ಬೆಂಗಳೂರು/ತುಮಕೂರು: ಇತರೆ ಪಕ್ಷಗಳಲ್ಲಿರುವ ನಾಯಕರನ್ನು ಕಾಂಗ್ರೆಸ್ ಪಕ್ಷಕ್ಕೆ ಸೇರಿಸಿಕೊಳ್ಳುವ ಮತ್ತು ಘರ್ವಾಪ್ಸಿ ಕುರಿತಾದ ಆಪರೇಷನ್ ಹಸ್ತ (Operation Hastha) ತುಮಕೂರು ಜಿಲ್ಲೆಯಿಂದಲೂ ಶುರುವಾಯ್ತಾ ಎಂಬ ಪ್ರಶ್ನೆ ಎದ್ದಿದೆ. ಇದಕ್ಕೆ ಪುಷ್ಠಿ ನೀಡುವ ನಿಟ್ಟಿನಲ್ಲಿ ತುಮಕೂರು ಜಿಲ್ಲೆಯ ಬಿಜೆಪಿ ಶಾಸಕರು ತಂಡೋಪಾದಿಯಲ್ಲಿ ಡಿಕೆ ಬ್ರದರ್ಸ್ ಅವರನ್ನು ಭೇಟಿಯಾಗಿದ್ದಾರೆ.
ತುಮಕೂರು ಗ್ರಾಮಾಂತರ ಬಿಜೆಪಿ ಶಾಸಕ ಸುರೇಶ್ ಗೌಡ ಅವರು (Tumkur BJP MLA) ಸಂಸದ ಡಿಕೆ ಸುರೇಶ್ (DK Suresh) ಭೇಟಿಯಾಗಿದ್ದಾರೆ. ಜೊತೆಗೆ ಜೆಡಿಎಸ್‌ನ ಹಾಲಿ- ಮಾಜಿ ಶಾಸಕರಿಬ್ಬರನ್ನೂ ಕಾಂಗ್ರೆಸ್ ಕಡೆ ಸೆಳೆಯುವ ಪ್ರಯತ್ನ ನಡೆದಿದೆ. ತುಮಕೂರು ಜೆಡಿಎಸ್ ಮಾಜಿ/ ಹಾಲಿ ಶಾಸಕರ ಜೊತೆಗೂ ಭಾರೀ ಚರ್ಚೆ ನಡೆದಿದೆ. ಬಿಜೆಪಿಯ ತುಮಕೂರು ಗ್ರಾಮೀಣ ಶಾಸಕ ಸುರೇಶ್ ಗೌಡ ಸಂಸದ ಡಿಕೆ ಸುರೇಶ್ ಜೊತೆಗೆ ಸುದೀರ್ಘ ಚರ್ಚೆ ನಡೆಸಿದ್ದಾರೆ.
ಇದನ್ನೂ ಓದಿ: ತುಮಕೂರು: ಎಂಪಿ ರೇಣುಕಾಚಾರ್ಯ ಕಾಂಗ್ರೆಸ್ ಸೇರ್ಪಡೆ; ಡಿಕೆ ಶಿವಕುಮಾರ್ ಹೇಳಿದ್ದಿಷ್ಟು
ಎರಡು ದಿನಗಳ ಹಿಂದೆ ತಡರಾತ್ರಿ ತನಕ ಸಂಸದ ಡಿಕೆ ಸುರೇಶ್ ನಿವಾಸದಲ್ಲಿದ್ದ ಸುರೇಶ್ ಗೌಡ ಚರ್ಚೆ ನಡೆಸಿದ್ದಾರೆ. ಸಂಸದ ಡಿಕೆ ಸುರೇಶ್ ನಿವಾಸದಲ್ಲಿ ನಡೆದ ಈ ಮಾತುಕತೆ ಆಪರೇಷನ್ ಹಸ್ತದ ಪ್ರಮುಖ ಭಾಗ ಎನ್ನಲಾಗುತ್ತಿದೆ. ಪ್ರಭಾವಿ ಬಿಜೆಪಿ ನಾಯಕರೊಬ್ಬರನ್ನು ಕರೆತಂದು ತುಮಕೂರು ಲೋಕಸಭೆ ಟಿಕೆಟ್ ನೀಡಲಾಗುತ್ತದೆ ಎಂಬ ಚರ್ಚೆ ಕೂಡ ಈಗ ಜೋರಾಗಿ ಕೇಳುತ್ತಿದೆ.
ತುಮಕೂರು ಜಿಲ್ಲಾ ಸುದ್ದಿಗಳನ್ನು ಫದಲು ಇಲ್ಲಿ ಕ್ಲಿಕ್ ಮಾಡಿ
Published On - 11:32 am, Mon, 28 August 23