ಬೆಳಗಾವಿ ಮಹಾನಗರ ಪಾಲಿಕೆ ಪ್ರತಿಷ್ಠೆ ಗುದ್ದಾಟ; ಸತೀಶ್​ ಜಾರಕಿಹೊಳಿ ವಿರುದ್ಧ ಅಭಯ ಪಾಟೀಲ್​ ಪರೋಕ್ಷ ವಾಗ್ದಾಳಿ

| Updated By: ವಿವೇಕ ಬಿರಾದಾರ

Updated on: Oct 28, 2023 | 2:28 PM

138 ಪೌರ ಕಾರ್ಮಿಕರ ನೇಮಕಾತಿಯಲ್ಲಿ ಭ್ರಷ್ಟಾಚಾರದ ಬಗ್ಗೆ ‌ಜಿಲ್ಲಾ ಉಸ್ತುವಾರಿ ಸಚಿವರು ಆರೋಪ ಮಾಡಿದ್ದಾರೆ. ಈ ಬಗ್ಗೆ ತಪ್ಪು ಮಾಹಿತಿ ಹರಿದಾಡುತ್ತಿದೆ. ಆರೋಪ ಮಾಡುವವರಿಗೆ ಸಾಮಾನ್ಯ ಜ್ಞಾನ ಬೇಕಿತ್ತು ಎಂದು ಶಾಸಕ ಅಭಯ ಪಾಟೀಲ್​ ವಾಗ್ದಾಳಿ ಮಾಡಿದರು.

ಬೆಳಗಾವಿ ಮಹಾನಗರ ಪಾಲಿಕೆ ಪ್ರತಿಷ್ಠೆ ಗುದ್ದಾಟ; ಸತೀಶ್​ ಜಾರಕಿಹೊಳಿ ವಿರುದ್ಧ ಅಭಯ ಪಾಟೀಲ್​ ಪರೋಕ್ಷ ವಾಗ್ದಾಳಿ
ಶಾಸಕ ಅಭಯ ಪಾಟೀಲ್​
Follow us on

ಬೆಳಗಾವಿ ಅ.28: ಬೆಳಗಾವಿ ಮಹಾನಗರ ಪಾಲಿಕೆ (Belagavi Corporation) ಪ್ರತಿಷ್ಠೆ ಗುದ್ದಾಟ ತೀವ್ರ ಸ್ವರೂಪ ಪಡೆದುಕೊಂಡಿದೆ. ಸಚಿವ ಸತೀಶ್ ಜಾರಕಿಹೊಳಿ (Satish Jarkiholi) ಮತ್ತು ಬಿಜೆಪಿ ಶಾಸಕ ಅಭಯ ಪಾಟೀಲ್ (Abhay Patil) ನಡುವೆ ಪ್ರತಿಷ್ಠೆಯ ಫೈಟ್ ನಡೆಯುತ್ತಿದೆ. ಸಚಿವ ಸತೀಶ್​ ಜಾರಕಿಹೊಳಿ ವಿರುದ್ಧ ಬಿಜೆಪಿ‌ (BJP) ನಿಯೋಗ ಮೂರು‌ ಪ್ರತ್ಯೇಕ ದೂರು ನೀಡಿತ್ತು. ಸಚಿವರ ಹಸ್ತಕ್ಷೇಪದ ಬಗ್ಗೆ ಮೇಯರ್ ಶೋಭಾ ಸೋಮನಾಚೆ, ಬಿಜೆಪಿ ಪಾಲಿಕೆ ಸದಸ್ಯ ರಾಜು ಭಾತಕಾಂಡೆ ಮನೆ ಮೇಲೆ ದಾಳಿ ವಿಚಾರ ಮತ್ತು ಕಾನೂನು ಸುವ್ಯವಸ್ಥೆ ಹದಗೆಟ್ಟ ಬಗ್ಗೆ ಮಾಜಿ ಶಾಸಕ ಅನಿಲ್ ಬೆನೆಕೆ ದೂರು ನೀಡಿದ್ದರು.

ಬೆಳಗಾವಿಯಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹಾಳಾಗಿದೆ. ಇಬ್ಬರು ಮಹಿಳಾ ಅಧಿಕಾರಿಯನ್ನ ಮಧ್ಯರಾತ್ರಿ ಠಾಣೆಯಲ್ಲಿ ಕೂರಿಸಿದ್ದಾರೆ. ನಮ್ಮ ಪಾಲಿಕೆ ಸದಸ್ಯರು ಹೋದ ಕೂಡಲೇ ಬಿಟ್ಟು ಕಳುಹಿಸಿದ್ದಾರೆ. ರಾಜ್ಯ ಸರ್ಕಾರ ಅಧಿಕಾರ ದುರುಪಯೋಗ ಮಾಡಿಕೊಂಡಿದೆ. ರಾಜ್ಯಪಾಲರಿಗೆ ಲಿಖಿತ ದೂರು ನೀಡಿದ್ದೇವೆ. ಈ ಬೆಳವಣಿಗೆ ಬಗ್ಗೆ ರಾಜ್ಯಪಾಲರಿಗೆ ಮಾಹಿತಿಯನ್ನು ಒದಗಿಸುತ್ತೇವೆ ಎಂದು ಬೆಳಗಾವಿ ದಕ್ಷಿಣ ಕ್ಷೇತ್ರದ ಶಾಸಕ ಅಭಯ್ ಪಾಟೀಲ್ ಹೇಳಿದರು.

ಇದನ್ನೂ ಓದಿ: ಬೆಳಗಾವಿ ಪಾಲಿಕೆಯಲ್ಲಿ ಹೈಡ್ರಾಮ: ಶಾಸಕ ಅಭಯ್ ಪಾಟೀಲ್ ಹಾಗೂ ಸಚಿವ ಸತೀಶ್ ಜಾರಕಿಹೊಳಿ ಮಧ್ಯೆ ಬಿಗ್ ಫೈಟ್

138 ಪೌರ ಕಾರ್ಮಿಕರ ನೇಮಕಾತಿಯಲ್ಲಿ ಭ್ರಷ್ಟಾಚಾರದ ಬಗ್ಗೆ ‌ಜಿಲ್ಲಾ ಉಸ್ತುವಾರಿ ಸಚಿವರು ಆರೋಪ ಮಾಡಿದ್ದಾರೆ. ಈ ಬಗ್ಗೆ ತಪ್ಪು ಮಾಹಿತಿ ಹರಿದಾಡುತ್ತಿದೆ. ಬೆಳಗಾವಿ ಉತ್ತರ ಶಾಸಕ ರಾಜು ಸೇಠ್ ನಿದ್ದೆ ಕಣ್ಣಲ್ಲಿಯೂ ಈ ಬಗ್ಗೆ ಜಪ ಮಾಡುತ್ತಿದ್ದಾರೆ. 138 ಪೌರ ಕಾರ್ಮಿಕರು ನೇಮಕಾತಿ ಕಾಯಂ ಅಲ್ಲ. ಕೇವಲ ಗುತ್ತಿಗೆದಾರ ಆಧಾರದ ಮೇಲೆ ಪೌರ ಕಾರ್ಮಿಕರ ನೇಮಕಕ್ಕೆ ಅನುಮತಿ ನೀಡಲಾಗಿದೆ. ಆರೋಪ ಮಾಡುವವರಿಗೆ ಸಾಮಾನ್ಯ ಜ್ಞಾನ ಬೇಕಿತ್ತು ಎಂದು ವಾಗ್ದಾಳಿ ಮಾಡಿದರು.

ಪೌರಾಡಳಿತ ಇಲಾಖೆಯ ಅನುಮತಿಯ ಮೇಲೆ ನೇಮಕ ಮಾಡಲಾಗಿದೆ. ಶಾಸಕ ರಾಜು ಸೇಠ್ 59ನೇ ಪಾಲಿಕೆ ಸದಸ್ಯರ ರೀತಿ ವರ್ತನೆ ಮಾಡುತ್ತಿದ್ದಾರೆ‌. ಕಾಂಗ್ರೆಸ್ ಶಾಸಕರಿಗೆ ಅನುಭವದ ಕೊರತೆ ಇದೆ. ಜಿಲ್ಲಾ ಸಚಿವರು, ಶಾಸಕರು ಈ ಬಗ್ಗೆ ತನಿಖೆ ಮಾಡಿಕೊಳ್ಳಲ್ಲಿ ಎಂದರು. ಸುದ್ದಿಗೋಷ್ಠಿಯಲ್ಲಿ ಮಾಜಿ ಶಾಸಕ ಅನಿಲ್ ಬೆನಕೆ, ಮಾಜಿ ಎಂಎಲ್ಸಿ ಮಹಾಂತೇಶ ಕವಟಗಿಮಠ ಭಾಗಿಯಾಗಿದ್ದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ