Belagavi Session: ಇಂದಿನಿಂದ ಮತ್ತಷ್ಟು ಕಾವೇರಲಿದೆ ಬೆಳಗಾವಿ ಅಧಿವೇಶನ, ವಿಪಕ್ಷ ತಂತ್ರ, ತಿರುಗೇಟಿಗೆ ಸರ್ಕಾರ ಪ್ರತಿತಂತ್ರ

| Updated By: Ganapathi Sharma

Updated on: Dec 11, 2023 | 7:10 AM

ಬೆಳಗಾವಿ ಅಧಿವೇಶನ 2023: ಉತ್ತರ ಕರ್ನಾಟಕ ಭಾಗದ ಸಮಸ್ಯೆ ಪ್ರಸ್ತಾಪಿಸಲು ವಿಪಕ್ಷ ನಾಯಕರು ಸಿದ್ಧತೆ ನಡೆಸಿದ್ದಾರೆ. ಹೆಣ್ಣು ಭ್ರೂಣ ಹತ್ಯೆ ಕೇಸ್ ಕೈಗೆತ್ತಿಕೊಂಡು ದಾಳಿಗೆ ಸಜ್ಜಾಗಿದ್ದಾರೆ. ಡಿಸಿಎಂ ಡಿಕೆ ಶಿವಕುಮಾರ್ ವಿರುದ್ಧದ ಸಿಬಿಐ ಕೇಸ್ ವಾಪಸ್ ನಿರ್ಧಾರ ಕೂಡ ಪ್ರಸ್ತಾಪವಾಗುವ ನಿರೀಕ್ಷೆ ಇದೆ.

Belagavi Session: ಇಂದಿನಿಂದ ಮತ್ತಷ್ಟು ಕಾವೇರಲಿದೆ ಬೆಳಗಾವಿ ಅಧಿವೇಶನ, ವಿಪಕ್ಷ ತಂತ್ರ, ತಿರುಗೇಟಿಗೆ ಸರ್ಕಾರ ಪ್ರತಿತಂತ್ರ
ಸಾಂದರ್ಭಿಕ ಚಿತ್ರ
Follow us on

ಬೆಳಗಾವಿ, ಡಿಸೆಂಬರ್ 11: ಬೆಳಗಾವಿ ಸುವರ್ಣಸೌಧದಲ್ಲಿ ಇಂದಿನಿಂದ (ಸೋಮವಾರ) ಅಧಿವೇಶನ (Belagavi Session) ಮತ್ತೆ ಪುನರಾರಂಭ ಆಗಲಿದೆ. ಕಲಾಪ ಮತ್ತೆ ಕಾವೇರಲಿದ್ದು ಆಡಳಿತ ಹಾಗೂ ವಿಪಕ್ಷಗಳ ನಡುವೆ ಜಟಾಪಟಿ ನಡೆಯೋ ಸಾಧ್ಯತೆ ಕೂಡ ದಟ್ಟವಾಗಿದೆ. ಡಿಸೆಂಬರ್ 4ರಿಂದ 8ರವರೆಗೆ ನಡೆದ ಮೊದಲ ವಾರದ ಅಧಿವೇಶನ ಅಷ್ಟೇನೂ ಫಲಪ್ರದವಾಗಿಲ್ಲ. ಮೊದಲ ದಿನ ಸಂತಾಪದ ನಂತರವು ಸರಳ ಕಾರ್ಯಕಲಾಪಗಳು ನಡೆದಿವೆ. ಹೀಗಾಗಿ ಇಂದು ವಿಪಕ್ಷ ಮತ್ತು ಆಡಳಿತ ಪಕ್ಷದ ವಾಗ್ಯುದ್ಧ ಮತ್ತಷ್ಟು ತಾರಕಕ್ಕೇರುವ ಸಾಧ್ಯತೆ ದಟ್ಟವಾಗಿದೆ.

ಸದನದಲ್ಲಿ ಹಲವು ವಿಚಾರಗಳನ್ನ ವಿಪಕ್ಷ ಬಿಜೆಪಿ ಹಾಗೂ ಜೆಡಿಎಸ್ ಪ್ರಸ್ತಾಪಿಸಿ ಸರ್ಕಾರವನ್ನ ಇಕ್ಕಟ್ಟಿಗೆ ಸಿಲುಕಿಸಲು ಸಿದ್ಧತೆ ಮಾಡಿವೆ. ವಿಪಕ್ಷಗಳ ಆರೋಪಕ್ಕೆ ತಿರುಗೇಟು ನೀಡಲು ಸರ್ಕಾರ ಕೂಡ ರಣತಂತ್ರ ಹೂಡಿದೆ.

ಉತ್ತರ ಕರ್ನಾಟಕ ಭಾಗದ ಸಮಸ್ಯೆ ಪ್ರಸ್ತಾಪಿಸಲು ವಿಪಕ್ಷ ನಾಯಕರು ಸಿದ್ಧತೆ ನಡೆಸಿದ್ದಾರೆ. ಹೆಣ್ಣು ಭ್ರೂಣ ಹತ್ಯೆ ಕೇಸ್ ಕೈಗೆತ್ತಿಕೊಂಡು ದಾಳಿಗೆ ಸಜ್ಜಾಗಿದ್ದಾರೆ. ಡಿಸಿಎಂ ಡಿಕೆ ಶಿವಕುಮಾರ್ ವಿರುದ್ಧದ ಸಿಬಿಐ ಕೇಸ್ ವಾಪಸ್ ನಿರ್ಧಾರ ಕೂಡ ಪ್ರಸ್ತಾಪವಾಗುವ ನಿರೀಕ್ಷೆ ಇದೆ.

ಮುಸ್ಲಿಮರ ಬಗ್ಗೆ ತೆಲಂಗಾಣ ಚುನಾವಣಾ ಪ್ರಚಾರದಲ್ಲಿ ಸಚಿವ ಜಮೀರ್ ಅಹಮ್ಮದ್ ನೀಡಿದ್ದ ಹೇಳಿಕೆ ವಿಚಾರ ಪ್ರಸ್ತಾಪಿಸಲು ವಿಪಕ್ಷಗಳು ತಂತ್ರ ಹೆಣೆದಿವೆ. ಅಲ್ಲದೇ, ಆಂಧ್ರಪ್ರದೇಶ ರಾಜ್ಯದ ಗುತ್ತಿಗೆದಾರರಿಗೆ ಸರ್ಕಾರ ಹೆಚ್ಚು ಹಣ ಬಿಡುಗಡೆ ಮಾಡಿದ ಆರೋಪ, ವಿವಿಧ ಇಲಾಖೆಗಳಿಗೆ ಹಣ ಬಿಡುಗಡೆ ಮಾಡದ ಆರೋಪ ಸೇರಿದಂತೆ ಹಲವು ವಿಚಾರ ಪ್ರಸ್ತಾಪಿಸಲು ವಿಪಕ್ಷಗಳು ಸಿದ್ಧವಾಗಿವೆ. ಇಷ್ಟೇ ಅಲ್ಲದೇ, ಗ್ಯಾರಂಟಿ ಜಾರಿಗಾಗಿ ಎಸ್​ಸಿ ಎಸ್​ಟಿ ಅನುದಾನದ ದುರ್ಬಳಕೆ ಮಾಡಿಕೊಂಡಿರೋ ಆರೋಪ ಹಾಗೂ ನೀರಾವರಿ, ಎನ್​ಇಪಿ, ರಾಜ್ಯದಲ್ಲಿ ತಾಂಡವ ಆಡುತ್ತಿರೋ ಬರ ಪರಿಸ್ಥಿತಿ ಪ್ರಸ್ತಾಪಿಸಿ ಸರ್ಕಾರಕ್ಕೆ ಟಕ್ಕರ್ ಕೊಡಲು ಬಿಜೆಪಿ, ಜೆಡಿಎಸ್ ಪ್ಲ್ಯಾಣ್ ಮಾಡಿವೆ.

ಇದನ್ನೂ ಓದಿ: ಮುದ್ರಾಂಕ ಶುಲ್ಕ ಹೆಚ್ಚಳಕ್ಕೆ ಮಸೂದೆ ಮಂಡಿಸಿದ ಸರ್ಕಾರ

ಸಾಲು ಸಾಲು ವಿಚಾರಗಳನ್ನ ಕೈಗೆತ್ತಿಕೊಂಡು ವಿಧಾನಸಭೆ ಹಾಗೂ ಪರಿಷತ್​ ಕಲಾಪದಲ್ಲಿ ಸರ್ಕಾರದ ವಿರುದ್ಧ ಮುಗಿಬೀಳೋದಕ್ಕೆ ವಿಪಕ್ಷಗಳು ರೆಡಿ ಆಗಿವೆ. ಇತ್ತ ವಿಪಕ್ಷ ಹೂಡೋ ಒಂದೊಂದು ಬಾಣಕ್ಕು ದಾಖಲೆ ಸಮೇತವೇ ಉತ್ತರ ಕೊಡೋದಕ್ಕೆ ಸಿಎಂ ಸಿದ್ದರಾಮಯ್ಯ, ಡಿಸಿಎ ಡಿಕೆ ಶಿವಕುಮಾರ್, ಸಚಿವರು ಕೂಡ ಪ್ಲ್ಯಾನ್ ಮಾಡಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ