Shocking News: ನಾಯಿಯನ್ನು ಕಟ್ಟಿಹಾಕಿ ಬಣ್ಣ ಎರಚಿ ಹೋಳಿ ಆಡಿದ ಯುವಕರು; ವಿಡಿಯೋ ವೈರಲ್

ಈ ವಿಡಿಯೋದಲ್ಲಿ ಗೋಡೆಗೆ ಸರಪಳಿ ಹಾಕಿ ನಾಯಿಯನ್ನು ಕಟ್ಟಲಾಗಿದೆ. ಈ ನಾಯಿಯ ಮೇಲೆ ಯುವಕನೊಬ್ಬ ಮುಷ್ಠಿ ತುಂಬ ಬಣ್ಣ ಹಿಡಿದು, ಆ ನಾಯಿಯ ಮೇಲೆ ಎರಚುತ್ತಿದ್ದಾನೆ. ಅದನ್ನು ಪಕ್ಕದಲ್ಲಿದ್ದ ಇನ್ನೊಬ್ಬ ಯುವಕ ರೆಕಾರ್ಡ್​ ಮಾಡಿ, ನಗುತ್ತಾ ಇದ್ದಾನೆ.

Shocking News: ನಾಯಿಯನ್ನು ಕಟ್ಟಿಹಾಕಿ ಬಣ್ಣ ಎರಚಿ ಹೋಳಿ ಆಡಿದ ಯುವಕರು; ವಿಡಿಯೋ ವೈರಲ್
ನಾಯಿಗೆ ಬಣ್ಣ ಹಾಕುತ್ತಿರುವ ವಿಡಿಯೋ
Follow us
| Updated By: ಸುಷ್ಮಾ ಚಕ್ರೆ

Updated on:Mar 21, 2022 | 4:06 PM

ಡೆಹ್ರಾಡೂನ್: ನಾಯಿ, ಬೆಕ್ಕು, ಸಾಕುಪ್ರಾಣಿಗಳೆಂದರೆ ಕೆಲವರಿಗೆ ತೀರಾ ಅಸಡ್ಡೆ. ಅವುಗಳಿಗೂ ಜೀವ ಇದೆ ಎಂಬುದನ್ನು ಮರೆತು ಅಮಾನುಷವಾಗಿ ವರ್ತಿಸುತ್ತಾರೆ. ಇದೀಗ ಅಂತರ್ಜಾಲದಲ್ಲಿ (Internet) ಹರಿದಾಡುತ್ತಿರುವ ವಿಡಿಯೋವನ್ನು ನೋಡಿದರೆ ನಿಮಗೆ ಸಂಕಟವಾಗದಿರಲು ಸಾಧ್ಯವೇ ಇಲ್ಲ. ಹೋಳಿ ಹಬ್ಬವಾಡುತ್ತಿದ್ದ (Holi Festival) ಯುವಕರ ಗುಂಪು ನಾಯಿಯನ್ನು ಸರಪಳಿಯಲ್ಲಿ ಕಟ್ಟಿ ಹಾಕಿ, ಆ ನಾಯಿಯ ಮೇಲೆ ಬಣ್ಣ ಎರಚಿ, ಸಂಭ್ರಮಿಸುತ್ತಿರುವುದನ್ನು ತಾವೇ ರೆಕಾರ್ಡ್ ಮಾಡಿ ಸೋಷಿಯಲ್ ಮೀಡಿಯಾದಲ್ಲಿ (Social Media) ಅಪ್​ಲೋಡ್ ಮಾಡಿದ್ದಾರೆ.

ಈ ವಿಡಿಯೋ ತುಣುಕನ್ನು ಮೂಲತಃ ಉತ್ತರಾಖಂಡದ ಡೆಹ್ರಾಡೂನ್‌ನಿಂದ ಆದಿತ್ಯ ಠಾಕೂರ್ ಎಂಬುವವರು ಪೋಸ್ಟ್ ಮಾಡಿದ್ದಾರೆ. ಹೋಳಿ ಹಬ್ಬದಲ್ಲಿ ಈ ವಿಡಿಯೋವನ್ನು ರೆಕಾರ್ಡ್ ಮಾಡಲಾಗಿದೆ. ಈ ವೀಡಿಯೋ ಕ್ಲಿಪ್ ಸಾಮಾಜಿಕ ಜಾಲತಾಣಗಳಲ್ಲಿ ಕಾಡ್ಗಿಚ್ಚಿನಂತೆ ಹರಡಿದ್ದು, ಇದಕ್ಕೆ ನೆಟ್ಟಿಗರು ಕೋಪ ವ್ಯಕ್ತಪಡಿಸಿದ್ದಾರೆ.

ಈ ಚಿಕ್ಕ ವಿಡಿಯೋದಲ್ಲಿ ಗೋಡೆಗೆ ಸರಪಳಿ ಹಾಕಿ ನಾಯಿಯನ್ನು ಕಟ್ಟಲಾಗಿದೆ. ಈ ನಾಯಿಯ ಮೇಲೆ ಯುವಕನೊಬ್ಬ ಮುಷ್ಠಿ ತುಂಬ ಬಣ್ಣ ಹಿಡಿದು, ಆ ನಾಯಿಯ ಮೇಲೆ ಎರಚುತ್ತಿದ್ದಾನೆ. ಅದನ್ನು ಪಕ್ಕದಲ್ಲಿದ್ದ ಇನ್ನೊಬ್ಬ ಯುವಕ ರೆಕಾರ್ಡ್​ ಮಾಡಿ, ನಗುತ್ತಾ ಇದ್ದಾನೆ. ಮುಖದ ಮೇಲೆ ಬಣ್ಣ ಎರಚುತ್ತಿರುವವರನ್ನು ನೋಡಿ ನಾಯಿ ಜೋರಾಗಿ ಬೊಗಳುತ್ತಿದೆ. ಆ ನಾಯಿಯ ಕಣ್ಣಿಗೂ ಬಣ್ಣ ಬಿದ್ದಿರುವುದರಿಂದ ನಾಯಿ ಸರಪಳಿಯಿಂದ ಬಿಡಿಸಿಕೊಳ್ಳಲು ಪರದಾಡುತ್ತಿದೆ.

ಇನ್​ಸ್ಟಾಗ್ರಾಂನಲ್ಲಿ ಈ ವಿಡಿಯೋವನ್ನು ಪೋಸ್ಟ್​ ಮಾಡಲಾಗಿದೆ. ನಾವು 2022ನೇ ಕಾಲದಲ್ಲಿದ್ದರೂ ಪ್ರಾಣಿಗಳಿಗೆ ತುಂಬಾ ನೋವು ಮತ್ತು ಮಾನಸಿಕ ಆಘಾತವನ್ನು ಉಂಟುಮಾಡುತ್ತಿದ್ದೇವೆ. ಇದು ತಮಾಷೆಯ ಸಂಗತಿಯಲ್ಲ ಎಂದು ಜನರಿಗೆ ಇನ್ನೂ ಅರ್ಥವಾಗುತ್ತಿಲ್ಲ. ಈ ವಿಡಿಯೋದಲ್ಲಿ ನಾಯಿಗೆ ಸಿಕ್ಕಾಪಟ್ಟೆ ಹಿಂಸೆ ನೀಡಲಾಗುತ್ತಿದೆ. ಉತ್ತರಾಖಂಡದ ಡೆಹ್ರಾಡೂನ್‌ನಲ್ಲಿ ಈ ಘಟನೆ ನಡೆದಿದೆ ಎಂದು ಈ ವಿಡಿಯೋಗೆ ಕ್ಯಾಪ್ಷನ್ ನೀಡಲಾಗಿದೆ.

“ರಾಸಾಯನಿಕಗಳನ್ನು ಒಳಗೊಂಡಿರುವ ಬಣ್ಣಗಳನ್ನು ನೀವು ಮೈಗೆ ಮೆತ್ತಿಕೊಂಡರೆ ಅದನ್ನು ತೊಳೆಯಬಹುದು. ಆದರೆ ಪ್ರಾಣಿಗಳಿಗೆ ಅದರಲ್ಲೂ ಬೀದಿ ಬದಿಯ ಪ್ರಾಣಿಗಳಿಗೆ ಆ ಬಣ್ಣವನ್ನು ಸ್ವರ್ಚಚಗೊಳಿಸಿಕೊಳ್ಳಲು ಸಾಧ್ಯವಿಲ್ಲ. ಅವರ ರೋಮದ ಮೇಲೆ ಬಣ್ಣಗಳನ್ನು ಹಾಕುವುದು ತಮಾಷೆಯಲ್ಲ. ಇದು ಹಲವು ತಿಂಗಳುಗಳವರೆಗೆ ಅವರ ದೇಹದ ಮೇಲೆ ಉಳಿದಿರುತ್ತದೆ ಎಂದು ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Shocking News: Dehradun men throw Colour on dog chained to a wall in disturbing viral video

ಆನ್‌ಲೈನ್‌ನಲ್ಲಿ ಹಂಚಿಕೊಂಡ ಈ ವಿಡಿಯೋವನ್ನು ಸುಮಾರು 4 ಲಕ್ಷ ಜನ ವೀಕ್ಷಿಸಿದ್ದಾರೆ. ಈ ವಿಡಿಯೋ ಮಾಡಿದವರು ಪತ್ತೆಯಾಗಿದ್ದು, ಅವರು ಕ್ಷಮೆ ಯಾಚಿಸಿದ್ದಾರೆ. ನಾಯಿ ಈಗ ಚೆನ್ನಾಗಿದೆ.

ಇದನ್ನೂ ಓದಿ:

Published On - 4:05 pm, Mon, 21 March 22