ಕರ್ನಾಟಕ ರಾಜಕಾರಣದಲ್ಲಿ ಸಂಚಲನ ಸೃಷ್ಟಿಸಿದ ಜಾತಿಗಣತಿ ವರದಿ: ಬಿಜೆಪಿ ನಿಲುವೇನು? ಕಾಂಗ್ರೆಸ್ ಹೇಳುವುದೇನು?

Karnataka caste census report: ಬಿಹಾರದಲ್ಲಿ ಜಾತಿಗಣತಿ ವರದಿ ಬಿಡುಗಡೆ ಮಾಡಿದ್ದೇ ತಡ ದೇಶದಲ್ಲಿ ಹೊಸ ಸಂಚಲನ ಸೃಷ್ಟಿಸಿದೆ.ದೇಶವ್ಯಾಪಿ ಜಾತಿಗಣತಿಗೆ ಆಗ್ರಹ ಶುರುವಾಗುವ ಸಾಧ್ಯತೆಗಳು ದಟ್ಟವಾಗುತ್ತಿದ್ದು, ಈ ಮಧ್ಯೆ ಕರ್ನಾಟಕದಲ್ಲೇ ಭಾರಿ ಜಾತಿಗಣತಿ ವರದಿ ಬಹಿರಂಗಕ್ಕೆ ಭಾರಿ ಒತ್ತಾಯಗಳು ಕೇಳಿ ಬರುತ್ತಿವೆ. ಇನ್ನು ಈ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದೇನು? ಜಾತಿಗಣತಿ ವರದಿ ಬಿಡುಗಡೆ ಬಗ್ಗೆ ಬಿಜೆಪಿ ನಾಯಕರ ನಿಲುವೇನು? ಇಲ್ಲಿದೆ ವಿವರ

ಕರ್ನಾಟಕ ರಾಜಕಾರಣದಲ್ಲಿ ಸಂಚಲನ ಸೃಷ್ಟಿಸಿದ ಜಾತಿಗಣತಿ ವರದಿ: ಬಿಜೆಪಿ ನಿಲುವೇನು? ಕಾಂಗ್ರೆಸ್ ಹೇಳುವುದೇನು?
ಬಿಜೆಪಿ-ಜೆಡಿಎಸ್, ಕಾಂಗ್ರೆಸ್
Follow us
| Updated By: ರಮೇಶ್ ಬಿ. ಜವಳಗೇರಾ

Updated on: Oct 04, 2023 | 10:23 AM

ಬೆಂಗಳೂರು, (ಅಕ್ಟೋಬರ್ 04): ಬಿಹಾರದಲ್ಲಿ (Bihar) ಜಾತಿಗಣತಿ ವರದಿ(caste census report) ಬಹಿರಂಗವಾಗಿದ್ದೇ ಆಗಿದ್ದು, ದೇಶದಲ್ಲಿ ಹೊಸ ಸಂಚಲನ ಸೃಷ್ಟಿಯಾಗಿದೆ. ದೇಶವ್ಯಾಪಿ ಜಾತಿಗಣತಿಗೆ ಆಗ್ರಹ ಶುರುವಾಗುವ ಸಾಧ್ಯತೆಗಳು ದಟ್ಟವಾಗುತ್ತಿದ್ದು, ಈ ಮಧ್ಯೆ ಕರ್ನಾಟಕದಲ್ಲೇ ಭಾರಿ ಜಾತಿಗಣತಿ ವರದಿ(Karnataka caste census report) ಬಹಿರಂಗಕ್ಕೆ ಭಾರಿ ಒತ್ತಾಯಗಳು ಕೇಳಿ ಬರುತ್ತಿವೆ. ಸ್ವತಃ ಕಾಂಗ್ರೆಸ್ ನಾಯಕರೇ ಕರ್ನಾಟಕದಲ್ಲೂ ಜಾತಿಗಣತಿ ವರದಿ ಬಿಡುಗಡೆಗೆ ಒತ್ತಾಯಿಸಿದ್ದಾರೆ. ಇದರ ಬೆನ್ನಲ್ಲೇ ಇದೀಗ ಬಿಜೆಪಿ ನಾಯಕರೂ ಸಹ ಜಾತಿಗಣತಿ ವರದಿ ಬಿಡುಗಡೆಗೆ ಪಟ್ಟು ಹಿಡಿದಿದ್ದಾರೆ.

ಕರ್ನಾಟಕದಲ್ಲಿ ಜಾತಿ ಗಣತಿ ವರದಿ ಬಿಡುಗಡೆಗೆ ಒತ್ತಾಯ ಕೇಳಿಬಂದಿರುವ ಬಗ್ಗೆ ಬಿಜೆಪಿ ಎಂಎಲ್​ಸಿ ರವಿಕುಮಾರ್ ಮಾತನಾಡಿ, ಜಾತಿಗಣತಿ ವರದಿ ಬಿಡುಗಡೆ ಮಾಡಬೇಕೆಂದು ಬಿಜೆಪಿ ಒತ್ತಾಯಿಸುತ್ತೆ. ನೂರಾರು ಕೋಟಿ ರೂಪಾಯಿ ಖರ್ಚು ಮಾಡಿ ವರದಿ ಸಿದ್ಧಪಡಿಸಿದ್ದಾರೆ. ವರದಿಯನ್ನು ಏಕೆ ಬಿಡುಗಡೆ ಮಾಡಿಲ್ಲ ಎಂದು ಬಿಜೆಪಿ ಪ್ರಶ್ನಿಸುತ್ತದೆ. ವರದಿ ಬಿಡುಗಡೆ ಮಾಡಬೇಕು ಎಂದು ಬಿಜೆಪಿ ಒತ್ತಾಯ ಮಾಡುತ್ತದೆ. ನಾವು ಕೂಡ ವಿಧಾನಸಭೆ, ಪರಿಷತ್​ನಲ್ಲಿ ಹೋರಾಟ ಮಾಡಿದ್ದೇವೆ. ಕೇವಲ ಹರಿಪ್ರಸಾದ್ ಮಾತ್ರ ಅಲ್ಲ, ನಾವೂ ಒತ್ತಾಯ ಮಾಡುತ್ತೇವೆ ಎಂದರು.

ಇದನ್ನೂ ಓದಿ: ಬಿಹಾರ್ ಬೆನ್ನಲ್ಲೇ ಕರ್ನಾಟಕದಲ್ಲೂ ಗರಿಗೆದರಿದ ಜಾತಿ ಗಣತಿ ವರದಿ ಸಲ್ಲಿಕೆ ಕಾರ್ಯ ಚಟುವಟಿಕೆಗಳು

ಸಿಟಿ ರವಿ ಹೇಳಿದ್ದಿಷ್ಟು

ಈ ಬಗ್ಗೆ ಬಿಜೆಪಿ ನಾಯಕ ಸಿಟಿ ರವಿ, ಜಾತಿ ಗಣತಿಯನ್ನು ಬಿಡುಗಡೆ ಮಾಡಲಿ. ನಮ್ಮ ಪ್ರಧಾನಿಗಳೇ ಅತೀ ಹಿಂದುಳಿದ ವರ್ಗಕ್ಕೆ ಸೇರಿದವರು. ಅತೀ ಹೆಚ್ಚು ಜನ ಹಿಂದುಳಿದ ಸಚಿವರು ಇರುವುದು ಬಿಜೆಪಿ ಸರ್ಕಾರದಲ್ಲಿ. ಅತೀ ಹೆಚ್ಚು ಜನ ಹಿಂದುಳಿದ ಶಾಸಕರು, ಸಂಸದರು ಇರುವುದೂ ಬಿಜೆಪಿಯಲ್ಲಿ. ಯಾರ್ಯಾರು ಜಾತಿ ಹೆಸರು ರಾಜಕಾರಣ ಮಾಡಿದ್ದಾರೋ ಅವರೆಲ್ಲರೂ ಜಾತಿಯನ್ನು ಎಷ್ಟು ಉದ್ದಾರ ಮಾಡಿದ್ದಾರೆ ಎಂಬದೂ ಒಂದು ಸಮೀಕ್ಷೆ ಆಗಬೇಕು. ಜಾತಿಯ ಹೆಸರು ಹೇಳಿಕೊಂಡು ತಮ್ಮ ಕುಟುಂಬ ಉದ್ದಾರ ಮಾಡಿಕೊಂಡಿದ್ದಾರೆ, ಅವರು ಉದ್ದಾರ ಆಗಿದ್ದಾರೆ. ಜಾತಿಯ ಜನರನ್ನು ಎಷ್ಟು ಜನರನ್ನು ಉದ್ಧಾರ ಮಾಡಿದ್ದಾರೆ, ಬಡವರು ಎಷ್ಟು ಜನರನ್ನು ಮೇಲೆತ್ತಿದ್ದಾರೆ ಎಂಬುವುದೂ ಸಮೀಕ್ಷೆ ಆಗಲಿ. ಜಾತಿಯ ಹೆಸರು ಹೇಳಿಕೊಂಡು ರಾಜಕೀಯ ಮಾಡಿದವರು ಚಿಪ್ಪು ಕೊಟ್ಟಿದ್ದಾರೆ ಎಂಬುದು ಆಗ ರಾಜ್ಯದ ಜನರಿಗೆ ಅರ್ಥ ಆಗುತ್ತದೆ ಎಂದು ಹೇಳಿದರು.

ಸದಾನಂದಗೌಡ ಹೇಳಿದ್ದೇನು?

ಬಿಜೆಪಿ ಸಂಸದ ಸದಾನಂದಗೌಡ ಪ್ರತಿಕ್ರಿಯಿಸಿದ್ದು, ಜಾತಿಯ ಹಿಂದೆ ಹೋಗಿ ಏನು ಆಗಿದೆ ಎಂದು ಎಲ್ಲರಿಗೂ ಗೊತ್ತಿದೆ. ಜಾತಿಗೆ ಕೊಡುವ ಇಂಪಾರ್ಟೆನ್ಸ್​​ ಅಭಿವೃದ್ಧಿಗೆ ಕೊಡಿ. ಪರಮೇಶ್ವರ್, ಶಾಮನೂರು, ಹರಿಪ್ರಸಾದ್ ಜಾತಿ ಜಾತಿ ಅಂತಾರೆ. ಜಾತಿ ಜಾತಿಯನ್ನು ಎತ್ತಿ ಕಟ್ಟುವುದನ್ನು ವಿರೋಧ ಮಾಡುತ್ತೇವೆ. ಇದರಿಂದ ಖಂಡಿತಾ ಒಳ್ಳೆಯದಾಗಲ್ಲ ಎಂದಿದ್ದಾರೆ.

ಸಚಿವ ಡಾ.ಜಿ.ಪರಮೇಶ್ವರ್ ಹೇಳಿಕೆ

ಸರ್ಕಾರಕ್ಕೆ ಜಾತಿ ಗಣತಿ ವರದಿ ಸಲ್ಲಿಸಿದ ಬಳಿಕ ಚರ್ಚೆ ಮಾಡೋಣ. ಶೀಘ್ರವೇ ಸರ್ಕಾರಕ್ಕೆ ವರದಿ ಸಲ್ಲಿಸುವುದಾಗಿ ಜಯಪ್ರಕಾಶ್ ಹೇಳಿದ್ದಾರೆ. ಯಾವ್ಯಾವ ಸಮುದಾಯದ ಸಂಖ್ಯೆ ಎಷ್ಟಿದೆ ಎಂದು ಗೊತ್ತಾಗುತ್ತದೆ. ಜಾತಿ ಗಣತಿ ನಡೆಸಲು ಅಂದಾಜು 100ಕ್ಕೂ ಹೆಚ್ಚು ಕೋಟಿ ರೂ. ಖರ್ಚಾಗಿದೆ. ಇಷ್ಟು ಖರ್ಚು ಮಾಡಿ ವರದಿ ಕೊಡದೆ ಹೋದರೆ ಹಣ ವ್ಯರ್ಥ ಅಲ್ವಾ? ಅನುಕೂಲ ಆಗಬಹುದು ಎಂಬ ಉದ್ದೇಶದಿಂದ ಜಾತಿ ಗಣತಿ ಮಾಡಿದ್ದಾರೆ. ಸರ್ಕಾರದ ದುಂದುವೆಚ್ಚಕ್ಕಾಗಿ ಜಾತಿ ಗಣತಿ ಮಾಡಿಲ್ಲ ಎಂದರು.

ಮುಂದಿನ ದಿನದಲ್ಲಿ ಮೀಸಲಾತಿ ಮಾಡುವ ವೇಳೆ ಅನುಕೂಲ ಆಗಲಿದೆ. ನಮ್ಮ ರಾಜ್ಯದಲ್ಲಿ ಮೀಸಲಾತಿ ಕೂಗು ಕೇಳಿ ಬಂದಿವೆ‌. 50% ಇದ್ದ ಮೀಸಲಾತಿ ಹೆಚ್ಚಳ ಮಾಡಿ ಎಂದು ಒತ್ತಡ ಹಾಕುತ್ತಿದ್ದಾರೆ. ಮಾಹಿತಿ ಬಹಿರಂಗಪಡಿಸಿದ್ರೆ ಅನುಕೂಲವಾಗಬಹುದು ಎಂದು ಅನಿಸುತ್ತದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ನೋಡೋಣ ಎಂದ ಸಿದ್ದರಾಮಯ್ಯ

ಕರ್ನಾಟಕದಲ್ಲೂ ಜಾತಿಗಣತಿ ವರದಿ ಬಿಡುಗಡೆಗೆ ಒತ್ತಾಯ ಕುರಿತು ಬೆಳಗಾವಿ ನಗರದಲ್ಲಿ ನಿನ್ನೆ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಕುಮಾರಸ್ವಾಮಿ ಮುಖ್ಯಮಂತ್ರಿ ಆಗಿದ್ದಾಗ ಕಾಂತರಾಜು ವರದಿ ಸಿದ್ಧಪಡಿಸಿದ್ದರು. ಆದ್ರೆ ಆಗ ಸಿಎಂ ಆಗಿದ್ದ ಹೆಚ್​ಡಿಕೆಗೆ ವರದಿ ಕೊಡಲು ಹೋದ್ರೆ ಸ್ವೀಕರಿಸಲಿಲ್ಲ. ಆಗ ಸರ್ಕಾರದ ಕಾರ್ಯದರ್ಶಿ ಜಾತಿ ಗಣತಿ ವರದಿಗೆ ಸಹಿ ಮಾಡಲಿಲ್ಲ. ಈಗ ಇರುವ ಅಧ್ಯಕ್ಷರು ಆ ವರದಿಯನ್ನು ತಂದು ಕೊಡಬೇಕು ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

ಜಾತಿ ಗಣತಿ, ಸಾಮಾಜಿಕ, ಆರ್ಥಿಕ ಸಮೀಕ್ಷೆಗೆ ನಾನೇ ಆದೇಶಿಸಿದ್ದೆ. ಕಾಂತರಾಜು ಶಾಶ್ವತ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರಾಗಿದ್ರು. ನಮ್ಮ ಸರ್ಕಾರದ ಅವಧಿಯಲ್ಲಿ ವರದಿ ಪೂರ್ಣವಾಗಿರಲಿಲ್ಲ. ಸಮ್ಮಿಶ್ರ ಸರ್ಕಾರದಲ್ಲಿ ಹೆಚ್​.ಡಿ.ಕುಮಾರಸ್ವಾಮಿ ಆ ವರದಿ ಪಡೆಯಲಿಲ್ಲ. ನಂತರ ಬಿಜೆಪಿ ಸರ್ಕಾರ ಜಯಪ್ರಕಾಶ್ ಹೆಗಡೆರನ್ನು ನೇಮಿಸಿದ್ದು ಅವರು ವರದಿ ನೀಡಿಲ್ಲ, ಕಾರ್ಯದರ್ಶಿ ಸಹಿ ಮಾಡಿಲ್ವಂತೆ. ನಾನು ಒಂದು ಬಾರಿ ವರದಿ ಕೇಳಿದ್ದೆ, ಕೊಡ್ತೀನಿ ಅಂತೇಳಿ ಕೊಡಲಿಲ್ಲ. ಜಾತಿಗಣತಿಯ ವರದಿ ಕೊಟ್ಟರೆ ನೋಡೋಣ ಎಂದು ಹೇಳಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಹೆಗಲಿಗೆ ಬ್ಯಾಗ್, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಮಕ್ಕಳು
ಹೆಗಲಿಗೆ ಬ್ಯಾಗ್, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಮಕ್ಕಳು
ಜಮ್ಮು ಕಾಶ್ಮೀರದಲ್ಲಿ ಬಸ್ ಅಪಘಾತ; 3 ಬಿಎಸ್‌ಎಫ್ ಯೋಧರು ಸಾವು
ಜಮ್ಮು ಕಾಶ್ಮೀರದಲ್ಲಿ ಬಸ್ ಅಪಘಾತ; 3 ಬಿಎಸ್‌ಎಫ್ ಯೋಧರು ಸಾವು
20 ರೂ. ನೀರಿನ ಬಾಟಲಿ ಕೊಳ್ಳಲು ಬಂದವನು ಮಾಡಿದ್ದೇನು ನೋಡಿ!
20 ರೂ. ನೀರಿನ ಬಾಟಲಿ ಕೊಳ್ಳಲು ಬಂದವನು ಮಾಡಿದ್ದೇನು ನೋಡಿ!
ಬ್ಯಾಕ್ ಟು ಬ್ಯಾಕ್ ವಿಕೆಟ್ ಉರುಳಿಸಿದ ಆಕಾಶ್ ದೀಪ್
ಬ್ಯಾಕ್ ಟು ಬ್ಯಾಕ್ ವಿಕೆಟ್ ಉರುಳಿಸಿದ ಆಕಾಶ್ ದೀಪ್
ದರ್ಶನ್ ಹೊರಗೆ ಬಂದ್ರೆ ಖುಷಿ; ತಪ್ಪು ಮಾಡಿದ್ದರೆ ಕ್ರಮ ಆಗಲಿ: ಗುರು ಕಿರಣ್
ದರ್ಶನ್ ಹೊರಗೆ ಬಂದ್ರೆ ಖುಷಿ; ತಪ್ಪು ಮಾಡಿದ್ದರೆ ಕ್ರಮ ಆಗಲಿ: ಗುರು ಕಿರಣ್
ಭಗವಾನ್ ಜಗನ್ನಾಥನ ವಿಗ್ರಹ ಖರೀದಿಸಿ, ಡಿಜಿಟಲ್ ಪೇಮೆಂಟ್ ಮಾಡಿದ ಪಿಎಂ ಮೋದಿ
ಭಗವಾನ್ ಜಗನ್ನಾಥನ ವಿಗ್ರಹ ಖರೀದಿಸಿ, ಡಿಜಿಟಲ್ ಪೇಮೆಂಟ್ ಮಾಡಿದ ಪಿಎಂ ಮೋದಿ
ತ್ರಿವರ್ಣ ಧ್ವಜದಲ್ಲಿ ಉರ್ದು ವಾಕ್ಯ ಬರೆದು ದರ್ಗಾಕ್ಕೆ ಕಟ್ಟಿದ ಯುವಕ:ವಿಡಿಯೋ
ತ್ರಿವರ್ಣ ಧ್ವಜದಲ್ಲಿ ಉರ್ದು ವಾಕ್ಯ ಬರೆದು ದರ್ಗಾಕ್ಕೆ ಕಟ್ಟಿದ ಯುವಕ:ವಿಡಿಯೋ
ದಸರಾ ಉದ್ಘಾಟನೆ ಅನಿರೀಕ್ಷಿತವಾಗಿ ಬಂದ ಸಂತೋಷದ ಕ್ಷಣ; ಹಂಪಾ ನಾಗರಾಜಯ್ಯ
ದಸರಾ ಉದ್ಘಾಟನೆ ಅನಿರೀಕ್ಷಿತವಾಗಿ ಬಂದ ಸಂತೋಷದ ಕ್ಷಣ; ಹಂಪಾ ನಾಗರಾಜಯ್ಯ
ಬಯೋಲಾಜಿಕಲ್ ವಾರ್ ರೀತಿ ಏಡ್ಸ್ ಇರುವವರನ್ನು ಬಳಸಿದ್ದಾರೆ: ಡಿಕೆ ಸುರೇಶ್​
ಬಯೋಲಾಜಿಕಲ್ ವಾರ್ ರೀತಿ ಏಡ್ಸ್ ಇರುವವರನ್ನು ಬಳಸಿದ್ದಾರೆ: ಡಿಕೆ ಸುರೇಶ್​
ನಕ್ಸಲರ ದಾಳಿಗೆ ತುತ್ತಾದ ಜನರ ಸಂಕಟ ತೆರೆದಿಡುವ ಸಾಕ್ಷ್ಯಚಿತ್ರವಿದು
ನಕ್ಸಲರ ದಾಳಿಗೆ ತುತ್ತಾದ ಜನರ ಸಂಕಟ ತೆರೆದಿಡುವ ಸಾಕ್ಷ್ಯಚಿತ್ರವಿದು