ಜನತಾ ದಳದ ಹೆಸರನ್ನು ಕಮಲ ದಳ ಎಂದು ಬದಲಿಸಿಕೊಂಡರೆ ಒಳಿತು: ಜೆಡಿಎಸ್​ಗೆ ಕಾಂಗ್ರೆಸ್ ಟಾಂಗ್

| Updated By: Rakesh Nayak Manchi

Updated on: Sep 11, 2023 | 1:45 PM

ಲೋಕಸಭೆ ಚುನಾವಣೆ ಹಿನ್ನೆಲೆ ಕರ್ನಾಟಕದಲ್ಲಿ ಬಿಜೆಪಿ ಮತ್ತು ಜೆಡಿಎಸ್ ನಡುವೆ ಮೈತ್ರಿ ಮಾತುಕತೆ ನಡೆಯುತ್ತಿದೆ. ಈ ವಿಚಾರವಾಗಿ ಬಹುತೇಕ ಬಿಜೆಪಿ-ಜೆಡಿಎಸ್ ನಾಯಕರು ಸಹಮತ ಸೂಚಿಸಿದರೆ, ಇತ್ತ ರಾಜ್ಯದಲ್ಲಿ ಆಡಳಿತರೂಢ ಕಾಂಗ್ರೆಸ್ ಪಕ್ಷ ಟೀಕಿಸುತ್ತಿದೆ. ಜನತಾ ದಳ ಎಂಬ ಹೆಸರನ್ನು ಕಮಲ ದಳ ಎಂದು ಬದಲಿಸಿಕೊಂಡರೆ ಒಳಿತು ಎಂದು ಟ್ವೀಟ್ ಮೂಲಕ ವ್ಯಂಗ್ಯವಾಡಿದೆ.

ಜನತಾ ದಳದ ಹೆಸರನ್ನು ಕಮಲ ದಳ ಎಂದು ಬದಲಿಸಿಕೊಂಡರೆ ಒಳಿತು: ಜೆಡಿಎಸ್​ಗೆ ಕಾಂಗ್ರೆಸ್ ಟಾಂಗ್
ಬಿಜೆಪಿ-ಜೆಡಿಎಸ್, ಕಾಂಗ್ರೆಸ್
Follow us on

ಬೆಂಗಳೂರು, ಸೆ.11: ಲೋಕಸಭೆ ಚುನಾವಣೆ ಹಿನ್ನೆಲೆ ಕರ್ನಾಟಕದಲ್ಲಿ ಬಿಜೆಪಿ ಮತ್ತು ಜೆಡಿಎಸ್ ನಡುವೆ ಮೈತ್ರಿ (BJP JDS Alliance) ಮಾತುಕತೆ ನಡೆಯುತ್ತಿದೆ. ಈ ವಿಚಾರವಾಗಿ ಬಹುತೇಕ ಬಿಜೆಪಿ-ಜೆಡಿಎಸ್ ನಾಯಕರು ಸಹಮತ ಸೂಚಿಸಿದರೆ, ಇತ್ತ ರಾಜ್ಯದಲ್ಲಿ ಆಡಳಿತರೂಢ ಕಾಂಗ್ರೆಸ್ (Congress) ಪಕ್ಷ ಟೀಕಿಸುತ್ತಿದೆ. ಜನತಾ ದಳ ಎಂಬ ಹೆಸರನ್ನು ಕಮಲ ದಳ ಎಂದು ಬದಲಿಸಿಕೊಂಡರೆ ಒಳಿತು ಎಂದು ಟ್ವೀಟ್ ಮೂಲಕ ವ್ಯಂಗ್ಯವಾಡಿದೆ.

“ಚುನಾವಣೆಯಲ್ಲಿ ಸೋತರೆ ಪಕ್ಷ ವಿಸರ್ಜಿಸುತ್ತೇನೆ ಎಂದಿದ್ದರು, ಆದರೆ ಈಗ “ಜಾತ್ಯಾತೀತತೆ”ಯನ್ನು ವಿಸರ್ಜಿಸಲು ಹೊರಟಿದ್ದಾರೆ. ಜನತಾ ದಳ ಎಂಬ ಹೆಸರನ್ನು “ಕಮಲ ದಳ” ಎಂದು ಬದಲಿಸಿಕೊಂಡರೆ ಒಳಿತು” ಎಂದು ಕಾಂಗ್ರೆಸ್ ಟ್ವೀಟ್ ಮಾಡಿದೆ.

ಇದನ್ನೂ ಓದಿ: ಮೈತ್ರಿ ಸರ್ಕಾರ ರಚಿಸಲು ಜೆಡಿಎಸ್ ನೊಂದಿಗೆ ಸ್ನೇಹ ಬೆಳೆಸುವಾಗ ಕಾಂಗ್ರೆಸ್ ಅಸಹಾಯಕ ಸ್ಥಿತಿಯಲ್ಲಿರಲಿಲ್ಲವೇ? ಬಸವರಾಜ ಬೊಮ್ಮಾಯಿ

“ಇತ್ತ ಬಿಜೆಪಿ ಜೆಡಿಎಸ್ ಪಕ್ಷವನ್ನು ಫ್ಯಾಮಿಲಿ ಪಾರ್ಟಿ ಟೀಕಿಸುತ್ತಿತ್ತು, ಈಗ ಅದೇ ಫ್ಯಾಮಿಲಿಗೆ ನಾಲ್ಕು ಸೀಟು ಬಿಟ್ಟು ಹೊಂದಾಣಿಕೆ ಮಾಡಿಕೊಳ್ಳುತ್ತಿರುವುದು ನಾಚಿಕೆಗೇಡು ಅಲ್ಲವೇ” ಎಂದು ಬಿಜೆಪಿ ಪಕ್ಷಕ್ಕೆ ಕಾಂಗ್ರೆಸ್ ಟಾಂಗ್ ನೀಡಿದೆ.

“ಬಿಜೆಪಿ ಜೆಡಿಎಸ್ ಮೈತ್ರಿ ಹೇಗಿದೆ ಅಂದರೆ ನಡು ನೀರಲ್ಲಿ ಮುಳುಗುತ್ತಿರುವ ಇಬ್ಬರು ಒಬ್ಬರನೊಬ್ಬರು ಕೈ ಹಿಡಿದು ಆಸರೆ ಪಡೆಯುವಂತೆ..! ಪರಸ್ಪರ ಕೈ ಹಿಡಿದು ಇಬ್ಬರೂ ಮುಳುಗಿ ತಳ ಸೇರುವುದು ಖಂಡಿತ. ಮುಳುಗುವವರು ಹುಲ್ಲು ಕಡ್ಡಿಯ ಆಸರೆಯನ್ನಾದರೂ ಪಡೆಯಬೇಕು, ಅದು ಬಿಟ್ಟು ಮತ್ತೊಬ್ಬ ಮುಳುಗುತ್ತಿರುವವರ ಆಸರೆ ಪಡೆದರೆ ಬದುಕಲು ಸಾಧ್ಯವೇ?!” ಎಂದು ಕಾಂಗ್ರೆಸ್ ಟ್ವೀಟ್ ಮಾಡಿದೆ.

ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ