ಬೆಳಗಾವಿ ಪಾಲಿಕೆಯಲ್ಲಿ ಹೈಡ್ರಾಮ: ಶಾಸಕ ಅಭಯ್ ಪಾಟೀಲ್ ಹಾಗೂ ಸಚಿವ ಸತೀಶ್ ಜಾರಕಿಹೊಳಿ ಮಧ್ಯೆ ಬಿಗ್ ಫೈಟ್

ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ಸದ್ಯ ಶಾಸಕ ಅಭಯ್ ಪಾಟೀಲ್ ಹಾಗೂ ಸಚಿವ ಸತೀಶ್ ಜಾರಕಿಹೊಳಿ ಮಧ್ಯೆ ಬಿಗ್ ಫೈಟ್ ಶುರುವಾಗಿದೆ. ಪಾಲಿಕೆಯ ದಲಿತ ಅಧಿಕಾರಿಗಳನ್ನೇ ಶಾಸಕ ಅಭಯ್ ಪಾಟೀಲ್ ಟಾರ್ಗೆಟ್ ಮಾಡ್ತಿದ್ದಾರೆ ಅಂತ ಆರೋಪಿಸಿ ಇವತ್ತು ಪಾಲಿಕೆ ಎದುರು ಕಾಂಗ್ರೆಸ್ ಪಕ್ಷದ ಪಾಲಿಕೆ ಸದಸ್ಯರು ಪ್ರತಿಭಟಿಸಿ ಆಕ್ರೋಶ ಹೊರಹಾಕಿದರು

ಬೆಳಗಾವಿ ಪಾಲಿಕೆಯಲ್ಲಿ ಹೈಡ್ರಾಮ: ಶಾಸಕ ಅಭಯ್ ಪಾಟೀಲ್ ಹಾಗೂ ಸಚಿವ ಸತೀಶ್ ಜಾರಕಿಹೊಳಿ ಮಧ್ಯೆ ಬಿಗ್ ಫೈಟ್
ಶಾಸಕ ಅಭಯ ಪಾಟೀಲ, ಸಚಿವ ಸತೀಶ ಜಾರಕಿಹೊಳಿ
Follow us
Sahadev Mane
| Updated By: Ganapathi Sharma

Updated on: Oct 25, 2023 | 7:28 PM

ಬೆಳಗಾವಿ, ಅಕ್ಟೋಬರ್ 25: ಬೆಳಗಾವಿ ಪಾಲಿಕೆಯಲ್ಲಿ (Belagavi Corporation) ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ಫೈಟ್ ಶುರುವಾಗಿದೆ. ಕಚೇರಿಯಲ್ಲಿನ ಠರಾವು ಪ್ರತಿ ಮಿಸ್ ಆಗಿದ್ದೇ ಆಗಿದ್ದು ಪಾಲಿಕೆ ಹಲವು ಹೈಡ್ರಾಮಾಗಳಿಗೆ ಕಾರಣವಾಗಿದೆ. ಶಾಸಕ ಅಭಯ್ ಪಾಟೀಲ್ (Abhay Patil) ವಿರುದ್ಧ ಇವತ್ತು ಸತೀಶ್ ಜಾರಕಿಹೊಳಿ (Satish Jarkiholi) ಹಾಗೂ ಅವರ ಬೆಂಬಲಿಗರು ಆಕ್ರೋಶ ವ್ಯಕ್ತಪಡಿಸಿ ಪ್ರತಿಭಟಿಸಿದ್ದಾರೆ. ದಲಿತ ಅಧಿಕಾರಿಗಳನ್ನ ಶಾಸಕ ಅಭಯ್ ಪಾಟೀಲ್ ಅವರು ಟಾರ್ಗೆಟ್ ಮಾಡ್ತಿದ್ದಾರೆ ಎಂದು ಆರೋಪಿಸಿ ಹೋರಾಟಕ್ಕಿಳಿದಿದ್ದಾರೆ.

ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ಸದ್ಯ ಶಾಸಕ ಅಭಯ್ ಪಾಟೀಲ್ ಹಾಗೂ ಸಚಿವ ಸತೀಶ್ ಜಾರಕಿಹೊಳಿ ಮಧ್ಯೆ ಬಿಗ್ ಫೈಟ್ ಶುರುವಾಗಿದೆ. ಪಾಲಿಕೆಯ ಅಧಿಕಾರಿಗಳನ್ನ ಅದರಲ್ಲೂ ದಲಿತ ಅಧಿಕಾರಿಗಳನ್ನೇ ಶಾಸಕ ಅಭಯ್ ಪಾಟೀಲ್ ಟಾರ್ಗೆಟ್ ಮಾಡ್ತಿದ್ದಾರೆ ಅಂತ ಆರೋಪಿಸಿ ಇವತ್ತು ಪಾಲಿಕೆ ಎದುರು ಕಾಂಗ್ರೆಸ್ ಪಕ್ಷದ ಪಾಲಿಕೆ ಸದಸ್ಯರು ಮತ್ತು ದಲಿತಪರ ಸಂಘಟನೆಯ ಕಾರ್ಯಕರ್ತರು, ಸಾಮಾಜಿಕ ಕಾರ್ಯಕರ್ತರು ಪ್ರತಿಭಟಿಸಿ ಆಕ್ರೋಶ ಹೊರಹಾಕಿದರು. ಪಾಲಿಕೆಗೆ ನುಗ್ಗಲು ಕೆಲ ಹೋರಾಟಗಾರರು ಯತ್ನಿಸಿದ್ದು ಕೂಡಲೇ ಅವರನ್ನ ತಡೆಯುವ ಕೆಲಸವನ್ನ ಪೊಲೀಸರು ಮಾಡಿದ್ದಾರೆ. ಇದರಿಂದ ಆಕ್ರೋಶಗೊಂಡ ಹೋರಾಟಗಾರರು ಪಾಲಿಕೆ ಕಚೇರಿ ಆವರಣದಲ್ಲೇ ಕುಳಿತು ಧರಣಿ ನಡೆಸಿದರು.

ವಡಾ ಪಾವ್ ಅಚ್ಚಾ ಹೈ ಅಭಯ್ ಪಾಟೀಲ್ ಲುಚ್ಚಾ ಹೈ ಅಂತಾ ಘೋಷಣೆ ಕೂಗಿ ಪ್ರತಿಭಟನಾಕಾರರು ತಮ್ಮ ಆಕ್ರೋಶ ಹೊರ ಹಾಕಿದರು. ಇತ್ತ ಮಹಾನಗರ ಪಾಲಿಕೆಗೆ ಆಗಮಿಸಿದ ಸಚಿವ ಸತೀಶ್ ಜಾರಕಿಹೊಳಿ ಪಾಲಿಕೆಯಲ್ಲಿಯೇ ಸಭೆ ನಡೆಸಿದರು. ಸಭೆಯಲ್ಲಿ ಅಭಯ್ ಪಾಟೀಲ್ ವಿರುದ್ಧ ಹೋರಾಟಗಾರರು ಆಕ್ರೋಶ ಹೊರ ಹಾಕಿದರು ಅಷ್ಟೇ ಅಲ್ಲದೇ ಅಭಯ್ ವಿರುದ್ಧ ಮತ್ತು ದಾಖಲೆ ಕಳ್ಳತನ ಮಾಡಿದ ಮೇಯರ್ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಮನವಿ ಮಾಡಿಕೊಂಡರು. ಇದೇ ವೇಳೆ ಅಭಯ್ ಪಾಟೀಲ್ ಮನೆ ಮುಂದೆ ಹೋರಾಟ ಮಾಡಲು ತೀರ್ಮಾನ ಕೂಡ ಆಗಿದ್ದು ಇದರ ಜತೆಗೆ ಪಾಲಿಕೆಯ ಕೌನ್ಸಿಲ್ ನಲ್ಲಿ ಸದಸ್ಯರು ಮೇಯರ್ ವಿರುದ್ಧ ಹೋರಾಟ ಮಾಡಲು ತೀರ್ಮಾನ ಮಾಡಿದರು.

ದಲಿತ ಅಧಿಕಾರಿಗಳಿಗೆ ಕಿರುಕುಳ: ಅಭಯ ಪಾಟೀಲ್ ವಿರುದ್ಧ ಸತೀಶ್ ಜಾರಕಿಹೊಳಿ ಆರೋಪ

ಇತ್ತ ಸಭೆಯ ಬಳಿಕ ಮಾತನಾಡಿದ ಸತೀಶ್ ಜಾರಕಿಹೊಳಿ, ಕೇಂದ್ರದ ಏಜೆನ್ಸಿಗಳಿಗೆ ಪತ್ರ ಬರೆದು ಶಾಸಕ ಅಭಯ್ ಪಾಟೀಲ ಅಧಿಕಾರಿಗಳನ್ನು ಬ್ಲಾಕ್ ಮೇಲ್ ಮಾಡ್ತಿದ್ದಾರೆ. ಅಭಯ್ ಪಾಟೀಲ್ ದುರುದ್ದೇಶದಿಂದ ತೊಂದರೆ ಆಗ್ತಿದೆ ಎಂದು ಇಂದು ಪ್ರತಿಭಟನೆ ಆಗಿದೆ. ದಾಖಲೆಗಳಲ್ಲಿ ಮೇಯರ್ ಸೈನ್ ಮಾಡಿದ್ದಾರೆ. ಮೇಯರ್ ಅವರು ಸೈನ್ ಮಾಡಿದ ನಂತರವೇ ಆಯುಕ್ತರು ಸರ್ಕಾರಕ್ಕೆ ಕಳಿಸಿದ್ದಾರೆ. ಅಷ್ಟೇ ಅಲ್ಲದೇ ಅಭಯ್ ಪಾಟೀಲ್ ದಲಿತ ಅಧಿಕಾರಿಗಳಿಗೆ ಕಿರುಕುಳ ನೀಡುತ್ತಿದ್ದಾರೆ. ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಮೇಯರ್ ಮತ್ತು ಅಭಯ್ ಪಾಟೀಲ್ ಮನೆಯ ಮುಂದೆ ಪ್ರತಿಭಟನೆಗೆ ನಿರ್ಧಾರ ಮಾಡಲಾಗಿದೆ‌. ಬೆಳಗಾವಿ ಪಾಲಿಕೆ ಸೂಪರ್ ಸೀಡ್ ಯಾವ ಕಾರಣಕ್ಕೂ ಆಗೊದಿಲ್ಲ ಎಂದು ತಿಳಿಸಿದ್ದಾರೆ.

ಮಹಾನಗರ ಪಾಲಿಕೆಯಲ್ಲಿ ಸೆಪ್ಟಂಬರ್ 16ರಂದು 2023 ಮತ್ತು 24ನೇ ಸಾಲಿನ ಆಸ್ತಿ ತೆರಿಗೆಯನ್ನು ಹೆಚ್ಚಳ ಮಾಡಿ ಠರಾವು ಪಾಸ್ ಮಾಡಲಾಗಿತ್ತು. ಆದರೆ ಅದನ್ನು ಅಧಿಕಾರಿಗಳು 2024 ಮತ್ತು 25 ಕ್ಕೆ ತೆರಿಗೆ ಹೆಚ್ಚಳ ಮಾಡ್ತಿದ್ದೇವೆ ಅಂತಾ ತಿದ್ದಿದ್ದಾರೆ ಎನ್ನುವ ಆರೋಪವನ್ನು ಬಿಜೆಪಿ ಸದಸ್ಯರು ಮಾಡಿದ್ದರು. ಪಾಲಿಕೆ ಆಯುಕ್ತ ಅಶೋಕ ದುಡಗುಂಟಿ ಅವರೇ ಈ ಕೆಲಸ ಮಾಡಿದ್ದು ಅವರ ವಿರುದ್ಧ ಕಾನೂನ ಕ್ರಮ ಕೈಗೊಳ್ಳುವಂತೆ ಮೊನ್ನೆ ನಡೆದ ಸಾಮಾನ್ಯ ಸಭೆಯಲ್ಲಿ ಠರಾವ್ ಪಾಸ್ ಮಾಡಿದ್ದರು. ಇದಾದ‌ ನಂತರ ಸತೀಶ್ ಜಾರಕಿಹೊಳಿಯವರು ಠರಾವು ಹೊರಡಿಸಿದ ಮೂಲ ಪ್ರತಿ ಕಳ್ಳತನವಾಗಿದೆ‌ ಎಂದು ಆರೋಪಿಸಿದ್ದರು. ಅಲ್ಲದೆ ಪಾಲಿಕೆ ಆಯುಕ್ತ ಅಶೋಕ್ ದುಡಗುಂಟಿಯವರಿಗೆ ಮೇಯರ್ ವಿರುದ್ಧ ಪೊಲೀಸರಿಗೆ ದೂರು ನೀಡಲು ತಿಳಿಸಿದ್ದರು. ಅದರಂತೆ ಪಾಲಿಕೆ ಆಯುಕ್ತ ಪೊಲೀಸರಿಗೆ ದೂರು ನೀಡಿದ್ದರು. ಇತ್ತ ಪಾಲಿಕೆ ಮೇಯರ್ ಶೋಭಾ ಸೋಮನಾಚೆ ಸತೀಶ ಜಾರಕಿಹೊಳಿಯವರ ವಿರುದ್ಧ ರಾಜ್ಯಪಾಲರಿಗೆ ಪತ್ರ ಬರೆದು ಸತೀಶ ಜಾರಕಿಹೊಳಿ ಹಸ್ತಕ್ಷೇಪದಿಂದ ನಮಗೆ ಆಡಳಿತ ಮಾಡಲು ಆಗುತ್ತಿಲ್ಲ. ಮಹಿಳೆಯಾದ ನನಗೆ ಇದರಿಂದ ಸಾಕಷ್ಟು ಕಿರುಕುಳ ಆಗುತ್ತೆ ಅನ್ನೋ ಮಾತನ್ನ ಪತ್ರದಲ್ಲಿ ಉಲ್ಲೇಖ ಮಾಡಿದ್ದರು. ಸತೀಶ್ ಜಾರಕಿಹೊಳಿ ಅವರು ನಿಮಗೆ ದೂರು ಕೊಟ್ರೆ ಅದನ್ನ ಹಿಡಿದಯಕೊಂಡು ಸೂಪರ್ ಸೀಡ್ ಮಾಡುವ ಹೆದರಿಕೆ ಹಾಕಿದ್ದು ಇದರಿಂದ ನಗರದ ಜನ ಹಾಗೂ ಪಾಲಿಕೆ ಸದಸ್ಯರು ಭಯದಲ್ಲಿದ್ದಾರೆ. ಹೀಗಾಗಿ ನಮಗೆ ನಿಮ್ಮ ಸಮಯ ನೀಡಿ ದಿನಾಂಕವನ್ನ ಕೊಡಿ ಎಂದು ಪತ್ರ ಬರೆದಿದ್ದಾರೆ. ಇದಕ್ಕೂ ಕೂಡ ಸತೀಶ್ ಕಿಡಿಕಾರಿದ್ದು ಯಾರು ಬೇಕಾದ್ರೂ ಪತ್ರ ಬರೆಯಬಹುದು ಅದಕ್ಕೆನೂ ಅಭ್ಯಂತರ ಇಲ್ಲ ಎಂದು ತಿರುಗೇಟು ನೀಡಿದ್ದಾರೆ.

ಇದನ್ನೂ ಓದಿ: ವಿದೇಶ ಪ್ರವಾಸಕ್ಕೆ ಹೋಗುವ ಚಿಂತನೆ ಇದೆ: ಮತ್ತೆ ಕುತೂಹಲ ಸೃಷ್ಟಿಸಿದ ಸಚಿವ ಸತೀಶ್ ಜಾರಕಿಹೊಳಿ ಹೇಳಿಕೆ

ಒಟ್ಟಿನಲ್ಲಿ ಶಾಸಕ ಅಭಯ್ ಪಾಟೀಲ್ ಮತ್ತು ಸಚಿವ ಸತೀಶ ಜಾರಕಿಹೊಳಿ ಮಧ್ಯೆ ಫೈಟ್ ಜೋರಾಗಿ ನಡೆದಿದೆ. ಈ ಎಲ್ಲ ಬೆಳವಣಿಗೆ ನಡುವೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಸೈಲೆಂಟ್ ಆಗಿದ್ದಾರೆ. ಸದ್ಯ ಪಾಲಿಕೆ ವಿಚಾರವಾಗಿ ಹತ್ತಿಕೊಂಡಿರುವ ರಾಜಕೀಯ ಬೇಗುದಿ ಎಲ್ಲಿಗೆ ಹೋಗಿ ತಲುಪುತ್ತೆ ಕಾದು ನೋಡಬೇಕು. ಇತ್ತ ಪಾಲಿಕೆ ಸದಸ್ಯರಿಗೆ ಒಂದು ಕಡೆ ಆಪರೇಷನ್ ಭೀತಿ ಮತ್ತು ಅಧಿಕಾರ ಕಳೆದುಕೊಳ್ಳುವ ಭೀತಿ ಶುರುವಾಗಿದ್ದು ಯಾವಾಗ ಇಂದು ಅಂತ್ಯವಾಗುತ್ತೆ ಅನ್ನೋ ಆತಂಕದಲ್ಲಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ