ಬಿಜೆಪಿ ನಾಯಕರಿಗೆ ಗಂಡಸ್ತನವಿಲ್ಲ ಟೀಕೆ: ಸಿ.ಎಂ.ಇಬ್ರಾಹಿಂ ಹೇಳಿಕೆಗೆ ಸಿಟಿ ರವಿ ತಿರುಗೇಟು

|

Updated on: Mar 06, 2023 | 9:31 PM

ರಾಜ್ಯ ಬಿಜೆಪಿ ನಾಯಕರಿಗೆ ಗಂಡಸ್ತನವಿಲ್ಲವೆಂದು ಸಿ.ಎಂ.ಇಬ್ರಾಹಿಂ ಹೇಳಿಕೆಗೆ ಬಿಜೆಪಿ ನಾಯಕ ಸಿ.ಟಿ.ರವಿ ತಿರುಗೇಟು ನೀಡಿದ್ದಾರೆ.

ಮಂಡ್ಯ: ಮೊದಲು ಕಾಂಗ್ರೆಸ್‌ ನಾಯಕರಿಗೆ ಗಂಡಸ್ತನ ಇರಲಿಲ್ಲ. ಹೀಗಾಗಿ ಕಾಂಗ್ರೆಸ್ ಪಕ್ಷಕ್ಕೆ ಸಿ.ಎಂ.ಇಬ್ರಾಹಿಂ (C. M. Ibrahim) ಸೇರ್ಪಡೆಯಾಗಿದ್ದರು. ಈಗ ಜೆಡಿಎಸ್‌ನವರಿಗೆ ಗಂಡಸ್ತನವಿಲ್ಲ, ಹೀಗಾಗಿ JDSಗೆ ಹೋಗಿದ್ದಾರೆ ಎಂದು ಸಿ.ಎಂ.ಇಬ್ರಾಹಿಂಗೆ ಬಿಜೆಪಿ ನಾಯಕ ಸಿ.ಟಿ.ರವಿ ತಿರುಗೇಟು ನೀಡಿದ್ದಾರೆ. ಜಿಲ್ಲೆಯ ಮಳವಳ್ಳಿಯಲ್ಲಿ ಮಾಧ್ಯಮದವರೊಂದಿಗೆ ಅವರು ಮಾತನಾಡಿ, ಜೆಡಿಎಸ್‌ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂಗೆ ನೆಟ್ಟಗೆ ಒಂದು ನೆಲೆಯಿಲ್ಲ. ಹೀಗಾಗಿ ಕಾಂಗ್ರೆಸ್‌ನಲ್ಲಿದ್ದ ಇಬ್ರಾಹಿಂ ಜೆಡಿಎಸ್‌ಗೆ ಬಂದಿದ್ದಾರೆ ಎಂದು ಟೀಕೆ ಮಾಡಿದರು.

ಇಬ್ರಾಹಿಂ ವಿರುದ್ಧ ಅಶ್ವತ್ಥ್ ನಾರಾಯಣ ಕೆಂಡಾಮಂಡಲ

ಉನ್ನತ ಶಿಕ್ಷಣ ಸಚಿವ ಅಶ್ವತ್ಥ್ ನಾರಾಯಣ ಕೂಡ ಈ ವಿಚಾರವಾಗಿ ಕಿಡಿಕಾರಿದ್ದು, ಪ್ರಧಾನಿ ನರೇಂದ್ರ ಮೋದಿ ಹಾಗೂ ಅಮಿತ್ ಶಾ ಕಂಡರೆ ಕರ್ನಾಟಕದವರಿಗೆ ಅಪಾರ ಅಭಿಮಾನ, ಆರ್ಟಿಕಲ್ 370 ಯನ್ನ ವಜಾ ಮಾಡಿ ಹೇಗೆ ಕೆಲಸ ಮಾಡ್ಬೇಕು ಅಂತ ತೋರಿಸಿ ಕೊಟ್ಟಿದ್ದಾರೆ. ಪಾಪ ಸಿಎಂ ಇಬ್ರಾಹಿಂಗೆ ಇದೆಲ್ಲ ಎಲ್ಲಿ ಅರ್ಥ ಆಗುತ್ತೆ, ಇದನ್ನೆಲ್ಲ ನೀವು ಗಂಭೀರವಾಗಿ ತೆಗೆದುಕೊಳ್ಳಬೇಡಿ. ಅವರ ಹೇಳಿಕೆಗಳು ಎಲ್ಲವೂ ಎಂಟರ್​ಟೈನ್ಮೆಂಟ್ ಇದ್ದ ಹಾಗೆ ಎಂದು ಸಿಎಂ ಇಬ್ರಾಹಿಂ ವಿರುದ್ದ ಟಾಂಗ್​ ನೀಡಿದ್ದರು.

ಇದನ್ನೂ ಓದಿ: CM Ibrahim: ಇಬ್ರಾಹಿಂನ ಯಾರೂ ತಬ್ಬಲಿ ಮಾಡಿಲ್ಲ, ಮನವೊಲಿಕೆಗೆ ಪ್ರಯತ್ನಿಸುವೆ: ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್

ಸಿ.ಎಂ.ಇಬ್ರಾಹಿಂ ವಿವಾದಾತ್ಮಕ ಹೇಳಿಕೆ

ಹಳೇ ಮೈಸೂರು ಭಾಗದ ಬಿಜೆಪಿ ನಾಯಕರಿಗೆ ಗಂಡಸ್ತನ ಇಲ್ಲ. ಹೀಗಾಗಿ ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹಸಚಿವ ಅಮಿತ್ ಶಾ ಅವರನ್ನು ಕರೆಸಿ ಪ್ರಚಾರ ನಡೆಸುತ್ತಿದ್ದಾರೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ ವಿವಾದಾತ್ಮಕ ಹೇಳಿಕೆ ನೀಡಿದ್ದರು. ಮಂಡ್ಯ ಜಿಲ್ಲೆಯ ಪಾಂಡವಪುರ ತಾಲೂಕಿನ ಹರಳಹಳ್ಳಿ ಗ್ರಾಮದಲ್ಲಿ ಹೇಳಿಕೆ ನೀಡಿದ ಅವರು, ಸ್ಥಳೀಯ ಬಿಜೆಪಿ ನಾಯಕರಿಗೆ ಶಕ್ತಿ ಇಲ್ಲ. ಮೇಲ್ಗಡೆಯಿಂದ ಬಂದು ಇವರಿಗೆ ಇಂಜಕ್ಷನ್ ಕೊಡುತ್ತಿದ್ದಾರೆ ಅಷ್ಟೇ. ಇವರೆಲ್ಲಾ ಗಟ್ಟಿಯಾಗಲಿ ಅಂತಾ ಡೆಲ್ಲಿಯಿಂದ ಬಂದು ಇವರಿಗೆ ಚುಚ್ಚುತ್ತಿದ್ದಾರೆ ಎಂದಿದ್ದರು.

ರಾಜ್ಯದಲ್ಲಿ ಭಾರೀ ಸುದ್ದಿ ಮಾಡಿದ ನಂತರ ಕೆಲವು ಶಾಸಕರು ಕೋರ್ಟ್​ನಿಂದ ಸ್ಟೇ ಆರ್ಡರ್ ತಂದಿದ್ದರು. ಈ ಬಗ್ಗೆ ಮಾತನಾಡಿದ ಸಿ.ಎಂ. ಇಬ್ರಾಹಿಂ, 12 ಮಂದಿ ನಿಮ್ಮ ಶಾಸಕರು ಯಾಕೆ ಕೋರ್ಟ್​​ನಿಂದ ಸ್ಟೇ ತಗೊಂಡಿದ್ದಾರೆ ಎಂದು ಕೇಳಬೇಕು. ಅದ್ಯಾರೋ ಆಹಾರ ಸಚಿವ ಇದಾರಲ್ಲ ದಪ್ಪವಾಗಿ, ಅವರು ಹೇಳುತ್ತಾರೆ ನಾನು ಯಾವುದೇ ಸ್ಟೇ ತೆಗೆದುಕೊಂಡಿಲ್ಲ ಅಂತ. ಪಾಪ ಅವರ ಕೈಯಲ್ಲಿ ಏನಾಗುತ್ತೆ ಏನು ಆಗುವುದಿಲ್ಲ ಎಂದು ಪರೋಕ್ಷವಾಗಿ ಸಚಿವ ಗೋಪಾಲಯ್ಯ ಅವರಿಗೆ ಟಾಂಗ್ ಕೊಟ್ಟರು.

ಇದನ್ನೂ ಓದಿ: ಮಾಡಾಳ್ ಹಗರಣ ದಿಕ್ಕುತಪ್ಪಿಸಲು ನನ್ನ ಮೇಲೆ 200 ಕೋಟಿ ರೂ. ಲೂಟಿ ಆರೋಪ: ಸಿದ್ಧರಾಮಯ್ಯ

ಇವರ ದಡಕ ಬಡಕ ಆಟ ನಮಗೆ ಗೊತ್ತಿಲ್ವ? ಮಾಜಿ ಸಚಿವರೂ ಆಗಿರುವ ಶಾಸಕ ರಮೇಶ್ ಜಾರಕಿಹೊಳಿ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಒಂದೇ ತೋಟದ ಹೂವಿದ್ದಂತೆ. ಅವರ ಬಗ್ಗೆ ಜಾಸ್ತಿ ಮಾತನಾಡುವುದಿಲ್ಲ ಎಂದು ಹರಳಹಳ್ಳಿಯಲ್ಲಿ ಸಿಎಂ ಇಬ್ರಾಹಿಂ ಹೇಳಿಕೆ ನೀಡಿದ್ದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಕಿಕ್ ಮಾಡಿ.

Published On - 9:30 pm, Mon, 6 March 23