AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Crime News: ಪೊಲೀಸರು ಅಪಘಾತವೆಂದು ನಂಬಿದ್ದ ಪ್ರಕರಣಕ್ಕೆ ಶಾಕಿಂಗ್ ಟ್ವಿಸ್ಟ್​; ಉದ್ಯಮಿಯ ಜೀವ ತೆಗೆದ ಗೆಳೆಯ !

ಪ್ರಕರಣಕ್ಕೆ ಟ್ವಿಸ್ಟ್​ ಸಿಕ್ಕಿದ್ದು ಮೃತ ಉದ್ಯಮಿಯ ಮರೋಣತ್ತರ ಪರೀಕ್ಷೆಯ ನಂತರ. ವರದಿ ಬಂದ ಬಳಿಕ ಪೊಲೀಸರೇ ಶಾಕ್​ ಆಗಿದ್ದಾರೆ. ಸದ್ಯ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.

Crime News: ಪೊಲೀಸರು ಅಪಘಾತವೆಂದು ನಂಬಿದ್ದ ಪ್ರಕರಣಕ್ಕೆ ಶಾಕಿಂಗ್ ಟ್ವಿಸ್ಟ್​; ಉದ್ಯಮಿಯ ಜೀವ ತೆಗೆದ ಗೆಳೆಯ !
ಪ್ರಾತಿನಿಧಿಕ ಚಿತ್ರ
TV9 Web
| Edited By: |

Updated on: Nov 28, 2021 | 4:10 PM

Share

ಲಖನೌ: 15ದಿನಗಳ ಹಿಂದೆ ಉತ್ತರ ಪ್ರದೇಶದ ಅಂಬೇಡ್ಕರ್​ನಗರ ಜಿಲ್ಲೆಯಲ್ಲಿ ಪುಂಥಾರ್​ ಹೆದ್ದಾರಿಯಲ್ಲಿ, ಕಾರೊಂದು ನಿಂತಿದ್ದ ಟ್ರಕ್​​ಗೆ​ ಡಿಕ್ಕಿ ಹೊಡೆದು ಕಾರಿನಲ್ಲಿದ್ದ ವ್ಯಕ್ತಿ ಮೃತಪಟ್ಟಿದ್ದ ಘಟನೆ ನಡೆದಿತ್ತು. ಕಾರು ಕೂಡ ಸಿಕ್ಕಾಪಟ್ಟೆ ನುಜ್ಜುಗುಜ್ಜಾಗಿತ್ತು. ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೆತ್ತಿಕೊಂಡ ಪೊಲೀಸರು, ಮೃತ ವ್ಯಕ್ತಿಯನ್ನು ಉದ್ಯಮಿ ಸಂಜಯ್​ ವರ್ಮಾ ಎಂದು ಗುರುತಿಸಿದ್ದರು. ಸಂಜಯ್ ವರ್ಮಾ ಒಬ್ಬರೇ ಕಾರಿನಲ್ಲಿ ಇದ್ದರು. ಮೊದಲು ಪೊಲೀಸರು, ಸಂಜಯ್​ ವರ್ಮಾ ಕುಡಿದು ಕಾರು ಚಾಲನೆ ಮಾಡಿದ ಪರಿಣಾಮ ಟ್ರಕ್​ಗೆ ಡಿಕ್ಕಿ ಹೊಡೆದು ಮೃತಪಟ್ಟಿದ್ದಾನೆ ಎಂದೇ ಭಾವಿಸಿದ್ದರು. ಆದರೆ ಈ ಪ್ರಕರಣಕ್ಕೀಗ ಊಹಿಸಲು ಸಾಧ್ಯವಾಗದ ಟ್ವಿಸ್ಟ್​ ಸಿಕ್ಕಿದೆ. ಇದೊಂದು ಕೊಲೆ ಎಂದು ಪಕ್ಕಾ ಆಗಿದೆ. 

ಪ್ರಕರಣಕ್ಕೆ ಟ್ವಿಸ್ಟ್​ ಸಿಕ್ಕಿದ್ದು ಮೃತ ಉದ್ಯಮಿಯ ಮರೋಣತ್ತರ ಪರೀಕ್ಷೆಯ ನಂತರ. ವರದಿ ಬಂದ ಬಳಿಕ ಪೊಲೀಸರೇ ಶಾಕ್​ ಆಗಿದ್ದಾರೆ. ಈತ ಸತ್ತಿದ್ದು ಉಸಿರುಗಟ್ಟಿಸುವಿಕೆಯ ಕಾರಣದಿಂದ. ಕತ್ತು ಹಿಸುಕಿ ಕೊಲೆ ಮಾಡಲಾಗಿದೆ ಎಂದು ಪೋಸ್ಟ್​ಮಾರ್ಟಮ್​ ರಿಪೋರ್ಟ್ ಬಂತು. ಈ ವರದಿ ಆಧರಿಸಿ ತನಿಖೆ ಶುರು ಮಾಡಿದ ಪೊಲೀಸರು ಸದ್ಯ ಸಂಜಯ್​ನ ಆತ್ಮೀಯ ಸ್ನೇಹಿತನಾಗಿದ್ದ ಪ್ರವೀಣ್​ ಪಟೇಲ್​ ಮತ್ತು ಆತನ ಸಹಾಯಕನನ್ನು ಬಂಧಿಸಿದ್ದಾರೆ. ಹೌದು ತಾವೇ ಸಂಜಯ್​​ನನ್ನು ಕೊಲೆ ಮಾಡಿದ್ದೇವೆ ಎಂದು ಅವರಿಬ್ಬರೂ ಒಪ್ಪಿಕೊಂಡಿದ್ದಾರೆ.

ಭಯಂಕರ ಸಂಚು ! ಉದ್ಯಮಿ ಸಂಜಯ್ ತನ್ನ ಪತ್ನಿಯೊಂದಿಗೆ ಅಫೇರ್​ ಇಟ್ಟುಕೊಂಡಿದ್ದ ಎಂಬ ಅನುಮಾನ ನನಗೆ ಕಾಡುತ್ತಿತ್ತು. ಹಾಗಾಗಿಯೇ ಹತ್ಯೆ ಮಾಡಿದ್ದೇನೆ ಎಂದು ಪ್ರವೀಣ್​ ಹೇಳಿಕೊಂಡಿದ್ದಾಗಿ ಅಂಬೇಡ್ಕರ್ ನಗರ ಎಸ್​ಪಿ ಅಲೋಕ್​ ಪ್ರಿಯದರ್ಶಿ ಹೇಳಿದ್ದಾರೆ. ಪ್ರವೀಣ್​ಗೆ ತನ್ನ ಪತ್ನಿ ಸಂಜಯ್ ಜತೆ ಅಕ್ರಮ ಸಂಬಂಧ ಇಟ್ಟುಕೊಂಡಿದ್ದಾಳೆ ಎಂಬ ಅನುಮಾನವಿತ್ತು. ಹಾಗಾಗಿ ಆತನನ್ನು ಕೊಲ್ಲಲು ತನ್ನ ಸಹಾಯಕ ಅಜಿತ್​​ ನೆರವು ಕೋರಿದ. ಇಬ್ಬರೂ ಸೇರಿ ಪ್ಲ್ಯಾನ್​ ಮಾಡಿದರು. ಅದರಂತೆ ಈಗೊಂದು 15 ದಿನಗಳ ಹಿಂದೆ ಪ್ರವೀಣ್​ ಪಟೇಲ್​ ತಮ್ಮ ಮನೆಯಲ್ಲಿ ಪಾರ್ಟಿ ಆಯೋಜಿಸಿ ಸಂಜಯ್​​ಗೆ ಆಹ್ವಾನ ನೀಡಿದ. ಸಂಜಯ್​ ಕೂಡ ಪಾರ್ಟಿಗೆ ಬಂದು, ಮದ್ಯಪಾನ ಮಾಡಿದ. ಮದ್ಯದ ಅಮಲಿನಲ್ಲಿದ್ದ ಸಂಜಯ್​​ನ ಕತ್ತನ್ನು ಹಗ್ಗದಿಂದ ಹಿಸುಕಿದ್ದು ಅಜಿತ್​. ಹೀಗೆ ಸತ್ತ ಸಂಜಯ್​​ನನ್ನು ಕಾರಿನಲ್ಲಿ ಹೈವೇಗೆ ಕರೆದುಕೊಂಡು ಬಂದು, ಒಂದು ಜಾಗದಲ್ಲಿ ನಿಲ್ಲಿಸಿದ ಅಜಿತ್​ ತಾನು ಡ್ರೈವರ್ ಸೀಟಿಂದ ಇಳಿದ. ಬಳಿಕ ಸಂಜಯ್​ನನ್ನು ಡ್ರೈವರ್​ ಸೀಟ್​​ನಲ್ಲಿ ಕೂರಿಸಿ ಒಂದೇ ಸಲ ಜೋರಾಗಿ ಎಕ್ಸ್​​ಲೇಟರ್​ ಕೊಟ್ಟ. ಆಗ ಆ ಕಾರು ನಿಯಂತ್ರಣ ತಪ್ಪಿ ಹೋಗಿ ಟ್ರಕ್​ಗೆ ಗುದ್ದಿದೆ. ಗುದ್ದಿದ ರಭಸಕ್ಕೆ ಕಾರು ನುಜ್ಜುಗುಜ್ಜಾಗಿದೆ. ಮೇಲ್ನೋಟಕ್ಕೆ ನೋಡಿದರೆ ಇದು ಡ್ರಂಕ್​ ಆ್ಯಂಡ್ ಡ್ರೈವ್​ ಕೇಸ್​ ಎಂದೇ ಯಾರಿಗಾದರೂ ಅನ್ನಿಸುತ್ತದೆ. ಈಗ ಆರೋಪಿಗಳಿಬ್ಬರೂ ಸತ್ಯ ಒಪ್ಪಿಕೊಂಡಿದ್ದು, ಸದ್ಯ ಪೊಲೀಸ್​ ಕಸ್ಟಡಿಯಲ್ಲಿದ್ದಾರೆ.

ಇದನ್ನೂ ಓದಿ: ಹೊಸ ತಳಿಯ ಕೊರೊನಾ ಆತಂಕ ಹಿನ್ನೆಲೆ; ಆರೋಗ್ಯ ಇಲಾಖೆ, ತಾಂತ್ರಿಕ ಸಲಹಾ ಸಮಿತಿ ಜೊತೆ ಸಚಿವ ಸುಧಾಕರ್ ಸಭೆ

Follow Us
ಬೆಂಗಳೂರಿನಲ್ಲಿ 3 ವರ್ಷಗಳಲ್ಲಿ 19 ಸಾವಿರ ಮರಗಳಿಗೆ ಕೊಡಲಿ!
ಬೆಂಗಳೂರಿನಲ್ಲಿ 3 ವರ್ಷಗಳಲ್ಲಿ 19 ಸಾವಿರ ಮರಗಳಿಗೆ ಕೊಡಲಿ!
ಇಂದು ಆಷಾಢ ಅಮಾವಾಸ್ಯೆ: 12 ರಾಶಿಗಳ ದಿನ ಭವಿಷ್ಯ ಇಲ್ಲಿದೆ
ಇಂದು ಆಷಾಢ ಅಮಾವಾಸ್ಯೆ: 12 ರಾಶಿಗಳ ದಿನ ಭವಿಷ್ಯ ಇಲ್ಲಿದೆ
ಇರಾನ್ ಜಲಾಂತರ್ಗಾಮಿ ಕೇಂದ್ರದ ಮೇಲೆ ಅಮೆರಿಕದಿಂದ ಕಡಲ ಡ್ರೋನ್ ದಾಳಿ
ಇರಾನ್ ಜಲಾಂತರ್ಗಾಮಿ ಕೇಂದ್ರದ ಮೇಲೆ ಅಮೆರಿಕದಿಂದ ಕಡಲ ಡ್ರೋನ್ ದಾಳಿ
ಮೈದುಂಬಿದ ದೂದ್‌ಸಾಗರ ಜಲಪಾತ: ಫಾಲ್ಸ್​​ ಸೌಂದರ್ಯಕ್ಕೆ ಪ್ರವಾಸಿಗರು ಫಿದಾ
ಮೈದುಂಬಿದ ದೂದ್‌ಸಾಗರ ಜಲಪಾತ: ಫಾಲ್ಸ್​​ ಸೌಂದರ್ಯಕ್ಕೆ ಪ್ರವಾಸಿಗರು ಫಿದಾ
ಸಂಪುಟ ವಿಸ್ತರಣೆ ಚರ್ಚೆ: ಜು 17ರೊಳಗೆ ಸಚಿವಾಕಾಂಕ್ಷಿಗಳ ಪಟ್ಟಿ ಫೈನಲ್​?
ಸಂಪುಟ ವಿಸ್ತರಣೆ ಚರ್ಚೆ: ಜು 17ರೊಳಗೆ ಸಚಿವಾಕಾಂಕ್ಷಿಗಳ ಪಟ್ಟಿ ಫೈನಲ್​?
ಕಾವೇರಿ ನದಿಯಲ್ಲಿ ಎಸ್. ಜಾನಕಿ ಅಸ್ಥಿ ವಿಸರ್ಜನೆ ಮಾಡಿದ ಕುಟುಂಬಸ್ಥರು
ಕಾವೇರಿ ನದಿಯಲ್ಲಿ ಎಸ್. ಜಾನಕಿ ಅಸ್ಥಿ ವಿಸರ್ಜನೆ ಮಾಡಿದ ಕುಟುಂಬಸ್ಥರು
ಕುಡಿಯುವ ನೀರಿನ ಯೋಜನೆ ಕಾಮಗಾರಿ ವಿಳಂಬಕ್ಕೆ ಸಚಿವ ಯತೀಂದ್ರ ಗರಂ
ಕುಡಿಯುವ ನೀರಿನ ಯೋಜನೆ ಕಾಮಗಾರಿ ವಿಳಂಬಕ್ಕೆ ಸಚಿವ ಯತೀಂದ್ರ ಗರಂ
ಬಿಡದಿ ಟೌನ್​ಶಿಪ್ ವಿವಾದ: ಶಾಂತಿಯುತವಾಗಿ ಪ್ರತಿಭಟಿಸಿ; ಹೆಚ್​ಡಿಕೆ ಮನವಿ
ಬಿಡದಿ ಟೌನ್​ಶಿಪ್ ವಿವಾದ: ಶಾಂತಿಯುತವಾಗಿ ಪ್ರತಿಭಟಿಸಿ; ಹೆಚ್​ಡಿಕೆ ಮನವಿ
GBA ಅಸ್ತಿತ್ವಕ್ಕೆ ಬಂದರೂ ನಗರದಲ್ಲಿ ರಾರಾಜಿಸುತ್ತಿವೆ  BBMP ನಾಮಫಲಕಗಳು!
GBA ಅಸ್ತಿತ್ವಕ್ಕೆ ಬಂದರೂ ನಗರದಲ್ಲಿ ರಾರಾಜಿಸುತ್ತಿವೆ  BBMP ನಾಮಫಲಕಗಳು!
ವಿಪಕ್ಷ ನಾಯಕ ಆರ್​. ಅಶೋಕ್​​ಗೆ ರೈತರಿಂದ ಘೇರಾವ್​​
ವಿಪಕ್ಷ ನಾಯಕ ಆರ್​. ಅಶೋಕ್​​ಗೆ ರೈತರಿಂದ ಘೇರಾವ್​​