ಜಾತಿಗಣತಿಯ ವರದಿ ಅಂತಿಮ ಘಟ್ಟದಲ್ಲಿದೆ: ಹಿಂದುಳಿದ ವರ್ಗಗಳ ಆಯೋಗ ಅಧ್ಯಕ್ಷ ಜಯಪ್ರಕಾಶ್ ಹೆಗ್ಡೆ

| Updated By: ಗಂಗಾಧರ​ ಬ. ಸಾಬೋಜಿ

Updated on: Oct 06, 2023 | 7:32 PM

ಜಾತಿಗಣತಿ ವರದಿ ರಾಜ್ಯ ಸರ್ಕಾರಕ್ಕೆ ಸಲ್ಲಿಸುವಂತೆ ಒತ್ತಾಯಿಸಲಾಗಿದೆ. ಸದ್ಯ ಈ ಕುರಿತಾಗಿ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಜಯಪ್ರಕಾಶ್ ಹೆಗ್ಡೆ ಪ್ರತಿಕ್ರಿಯೆ ನೀಡಿದ್ದು, ಶೀಘ್ರದಲ್ಲೇ ದತ್ತಾಂಶ ಸಂಗ್ರಹ ಮಾಡಿದ ವರದಿ ಸಲ್ಲಿಸುವಂತೆ ರಾಜ್ಯ ಸರ್ಕಾರ ಹೇಳಿದೆ. ಜಾತಿಗಣತಿಯ ವರದಿ ಅಂತಿಮಘಟ್ಟದಲ್ಲಿ ಇದೆ ಎಂದು ತಿಳಿಸಿದರು. 

ಜಾತಿಗಣತಿಯ ವರದಿ ಅಂತಿಮ ಘಟ್ಟದಲ್ಲಿದೆ: ಹಿಂದುಳಿದ ವರ್ಗಗಳ ಆಯೋಗ ಅಧ್ಯಕ್ಷ ಜಯಪ್ರಕಾಶ್ ಹೆಗ್ಡೆ
ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಜಯಪ್ರಕಾಶ್ ಹೆಗ್ಡೆ
Follow us on

ಬೆಂಗಳೂರು, ಅಕ್ಟೋಬರ್​​ 06: ಬಿಹಾರದಲ್ಲಿ ಜಾತಿಗಣತಿ ವರದಿ (caste census report) ಬಹಿರಂಗವಾದ ಬಳಿಕ ಕರ್ನಾಟಕದಲ್ಲೂ ಸಹ ಒತ್ತಾಯಗಳು ಕೇಳಿ ಬರುತ್ತಿವೆ. ಜಾತಿಗಣತಿ ವರದಿ ರಾಜ್ಯ ಸರ್ಕಾರಕ್ಕೆ ಸಲ್ಲಿಸುವಂತೆ ಒತ್ತಾಯಿಸಲಾಗಿದೆ. ಸದ್ಯ ಈ ಕುರಿತಾಗಿ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಜಯಪ್ರಕಾಶ್ ಹೆಗ್ಡೆ ಪ್ರತಿಕ್ರಿಯೆ ನೀಡಿದ್ದು, ಶೀಘ್ರದಲ್ಲೇ ದತ್ತಾಂಶ ಸಂಗ್ರಹ ಮಾಡಿದ ವರದಿ ಸಲ್ಲಿಸುವಂತೆ ರಾಜ್ಯ ಸರ್ಕಾರ ಹೇಳಿದೆ. ಜಾತಿಗಣತಿಯ ವರದಿ ಅಂತಿಮಘಟ್ಟದಲ್ಲಿ ಇದೆ ಎಂದು ತಿಳಿಸಿದರು.

ದೈವಜ್ಞ ಬ್ರಾಹ್ಮಣರನ್ನು ವರದಿಯಿಂದ ಕೈಬಿಡಬೇಡಿ ಎಂಬ ಆಗ್ರಹವೂ ಇದೆ. ನಾವು ಹಿಂದಿನ ವರದಿಯ ದತ್ತಾಂಶವನ್ನು ಬದಲಾವಣೆ ಮಾಡುವುದೇ ಇಲ್ಲ. ನಾವು ಯಾವುದೇ ರೀತಿಯ ಪರಿಷ್ಕರಣೆಯನ್ನೂ ಕೂಡ ಮಾಡುತ್ತಿಲ್ಲ. ನವೆಂಬರ್​ ವೇಳೆಗೆ ಜಾತಿಗಣತಿ ವರದಿ ಸಲ್ಲಿಸುತ್ತೇವೆ. ಸರ್ಕಾರ ವರದಿ ಸ್ವೀಕಾರ ಮಾಡಬಹುದು, ತಿರಸ್ಕಾರ ಸಹ ಮಾಡಬಹುದು ಎಂದು ಹೇಳಿದ್ದಾರೆ.

ದುಂದುವೆಚ್ಚಕ್ಕಾಗಿ ಜಾತಿ ಗಣತಿ ಮಾಡಿಲ್ಲ: ಗೃಹ ಸಚಿವ ಡಾ.ಜಿ.ಪರಮೇಶ್ವರ್​ 

ಈ ಕುರಿತಾಗಿ ಇತ್ತೀಚೆಗೆ ಗೃಹ ಸಚಿವ ಡಾ.ಜಿ.ಪರಮೇಶ್ವರ್​ ಮಾತನಾಡಿ, ಸರ್ಕಾರಕ್ಕೆ ಜಾತಿ ಗಣತಿ ವರದಿ ಸಲ್ಲಿಸಿದ ಬಳಿಕ ಚರ್ಚೆ ಮಾತನಾಡೋ. ಶೀಘ್ರವೇ ಸರ್ಕಾರಕ್ಕೆ ವರದಿ ಸಲ್ಲಿಸುವುದಾಗಿ ಜಯಪ್ರಕಾಶ್ ಹೇಳಿದ್ದಾರೆ. ಯಾವ್ಯಾವ ಸಮುದಾಯದ ಸಂಖ್ಯೆ ಎಷ್ಟಿದೆ ಎಂದು ಗೊತ್ತಾಗುತ್ತದೆ. ಜಾತಿ ಗಣತಿ ನಡೆಸಲು ಅಂದಾಜು 100ಕ್ಕೂ ಹೆಚ್ಚು ಕೋಟಿ ರೂ. ಖರ್ಚಾಗಿದೆ. ಇಷ್ಟು ಖರ್ಚು ಮಾಡಿ ವರದಿ ಕೊಡದೆ ಹೋದರೆ ಹಣ ವ್ಯರ್ಥ ಅಲ್ವಾ ಎಂದಿದ್ದರು.

ಇದನ್ನೂ ಓದಿ: ಹೈಕಮಾಂಡ್​ನಿಂದ ನಂಗೆ ಯಾವುದೇ ನೋಟೀಸ್ ಬಂದಿಲ್ಲ: ಶಾಮನೂರು ಶಿವಶಂಕರಪ್ಪ, ಶಾಸಕ

ಅನುಕೂಲ ಆಗಬಹುದು ಎಂಬ ಉದ್ದೇಶದಿಂದ ಜಾತಿ ಗಣತಿ ಮಾಡಿದ್ದಾರೆ. ಸರ್ಕಾರದ ದುಂದುವೆಚ್ಚಕ್ಕಾಗಿ ಜಾತಿ ಗಣತಿ ಮಾಡಿಲ್ಲ. ಮುಂದಿನ ದಿನದಲ್ಲಿ ಮೀಸಲಾತಿ ಮಾಡುವ ವೇಳೆ ಅನುಕೂಲ ಆಗಲಿದೆ. ನಮ್ಮ ರಾಜ್ಯದಲ್ಲಿ ಮೀಸಲಾತಿ ಕೂಗು ಕೇಳಿ ಬಂದಿವೆ‌. 50% ಇದ್ದ ಮೀಸಲಾತಿ ಹೆಚ್ಚಳ ಮಾಡಿ ಎಂದು ಒತ್ತಡ ಹಾಕುತ್ತಿದ್ದಾರೆ. ಮಾಹಿತಿ ಬಹಿರಂಗಪಡಿಸಿದ್ರೆ ಅನುಕೂಲವಾಗಬಹುದು ಎಂದು ಅನಿಸುತ್ತದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಇದನ್ನೂ ಓದಿ: ಜೆಡಿಎಸ್-ಬಿಜೆಪಿ ಸೋಮಶೇಖರ್ ಗೆ ಬೇಸರ ಮೂಡಿಸಿರಬಹುದು, ಆದರೆ ಅವರು ಪಕ್ಷ ಬಿಡುತ್ತಿಲ್ಲ: ಆರ್ ಅಶೋಕ, ಬಿಜೆಪಿ ಶಾಸಕ

ಈ ಬಗ್ಗೆ ಬಿಜೆಪಿ ನಾಯಕ ಸಿಟಿ ರವಿ ಮಾತನಾಡಿದ್ದು, ಜಾತಿ ಗಣತಿಯನ್ನು ಬಿಡುಗಡೆ ಮಾಡಲಿ. ನಮ್ಮ ಪ್ರಧಾನಿಗಳೇ ಅತೀ ಹಿಂದುಳಿದ ವರ್ಗಕ್ಕೆ ಸೇರಿದವರು. ಅತೀ ಹೆಚ್ಚು ಜನ ಹಿಂದುಳಿದ ಸಚಿವರು ಇರುವುದು ಬಿಜೆಪಿ ಸರ್ಕಾರದಲ್ಲಿ. ಅತೀ ಹೆಚ್ಚು ಜನ ಹಿಂದುಳಿದ ಶಾಸಕರು, ಸಂಸದರು ಇರುವುದೂ ಬಿಜೆಪಿಯಲ್ಲಿ. ಯಾರ್ಯಾರು ಜಾತಿ ಹೆಸರು ರಾಜಕಾರಣ ಮಾಡಿದ್ದಾರೋ ಅವರೆಲ್ಲರೂ ಜಾತಿಯನ್ನು ಎಷ್ಟು ಉದ್ದಾರ ಮಾಡಿದ್ದಾರೆ ಎಂಬದೂ ಒಂದು ಸಮೀಕ್ಷೆ ಆಗಬೇಕು ಎಂದಿದ್ದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 7:32 pm, Fri, 6 October 23