದೆ, ನೋವಿನಿಂದ ನುಡಿದ ಪ್ರೇಮ್
ದರ್ಶನ್ ಅವರನ್ನು ಭೇಟಿ ಮಾಡಿದ್ದೆ, ನೋವಿನಿಂದ ನುಡಿದ ಪ್ರೇಮ್
ಕೇದಾರನಾಥ- ಸೋನ್‌ಪ್ರಯಾಗ ಮಾರ್ಗದಲ್ಲಿ ಭೂಕುಸಿತ; ಹಲವಾರು ವಾಹನಗಳಿಗೆ ಹಾನಿ
ಕೇದಾರನಾಥ- ಸೋನ್‌ಪ್ರಯಾಗ ಮಾರ್ಗದಲ್ಲಿ ಭೂಕುಸಿತ; ಹಲವಾರು ವಾಹನಗಳಿಗೆ ಹಾನಿ
ರಾಧಿಕಾ ಕುಮಾರಸ್ವಾಮಿ ಜತೆಗಿನ ಹಣಕಾಸಿನ ವ್ಯವಹಾರ ಬಗ್ಗೆ ಜಮೀರ್ ಸ್ಪಷ್ಟನೆ
ರಾಧಿಕಾ ಕುಮಾರಸ್ವಾಮಿ ಜತೆಗಿನ ಹಣಕಾಸಿನ ವ್ಯವಹಾರ ಬಗ್ಗೆ ಜಮೀರ್ ಸ್ಪಷ್ಟನೆ
ಜಮೀರ್ ಅಹಮ್ಮದ್​​ ಜೊತೆಗಿನ ಹಣಕಾಸಿನ ವ್ಯವಹಾರ ಬಿಚ್ಚಿಟ್ಟ ಕೆಜಿಎಫ್ ಬಾಬು
ಜಮೀರ್ ಅಹಮ್ಮದ್​​ ಜೊತೆಗಿನ ಹಣಕಾಸಿನ ವ್ಯವಹಾರ ಬಿಚ್ಚಿಟ್ಟ ಕೆಜಿಎಫ್ ಬಾಬು
ಬಿಜೆಪಿ ಸೇರ್ಪಡೆ ಬಗ್ಗೆ ಮಾಜಿ ಸಚಿವ ಕೆಎನ್ ರಾಜಣ್ಣ ಹೇಳಿದ್ದಿಷ್ಟು
ಬಿಜೆಪಿ ಸೇರ್ಪಡೆ ಬಗ್ಗೆ ಮಾಜಿ ಸಚಿವ ಕೆಎನ್ ರಾಜಣ್ಣ ಹೇಳಿದ್ದಿಷ್ಟು
ವಿಷ್ಣು ಸ್ಮಾರಕ: ಸಿಎಂ ಭೇಟಿ ಬಳಿಕ ಹಿರಿಯ ನಟಿ ಭಾರತಿ ಹೇಳಿದ್ದು ಹೀಗೆ
ವಿಷ್ಣು ಸ್ಮಾರಕ: ಸಿಎಂ ಭೇಟಿ ಬಳಿಕ ಹಿರಿಯ ನಟಿ ಭಾರತಿ ಹೇಳಿದ್ದು ಹೀಗೆ