ಭ್ರಷ್ಟಾಚಾರ, ಜಾತಿವಾದ ಹುಟ್ಟುಹಾಕಿದ್ದೇ ಕಾಂಗ್ರೆಸ್ ಪಕ್ಷ; ಸಿಟಿ ರವಿ ವಾಗ್ದಾಳಿ

ಅಕ್ರಮ ಆಸ್ತಿ ಸಂಬಂಧ ಇಡಿ ಪ್ರಕರಣ ಎದುರಿಸುತ್ತಿರೋರು, ಅಕ್ರಮ ಹಣ ವರ್ಗಾವಣೆ ತನಿಖೆಯನ್ನು ಎದರಿಸ್ತಿರೋರು, ಭ್ರಷ್ಟಾಚಾರ ಆರೋಪ ಎದುರಿಸ್ತಿರೋರು ಬೇಲ್ ಮೇಲಿದ್ದಾರೆ. ಮೊದಲು ತಮ್ಮ ಪಕ್ಷದ ಭ್ರಷ್ಟಾಚಾರ ದೂರ ಮಾಡಿಕೊಳ್ಳಲಿ.

ಭ್ರಷ್ಟಾಚಾರ, ಜಾತಿವಾದ ಹುಟ್ಟುಹಾಕಿದ್ದೇ ಕಾಂಗ್ರೆಸ್ ಪಕ್ಷ; ಸಿಟಿ ರವಿ ವಾಗ್ದಾಳಿ
ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿಟಿ ರವಿ
Edited By:

Updated on: Nov 28, 2021 | 2:03 PM

ಬೆಂಗಳೂರು: ಕುಟುಂಬ ರಾಜಕಾರಣ, ಭ್ರಷ್ಟಾಚಾರ, ಜಾತಿವಾದ ಹುಟ್ಟುಹಾಕಿದ್ದೇ ಕಾಂಗ್ರೆಸ್ ಪಕ್ಷ ಅಂತ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿಟಿ ರವಿ (CT Ravi) ವಾಗ್ದಾಳಿ ನಡೆಸಿದ್ದಾರೆ. ಮೊದಲು ಕಾಂಗ್ರೆಸ್ ತನ್ನ ಎಡೆಯನ್ನು ನೋಡಿಕೊಳ್ಳಲಿ. ಕೆಪಿಸಿಸಿ ಅಧ್ಯಕ್ಷರ ಕಮಿಷನ್ ಬಗ್ಗೆ ವಕ್ತಾರರೇ ಹೇಳ್ತಾರೆ. ಕಮಿಷನ್ ಬಗ್ಗೆ ಕಾಂಗ್ರೆಸ್ ವಕ್ತಾರರೇ ಮಾತನಾಡುತ್ತಾರೆ. ಹಲವು ಕಾಂಗ್ರೆಸ್ ನಾಯಕರು ಬೇಲ್ ಮೇಲೆ ಹೊರಗಿದ್ದಾರೆ ಅಂತ ಸಿಟಿ ರವಿ ಹೇಳಿಕೆ ನೀಡಿದ್ದಾರೆ.

ಅಕ್ರಮ ಆಸ್ತಿ ಸಂಬಂಧ ಇಡಿ ಪ್ರಕರಣ ಎದುರಿಸುತ್ತಿರೋರು, ಅಕ್ರಮ ಹಣ ವರ್ಗಾವಣೆ ತನಿಖೆಯನ್ನು ಎದರಿಸ್ತಿರೋರು, ಭ್ರಷ್ಟಾಚಾರ ಆರೋಪ ಎದುರಿಸ್ತಿರೋರು ಬೇಲ್ ಮೇಲಿದ್ದಾರೆ. ಮೊದಲು ತಮ್ಮ ಪಕ್ಷದ ಭ್ರಷ್ಟಾಚಾರ ದೂರ ಮಾಡಿಕೊಳ್ಳಲಿ. ಆಮೇಲೆ ಬೇರೆಯವರಿಗೆ ಅವರು ಮಾರ್ಗದರ್ಶನ ಮಾಡಲಿ ಅಂತ ಬೆಂಗಳೂರಿನಲ್ಲಿ ಕಾಂಗ್ರೆಸ್ ವಿರುದ್ಧ ಸಿಟಿ ರವಿ ವಾಗ್ದಾಳಿ ನಡೆಸಿದ್ದಾರೆ.

ಕೃಷಿ ತಿದ್ದುಪಡಿ ಕಾಯ್ದೆಗಳಲ್ಲಿ ರೈತ ವಿರೋಧಿ ಅಂಶ ಇಲ್ಲ. ಕೆಲವರಿಗೆ ಮನವರಿಕೆ ಮಾಡಿಕೊಡುವಲ್ಲಿ ವಿಫಲರಾಗಿದ್ದೇವೆ ಈ ಬಗ್ಗೆ ಪ್ರಧಾನಿ ನರೇಂದ್ರ ಮೋದಿಯವರೇ ಹೇಳಿದ್ದಾರೆ. ಒಂದಲ್ಲ ಒಂದು ದಿನ ರೈತರೇ ಬೀದಿಗಿಳಿದು ಹೋರಾಡ್ತಾರೆ. ಈ ಸುಧಾರಣೆ ಕಾಯ್ದೆ ಜಾರಿಗೆ ತನ್ನಿ ಎಂದು ಹೋರಾಡ್ತಾರೆ. ರೀಡೂ ಒಂದು ಭ್ರಷ್ಟಾಚಾರದ ಕೂಪ. ಕೆಂಪಣ್ಣ ಆಯೋಗದ ವರದಿ ಬಹಿರಂಗಪಡಿಸಿದ್ರೆ ಸತ್ಯ ಬಯಲಾಗುತ್ತದೆ. ಕಾಂಗ್ರೆಸ್ನವರು ಎಷ್ಟು ಪ್ರಾಮಾಣಿಕರೆಂಬುದು ತಿಳಿಯುತ್ತದೆ ಅಂತ ರವಿ ಹೇಳಿದ್ದಾರೆ.

ಇದನ್ನೂ ಓದಿ

Munawar Faruqui ಮುನಾವರ್ ಫರೂಕಿ ಬೆಂಗಳೂರಿನಲ್ಲಿ ಆಯೋಜಿಸಿದ್ದ ಕಾರ್ಯಕ್ರಮ ರದ್ದು; ದ್ವೇಷ ಗೆದ್ದಿದೆ, ವಿದಾಯ ಎಂದ ಕಲಾವಿದ

Xiaomi Black Friday Sale: ಶವೋಮಿ ಬ್ಲ್ಯಾಕ್ ಫ್ರೈಡೇ ಸೇಲ್​ನಲ್ಲಿ ಸ್ಮಾರ್ಟ್​ಫೋನ್​ಗಳಿಗೆ ಬಂಪರ್ ಆಫರ್: ಇಲ್ಲಿದೆ ನೋಡಿ