ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿಗೆ ಹೋಗಲು ಪರದಾಡುತ್ತಿರುವ ಬೀದರ್ ವಿದ್ಯಾರ್ಥಿಗಳು
ಪಾಲಿಟೆಕ್ನಿಕ್ ಕಾಲೇಜು ವಿದ್ಯಾರ್ಥಿಗಳ ಸಮಸ್ಯೆಗಳನ್ನು ಯಾರು ಕೇಳುತ್ತಿಲ್ಲ. ಕಾಲೇಜಿಗೆ ಹೋಗಲು ಉತ್ತಮ ರಸ್ತೆಯಿಲ್ಲದೇ ನೂರಾರು ವಿದ್ಯಾರ್ಥಿಗಳು ಪರದಾಡುತ್ತಿದ್ದಾರೆ. ಕಾಲೇಜ್ಗೆ ಹೋಗಲು ಔರಾದ್ ಪಟ್ಟಣದಿಂದ ಮೂರು ಕಿಲೋಮೀಟರ್ ಹೊರಗಡೆಯ ಗುಡ್ಡದಲ್ಲಿ ನಡೆದುಕೊಂಡು ಹೋಗಬೇಕು.

ಬೀದರ್: ಸರ್ಕಾರಿ ಕಾಲೇಜಿಗೆ ಬರುವುದು ಬಡವರ ಮಕ್ಕಳೆ ಜಾಸ್ತಿ. ಕಡಿಮೆ ಫೀಸ್ ಇರುವ ಕಾರಣ ಬಡ ವಿದ್ಯಾರ್ಥಿಗಳು ಆಯ್ಕೆ ಮಾಡಿಕೊಳ್ಳುವುದು ಸರ್ಕಾರಿ ಕಾಲೇಜುಗಳನ್ನ. ಆದರೆ ಜಿಲ್ಲೆಯಲ್ಲಿರುವ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಅಡ್ಮಿಷನ್ ಆದ ಮೇಲೆ ಹತ್ತಾರು ಸಮಸ್ಯೆಗಳು ಗೊತ್ತಾಗಿದೆ. ರಸ್ತೆ, ಕುಡಿಯುವ ನೀರು, ಹಾಸ್ಟೆಲ್ ವ್ಯವಸ್ಥೆಯಿಲ್ಲದೆ ವಿದ್ಯಾರ್ಥಿಗಳು ಹತ್ತಾರು ತೊಂದರೆಗಳನ್ನು ಅನುಭವಿಸುತ್ತಿದ್ದಾರೆ. ಕಾಲೇಜಿಗೆ ಹೋಗಲು ರಸ್ತೆ, ಮೂಲಭೂತ ಸೌಲಭ್ಯ ನೀಡಿ ಎಂದು ಪ್ರತಿಭಟನೆ, ಉಪವಾಸ ಸತ್ಯಾಗ್ರಹ, ಅಧಿಕಾರಿಗಳಿಗೆ ಮತ್ತು ರಾಜಕಾರಣಿಗಳಿಗೆ ಮನವಿ ಮಾಡಿಕೊಂಡರು ಯಾವುದೇ ಪ್ರಯೋಜನವಾಗದೇ ವಿದ್ಯಾರ್ಥಿಗಳು ಅಸಹಾಯಕರಾಗಿದ್ದಾರೆ.
ಪಾಲಿಟೆಕ್ನಿಕ್ ಕಾಲೇಜು ವಿದ್ಯಾರ್ಥಿಗಳ ಸಮಸ್ಯೆಗಳನ್ನು ಯಾರು ಕೇಳುತ್ತಿಲ್ಲ. ಕಾಲೇಜಿಗೆ ಹೋಗಲು ಉತ್ತಮ ರಸ್ತೆಯಿಲ್ಲದೇ ನೂರಾರು ವಿದ್ಯಾರ್ಥಿಗಳು ಪರದಾಡುತ್ತಿದ್ದಾರೆ. ಕಾಲೇಜ್ಗೆ ಹೋಗಲು ಔರಾದ್ ಪಟ್ಟಣದಿಂದ ಮೂರು ಕಿಲೋಮೀಟರ್ ಹೊರಗಡೆಯ ಗುಡ್ಡದಲ್ಲಿ ನಡೆದುಕೊಂಡು ಹೋಗಬೇಕು. ಇದನ್ನು ಬಿಟ್ಟು ಬೇರೆ ಮಾರ್ಗವೆ ಇಲ್ಲ. ಆಟೋಗಳು ಕೂಡಾ ಹೋಗದಂತಹ ಸ್ಥಳದಲ್ಲಿ ಪಾಲಿಟೆಕ್ನಿಕ್ ಕಾಲೇಜಿದ್ದು, ರಸ್ತೆ ಮಾಡುತ್ತೇವೆ ಎಂದು ಅಧಿಕಾರಿ ವರ್ಗ ಕಾಲ ಕಳೆಯುತ್ತಿದೆ ಹೊರತು ಯಾವುದೇ ತಲೆ ಕೆಡಿಸಿಕೊಂಡಿಲ್ಲ. ಜಿಲ್ಲೆಯ ಔರಾದ್ ತಾಲೂಕಿನ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜು ವಿದ್ಯಾರ್ಥಿಗಳು ಪ್ರತಿದಿನ ಕಾಲೇಜಿಗೆ ಹೋಗಬೇಕಾದರೆ ಹಲವು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಈ ಕಾಲೇಜಿನಲ್ಲಿ ಮ್ಯಾಕ್ಯಾನಿಕಲ್, ಕಂಪ್ಯೂಟರ್ ಇಂಜಿನಿಯರಿಂಗ್ ಸೇರಿದಂತೆ ಒಟ್ಟು 250 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಶಿಕ್ಷಣ ಕಲಿಯುತ್ತಿದ್ದಾರೆ. ಜೊತೆಗೆ ಈ ಕಾಲೇಜಿಗೆ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಮೀಣ ಭಾಗದ ವಿದ್ಯಾರ್ಥಿಗಳೇ ಬರುತ್ತಿದ್ದು, ಅವರೆಲ್ಲರೂ ಕಾಲೇಜಿನಲ್ಲಿ ಕುಡಿಯುವ ನೀರಿನ ವ್ಯವಸ್ಥೆ, ಹಾಸ್ಟೇಲ್ ವ್ಯವಸ್ಥೆ, ವಿದ್ಯುತ್ ವ್ಯವಸ್ಥೆಯಿಂದ ವಂಚಿತರಾಗಿದ್ದಾರೆ. ಶೌಚಾಲಯವಿದ್ದರು ನೀರಿನ ಸಮಸ್ಯೆ, ಜೊತೆಗೆ ಅಕ್ಕಪಕ್ಕದ ಸುಮಾರು ಎರಡು ಕಿಲೋಮೀಟರ್ ಅಂತರದಲ್ಲಿ ಯಾವುದೇ ರೀತಿಯ ಅಂಗಡಿಗಳಿಲ್ಲದಿದ್ದರಿಂದ ಊಟಕ್ಕೆ ಪರದಾಡುವಂತಹ ಪರಿಸ್ಥಿತಿ ಇಲ್ಲಿನ ವಿದ್ಯಾರ್ಥಿಗಳಿಗಿದೆ.

ಔರಾದ್ ಪಟ್ಟಣದಿಂದ ಮೂರು ಕಿಲೋಮೀಟರ್ ಹೊರಗಡೆಯ ಗುಡ್ಡದಲ್ಲಿ ನಡೆದುಕೊಂಡು ಹೋಗುತ್ತಿರುವ ವಿದ್ಯಾರ್ಥಿಗಳು

ಮ್ಯಾಕ್ಯಾನಿಕಲ್, ಕಂಪ್ಯೂಟರ್ ಇಂಜಿನಿಯರಿಂಗ್ ಸೇರಿದಂತೆ ಒಟ್ಟು 250 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಶಿಕ್ಷಣ ಕಲಿಯುತ್ತಿದ್ದಾರೆ
ನಿರ್ಜನ ಪ್ರದೇಶದಲ್ಲಿರುವ ಕಾಲೇಜು ಔರಾದ್ ಪಟ್ಟಣದಿಂದ ಸುಮಾರು 4 ಕಿಲೋಮೀಟರ್ ಅಂತರದ ಒಂದು ನಿರ್ಜನ ಪ್ರದೇಶದಲ್ಲಿ ಈ ಕಾಲೇಜನ್ನು ಕಟ್ಟಲಾಗಿದೆ. ಆದರೆ ಇಲ್ಲಿಗೆ ಹೋಗಲು ಯಾವುದೇ ರಸ್ತೆಯಿಲ್ಲ. ಹೀಗಾಗಿ ಇಲ್ಲಿಗೆ ಯಾವುದೇ ಬಸ್ ಕೂಡಾ ಬರುತ್ತಿಲ್ಲ. ಓಡಾಡಲು ಯಾವುದೇ ವ್ಯವಸ್ಥೆಯಿಲ್ಲದ ಕಾರಣ ವಿದ್ಯಾರ್ಥಿಗಳು ನಡೆದುಕೊಂಡೆ ಕಾಲೇಜಿಗೆ ಹೋಗವಂತಹ ಸ್ಥಿತಿ ಇಲ್ಲಿ ನಿರ್ಮಾಣವಾಗಿದೆ.
ಕಾಲೇಜಿಗೆ ಕೆಲವು ವಿದ್ಯಾರ್ಥಿಗಳು ಅದೇ ದುರ್ಗಮ ರಸ್ತೆಯಲ್ಲಿ ಬೈಕ್ಗಳನ್ನ ತೆಗೆದುಕೊಂಡು ಬರುತ್ತಾರೆ. ಶೇಕಡಾ 90 ರಷ್ಟು ವಿದ್ಯಾರ್ಥಿಗಳು ನಡೆದುಕೊಂಡು ಹೋಗಿ ಶಿಕ್ಷಣ ಕಲಿಯಬೇಕಾದ ಸ್ಥಿತಿ ಇದೆ. ಇನ್ನೂ ವಿದ್ಯಾರ್ಥಿನಿಯರಿಗೆ ನಡೆದುಕೊಂಡು ಬಂದು ಶಿಕ್ಷಣ ಕಲಿಯುವುದು ಇಲ್ಲಿ ತುಂಬಾ ಕಷ್ಟದ ಕೆಲಸ. ಈ ಕಾಲೇಜಿಗೆ ಹೊಸ ಕಟ್ಟಡವನ್ನ ಕಟ್ಟಲಾಗಿದೆ. ಆದರೆ ಇನ್ನೂ ಕಾಮಗಾರಿ ನಡೆಯುತ್ತಲೇ ಇದೆ. ಪೂರ್ಣಪ್ರಮಾಣದ ಕೆಲಸ ಇನ್ನೂ ಮುಗಿದಿಲ್ಲ. ಹೀಗಾಗಿ ಲೈಬ್ರರಿ ಇಲ್ಲ, ಕ್ಲಾಸ ರೂಂಗಳ ಕೊರತೆ, ಇನ್ನಿತರ ಯಾವುದೇ ಮೂಲ ಸೌಕರ್ಯಗಳಿಲ್ಲ. ಗ್ರಂಥಾಲಯ, ಪ್ರಯೋಗಾಲಯ, ಆಟದ ಮೈದಾನ ಸೇರಿದಂತೆ ಹತ್ತಾರು ಸಮಸ್ಯೆಗಳನ್ನು ಈ ಕಾಲೇಜಿನ ವಿದ್ಯಾರ್ಥಿಗಳು ಎದುರಿಸುತಿದ್ದಾರೆ.

ಒಡೆದು ಹೋಗಿರುವ ಕಿಟಕಿ ಗ್ಲಾಸ್ಗಳು

ಓಡಾಡಲು ಸೂಕ್ತವಾದ ರಸ್ತೆಯಿಲ್ಲ
ವಿದ್ಯಾರ್ಥಿಗಳ ಬಳಕೆಗೆ ಬಾರದೆ ಹಾಳಾದ ಹಾಸ್ಟೆಲ್ ಇಲ್ಲಿ ಕಲಿಯುವ ವಿದ್ಯಾರ್ಥಿಗಳಿಗಾಗಿಯೇ ಹಾಸ್ಟೆಲ್ ಕಟ್ಟಿಸಲಾಗಿದೆ. ಆದರೆ ಅದು ವಿದ್ಯಾರ್ಥಿಗಳ ಬಳಕೆಗೆ ಬಾರದೆ ಹಾಳಾಗಿದೆ. ಹೀಗಾಗಿ ವಿದ್ಯಾರ್ಥಿಗಳು ಬೇರೆ ಬೇರೆ ಹಾಸ್ಟೆಲ್ಗಳಲ್ಲಿ ಉಳಿದುಕೊಂಡಿದ್ದಾರೆ. ಶಿಕ್ಷಣ ಕಲಿತು ಏನಾದರು ಸಾಧನೆ ಮಾಡಬೇಕೆಂದು ಕಾಲೇಜಿಗೆ ಬರುವ ಗ್ರಾಮಾಂತರ ಪ್ರದೇಶದ ವಿದ್ಯಾರ್ಥಿಗಳಿಗೆ ಇಲ್ಲಿನ ಸಮಸ್ಯೆ ಅವರ ಶಿಕ್ಷಣದ ಮೇಲೆ ಭಾರೀ ಹೊಡೆತ ಬೀಳುತ್ತಿದೆ.
ಇದನ್ನೂ ಒದಿ
ಬನಾರಸ್ ಹಿಂದೂ ವಿಶ್ವವಿದ್ಯಾಲಯಕ್ಕೆ ನೀತಾ ಅಂಬಾನಿ ಸಂದರ್ಶಕ ಉಪನ್ಯಾಸಕಿ; ವಿದ್ಯಾರ್ಥಿಗಳಿಂದ ಪ್ರತಿಭಟನೆ