ಸಿಡಿ ಷಡ್ಯಂತ್ರದ ‘ಮಹಾನಾಯಕ’ ಡಿ.ಕೆ.ಶಿವಕುಮಾರ್ ಎಂಬ ಅನುಮಾನದಲ್ಲಿ ಬಿಜೆಪಿ
ಈ ಫೋಟೋ ಸತ್ಯಾಸತ್ಯತೆಯ ಬಗ್ಗೆ ಟಿವಿ9 ಕನ್ನಡ ಡಿಜಿಟಲ್ಗೆ ಯಾವುದೇ ಮಾಹಿತಿ ಲಭಿಸಿಲ್ಲವಾದರೂ, ಬಿಜೆಪಿ ಪಕ್ಷ ತನ್ನ ಅಧಿಕೃತ ಟ್ವಿಟರ್ ಖಾತೆಯಲ್ಲಿ ಇದನ್ನು ಹಂಚಿಕೊಂಡಿರುವ ಕಾರಣ ತನಿಖೆ ಹೊಸ ಆಯಾಮ ಪಡೆಯುವ ಸಾಧ್ಯತೆ ಇದೆ.
ಬೆಂಗಳೂರು: ರಮೇಶ್ ಜಾರಕಿಹೊಳಿ ಅಶ್ಲೀಲ ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಡಿಯ ಹಿಂದಿರುವ ‘ಮಹಾನಾಯಕ’ ಯಾರು ಎಂಬ ವಿಚಾರ ರಾಜ್ಯ ರಾಜಕಾರಣದಲ್ಲಿ ಬಹುದೊಡ್ಡ ಜಿದ್ದಾಜಿದ್ದಿಗೆ ಕಾರಣವಾಗಿದೆ. ಇದೇ ವಿಚಾರವಾಗಿ ಆಡಳಿತ ಪಕ್ಷ ಬಿಜೆಪಿ ಮತ್ತು ವಿಪಕ್ಷ ಕಾಂಗ್ರೆಸ್ ನಡುವೆ ಟ್ವಿಟರ್ ಸಮರ ಕೂಡ ಶುರುವಾಗಿದ್ದು, ಆರೋಪ ಪ್ರತ್ಯರೋಪಗಳ ಸುರಿಮಳೆ ಆಗುತ್ತಿದೆ. ಈ ನಡುವೆ ಇಂದು (ಮಾರ್ಚ್ 17) ಕರ್ನಾಟಕ ಬಿಜೆಪಿ ತನ್ನ ಅಧಿಕೃತ ಟ್ವಿಟರ್ ಹ್ಯಾಂಡಲ್ನಲ್ಲಿ ಫೋಟೋವೊಂದನ್ನು ಪ್ರಕಟಿಸಿದ್ದು ಸಂಚಲನಕ್ಕೆ ಕಾರಣವಾಗಿದೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹಾಗೂ ಸಿಡಿ ಪ್ರಕರಣದ ಮಾಸ್ಟರ್ ಮೈಂಡ್ ಎನ್ನಲಾದ ನರೇಶ್ ಇಬ್ಬರೂ ಜೊತೆಗೆ ನಿಂತಿರುವ ಫೋಟೋವನ್ನು ಬಿಜೆಪಿ ಟ್ವೀಟ್ ಮಾಡಿದೆ.
ಈ ಫೋಟೋ ಸತ್ಯಾಸತ್ಯತೆಯ ಬಗ್ಗೆ ಟಿವಿ9 ಕನ್ನಡ ಡಿಜಿಟಲ್ಗೆ ಯಾವುದೇ ಮಾಹಿತಿ ಲಭಿಸಿಲ್ಲವಾದರೂ, ಬಿಜೆಪಿ ಪಕ್ಷ ತನ್ನ ಅಧಿಕೃತ ಟ್ವಿಟರ್ ಖಾತೆಯಲ್ಲಿ ಇದನ್ನು ಹಂಚಿಕೊಂಡಿರುವ ಕಾರಣ ತನಿಖೆ ಹೊಸ ಆಯಾಮ ಪಡೆಯುವ ಸಾಧ್ಯತೆ ಇದೆ. ‘ಹೆಗಲು ಮುಟ್ಟಿ ನೋಡಿಕೊಂಡಿದ್ದಕ್ಕೂ ಈ ಚಿತ್ರಕ್ಕೂ ಸಂಬಂಧವಿರಬಹುದೇ? ಮಾಸ್ಟರ್ ಮೈಂಡ್ ಮತ್ತು ರಿಂಗ್ ಮಾಸ್ಟರ್ ಒಂದೇ ಫ್ರೇಮ್‌ನಲ್ಲಿ ಸಿಲುಕಿಕೊಂಡಿರುವುದಕ್ಕೂ, ನನ್ನನ್ನು ಸಿಲುಕಿಸುವ ಕುತಂತ್ರ ಎನ್ನುವ ಸ್ವ-ರಕ್ಷಣಾ ಆಟ ಆಡಿರುವುದಕ್ಕೂ ಸಂಬಂಧವಿರಬಹುದೇ? ಎನ್ನುವ ಬರಹದೊಂದಿಗೆ ಈ ಫೋಟೋವನ್ನು ಹಂಚಿಕೊಂಡಿರುವ ಬಿಜೆಪಿ, ಸಿಡಿ ಸುಳಿಯಲ್ಲಿ ಡಿ.ಕೆ.ಶಿವಕುಮಾರ್ ಅವರನ್ನು ಸಿಲುಕಿಸಲು ಈ ಮೂಲಕ ಪ್ರಯತ್ನಿಸಿದೆ.
ಹೆಗಲು ಮುಟ್ಟಿ ನೋಡಿಕೊಂಡಿದ್ದಕ್ಕೂ ಈ ಚಿತ್ರಕ್ಕೂ ಸಂಬಂಧವಿರಬಹುದೇ?
ʼಮಾಸ್ಟರ್ ಮೈಂಡ್ʼ ಮತ್ತು ʼರಿಂಗ್ ಮಾಸ್ಟರ್ʼ ಒಂದೇ ಫ್ರೇಮ್‌ನಲ್ಲಿ ಸಿಲುಕಿಕೊಂಡಿರುವುದಕ್ಕೂ ʼನನ್ನನ್ನು ಸಿಲುಕಿಸುವ ಕುತಂತ್ರʼ ಎನ್ನುವ ಸ್ವ-ರಕ್ಷಣಾ ಆಟ ಆಡಿರುವುದಕ್ಕೂ ಸಂಬಂಧವಿರಬಹುದೇ? pic.twitter.com/bzuIiya4Ww
— BJP Karnataka (@BJP4Karnataka) March 17, 2021
ಇದನ್ನೂ ಓದಿ: ಅಶ್ಲೀಲ ಸಿಡಿಯಲ್ಲಿ ಅವಾಚ್ಯ ಶಬ್ದಗಳ ಬಳಕೆ; ಕನ್ನಡಿಗರನ್ನು ನಿಂದಿಸಿದ್ದಕ್ಕಾಗಿ ರಮೇಶ್ ಜಾರಕಿಹೊಳಿ ವಿರುದ್ಧ ದೂರು ದಾಖಲು
ಟ್ವೀಟ್ ಮಾಡಿ.. ಸಿಡಿ ವಿಚಾರದಲ್ಲಿ ಮಹಾನಾಯಕಿಯನ್ನು ಎಳೆದು ತಂದ ಬಿಜೆಪಿ! ಯಾರದು?
Published On - 12:01 pm, Wed, 17 March 21