ಬಿವೈ ವಿಜಯೇಂದ್ರ ತಾತ್ಕಾಲಿಕ ಅಧ್ಯಕ್ಷ, ಜೂನ್ ನಂತರ ಅಧಿಕಾರ ಉಳಿಯಲ್ಲ; ಎಂ ಲಕ್ಷ್ಮಣ್

| Updated By: ವಿವೇಕ ಬಿರಾದಾರ

Updated on: Nov 12, 2023 | 2:00 PM

ಮಾಜಿ ಸಚಿವ ವಿ.ಸೋಮಣ್ಣ ಕತೆ ಮುಗಿಸಿದರು. ಶಾಸಕ ಬಸನಗೌಡ ಪಾಟೀಲ್​ ಯತ್ನಾಳ್ ಅವರನ್ನೂ ಮುಗಿಸಿದರು. ಬಿ.ಸಿ.ಪಾಟೀಲ್‌, ನಿರಾಣಿ, ಬಸವರಾಜ ಬೊಮ್ಮಾಯಿಗೆ ಪರ್ಮನೆಂಟ್ ರೆಸ್ಟ್ ಕೊಟ್ಟಿದ್ದಾರೆ. ಜಗದೀಶ್​ ಶೆಟ್ಟರ್, ಲಕ್ಷ್ಮಣ ಸವದಿಯನ್ನು ಹೊರಗೆ ಕಳಿಸಿದರು. ಸಿ.ಸಿ.ಪಾಟೀಲ್ ಕಥೆ ಮುಗಿಸಿದ್ದಾರೆ. ಈಗ ಬಿವೈ ವಿಜಯೇಂದ್ರ ಅವರನ್ನು ಮುಗಿಸಲು ತಾತ್ಕಾಲಿಕ ಅಧ್ಯಕ್ಷ ಸ್ಥಾನ ಕೊಟ್ಟಿದ್ದಾರೆ ಎಂದು ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ಹೇಳಿದರು.

ಬಿವೈ ವಿಜಯೇಂದ್ರ ತಾತ್ಕಾಲಿಕ ಅಧ್ಯಕ್ಷ, ಜೂನ್ ನಂತರ ಅಧಿಕಾರ ಉಳಿಯಲ್ಲ; ಎಂ ಲಕ್ಷ್ಮಣ್
ಕೆಪಿಸಿಸಿ ವಕ್ತಾರ ಎಂ ಲಕ್ಷ್ಮಣ
Follow us on

ಮೈಸೂರು ನ.12: ಬಿ.ವೈ.ವಿಜಯೇಂದ್ರ (BY Vijayendra) ತಾತ್ಕಾಲಿಕ ಅಧ್ಯಕ್ಷ, ಜೂನ್ ನಂತರ ಅಧಿಕಾರದಲ್ಲಿ ಉಳಿಯಲ್ಲ. ಲಿಂಗಾಯತರು (Lingayat) ಬಿಜೆಪಿ (BJP) ಬಿಟ್ಟಿದ್ದಾರೆಂದು ಪ್ರಧಾನಿ ಮೋದಿ, ಅಮಿತ್​ ಶಾ ಮಾಡಿರುವ ನಾಟಕ. ನಾಟಕದ ಸ್ಕ್ರಿಪ್ಟ್ ರಚನೆ ಮಾಡಿ ಬಿವೈ ವಿಜಯೇಂದ್ರ ಅವರಿಗೆ ಅಧ್ಯಕ್ಷ ಸ್ಥಾನ ಕೊಟ್ಟಿದ್ದಾರೆ. ಲಿಂಗಾಯತರನ್ನು ಸಮಾಧಾನಪಡಿಸಲು ನಾಟಕವಾಡುತ್ತಿದ್ದಾರೆ. ಬಿಜೆಪಿ ನಾಟಕವನ್ನು ನಂಬಿ ಲಿಂಗಾಯತರು ಯಾಮಾರಬೇಡಿ ಎಂದು ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ಹೇಳಿದರು.

ಮೈಸೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ಮಾಜಿ ಸಚಿವ ವಿ.ಸೋಮಣ್ಣ ಕತೆ ಮುಗಿಸಿದರು. ಶಾಸಕ ಬಸನಗೌಡ ಪಾಟೀಲ್​ ಯತ್ನಾಳ್ ಅವರನ್ನೂ ಮುಗಿಸಿದರು. ಬಿ.ಸಿ.ಪಾಟೀಲ್‌, ನಿರಾಣಿ, ಬಸವರಾಜ ಬೊಮ್ಮಾಯಿಗೆ ಪರ್ಮನೆಂಟ್ ರೆಸ್ಟ್ ಕೊಟ್ಟಿದ್ದಾರೆ. ಜಗದೀಶ್​ ಶೆಟ್ಟರ್, ಲಕ್ಷ್ಮಣ ಸವದಿಯನ್ನು ಹೊರಗೆ ಕಳಿಸಿದರು. ಸಿ.ಸಿ.ಪಾಟೀಲ್ ಕಥೆ ಮುಗಿಸಿದ್ದಾರೆ. ಈಗ ಬಿವೈ ವಿಜಯೇಂದ್ರ ಅವರನ್ನು ಮುಗಿಸಲು ತಾತ್ಕಾಲಿಕ ಅಧ್ಯಕ್ಷ ಸ್ಥಾನ ಕೊಟ್ಟಿದ್ದಾರೆ ಎಂದು ಹೇಳಿದರು.

ಇದನ್ನೂ ಓದಿ: ವಿಜಯೇಂದ್ರ ನನ್ನ ಸ್ನೇಹಿತ‌, ಯಡಿಯೂರಪ್ಪ ಬಗ್ಗೆ ಗೌರವವಿದೆ – ಆದರೆ ಬಿಜೆಪಿ ಒಡೆದ ಮಡಿಕೆಯಾಗಿದೆ: ಕೃಷಿ ಸಚಿವ ಚಲುವರಾಯಸ್ವಾಮಿ ವಿಶ್ಲೇಷಣೆ

ಪ್ರಧಾನಿ ಮೋದಿ, ಅಮಿತ್​ ಶಾ ಆಟ ಕರ್ನಾಟಕದಲ್ಲಿ ನಡೆಯಲ್ಲ ಅಂತಾ ಗೊತ್ತಾಗಿದೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕರ್ನಾಟಕದಲ್ಲಿ ಇದು ಸಾಬೀತಾಗಿದೆ. ಬಿವೈ ವಿಜಯೇಂದ್ರ ಅಧ್ಯಕ್ಷರಾಗಿರುವುದಕ್ಕೆ ನಮಗೆ ಭಯ ಇಲ್ಲ. ಸ್ವಾಗತ ಮಾಡುತ್ತೇವೆ. ಬಿಎಸ್​ ಯಡಿಯೂರಪ್ಪ ಅವರು ಜೈಲಿಗೆ ಹೋಗಿದ್ದು ಯಾರಿಂದ? ಅವರ ಸಹಿ ಮಾಡಿದ್ದು ಯಾರು? ಇದನ್ನು ನಾವು ಹೇಳಿದ್ದಲ್ಲ. ನಿಮ್ಮ ಪಕ್ಷದವರೆ ಮಾತನಾಡಿದ್ದು‌. ಈಗ ಅವರಿಗೆ ಅಧ್ಯಕ್ಷ ಸ್ಥಾನ ಕೊಟ್ಟಿದ್ದೀರಿ ಎಂದು ಪರೋಕ್ಷವಾಗಿ ಬಿವೈ ವಿಜಯೇಂದ್ರ ವಿರುದ್ಧ ಆರೋಪ ಮಾಡಿದರು.

ಸಿ.ಟಿ.ರವಿ ಎಲ್ಲರನ್ನು ಬೈಯ್ದುಕೊಂಡು ಎಲ್ಲ ಹುದ್ದೆ ಕಳೆದುಕೊಂಡರು. ಆರ್​ ಅಶೋಕ್, ಗೋವಿಂದ ಕಾರಜೋಳ, ಶ್ರೀರಾಮುಲು ಇವರ ಕಥೆಯಲ್ಲ ಮುಗಿತು. ಮಾತೆತ್ತಿದ್ದರೆ ಕಾಂಗ್ರೆಸ್ ಎರಡು ಗುಂಪು ಅಂತಿರಾ. ಬಿಜೆಪಿಯಲ್ಲಿ 12 ಗುಂಪಿದೆ ಎಂದು ವಾಗ್ದಾಳಿ ಮಾಡಿದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ