ಯಡಿಯೂರಪ್ಪ ಸಿಎಂ ಆಗಿದ್ದಾಗ ವಿಜಯೇಂದ್ರ ಏನು ಮಾಡಿದ್ದಾರೆ ಎಂಬುದು ಜಗತ್ತಿಗೇ ಗೊತ್ತಿದೆ: ಬಿಕೆ ಹರಿಪ್ರಸಾದ್

| Updated By: Rakesh Nayak Manchi

Updated on: Oct 16, 2023 | 7:09 PM

ಕಾಂಗ್ರೆಸ್​ ವಿರುದ್ಧ ಬಿಜೆಪಿ ಶಾಸಕ ಬಿವೈ ವಿಜಯೇಂದ್ರ ಅವರು ಮಾಡಿದ ಭ್ರಷ್ಟಾಚಾರದ ಆರೋಪಕ್ಕೆ ತಿರುಗೇಟು ನೀಡಿದ ಎಂಎಲ್​ಸಿ ಬಿಕೆ ಹರಿಪ್ರಸಾದ್, ಯಡಿಯೂರಪ್ಪ ಸಿಎಂ ಆಗಿದ್ದಾಗ ವಿಜಯೇಂದ್ರ ಏನು ಮಾಡಿದ್ದಾರೆ ಎಂಬುದು ಜಗತ್ತಿಗೇ ಗೊತ್ತಿದೆ ಎಂದರು. ಅಲ್ಲದೆ, ಐಟಿ ದಾಳಿ ಚುನಾವಣೆ ಗಿಮಿಕ್ ಎಂದ ಅವರು, ಜಾತಿ ಜನಗಣತಿ ವರದಿ ಬಿಡುಗಡೆಗೆ ಒತ್ತಾಯಿಸಿದರು.

ಯಡಿಯೂರಪ್ಪ ಸಿಎಂ ಆಗಿದ್ದಾಗ ವಿಜಯೇಂದ್ರ ಏನು ಮಾಡಿದ್ದಾರೆ ಎಂಬುದು ಜಗತ್ತಿಗೇ ಗೊತ್ತಿದೆ: ಬಿಕೆ ಹರಿಪ್ರಸಾದ್
ಬಿಕೆ ಹರಿಪ್ರಸಾದ್, ಬಿವೈ ವಿಜಯೇಂದ್ರ
Follow us on

ಬೆಂಗಳೂರು, ಅ.16: ಕಾಂಗ್ರೆಸ್​ ವಿರುದ್ಧ ಬಿಜೆಪಿ ಶಾಸಕ ಬಿವೈ ವಿಜಯೇಂದ್ರ (BY Vijayendra) ಅವರು ಮಾಡಿದ ಭ್ರಷ್ಟಾಚಾರದ ಆರೋಪಕ್ಕೆ ತಿರುಗೇಟು ನೀಡಿದ ಎಂಎಲ್​ಸಿ ಬಿಕೆ ಹರಿಪ್ರಸಾದ್ (BK Hariprasad), ಯಡಿಯೂರಪ್ಪ (BS Yediyurappa) ಸಿಎಂ ಆಗಿದ್ದಾಗ ವಿಜಯೇಂದ್ರ ಏನು ಮಾಡಿದ್ದಾರೆ ಎಂಬುದು ಜಗತ್ತಿಗೇ ಗೊತ್ತಿದೆ ಎಂದರು. ಅಲ್ಲದೆ, ಐಟಿ ದಾಳಿ ಚುನಾವಣೆ ಗಿಮಿಕ್ ಎಂದ ಅವರು, ಜಾತಿ ಜನಗಣತಿ ವರದಿ ಬಿಡುಗಡೆಗೆ ಒತ್ತಾಯಿಸಿದರು.

ಬೆಂಗಳೂರಿನಲ್ಲಿ ಮಾತನಾಡಿದ ಅವರು, ಭ್ರಷ್ಟಾಚಾರ ಬಗ್ಗೆ ಮಾತನಾಡಲು ವಿಜಯೇಂದ್ರಗೆ ನೈತಿಕತೆ ಇದೆಯಾ? ಯಡಿಯೂರಪ್ಪ ಸಿಎಂ ಆಗಿದ್ದಾಗ ವಿಜಯೇಂದ್ರ ಏನು ಮಾಡಿದ್ದಾರೆ ಎಂಬುದು ಜಗತ್ತಿಗೇ ಗೊತ್ತಿದೆ. ಅಷ್ಟಕ್ಕೂ ಯಡಿಯೂರಪ್ಪರನ್ನ ಯಾವ ಆಧಾರದ ಮೇಲೆ ಸಿಎಂ ಸ್ಥಾನದಿಂದ ತೆಗೆದರು? ಈ ಬಗ್ಗೆ ಇದೂವರೆಗೂ ಯಾರೂ ಹೇಳಿಲ್ಲ. ಭ್ರಷ್ಟಾಚಾರದ ಬಗ್ಗೆ ಮಾತನ್ನಾಡಲು ನೈತಿಕತೆಯನ್ನ ಕಳೆದುಕೊಂಡಿದ್ದಾರೆ ಎಂದರು.

ಜಾತಿ ಗಣತಿ ಸಮೀಕ್ಷಾ ವರದಿ ಬಹಿರಂಗಕ್ಕೆ ಒತ್ತಾಯ

ಜಾತಿ ಗಣತಿ ಸಮೀಕ್ಷಾ ವರದಿ ಬಹಿರಂಗಕ್ಕೆ ಒತ್ತಾಯಿಸಿದ ಹರಿಪ್ರಸಾದ್, ಇಂದು ಆಯೋಗದ ಅಧ್ಯಕ್ಷ ಜಯಪ್ರಕಾಶ್ ಹೆಗ್ಡೆ ಭೇಟಿ ಮಾಡಿದ್ದೇನೆ. ತೀರಾ ಹಿಂದುಳಿದ ಜಾತಿಗಳಿಗೆ ಮೀಸಲಾತಿ ಕಲ್ಪಿಸಲು ಈ ವರದಿ ಸಹಕಾರಿಯಾಗಲಿದೆ. ಹಾಗಾಗಿ ತಡಮಾಡದೆ ಸರ್ಕಾರಕ್ಕೆ ವರದಿ ಸಲ್ಲಿಸುವಂತೆ ಒತ್ತಾಯಿಸಿದ್ದೇನೆ ಎಂದರು.

ಇದನ್ನೂ ಓದಿ: ಐಟಿ ದಾಳಿ ವೇಳೆ ‌ಸಿಕ್ಕಿರುವ ಹಣ SST ಟ್ಯಾಕ್ಸ್​​ಗೆ ಸೇರಿದ್ದು; ಪರೋಕ್ಷವಾಗಿ ಡಿಕೆ ಬ್ರದರ್ಸ್​ ಮೇಲೆ ಕುಮಾರಸ್ವಾಮಿ ಆರೋಪ

ದೇಶದಲ್ಲೇ ಮೊದಲ ಬಾರಿಗೆ ಕರ್ನಾಟಕದಲ್ಲಿ ಜಾತಿಗಣತಿ ಸಮೀಕ್ಷೆ ನಡೆಸಲಾಗಿದೆ. ಜನರ ಹಣವನ್ನೇ ಸಮೀಕ್ಷಾ ವರದಿಗೆ ಬಳಸಿಕೊಳ್ಳಲಾಗಿದೆ. ಮೊದಲೇ ಸರ್ಕಾರ ಅಂಗೀಕರಿಸಿದ್ದರೆ ದೇಶದಲ್ಲೇ ಜಾತಿಗಣತಿ ಅಂಗೀಕರಿಸಿದ ಮೊದಲ ರಾಜ್ಯ ಕರ್ನಾಟಕ ಎಂಬುದಾಗುತ್ತಿತ್ತು. ಈಗಲೂ ತಡಮಾಡದೆ ಜಾತಿಗಣತಿ ಸಮೀಕ್ಷಾ ವರದಿ ಅಂಗೀಕರಿಸಬೇಕು ಎಂದು ಒತ್ತಾಯಿಸಿದರು.

ಐಟಿ ದಾಳಿ ಚುನಾವಣಾ ಗಿಮಿಗ್ ಎಂದ ಬಿಕೆ ಹರಿಪ್ರಸಾದ್

ಐಟಿ ದಾಳಿ ವೇಳೆ ಪತ್ತೆಯಾದ ಹಣ ಕಾಂಗ್ರೆಸ್​ನದ್ದು ಎಂಬ ಬಿಜೆಪಿ ಆರೋಪಕ್ಕೆ ತಿರುಗೇಟು ನೀಡಿದ ಹರಿಪ್ರಸಾದ್, ಕೇಂದ್ರದವರು ಚುನಾವಣೆಗಾಗಿ ಹೀಗೆಲ್ಲಾ ಮಾಡುತ್ತಿದ್ದಾರೆ. ಪತ್ತೆಯಾಗಿರುವ ಹಣ ಯಾರದ್ದು ಎಂಬುದರ ಕುರಿತು ತನಿಖೆಯಾಗಲಿ. ಆಮೇಲೆ ಯಾರು ಹಾಲಲ್ಲಿದ್ದಾರೆ, ನೀರಲ್ಲಿದ್ದಾರೆ ಎಂಬುದು ಗೊತ್ತಾಗುತ್ತದೆ. ಕಾಂಗ್ರೆಸ್ ಕೇವಲ ಕರ್ನಾಟಕ ರಾಜ್ಯದಲ್ಲಿ ಮಾತ್ರ ಅಧಿಕಾರದಲ್ಲಿ ಇಲ್ಲ. ಬೇರೆ ರಾಜ್ಯಗಳಲ್ಲೂ ಕಾಂಗ್ರೆಸ್​ ಅಧಿಕಾರದಲ್ಲಿ ಇದೆ. ಬಿಜೆಪಿಯವರು ಉದ್ದೇಶಪೂರ್ವಕವಾಗಿ ಆರೋಪ ಮಾಡುತ್ತಿದ್ದಾರೆ ಎಂದರು.

ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ