ದೆಹಲಿ: ಉದ್ಧವ್ ಠಾಕ್ರೆ (Uddhav Thackeray) ಮತ್ತು ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ ಶಿಂಧೆ (Eknath Shinde) ಬಣದ ನಡುವೆ ಬಿಲ್ಲು, ಬಾಣ ನಮ್ಮ ಪಕ್ಷದ ಚಿಹ್ನೆ ಎಂಬ ವಾದಗಳು ನಡೆಯುತ್ತಿದ್ದು, ಚುನಾವಣಾ ಆಯೋಗಕ್ಕೆ ಎರಡೂ ಬಣಗಳು ಅರ್ಜಿ ಸಲ್ಲಿಸಿವೆ. ಬಿಲ್ಲು, ಬಾಣ ನಮ್ಮ ಪಕ್ಷದ ಚಿಹ್ನೆ ಎಂದು ಎರಡೂ ಬಣಗಳು ಅರ್ಜಿ ಸಲ್ಲಿಸಿರುವುದರಿಂದ ಕೇಂದ್ರ ಚುನಾವಣಾ ಆಯೋಗವು ಯಾವ ಪಕ್ಷಕ್ಕೂ ನೀಡದೆ ತಡೆ ನೀಡಿದೆ. ಅಲ್ಲದೆ ಹೊಸ ಚಿಹ್ನೆ ಆಯ್ಕೆ ಮಾಡುವಂತೆ ಸೂಚನೆ ನೀಡಿದೆ.
ಬಿಲ್ಲು, ಬಾಣ ನಮ್ಮ ಪಕ್ಷದ ಚಿಹ್ನೆ, ಈ ಚಿಹ್ನೆ ತಮ್ಮ ಪಕ್ಷಕ್ಕೆ ನೀಡಬೇಕು ಎಂದು ಮಹಾರಾಷ್ಟ್ರ ಮಾಜಿ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಮತ್ತು ಹಾಲಿ ಮುಖ್ಯಮಂತ್ರಿ ಏಕನಾಥ ಶಿಂಧೆ ಬಣ ಕೇಂದ್ರ ಚುನಾವಣಾ ಆಯೋಗಕ್ಕೆ ಅರ್ಜಿ ಸಲ್ಲಿಸಿತ್ತು. ಅರ್ಜಿ ಪರಿಶೀಲಿಸಿದ ಆಯೋಗವು, ಶಿವಸೇನೆ ಚಿಹ್ನೆ ಯಾವ ಬಣಕ್ಕೂ ನೀಡದೆ ತಡೆ ನೀಡಿದೆ. ಅಲ್ಲದೆ ಹೊಸ ಚಿಹ್ನೆ ಆಯ್ಕೆ ಮಾಡಿಕೊಳ್ಳುವಂತೆ ಸೂಚನೆ ನೀಡಿದೆ. ಸೋಮವಾರ ಮಧ್ಯಾಹ್ನ 1 ಗಂಟೆಯೊಳಗೆ ಅರ್ಜಿ ಸಲ್ಲಿಸುವಂತೆ ಎರಡೂ ಬಣಗಳಿಗೆ ಆಯೋಗವು ಸೂಚಿಸಿದೆ.
ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ