Viral News: ಪ್ರೀತಿಯ ನಾಯಿಯ ನೆನಪಿನಲ್ಲಿ ಅಮೃತಶಿಲೆಯಿಂದ ದೇವಸ್ಥಾನ ಕಟ್ಟಿದ ವೃದ್ಧ!

ತಮಿಳುನಾಡಿನ ಶಿವಗಂಗೆಯ ಮುತ್ತು ಎಂಬ 82 ವರ್ಷದ ನಿವೃತ್ತ ಸರ್ಕಾರಿ ನೌಕರ ತನ್ನ ಅತ್ಯಂತ ಪ್ರೀತಿಯ ನಾಯಿ ಸಾವನ್ನಪ್ಪಿದ ಬಳಿಕ ಅಮೃತಶಿಲೆಯಲ್ಲಿ ನಾಯಿಯ ಪ್ರತಿಮೆಯನ್ನು ನಿರ್ಮಿಸಿದ್ದಾರೆ.

Viral News: ಪ್ರೀತಿಯ ನಾಯಿಯ ನೆನಪಿನಲ್ಲಿ ಅಮೃತಶಿಲೆಯಿಂದ ದೇವಸ್ಥಾನ ಕಟ್ಟಿದ ವೃದ್ಧ!
ನಾಯಿಯ ದೇವಾಲಯ
Follow us
| Updated By: ಸುಷ್ಮಾ ಚಕ್ರೆ

Updated on:Mar 30, 2022 | 7:54 PM

ಚೆನ್ನೈ: ಅನೇಕ ಜನರು ಸಾಕುಪ್ರಾಣಿಗಳ ಜೊತೆ ಬಹಳಷ್ಟು ಭಾವನಾತ್ಮಕ ಸಂಬಂಧವನ್ನು ಹೊಂದಿರುತ್ತಾರೆ. ಅವರ ಪ್ರೀತಿಯ ಸಾಕುಪ್ರಾಣಿಗಳು ಸತ್ತರೆ ಅದನ್ನು ತಡೆದುಕೊಳ್ಳುವುದು ಅವರಿಗೆ ಸುಲಭವಲ್ಲ. ಕೆಲವರು ತಮ್ಮ ಪ್ರೀತಿಯ ನಾಯಿ (Dog), ಬೆಕ್ಕಿನ (Cat) ಸಾವಿನ ದುಃಖದಲ್ಲಿಯೇ ವರ್ಷಾನುಗಟ್ಟಲೆ ದಿನಗಳನ್ನು ಕಳೆಯುತ್ತಾರೆ. ಆದರೆ, ಸಾವನ್ನಪ್ಪಿದ ತಮ್ಮ ಪ್ರೀತಿಯ ನಾಯಿಯ ನೆನಪಿಗಾಗಿ ದೇವಸ್ಥಾನವನ್ನು (Temple) ಕಟ್ಟಿಸಿರುವ ಬಗ್ಗೆ ಎಲ್ಲಾದರೂ ಕೇಳಿದ್ದೀರಾ? ಅಂತಹ ಒಂದು ರೋಮಾಂಚನಕಾರಿ ಕಥೆ ಇಲ್ಲಿದೆ.

ತಮಿಳುನಾಡಿನ ಶಿವಗಂಗೆಯ 82 ವರ್ಷದ ನಿವೃತ್ತ ಸರ್ಕಾರಿ ನೌಕರ ತನ್ನ ಅತ್ಯಂತ ಪ್ರೀತಿಯ ಮತ್ತು ನಿಷ್ಠಾವಂತ ಒಡನಾಡಿಯಾದ ನಾಯಿಗೆ ಸೂಕ್ತವಾದ ಗೌರವವನ್ನು ನೀಡಲು ನಿರ್ಧರಿಸಿದರು. ಮುತ್ತು ಎಂಬ ವೃದ್ಧ ತನ್ನ ಸಾವನ್ನಪ್ಪಿದ ಟಾಮ್ ಎಂಬ ಲ್ಯಾಬ್ರಡಾರ್ ನಾಯಿಯ ನೆನಪಿಗಾಗಿ ತನ್ನ ಕೃಷಿ ಭೂಮಿಯಲ್ಲಿ ದೇವಾಲಯವನ್ನು ನಿರ್ಮಿಸಿದ್ದಾರೆ. 2021ರ ಜನವರಿಯಲ್ಲಿ ಆರೋಗ್ಯ ಸಮಸ್ಯೆಗಳಿಂದ ನಾಯಿ ಸಾವನ್ನಪ್ಪಿತ್ತು.  ಆ ನಾಯಿಯ ಸಾವಿನ ಬಳಿಕ ಅಮೃತಶಿಲೆಯಲ್ಲಿ ನಾಯಿಯ ಪ್ರತಿಮೆಯನ್ನು ನಿರ್ಮಿಸಲಾಗಿದೆ. ಸಾಯುವವರೆಗೂ ಅವರು ಟಾಮ್‌ನೊಂದಿಗೆ ಸುಮಾರು 11 ವರ್ಷಗಳ ಕಾಲ ಜೀವನ ಕಳೆದಿದ್ದರು.

ಟಾಮ್‌ನನ್ನು ನನ್ನ ಸಹೋದರ ಅರುಣ್ ಕುಮಾರ್ 11 ವರ್ಷಗಳ ಹಿಂದೆ ಖರೀದಿಸಿದನು, ಆದರೆ ಅದನ್ನು ನಮ್ಮೊಂದಿಗೆ ಇಟ್ಟುಕೊಳ್ಳಲು ಸಾಧ್ಯವಾಗಲಿಲ್ಲ. ಆದ್ದರಿಂದ ನಾವು ಅವನನ್ನು 6 ತಿಂಗಳ ನಂತರ ನಮ್ಮ ಚಿಕ್ಕಪ್ಪನಿಗೆ ಒಪ್ಪಿಸಿದೆವು. ಟಾಮ್ ಎಂದೆಂದಿಗೂ ಅವರ ಒಡನಾಡಿಯಾಗಿದ್ದನು. ಅವರಿಬ್ಬರ ನಡುವೆ ಬಹಳ ಪ್ರೀತಿಯಿತ್ತು ಎಂದು ಮುತ್ತು ಅವರ ಸಂಬಂಧಿ ಮಾಹಿತಿ ನೀಡಿದ್ದಾರೆ.

1 ವರ್ಷದ ಹಿಂದೆ ಟಾಮ್​ಗೆ ಆರೋಗ್ಯ ಸಮಸ್ಯೆಗಳು ಎದುರಾಗಿತ್ತು. 2021ರ ಜನವರಿಯಲ್ಲಿ ಟಾಮ್ ಸಾವನ್ನಪ್ಪಿತ್ತು. ತನ್ನ ಪ್ರೀತಿಯ ನಾಯಿ ಟಾಮ್ ನೆನಪಿಗಾಗಿ ಮುತ್ತು 80,000 ರೂ.ಗಳನ್ನು ಖರ್ಚು ಮಾಡಿ ತನ್ನ ಒಡನಾಡಿಯಾದ ನಾಯಿಯ ಅಮೃತಶಿಲೆಯ ಪ್ರತಿಮೆಯನ್ನು ನಿರ್ಮಿಸಿದ್ದಾರೆ. ನಂತರ ಶಿವಗಂಗಾ ಜಿಲ್ಲೆಯ ಮನಮದುರೈ ಬಳಿಯ ಬ್ರಾಹ್ಮಣಕುರಿಚಿಯಲ್ಲಿ ತಮ್ಮ ಕೃಷಿ ಭೂಮಿಯಲ್ಲಿ ದೇವಾಲಯವನ್ನು ನಿರ್ಮಿಸಿದ್ದಾರೆ.

ಸಾಕು ನಾಯಿ ಟಾಮ್​ನ ಪ್ರತಿಮೆಗೆ ಪ್ರತಿದಿನ ನೈವೇದ್ಯವನ್ನು ಸಲ್ಲಿಸಲಾಗುತ್ತದೆ. ಎಲ್ಲಾ ಶುಭ ದಿನಗಳಂದು ಆ ನಾಯಿಯ ಪ್ರತಿಮೆಗೆ ಹಾರವನ್ನು ಹಾಕಿ, ಟಾಮ್ ಅವರ ನೆಚ್ಚಿನ ಆಹಾರವನ್ನು ಆ ಪ್ರತಿಮೆಯ ಬಳಿ ಇಡಲಾಗುತ್ತದೆ. ಟಾಮ್‌ನ ಮರಣದ ಒಂದು ವರ್ಷದ ನಂತರ ಜನವರಿಯಲ್ಲಿ ಪ್ರತಿಮೆಯನ್ನು ಸ್ಥಾಪಿಸಲಾಯಿತು ಮತ್ತು ಜನರು ಬಂದು ತಮ್ಮ ಪ್ರಾರ್ಥನೆಗಳನ್ನು ಸಲ್ಲಿಸಲು ದೇವಾಲಯವನ್ನು ತೆರೆಯಲಾಗಿದೆ.

ಇದನ್ನೂ ಓದಿ: Viral Video: ಕೊಳಕ್ಕೆ ಬೀಳುತ್ತಿದ್ದ ಮಗುವಿನ ಪ್ರಾಣ ಉಳಿಸಿದ ಶ್ವಾನ; ಸಾಕು ನಾಯಿಯ ಜಾಣತನಕ್ಕೆ ನೆಟ್ಟಿಗರು ಫಿದಾ

Shocking News: ನಾಯಿ ಬೊಗಳುತ್ತದೆ ಎಂದು ಚಾಕುವಿನಿಂದ ಇರಿದು ಕೊಲೆ!

Published On - 7:53 pm, Wed, 30 March 22

ಮನೆಯ ಬಾಗಿಲಿಗೆ ಸ್ಪಟಿಕ ಕಟ್ಟುವುದರ ಹಿಂದಿನ ಕಾರಣ ತಿಳಿಯಿರಿ
ಮನೆಯ ಬಾಗಿಲಿಗೆ ಸ್ಪಟಿಕ ಕಟ್ಟುವುದರ ಹಿಂದಿನ ಕಾರಣ ತಿಳಿಯಿರಿ
Nithya Bhavishya: ಭಾದ್ರಪದ ಮಾಸ ಮೂರನೇ ಶುಕ್ರವಾರದ ರಾಶಿಭವಿಷ್ಯ ತಿಳಿಯಿರಿ
Nithya Bhavishya: ಭಾದ್ರಪದ ಮಾಸ ಮೂರನೇ ಶುಕ್ರವಾರದ ರಾಶಿಭವಿಷ್ಯ ತಿಳಿಯಿರಿ
ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ