’ವಾಮಮಾರ್ಗದ ಮೂಲಕ ಅಧಿಕಾರ ಹಿಡಿಯಲು ಸಾಧ್ಯವಾದ ಅಂಶಗಳು’: ಕಾಂಗ್ರೆಸ್​ ವಿರುದ್ಧ ಬಿಜೆಪಿ ಕಿಡಿ

|

Updated on: Oct 23, 2023 | 6:18 PM

ಕಾಂಗ್ರೆಸ್-ಬಿಜೆಪಿ ನಡುವೆ ಸದ್ಯ ಟ್ವೀಟ್ ಸಮರ ಶುರುವಾಗಿದೆ. ಎರಡೂ ಪಕ್ಷಗಳು ಕಳೆದ ಕೆಲ ದಿನಗಳಿಂದ ಸರಣಿ ಟ್ವೀಟ್ ಮೂಲಕ ಪರಸ್ಪರ ಕಾಲೆಳೆದುಕೊಳ್ಳುತ್ತಿವೆ. ಇದೀಗ ಕಾಂಗ್ರೆಸ್​ ವಿರುದ್ಧ ಮತ್ತೆ ಬಿಜೆಪಿ ಕಿಡಿಕಾರಿದ್ದು, ರಾಜ್ಯದಲ್ಲಿ ಎಟಿಎಂ ಸರ್ಕಾರ ವಾಮಮಾರ್ಗದ ಮೂಲಕ ಅಧಿಕಾರ ಹಿಡಿಯಲು ಸಾಧ್ಯವಾದ ಅಂಶಗಳನ್ನು ಟ್ವೀಟ್ ಮಾಡಿದೆ.

’ವಾಮಮಾರ್ಗದ ಮೂಲಕ ಅಧಿಕಾರ ಹಿಡಿಯಲು ಸಾಧ್ಯವಾದ ಅಂಶಗಳು’: ಕಾಂಗ್ರೆಸ್​ ವಿರುದ್ಧ ಬಿಜೆಪಿ ಕಿಡಿ
ಪ್ರಾತಿನಿಧಿಕ ಚಿತ್ರ
Follow us on

ಬೆಂಗಳೂರು, ಅಕ್ಟೋಬರ್​​​ 23: ಕಾಂಗ್ರೆಸ್-ಬಿಜೆಪಿ ನಡುವೆ ಸದ್ಯ ಟ್ವೀಟ್ ಸಮರ ಶುರುವಾಗಿದೆ. ಎರಡೂ ಪಕ್ಷಗಳು ಕಳೆದ ಕೆಲ ದಿನಗಳಿಂದ ಸರಣಿ ಟ್ವೀಟ್ ಮೂಲಕ ಪರಸ್ಪರ ಕಾಲೆಳೆದುಕೊಳ್ಳುತ್ತಿವೆ. ಸರ್ಕಾರದ ವಿರುದ್ಧ ಬಿಜೆಪಿ ಕಮಿಷನ್ ಆರೋಪ ಮಾಡುತ್ತಿದ್ದರೆ, ಅತ್ತ ನಾಯಕತ್ವ ಪ್ರಶ್ನಿಸಿ ಕಾಂಗ್ರೆಸ್ (Congress)​ ವ್ಯಂಗ್ಯವಾಡುತ್ತಿದೆ. ಇದೀಗ ಬಿಜೆಪಿ ರಾಜ್ಯ ಕಾಂಗ್ರೆಸ್​​ ವಿರುದ್ಧ ಕಿಡಿಕಾರಿದ್ದು, ರಾಜ್ಯದಲ್ಲಿ ಎಟಿಎಂ ಸರ್ಕಾರ ವಾಮಮಾರ್ಗದ ಮೂಲಕ ಅಧಿಕಾರ ಹಿಡಿಯಲು ಸಾಧ್ಯವಾದ ಅಂಶಗಳನ್ನು ತಿಳಿಸಿದೆ.

ಈ ಕುರಿತಾಗಿ ಟ್ವೀಟ್​ ಮಾಡಿರುವ ರಾಜ್ಯ ಬಿಜೆಪಿ, ರಾಜ್ಯದಲ್ಲಿ ಎಟಿಎಂ ಸರ್ಕಾರ ವಾಮಮಾರ್ಗದ ಮೂಲಕ ಅಧಿಕಾರ ಹಿಡಿಯಲು ಸಾಧ್ಯವಾದ ಅಂಶಗಳು:

  • ನಕಲಿ ಮತದಾರರ ಪಟ್ಟಿ (ಭೈರತಿ ಸುರೇಶ್ ಆಪ್ತ ಸೆರೆ)
  • ಸುಳ್ಳು ಗ್ಯಾರಂಟಿಗಳ ಪುಕಾರು (ಜನತೆ ಕೈ ಸೇರಿಲ್ಲ ಹಣ)
  • ಕುಕ್ಕರ್‌ ಇಸ್ತ್ರಿ ಪೆಟ್ಟಿಗೆ, ಹಣ ಹಂಚಿಕೆ (ವರುಣಾ ಕ್ಷೇತ್ರದಲ್ಲಿ ಸಿದ್ದರಾಮಯ್ಯ)
  • ಕಿವಿ ಮೇಲೆ ಕಲರ್‌ ಕಲರ್‌ ಹೂ (ವಿದ್ಯುತ್‌, ಕಾವೇರಿ, ರೈತರು)
  • ನಿರಂತರ ಸುಳ್ಳು ಸುದ್ದಿಗಳ ಹರಡುವಿಕೆ (ಜಾತಿ, ಭ್ರಷ್ಟಾಚಾರ, ತುಷ್ಟೀಕರಣ)

ಇದನ್ನೂ ಓದಿ: ಬಿಜೆಪಿ ಪಕ್ಷದಲ್ಲಿ ಯಾರೇ ರಾಜ್ಯಾಧ್ಯಕ್ಷರಾದ್ರೂ ಸಂತಸ: ಡಿಸಿಎಂ ಡಿಕೆ ಶಿವಕುಮಾರ್

ನಾವು ಕಾಂಗ್ರೆಸ್‌ಗೆ ಮತ ಹಾಕಿಲ್ಲ, ಆದರೂ ಹೇಗೆ ಕಾಂಗ್ರೆಸ್​ ಅಧಿಕಾರಕ್ಕೆ ಬಂತು ಎನ್ನುವ ಜನರ ಪ್ರಶ್ನೆಗೆ ಸಿದ್ದರಾಮ್ಯಯ್ಯ ಅವರ ಆಪ್ತ ಭೈರತಿ ಸುರೇಶ್‌ ಅವರ ನಕಲಿ ಮತದಾರರ ಪಟ್ಟಿಯೇ ಉತ್ತರ ಎಂದು ವಾಗ್ದಾಳಿ ಮಾಡಿದೆ.

ಬಿಜೆಪಿ ಟ್ವೀಟ್​ 

ಸಿಎಂ ಸಿದ್ದರಾಮಯ್ಯ ಅವರೇ, ನಿಮ್ಮ ಪಕ್ಷದ 135 ಶಾಸಕರ ಪೈಕಿ, ಹೊಸದಾಗಿ ಗೆದ್ದಿರುವ 70 ಶಾಸಕರು ಡಿಸಿಎಂ ಡಿಕೆ ಶಿವಕುಮಾರ್​ ಬೆಂಬಲಿಗರಂತೆ, ಇದನ್ನು ಹೇಳಿದ್ದು ನಾವಲ್ಲ, ನಿಮ್ಮದೇ ಪಕ್ಷದ ಶಾಸಕ ಚನ್ನಗಿರಿಯ ಶಿವಗಂಗಾ ಬಸವರಾಜು! 135 ರಲ್ಲಿ 70 ಜನ ಅವರ ಬೆಂಬಲಿಗರಾದರೆ, ನಿಮ್ಮ ಬೆಂಬಲಿಗರ ಸಂಖ್ಯೆ ಎಷ್ಟು ಎಂದು ಪ್ರಶ್ನಿಸಿತ್ತು.

ಇದನ್ನೂ ಓದಿ: ಹೆಚ್​ಡಿ ಕುಮಾರಸ್ವಾಮಿಯೇ ಕೃತಕ ಎಂದು ಟೀಕಿಸಿದ ಸಿಎಂ ಸಿದ್ದರಾಮಯ್ಯ: ಕಾರಣವೇನು?

ಇದನ್ನೆಲ್ಲಾ ಗಮನಿಸಿದರೆ, ನೀವು ಶಾಸಕರ ಆಯ್ಕೆಯಿಂದಾದ ಸಿಎಂ ಅಲ್ಲ, ಬದಲಿಗೆ ಹೈಕಮಾಂಡ್‌ಗೆ ಬ್ಲಾಕ್‌ ಮೇಲ್‌ ಮಾಡಿ ಅಥವಾ ಬ್ಲ್ಯಾಂಕ್ ಚೆಕ್‌ ನೀಡಿ ಸಿಎಂ ಆದವರು ಎಂಬುದಂತು ಸ್ಪಷ್ಟ ಎಂದು ಬಿಜೆಪಿ ಕಿಡಿಕಾರಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.