ಬೆಂಗಳೂರು, ಡಿಸೆಂಬರ್ 26: ಮಾಜಿ ಸಚಿವ ಬಿಸಿ ಪಾಟೀಲ್ (BC Patil) ಕಾಂಗ್ರೆಸ್ ನಾಯಕ ಬಿ.ಕೆ.ಹರಿಪ್ರಸಾದ್ (BK Hariprasad) ಮತ್ತು ವಿಜಯಪುರ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ (Basangouda Patil Yatnal) ವಿರುದ್ಧ ವಾಗ್ದಾಳಿ ಮಾಡಿದ್ದಾರೆ. “ವಿಕೃತ ಮನಸು ಹೊಂದಿರುವ ಬಿ.ಕೆ.ಹರಿಪ್ರಸಾದ್ ಮತ್ತು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಇಬ್ಬರೂ ಸೇರಿ ಒಂದು ಪಕ್ಷ ಆರಂಭಿಸುವುದು ಒಳ್ಳೆಯದು ಅಂತ ನನ್ನ ಭಾವನೆ” ಎಂದು ಬಿ.ಸಿ.ಪಾಟೀಲ್ ಟ್ವೀಟ್ ಮಾಡಿದ್ದಾರೆ.
‘”ಬಸನಗೌಡ ಪಾಟೀಲ್ ಯತ್ನಾಳ್ ಅವರೇ, ನಾನು ಬಸವನಗೌಡ ಪಾಟೀಲ್ ಅಂದರೆ ಬಿಸಿ ಪಾಟೀಲ್. ಏನು ಪಾಟೀಲ್ ಅವರೇ, ನೀವು ಈ ರೀತಿ ಹೇಳಿಕೆ ಕೊಡುವುದು ಸರಿನಾ ನೀವು ಈ ರೀತಿ ಹೇಳಿಕೆ ಕೊಡುವುದು ನೋಡಿದರೆ ನೀವು ಬಿಜೆಪಿ ಪರವಾಗಿರುವಿರೋ ಅಥವಾ ಕಾಂಗ್ರೆಸ್ ಪರವಾಗಿರುವಿರೋ ಎನ್ನುವುದು ಅನುಮಾನ. ವಿಷಯ ತಿಳಿದುಕೊಂಡು ಮಾತಾಡುವುದು ಬಹಳ ಒಳ್ಳೆಯದು” ಎಂದಿದ್ದಾರೆ.
ಸನ್ಮಾನ್ಯ ಸಕ್ಕರೆ ಹಾಗೂ ಹಾವೇರಿ ಜಿಲ್ಲೆಯ ಉಸ್ತುವಾರಿ ಸಚಿವರಾದಂತ ಶಿವಾನಂದ್ ಪಾಟೀಲ್ ಅವರೇ ರೈತರಿಗೆ ನೀವು ಒಂದು ಹೆಕ್ಟರಿಗೆ ಭಿಕ್ಷೆ ಕೊಡ್ತಾ ಇದ್ದೀರಿ ನಿಮ್ಮ ಭಿಕ್ಷೆಯಾಗಿ ರೈತರು ಇವತ್ತು ಆತ್ಮಹತ್ಯೆಯನ್ನು ಎಂಥ ಮೂರ್ಖತನ
— B C Patil (@bcpatilkourava) December 25, 2023
ಇದನ್ನೂ ಓದಿ: ಬಿಎಸ್ ಯಡಿಯೂರಪ್ಪ ಶಕುನಿ ಇದ್ದ ಹಾಗೆ: ಬಸನಗೌಡ ಪಾಟೀಲ್ ಯತ್ನಾಳ್
ಕಾಂಗ್ರೆಸ್ ಸರ್ಕಾರದಲ್ಲಿ ಸಚಿವ ಸ್ಥಾನ ನೀಡದಿದ್ದಕ್ಕೆ ಅಸಮಾಧಾನಗೊಂಡಿರುವ ಹಿರಿಯ ನಾಯಕ ಬಿಕೆ ಹರಿಪ್ರಸಾದ್ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಆಗಾಗ ಬಹಿರಂಗವಾಗಿ ವಾಗ್ದಾಳಿ ನಡೆಸುತ್ತಾ ಬಂದಿದ್ದಾರೆ. ಇತ್ತ ಬಿಜೆಪಿಯಲ್ಲಿ ರಾಜ್ಯಾಧ್ಯಕ್ಷ ಅಥವಾ ವಿಪಕ್ಷ ನಾಯಕನ ಸ್ಥಾನ ದೂರೆಯದೆ ಕಂಗಲಾಗಿರುವ ಹಿರಿಯ ನಾಯಕ ಬಸನಗೌಡ ಪಾಟೀಲ್ ಯತ್ನಾಳ್ ಕೂಡಾ ಬಿವೈ ವಿಜಯೇಂದ್ರ ಹಾಗೂ ಆರ್ ಅಶೋಕ್ ವಿರುದ್ಧ ಹೇಳಿಕೆ ನೀಡುತ್ತಾ ಪಕ್ಷವನ್ನು ಮುಜುಗರಕ್ಕೆ ಸಿಲುಕಿಸುವ ಪ್ರಯತ್ನವನ್ನು ನಿರಂತರವಾಗಿ ಮಾಡುತ್ತಾ ಬಂದಿದ್ದಾರೆ.
ಈ ಹಿನ್ನೆಲೆಯಲ್ಲಿ ಮಾಜಿ ಸಚಿವ ಬಿಸಿ ಪಾಟೀಲ್ ಸಾಮಾಜಿಕ ಜಾಲತಾಣ ಎಕ್ಸ್ (ಟ್ವಿಟರ್) ನಲ್ಲಿ ಬಿಕೆ ಹರಿಪ್ರಸಾದ ಮತ್ತು ಬಸನಗೌಡ ಪಾಟೀಲ್ ಯತ್ನಾಳ್ ಅವರ ಕಾಲು ಎಳೆದಿದ್ದಾರೆ.
ಇದಕ್ಕೆ ಟ್ವೀಟ್ ಮೂಲಕವೇ ಬಸನಗೌಡ ಪಾಟೀಲ್ ಯತ್ನಾಳ ತೀಕ್ಷ್ಣವಾಗಿ ಪ್ರತಿಕ್ರಿಯೆ ನೀಡಿದ್ದಾರೆ. “ತಮ್ಮ ಸ್ವಂತ ಕ್ಷೇತ್ರದ ಬಗ್ಗೆ ಯೋಚನೆ ಮಾಡಿ, ಪಕ್ಷದ ಬಗ್ಗೆ ಆಮೇಲೆ ಯೋಚಿಸಬಹುದು.” ಎಂದು ಬಸನಗೌಡ ಪಾಟೀಲ್ ಯತ್ನಾಳ್ ತಿರುಗೇಟು ನೀಡಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ