ಕ್ಷೇತ್ರ ಸಿಗದೆ ಪರದೇಶಿಯಂತೆ ಓಡಾಡ್ತಿದ್ದಾರೆ: ಸಿದ್ದರಾಮಯ್ಯ ವಿರುದ್ಧ ರಾಮುಲು ವಾಗ್ದಾಳಿ

| Updated By: Rakesh Nayak Manchi

Updated on: Nov 03, 2022 | 9:41 PM

ಕ್ಷೇತ್ರ ಸಿಗದೆ ಪರದೇಶಿಯಂತೆ ಓಡಾಡುತ್ತಿರುವವರಿಗೆ ಉತ್ತರಿಸುವ ಅವಶ್ಯಕತೆ ನನಗೆ ಇಲ್ಲ ಎಂದು ಸಚಿವ ಶ್ರೀರಾಮುಲು ವಿಪಕ್ಷ ನಾಯಕ ಸಿದ್ದರಾಮಯ್ಯ ವಿರುದ್ಧ ಗುಡುಗಿದ್ದಾರೆ.

ಕ್ಷೇತ್ರ ಸಿಗದೆ ಪರದೇಶಿಯಂತೆ ಓಡಾಡ್ತಿದ್ದಾರೆ: ಸಿದ್ದರಾಮಯ್ಯ ವಿರುದ್ಧ ರಾಮುಲು ವಾಗ್ದಾಳಿ
ಸಿದ್ದರಾಮಯ್ಯ ವಿರುದ್ಧ ಶ್ರೀರಾಮುಲು ಟೀಕೆ
Follow us on

ಬೆಳಗಾವಿ: ಕ್ಷೇತ್ರ ಸಿಗದೆ ಸಿದ್ದರಾಮಯ್ಯ ಪರದೇಶಿಯಂತೆ ಓಡಾಡುತ್ತಿದ್ದಾರೆ. ಅವರು ನನ್ನ ಸ್ಪರ್ಧೆಯ ಬಗ್ಗೆ ಮಾತನಾಡುತ್ತಾರೆ. ಇಂತಹ ಪರದೇಶಿ ಗಿರಾಕಿಗೆ ಉತ್ತರಿಸುವ ಅವಶ್ಯಕತೆ ನನಗಿಲ್ಲ ಎಂದು ಸಾರಿಗೆ ಸಚಿವ ಶ್ರೀರಾಮುಲು ಅವರು ವಿಪಕ್ಷ ನಾಯಕ ಸಿದ್ದರಾಮಯ್ಯ ವಿರುದ್ಧ ಗುಡುಗಿದ್ದಾರೆ. ಜಿಲ್ಲೆಯಲ್ಲಿ ಮಾತನಾಡಿದ ಸಚಿವ ಶ್ರೀರಾಮುಲು, ಜೆಡಿಎಸ್​​ನಲ್ಲಿ ಊಟ ಮಾಡಿ ದೇವೇಗೌಡರ ಬೆನ್ನಿಗೆ ಚೂರಿ ಹಾಕಿದ್ದೀರಿ. ಕಾಂಗ್ರೆಸ್​​ನಲ್ಲಿ ಜಿ.ಪರಮೇಶ್ವರ್​​, ಡಿ.ಕೆ.ಶಿವಕುಮಾರ್​ಗೆ ಚೂರಿ ಹಾಕಿದ್ದೀರಿ. ಜೊತೆಯಲ್ಲಿ ಇದ್ದವರನ್ನೇ ಮುಗಿಸಿಕೊಂಡು ಬರುತ್ತಿದ್ದಿರಾ. ಮುಂದಿನ ಚುನಾವಣೆಯಲ್ಲಿ ಸಿದ್ದರಾಮಯ್ಯಗೆ ತಕ್ಕ ಪಾಠ ಆಗಲಿದೆ ಎಂದರು.

ಕ್ಷೇತ್ರವಿಲ್ಲದೇ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಪರದೇಶಿಯಂತೆ ಓಡಾಡ್ತಿರುವ ಗಿರಾಕಿಯಾಗಿದ್ದಾರೆ. ತಾವು ಸಿಎಂ ಆಗಿದ್ದಂತಹವರು, ನನ್ನ ಸ್ಪರ್ಧೆಯ ಬಗ್ಗೆ ಮಾತನಾಡುವ ಮೊದಲು ನಿಮ್ಮ ಕ್ಷೇತ್ರ ಯಾವುದು ಎಂದು ಘೋಷಣೆ ಮಾಡಿ. ಮೊಳಕಾಲ್ಮೂರು ಕ್ಷೇತ್ರದಲ್ಲಿ ತಾಕತ್ ಇದ್ದರೆ ಸ್ಪರ್ಧೆ ಮಾಡಿ ಎಂದು ಸಿದ್ದರಾಮಯ್ಯ ನನಗೆ ಸವಾಲ್ ಹಾಕಿದ್ದಾರೆ. ನನ್ನ ಗೆಲವು ಸೋಲಿನ ಬಗ್ಗೆ ಜನ ತೀರ್ಮಾನ ಮಾಡುತ್ತಾರೆ ಎಂದರು.

ಪಕ್ಷಾಂತರ ಮತ್ತು ಸ್ವಪಕ್ಷೀಯರಿಗೆ ಸಿದ್ದರಾಮಯ್ಯ ಅವರು ಸೋಲು ಉಣಿಸಿರುವ ಆರೋಪದ ಬಗ್ಗೆ ಮಾತನಾಡಿದ ಶ್ರೀರಾಮುಲು, ಸಿದ್ದರಾಮಯ್ಯನವರೇ ನಾನು ಎಂದೂ ನಿಮ್ಮ ರೀತಿ ರಾಜಕೀಯ ಮಾಡಿಲ್ಲ. ಸುದೀರ್ಘ ಜೆಡಿಎಸ್ ಪಕ್ಷ ಊಟ ಮಾಡಿ ದೇವೇಗೌಡರ ಬೆನ್ನಿಗೆ ಚೂರಿ ಹಾಕುವ ಕೆಲಸ ಮಾಡಿದ್ದೀರಿ. ಕಾಂಗ್ರೆಸ್ ಪಕ್ಷದಲ್ಲಿದ್ದು ಡಿಕೆ ಶಿವಕುಮಾರ್, ಪರಮೇಶ್ವರಿಗೆ ಚೂರಿ ಹಾಕುವ ಕೆಲಸ ಮಾಡಿದ್ದೀರಿ. ಜೊತೆಗೆ ಇದ್ದವರನ್ನು ಮುಗಿಸುತ್ತಲ್ಲೇ ಬಂದಿದ್ದೀರಿ, ಇವತ್ತು ನನ್ನ ಬದ್ಧತೆ ಬಗ್ಗೆ ಮಾತನಾಡುವುದು ಹಾಸ್ಯಾಸ್ಪದ ಎಂದರು.

ಮುಖ್ಯಮಂತ್ರಿಯಾಗಿ ಕೆಲಸ ಮಾಡಿದ ನಂತರ ಚಾಮುಂಡೇಶ್ವರಿ ಕ್ಷೇತ್ರದ ಜನ ಸೋಲಿಸಿದರು. ಸಿದ್ದರಾಮಯ್ಯನವರು ಅಲ್ಲಿ ಅಹಕಾಂಕರರಿಂದಲೇ ಸೋತಿದ್ದಾರೆ. ನಾನು 30 ವರ್ಷದಿಂದ ರಾಜಕೀಯದಲ್ಲಿ ಇದ್ದೇನೆ. 7 ಸಲ ಸ್ಪರ್ಧೆ ಮಾಡಿ ಐದು ಸಲ ಎಂಎಲ್ಎ, ಒಮ್ಮೆ ಸಂಸದನಾಗಿ ಆಯ್ಕೆಯಾಗಿದ್ದೇನೆ. ತಾವು ಈ ಸಲ ಬದಾಮಿಯಿಂದಲೇ ಸ್ಪರ್ಧೆ ಮಾಡುತ್ತೇನೆ ಎಂದು ಹೇಳಿಕೊಳ್ಳಿ. ಬದಾಯಿ ಜನರು ತಮ್ಮ ಮುಖಕ್ಕೆ ಮಂಗಳಾರತಿ ಮಾಡುತ್ತಾರೆ ಎಂದರು.

ಸಿದ್ದರಾಮಯ್ಯನವರೇ ಅಹಂಕಾರದ ಮಾತು ಬರಬಾರದು. ನನ್ನ ಕ್ಷೇತ್ರಕ್ಕೆ ಬಂದು ನನಗೆ ಬೈದು ಹೋಗಿದ್ದೀರಿ. ಗೆಲ್ಲುವ ಬಗ್ಗೆ ನನ್ನ ಕ್ಷೇತ್ರದಲ್ಲಿ ಸವಾಲ್ ಹಾಕಿದ್ದೀರಿ. ಮುಂದಿನ ಚುನಾವಣೆ ಅಹಾಂಕರಿ ಸಿದ್ದರಾಮಯ್ಯನವರಿಗೆ ತಕ್ಕ ಪಾಠ ಆಗಲಿದೆ. ನಾನು ಮೊಳಕಾಲ್ಮೂರು ಕ್ಷೇತ್ರದಿಂದ ಸ್ಪರ್ಧೆ ಮಾಡುತ್ತೇನೆ. ನನ್ನ ಸ್ಪರ್ಧೆ ಬಗ್ಗೆ ಮಾತನಾಡುವವರ ಪರಿಸ್ಥಿತಿ ಹೇಗಾಗಿದೆ ಎಂದರೆ ಬದಾಮಿ ಜನ ಮುಖಕ್ಕೆ ಮಸಿ ಬಳಿಯುವಂತ ಸ್ಥಿತಿ ನಿರ್ಮಾಣವಾಗಿದೆ ಎಂದರು.

ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 9:41 pm, Thu, 3 November 22