ನಿಮ್ಮ ಬೇಡಿಕೆ ತಿಳಿಸಿ; ಚುನಾವಣಾ ಪ್ರಣಾಳಿಕೆಗೆ ಸಾರ್ವಜನಿಕರ ಅಭಿಪ್ರಾಯ ಕೋರಿದ ಬಿಜೆಪಿ

|

Updated on: Mar 03, 2023 | 7:41 PM

ಸಲಹೆಗಳನ್ನು ಭರ್ತಿ ಮಾಡಲು ಗೂಗಲ್​ ಲಿಂಕ್ ಅನ್ನೂ ಹಂಚಿಕೊಂಡಿದ್ದು, ಸಮೃದ್ಧ ಕರ್ನಾಟಕಕ್ಕಾಗಿ ಒಂದಾಗೋಣ ಎಂದು ಕರೆ ನೀಡಿದ್ದಾರೆ.

ನಿಮ್ಮ ಬೇಡಿಕೆ ತಿಳಿಸಿ; ಚುನಾವಣಾ ಪ್ರಣಾಳಿಕೆಗೆ ಸಾರ್ವಜನಿಕರ ಅಭಿಪ್ರಾಯ ಕೋರಿದ ಬಿಜೆಪಿ
ಬಿಜೆಪಿ
Follow us on

ಬೆಂಗಳೂರು: ಚುನಾವಣಾ ಪ್ರಣಾಳಿಕೆ ಸಿದ್ಧತೆ ಕಾರ್ಯವನ್ನು ಚುರುಕುಗೊಳಿಸಿರುವ ಬಿಜೆಪಿ (BJP) ಇದೀಗ ಸಾರ್ವಜನಿಕರ ಅಭಿಪ್ರಾಯ ಕೋರಿದೆ. ಜತೆಗೆ ಪ್ರಣಾಳಿಕೆಗೆ ಸಲಹೆಗಳನ್ನು ಸ್ವೀಕರಿಸುವುದಕ್ಕಾಗಿ ಶನಿವಾರ ಬೆಂಗಳೂರಿನಲ್ಲಿ ಸಭೆಯನ್ನೂ ಆಯೋಜಿಸಿದೆ. ಸಮೃದ್ಧ ಕರ್ನಾಟಕ ನಿರ್ಮಾಣಕ್ಕಾಗಿ ಶಿಕ್ಷಣ ಮತ್ತು ಕೌಶಲ ಕ್ಷೇತ್ರದವರು ನಿಮ್ಮ ಅಮೂಲ್ಯ ಸಲಹೆಗಳನ್ನು ಹಂಚಿಕೊಳ್ಳಬೇಕು ಎಂದು ಉನ್ನತ ಶಿಕ್ಷಣ ಸಚಿವ ಸಿಎನ್​ ಅಶ್ವತ್ಥನಾರಾಯಣ (CN Ashwath Narayan) ಟ್ವೀಟ್ ಮೂಲಕ ಮನವಿ ಮಾಡಿದ್ದಾರೆ. ಜತೆಗೆ, ಸಲಹೆಗಳನ್ನು ಭರ್ತಿ ಮಾಡಲು ಗೂಗಲ್​ ಲಿಂಕ್ ಅನ್ನೂ ಹಂಚಿಕೊಂಡಿದ್ದು, ಸಮೃದ್ಧ ಕರ್ನಾಟಕಕ್ಕಾಗಿ ಒಂದಾಗೋಣ ಎಂದು ಕರೆ ನೀಡಿದ್ದಾರೆ.

ಪ್ರಣಾಳಿಕೆ ಸಿದ್ಧತೆಗಾಗಿ ಸಮಾಲೋಚನೆ ನಡೆಸಲು ರಾಜಭವನ ರಸ್ತೆಯ ‘ದಿ ಕ್ಯಾಪಿಟಲ್ ಹೋಟೆಲ್​’ನಲ್ಲಿ ಬಿಜೆಪಿ ಶನಿವಾರ ಸಂಜೆ 5.30ಕ್ಕೆ ಸಭೆ ಆಯೋಜಿಸಿದೆ. ಬಿಜೆಪಿಯ ರಾಜ್ಯ ಚುನಾವಣಾ ಉಸ್ತುವಾರಿ ಧರ್ಮೇಂದ್ರ ಪ್ರಧಾನ್ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ. ಸಚಿವರಾದ ಕೆ. ಸುಧಾಕರ್, ಅಶ್ವತ್ಥನಾರಾಯಣ, ಬಿಸಿ ನಾಗೇಶ್ ಸಭೆಯಲ್ಲಿ ಭಾಗವಹಿಸಲಿದ್ದಾರೆ. ಶಿಕ್ಷಣ ಮತ್ತು ಕೌಶಲಾಭಿವೃದ್ಧಿ ಕ್ಷೇತ್ರಗಳ ಪರಿಣತರೂ ಭಾಗವಹಿಸಲಿದ್ದಾರೆ ಎಂದು ಬಿಜೆಪಿ ಪ್ರಕಟಣೆ ತಿಳಿಸಿದೆ.

ಇದನ್ನೂ ಓದಿ: Amit Shah: ನಿಮ್ಮ ಮತ ಪಿಎಫ್​ಐ ನಿಷೇಧಿಸಿದ ಬಿಜೆಪಿಗೋ, ಭಯೋತ್ಪಾದನೆ ಬೆಂಬಲಿಸುವ ಕಾಂಗ್ರೆಸ್​ಗೋ; ಅಮಿತ್ ಶಾ


ರಾಜ್ಯದಲ್ಲಿ ಭರ್ಜರಿಯಾಗಿ ಚುನಾವಣಾ ಪ್ರಚಾರ ಆರಂಭಿಸಿರುವ ಬಿಜೆಪಿ ಇದೀಗ ಪ್ರಣಾಳಿಕೆ ತಯಾರಿ ಪ್ರಕ್ರಿಯೆಯಲ್ಲಿಯೂ ಆಯಾ ಕ್ಷೇತ್ರಗಳ ತಜ್ಞರು, ಸಾರ್ವಜನಿಕರನ್ನು ಸೇರಿಸಿಕೊಳ್ಳುವ ಮೂಲಕ ಜನರನ್ನು ಸೆಳೆಯಲು ಯತ್ನಿಸುತ್ತಿದೆ.

ಈ ಮಧ್ಯೆ, ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ, ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಸಹ ಪದೇ ಪದೇ ರಾಜ್ಯಕ್ಕೆ ಭೇಟಿ ನೀಡಿ ಚುನಾವಣಾ ಪ್ರಚಾರದಲ್ಲಿ ತೊಡಗಿಕೊಂಡಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ