ಬಿಎನ್​ ಚಂದ್ರಪ್ಪಗೆ ಮಹತ್ವದ ಹುದ್ದೆ, ದಲಿತ ಎಡಗೈ ಸಮುದಾಯದ ಬೇಡಿಕೆ ಈಡೇರಿಸಿದ ಕಾಂಗ್ರೆಸ್ ಹೈಕಮಾಂಡ್

ಕರ್ನಾಟಕ ವಿಧಾನಸಭೆ ಚನಾವಣೆ ಹೊಸ್ತಿಲಲ್ಲೇ ಮಾಜಿ ಸಂಸದ ಬಿಎನ್​ ಚಂದ್ರಪ್ಪ ಅವರಿಗೆ ಕಾಂಗ್ರೆಸ್​ ಹೈಕಮಾಂಡ್ ಮಹತ್ವದ ಹುದ್ದೆ ನೀಡಿದೆ.

ಬಿಎನ್​ ಚಂದ್ರಪ್ಪಗೆ ಮಹತ್ವದ ಹುದ್ದೆ,  ದಲಿತ ಎಡಗೈ ಸಮುದಾಯದ ಬೇಡಿಕೆ ಈಡೇರಿಸಿದ ಕಾಂಗ್ರೆಸ್ ಹೈಕಮಾಂಡ್
ಬಿಎನ್​ ಚಂದ್ರಪ್ಪ

Updated on: Apr 09, 2023 | 10:31 AM

ಬೆಂಗಳೂರು: ಮಾಜಿ ಸಂಸದ ಬಿಎನ್​​ ಚಂದ್ರಪ್ಪ(BN Chandrappa) ಅವರನ್ನು ಕೆಪಿಸಿಸಿ ಕಾರ್ಯಾಧ್ಯಕ್ಷರನ್ನಾಗಿ(KPCC Working President) ನೇಮಕ ಮಾಡಿ ಎಐಸಿಸಿ ಆದೇಶ ಹೊರಡಿಸಿದೆ. ಆರ್​. ಧ್ರುವನಾರಯಣ್ ನಿಧನದಿಂದ ತೆರವಾಗಿದ್ದ ಕೆಪಿಸಿಸಿ ಕಾರ್ಯಾಧ್ಯಕ್ಷ ಸ್ಥಾನಕ್ಕೆ ಬಿಎನ್ ಚಂದ್ರಪ್ಪ ಅವರನ್ನು ನೇಮಕ ಮಾಡಿ ತಕ್ಷಣವೇ ಜಾರಿಗೆ ಬರುವಂತೆ ಎಐಸಿಸಿ ಕಾರ್ಯದರ್ಶಿ ಕೆಸಿ ವೇಣುಗೋಪಾಲ್ ಇಂದು(ಏಪ್ರಿಲ್ -09) ಆದೇಶ ಹೊರಡಿಸಿದ್ದಾರೆ. ಈ ಮೂಲಕ ಹೈಕಮಾಂಡ್ ದಲಿತ ಎಡಗೈ ಸಮುದಾಯದ ನಾಯಕರ ಬೇಡಿಕೆ ಈಡೇರಿಸಿದೆ. ಅಲ್ಲದೇ ಚುನಾವಣಾ ಸಂದರ್ಭದಲ್ಲಿ ದಲಿತ ಎಡಗೈ ಸಮುದಾಯದ ಮತಗಳ ಬುಟ್ಟಿಗೆ ಕೈ ಹಾಕಿದೆ.


1991 ರಿಂದ ಚಿಕ್ಕಮಗಳೂರು ಜಿಲ್ಲಾ ಪರಿಷತ್ ಸದಸ್ಯರಾಗುವ ಮೂಲಕ ಚಂದ್ರಪ್ಪ ಅವರು ತಮ್ಮ ರಾಜಕೀಯ ಜೀವನ ಆರಂಭಿಸಿದ್ದು, 2014ರ ಲೋಕಸಭಾ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದರು. ಆದರೆ, 2019ರಲ್ಲಿ ನಡೆದಿದ್ದ ಲೋಕಸಭಾ ಚುನಾವಣೆಯಲ್ಲಿ ಸೋಲು ಕಂಡಿದ್ದರು.

Published On - 10:17 am, Sun, 9 April 23