AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Munawar Faruqui ಮುನಾವರ್ ಫರೂಕಿ ಬೆಂಗಳೂರಿನಲ್ಲಿ ಆಯೋಜಿಸಿದ್ದ ಕಾರ್ಯಕ್ರಮ ರದ್ದು; ದ್ವೇಷ ಗೆದ್ದಿದೆ, ವಿದಾಯ ಎಂದ ಕಲಾವಿದ

ಬೆಂಗಳೂರು ಕಾರ್ಯಕ್ರಮವನ್ನು ರದ್ದುಗೊಳಿಸಿದ ನಂತರ  ಇನ್‌ಸ್ಟಾಗ್ರಾಮ್​​ನಲ್ಲಿ ಪೋಸ್ಟ್ ಮಾಡಿದ ಫರೂಕಿ , "ನಫ್ರತ್ ಜೀತ್ ಗಯೀ ಆರ್ಟಿಸ್ಟ್ ಹಾರ್ ಗಯಾ (ದ್ವೇಷ ಗೆದ್ದಿದೆ  ಕಲಾವಿದ ಸೋತ) I'm done, goodbye. Injustice" ಎಂದು ಬರೆದಿದ್ದಾರೆ.

Munawar Faruqui ಮುನಾವರ್ ಫರೂಕಿ ಬೆಂಗಳೂರಿನಲ್ಲಿ ಆಯೋಜಿಸಿದ್ದ ಕಾರ್ಯಕ್ರಮ ರದ್ದು; ದ್ವೇಷ ಗೆದ್ದಿದೆ, ವಿದಾಯ ಎಂದ ಕಲಾವಿದ
ಮುನಾವರ್ ಫರೂಕಿ
TV9 Web
| Edited By: |

Updated on:Nov 28, 2021 | 1:57 PM

Share

ಬೆಂಗಳೂರು: ಬಲಪಂಥೀಯ ಗುಂಪುಗಳ ಬೆದರಿಕೆಗಳಿಂದಾಗಿ ಕಳೆದ ಎರಡು ತಿಂಗಳಲ್ಲಿ ಕನಿಷ್ಠ 12 ಕಾರ್ಯಕ್ರಮಗಳನ್ನು ರದ್ದುಗೊಳಿಸಿದ ಮುನಾವರ್ ಫರೂಕಿ (Munawar Faruqui) ಇನ್ನುಮುಂದೆ ಯಾವುದೇ ಪ್ರದರ್ಶನಗಳನ್ನು ಮಾಡುವುದಿಲ್ಲ ಎಂದು ಹೇಳಿದ್ದಾರೆ. ಭಾನುವಾರ ಬೆಂಗಳೂರಿನಲ್ಲಿ ಕಾರ್ಯಕ್ರಮ ನಡೆಯಬೇಕಿತ್ತು. ಆದರೆ ಬೆಂಗಳೂರು ಪೊಲೀಸರು(Bengaluru police) ಕಾರ್ಯಕ್ರಮ ರದ್ದುಗೊಳಿಸಿ ಎಂದು ಆಯೋಜಕರಿಗೆ ಪತ್ರ ಬರೆದ ಹಿನ್ನಲೆಯಲ್ಲಿ ಫರೂಕಿ ಕಾರ್ಯಕ್ರಮ ನಡೆಸದಿರಲು ತೀರ್ಮಾನಿಸಿದ್ದಾರೆ. ಈ ವರ್ಷದ ಆರಂಭದಲ್ಲಿ ಅವರ ಹಾಸ್ಯ ಕಾರ್ಯಕ್ರಮವೊಂದರಲ್ಲಿ “ಹಿಂದೂ ದೇವರು ಮತ್ತು ದೇವತೆಗಳನ್ನು ಅವಮಾನಿಸಿದ” ಆರೋಪದ ಮೇಲೆ ಫರೂಕಿ ಒಂದು ತಿಂಗಳ ಕಾಲ ಜೈಲು ವಾಸ ಅನುಭವಿಸಿದ್ದರು. ಬೆಂಗಳೂರು ಕಾರ್ಯಕ್ರಮವನ್ನು ರದ್ದುಗೊಳಿಸಿದ ನಂತರ  ಇನ್‌ಸ್ಟಾಗ್ರಾಮ್​​ನಲ್ಲಿ ಪೋಸ್ಟ್ ಮಾಡಿದ ಫರೂಕಿ , “ನಫ್ರತ್ ಜೀತ್ ಗಯೀ ಆರ್ಟಿಸ್ಟ್ ಹಾರ್ ಗಯಾ (ದ್ವೇಷ ಗೆದ್ದಿದೆ  ಕಲಾವಿದ ಸೋತ) I’m done, goodbye. Injustice.” ಎಂದು ಬರೆದಿದ್ದಾರೆ. 

ಕಾರ್ಯಕ್ರಮ ರದ್ದುಗೊಳಿಸಲು ಮನವಿ ಮಾಡಿದ ಬೆಂಗಳೂರು ಪೊಲೀಸ್ ಸ್ಟ್ಯಾಂಡ್‌ಅಪ್ ಕಾಮಿಡಿಯನ್ ಮುನಾವರ್ ಫರೂಕಿ ಅವರನ್ನು ‘ವಿವಾದಾತ್ಮಕ ವ್ಯಕ್ತಿ’ ಎಂದು ಕರೆದ ಬೆಂಗಳೂರು ಪೊಲೀಸರು ಭಾನುವಾರ ಕರ್ನಾಟಕದ ರಾಜಧಾನಿಯಲ್ಲಿ ನಡೆಯಬೇಕಿದ್ದ ಅವರ ಕಾರ್ಯಕ್ರಮವನ್ನು ರದ್ದುಗೊಳಿಸುವಂತೆ ಒತ್ತಾಯಿಸಿದ್ದಾರೆ.

ಕಾರ್ಯಕ್ರಮದ ಆಯೋಜಕರಾದ ಕರ್ಟನ್ ಕಾಲ್‌ಗೆ ಅಶೋಕ್ ನಗರ ಪೊಲೀಸರು ಶನಿವಾರ ಪತ್ರ ಕಳುಹಿಸಿದ್ದಾರೆ. “ಅವರ (ಮುನಾವರ್ ಫರೂಕಿ) ವಿರುದ್ಧ ಹಲವಾರು ರಾಜ್ಯಗಳಲ್ಲಿ ಪ್ರಕರಣಗಳು ದಾಖಲಾಗಿವೆ ಎಂದು ತಿಳಿದುಬಂದಿದೆ. ಹಲವಾರು ಸಂಸ್ಥೆಗಳು ಈ ಸ್ಟ್ಯಾಂಡ್‌ಅಪ್ ಕಾಮಿಡಿ ಶೋವನ್ನು ವಿರೋಧಿಸುತ್ತವೆ. ಇದು ಅವ್ಯವಸ್ಥೆಯನ್ನು ಉಂಟುಮಾಡಬಹುದು ಮತ್ತು ಸಾರ್ವಜನಿಕ ಶಾಂತಿ ಮತ್ತು ಸೌಹಾರ್ದತೆಗೆ ಭಂಗ ತರಬಹುದು. ಇದು ಕಾನೂನು ಮತ್ತು ಸುವ್ಯವಸ್ಥೆ ಸಮಸ್ಯೆಗಳಿಗೆ ಕಾರಣವಾಗಬಹುದು ಎಂದು ನಂಬಲರ್ಹವಾದ ಮಾಹಿತಿಯಿದೆ ಎಂದು ಪತ್ರದಲ್ಲಿ ಹೇಳಿದೆ.

ಮುನಾವರ್ ಫರೂಕಿ ಅವರು ಗುಡ್ ಶೆಫರ್ಡ್ ಸಭಾಂಗಣದಲ್ಲಿ ಸಂಜೆ 5 ಗಂಟೆಗೆ ‘ಡೋಂಗ್ರಿ ಟು ನೋವೇರ್’ (Dongri to Nowhere) ಎಂಬ ಶೀರ್ಷಿಕೆಯೊಂದಿಗೆ ಪ್ರದರ್ಶನ ನೀಡಲಿದ್ದರು. ಕಾರ್ಯಕ್ರಮದ ಸಂಘಟಕರಲ್ಲಿ ಒಬ್ಬರಾದ ಸಿದ್ಧಾರ್ಥ್ ದಾಸ್ ಪೊಲೀಸರೊದಿಗೆ ಮಾತನಾಡಿದ್ದು ಮತ್ತು ಪರಿಸ್ಥಿತಿಯನ್ನು ಚರ್ಚಿಸುತ್ತಿದ್ದಾರೆ ಎಂದು ಹೇಳಿರುವುದಾಗಿ ದಿ ಇಂಡಿಯನ್ ಎಕ್ಸ್‌ಪ್ರೆಸ್‌ ವರದಿ ಮಾಡಿತ್ತು.

“ಮುನಾವರ್ ಫರೂಕಿ ವಿವಾದಾತ್ಮಕ ವ್ಯಕ್ತಿ ಮತ್ತು ಅನೇಕ ರಾಜ್ಯಗಳು ಅವರ ಪ್ರದರ್ಶನಗಳನ್ನು ನಿಷೇಧಿಸಿವೆ. ನಿರ್ದಿಷ್ಟ ಧರ್ಮದ ವಿರುದ್ಧ ವಿವಾದಾತ್ಮಕ ಹೇಳಿಕೆ ನೀಡಿದ್ದಕ್ಕಾಗಿ ಅವರನ್ನು ನಿಷೇಧಿಸಲಾಗಿದೆ. ಆಯೋಜಕರು ನವೆಂಬರ್ 15 ರಂದು ಪ್ರದರ್ಶನಕ್ಕಾಗಿ ಪೊಲೀಸ್ ರಕ್ಷಣೆ ಕೋರಿ ಪತ್ರವನ್ನು ನೀಡಿದರು ನಾವು ಅದನ್ನು ರದ್ದುಗೊಳಿಸಿದ್ದೇವೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಕಾರ್ಯಕ್ರಮವನ್ನು ರದ್ದುಗೊಳಿಸುವಂತೆ ಪೊಲೀಸರು ಸಂಘಟಕರ ಮೇಲೆ ಒತ್ತಡ ಹೇರುತ್ತಿದ್ದಾರೆ ಮತ್ತು ಇದು ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯ ಮತ್ತು ಮಾಹಿತಿ ಪಡೆಯುವ ನಾಗರಿಕರ ಹಕ್ಕನ್ನು ಉಲ್ಲಂಘಿಸುತ್ತದೆ ಎಂದು ಕಾರ್ಯಕರ್ತ ವಿನಯ್ ಶ್ರೀನಿವಾಸ್ ಹೇಳಿದ್ದಾರೆ.

ಇದನ್ನೂ ಓದಿ: ನನಗೆ ದಿನಕ್ಕೆ 50 ಬೆದರಿಕೆ ಕರೆಗಳು ಬರುತ್ತವೆ, ಜನರು ಕರೆ ಮಾಡಿ ನಿಂದಿಸುತ್ತಾರೆ: ಮುನಾವರ್ ಫರೂಕಿ

Published On - 1:56 pm, Sun, 28 November 21