ದೆಹಲಿ: ಹಲವಾರು ಬಿಜೆಪಿ (BJP) ನಾಯಕರು ಮತ್ತು ವಕ್ತಾರರು ಭಾನುವಾರ ಕಾಂಗ್ರೆಸ್ (Congress) ನಾಯಕ ರಾಹುಲ್ ಗಾಂಧಿಯನ್ನು (Rahul Gandhi) ಲೇವಡಿ ಮಾಡುವ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಬಿಜೆಪಿಯ ಅಧಿಕೃತ ಟ್ವಿಟರ್ ಹ್ಯಾಂಡಲ್ ನಲ್ಲಿ ಈ ವಿಡಿಯೊ ಮೊದಲು ಟ್ವೀಟ್ ಮಾಡಲಾಗಿದೆ. ರಾಹುಲ್ ಗಾಂಧಿ ಮತ್ತು ಪಕ್ಷದ ಭಾರತ್ ಜೋಡೋ ಯಾತ್ರೆಯನ್ನು ಲೇವಡಿ ಮಾಡಿರುವ ಈ ವಿಡಿಯೊದಲ್ಲಿ ಗೋವಾದಲ್ಲಿನ ಶಾಸಕರ ಪಕ್ಷಾಂತರಸೆ, ಗುಲಾಂ ನಬಿ ಆಜಾದ್ ಅವರ ರಾಜೀನಾಮೆ, ರಾಜಸ್ಥಾನ ಬಂಡಾಯದಸೇರಿದಂತೆ ಕಾಂಗ್ರೆಸ್ ಎದುರಿಸಿದ ಇತ್ತೀಚಿನ ಸಮಸ್ಯೆಗಳನ್ನು ವಿಡಿಯೊದಲ್ಲಿ ಸೇರಿಸಲಾಗೆ. ಈ ವಿಡಂಬನೆ ವಿಡಿಯೊದಲ್ಲಿ ಕೊನೆಗೆ ಸೋನಿಯಾ ಗಾಂಧಿ ಅವರನ್ನೂ ತೋರಿಸಲಾಗಿದೆ. “ಅಮ್ಮಾ, ಕೆಟ್ಟ ದಿನಗಳು ಏಕೆ ಕೊನೆಗೊಳ್ಳುವುದಿಲ್ಲ? ಖತಮ್…ಟಾಟಾ…ಗುಡ್ ಬೈ ,” ಎಂಬ ಶೀರ್ಷಿಕೆಯೊಂದಿಗೆ ಬಿಜೆಪಿ ಈ ವಿಡಿಯೊ ಶೇರ್ ಮಾಡಿದೆ.
मम्मी ये दुःख खतम काहे नहीं होता है?
खतम…टाटा…गुडबाय! pic.twitter.com/J4tFqQgPOQ
— BJP (@BJP4India) October 16, 2022
ಕಾಂಗ್ರೆಸ್ ಪ್ರತಿಕ್ರಿಯೆ
भारत जोड़ो यात्रा के डर से पूरी भाजपा चवन्नी छाप ट्रोल बन गई है।
पर यह डर अच्छा है!
काश, इतनी मेहनत बेरोज़गारी और महंगाई का समाधान ढूँढने में लगायी होती।@BJP4India #BharatJodoYatra https://t.co/bWyx8wPhrX pic.twitter.com/Y2rDi8YWjN
— Supriya Shrinate (@SupriyaShrinate) October 16, 2022
ಈ ವಿಡಿಯೋ ಕುರಿತು ಪ್ರತಿಕ್ರಿಯಿಸಿರುವ ಕಾಂಗ್ರೆಸ್ ನಾಯಕಿ ಸುಪ್ರಿಯಾ ಶ್ರಿನೇತ್, ಇಡೀ ಪಕ್ಷವೇ ‘ಚೀಪ್ ಟ್ರೋಲ್’ ಆಗಿದೆ. ಭಾರತ್ ಜೋಡೋ ಯಾತ್ರೆ ಹುಟ್ಟಿಸಿರುವ ಭಯದಿಂದ ಬಿಜೆಪಿ ನಾಲ್ಕಾಣೆಯ ಟ್ರೋಲ್ ಆಗಿಬಿಟ್ಟಿದೆ.”ಆದರೆ ಭಯ ಒಳ್ಳೆಯದು. ನಿರುದ್ಯೋಗ ಮತ್ತು ಬೆಲೆ ಏರಿಕೆಗೆ ಪರಿಹಾರವನ್ನು ಕಂಡುಹಿಡಿಯಲು ಅವರು ಇಷ್ಟೊಂದು ಪ್ರಯತ್ನ ಮಾಡಿದ್ದರೆ ಒಳ್ಳೆಯದಿತ್ತು ಎಂದು ಟ್ವೀಟ್ ಮಾಡಿದ್ದಾರೆ.
ರಾಹುಲ್ ಗಾಂಧಿಯವರ ಭಾರತ್ ಜೋಡೋ ಯಾತ್ರೆಯು ಇಲ್ಲಿಯವರೆಗೆ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ಹಲವಾರು ವಿಷಯಗಳ ಮುಖಾಮುಖಿಯಾಗುವಂತೆ ಮಾಡಿದೆ. ಪ್ರಮುಖ ಬಿಜೆಪಿ ನಾಯಕರು ಕಾಂಗ್ರೆಸ್ ಅನೇಕ ರಾಜೀನಾಮೆಗಳಿಗೆ ಸಾಕ್ಷಿಯಾದ ಸಮಯದಲ್ಲಿ ಯಾತ್ರೆಯ ಅಗತ್ಯವನ್ನು ಪ್ರಶ್ನಿಸಿದ್ದಾರೆ. ಯಾತ್ರೆಯ ಯಶಸ್ಸಿನಿಂದ ಗಮನ ಬೇರೆಡೆ ಸೆಳೆಯಲು ಬಿಜೆಪಿ ಯತ್ನಿಸುತ್ತಿದೆ ಎಂದು ಕಾಂಗ್ರೆಸ್ ಹೇಳಿದೆ.
ಭಾರತ್ ಜೋಡೋ ಯಾತ್ರೆ ಇದೀಗ ಕರ್ನಾಟಕದಲ್ಲಿದ್ದು, ಶನಿವಾರ 1,000 ಕಿ.ಮೀ ಮೈಲುಗಲ್ಲನ್ನು ದಾಟಿದೆ.ಈ ಮೈಲುಗಲ್ಲು ಪೂರ್ಣಗೊಳಿಸಿದ ಸಂದರ್ಭದಲ್ಲಿ ಮಾತನಾಡಿದ ರಾಹುಲ್ ಗಾಂಧಿ, 1999 ರಲ್ಲಿ ಸೋನಿಯಾ ಗಾಂಧಿ ಅವರು ಬಳ್ಳಾರಿಯಿಂದ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಿ ಗೆದ್ದಿದ್ದರಿಂದ ತಮ್ಮ ಕುಟುಂಬಕ್ಕೆ ಕರ್ನಾಟಕದೊಂದಿಗೆ ಸುದೀರ್ಘ ಸಂಬಂಧವಿದೆ, ನಮ್ಮ ಕುಟುಂಬ ಮತ್ತು ಬಳ್ಳಾರಿ ನಡುವೆ ಸುದೀರ್ಘ ಸಂಬಂಧವಿದೆ. .ನನ್ನ ತಾಯಿ ಇಲ್ಲಿಂದ ಚುನಾವಣೆಗೆ ಸ್ಪರ್ಧಿಸಿ ಬಳ್ಳಾರಿ ಜನತೆಯ ಮನಃಪೂರ್ವಕ ಬೆಂಬಲದಿಂದ ಆಯ್ಕೆಯಾದರು, ನನ್ನ ಅಜ್ಜಿ ಇಂದಿರಾಗಾಂಧಿ ಚಿಕ್ಕಮಗಳೂರಿನಿಂದ ಸ್ಪರ್ಧಿಸಿದ್ದರು. ಹಾಗಾಗಿ ಅದನ್ನು ಮರೆಯಲು ಸಾಧ್ಯವಿಲ್ಲ ಎಂದಿದ್ದಾರೆ.
Published On - 2:15 pm, Sun, 16 October 22