ಜಾತ್ಯತೀತ ಹೆಸರಿಟ್ಟುಕೊಂಡು ಕೋಮುವಾದಿಗಳ ಜೊತೆ ಮೈತ್ರಿ: ಜೆಡಿಎಸ್​ ವಿರುದ್ಧ ಸಿಎಂ ಸಿದ್ದರಾಮಯ್ಯ ವಾಗ್ದಾಳಿ

| Updated By: ವಿವೇಕ ಬಿರಾದಾರ

Updated on: Sep 09, 2023 | 2:46 PM

ನಾನು ಜೆಡಿಎಸ್ ಪಕ್ಷವನ್ನು ಬಿಜೆಪಿ ಬಿ ಟೀಂ ಅಂತ ಕರೆಯುತ್ತಿದ್ದೆ. ಈಗ ಜೆಡಿಎಸ್​ ಬಿಜೆಪಿಯ ಬಿ ಟೀಂ ಅನ್ನೋದು ಸಾಬೀತಾಗಿದೆ. ಅಧಿಕಾರಕ್ಕಾಗಿ ಯಾರ ಜೊತೆಯಾದರೂ ಜೆಡಿಎಸ್​ನವರು ಸೇರಿಕೊಳ್ಳುತ್ತಾರೆ ಎಂದು ಹುಬ್ಬಳ್ಳಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಾಗ್ದಾಳಿ ಮಾಡಿದರು.

ಜಾತ್ಯತೀತ ಹೆಸರಿಟ್ಟುಕೊಂಡು ಕೋಮುವಾದಿಗಳ ಜೊತೆ ಮೈತ್ರಿ: ಜೆಡಿಎಸ್​ ವಿರುದ್ಧ ಸಿಎಂ ಸಿದ್ದರಾಮಯ್ಯ ವಾಗ್ದಾಳಿ
ಮುಖ್ಯಮಂತ್ರಿ ಸಿದ್ದರಾಮಯ್ಯ
Follow us on

ಹುಬ್ಬಳ್ಳಿ: ಲೋಕಸಭೆ ಚುನಾವಣೆಗೆ ಜೆಡಿಎಸ್ (JDS)​, ಬಿಜೆಪಿ (BJP) ಮೈತ್ರಿ ಸಂಬಂಧಿಸಿದಂತೆ ಜಾತ್ಯತೀತ ಹೆಸರಿಟ್ಟುಕೊಂಡು ಕೋಮುವಾದಿಗಳ ಜೊತೆ ಮೈತ್ರಿ ಮಾಡಿಕೊಂಡಿದ್ದಾರೆ. ಹೆಚ್​ ಡಿ ದೇವೇಗೌಡರು (HD Devegowda) ಯಾವ ಪಕ್ಷದ ಜೊತೆಗೂ ಮೈತ್ರಿ ಇಲ್ಲ ಎಂದಿದ್ದರು. ಆದರೆ ಇದೀಗ ಬಿಜೆಪಿ ಜೊತೆ ಸೇರಿ‌ ಮೈತ್ರಿ ಮಾಡಿಕೊಳ್ಳುತ್ತಿದ್ದಾರೆ. ಅಧಿಕಾರಕ್ಕಾಗಿ ಯಾರ ಜೊತೆಯಾದರೂ ಜೆಡಿಎಸ್​ನವರು ಸೇರಿಕೊಳ್ಳುತ್ತಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಅವರು ಜೆಡಿಎಸ್​ ವಿರುದ್ಧ ವಾಗ್ದಾಳಿ ಮಾಡಿದರು.

ಹುಬ್ಬಳ್ಳಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು ನಾನು ಜೆಡಿಎಸ್ ಪಕ್ಷವನ್ನು ಬಿಜೆಪಿ ಬಿ ಟೀಂ ಅಂತ ಕರೆಯುತ್ತಿದ್ದೆ. ಈಗ ಜೆಡಿಎಸ್​ ಬಿಜೆಪಿಯ ಬಿ ಟೀಂ ಅನ್ನೋದು ಸಾಬೀತಾಗಿದೆ ಎಂದು ವಾಗ್ದಾಳಿ ಮಾಡಿದರು.

ಇನ್ನು ಮಹದಾಯಿ ಯೋಜನೆ ವಿಚಾರವಾಗಿ ಮಾತನಾಡಿದ ಅವರು ಕೇಂದ್ರ ಸರ್ಕಾರ, ಅರಣ್ಯ ಮತ್ತು ಎನ್ವಿರಾನಮೆಂಟ್ ಕ್ಲಿಯರೆನ್ಸ್ ಕಳಿಸಿಲ್ಲ. ಮೊದಲು ಕೇಂದ್ರ ಸರ್ಕಾರ ಕ್ಲಿಯರೆನ್ಸ್ ಕಳಿಸಲಿ. ನಾವು ಪ್ರಧಾನಿಯವರಿಗೆ ಸಮಯ ಕೇಳಿದ್ದೇವೆ. ಮಹದಾಯಿ, ಕೃಷ್ಣಾ ,‌ಕಾವೇರಿ ‌ಸೇರಿದಂತೆ ಹಲವು ವಿಚಾರದ ಬಗ್ಗೆ ಹತ್ತು ದಿನಗಳ ಹಿಂದೆ ಪ್ರಧಾನಿ ಅವರಿಗೆ ಪತ್ರ ಬರೆದಿದ್ದೇನೆ. ನಿಯೋಗದೊಂದಿಗೆ ಬರುತ್ತೇವೆ ಅಂತ ತಿಳಿಸಿದ್ದೇನೆ. ಆದರೆ ಈವರೆಗೂ ಅವರಿಂದ ಉತ್ತರ ಬಂದಿಲ್ಲ. ಬರಗಾಲ ಘೋಷಣೆ ಮಾಡುತ್ತೇವೆ. ಆದರೆ ಕೇಂದ್ರ ಸರ್ಕಾರದ ನೆರವು ಬೇಕು. ನಿಯಮ ಬದಲಾವಣೆ ಮಾಡಿ ಅಂತ ಪತ್ರ ಬರೆದಿದ್ದೇನೆ. ಅದನ್ನು ಇದುವರೆಗೂ ಮಾಡಿಲ್ಲ ಎಂದು ತಿಳಿಸಿದರು.

ಅಗಸ್ಟ್ ನಲ್ಲಿ ಸ್ವಲ್ಪ ಮಳೆ ಕೊರತೆಯಾಯ್ತು. ಪಂಪಸೆಟ್ ಬಳಕೆ ಹೆಚ್ಚಾಯ್ತು, ಹೀಗಾಗಿ ವಿದ್ಯುತ್ ಹೆಚ್ಚು ಬಳಕೆ ಹೆಚ್ಚಾಗಿದೆ. ನಾವು ವಿದ್ಯುತ್ ಖರೀದಿ ಮಾಡಿ ಪೂರೈಕೆ ಮಾಡಬೇಕಾಯ್ತು. ರೈತರಿಗೆ ಸ್ವಲ್ಪ ಸಮಸ್ಯೆ ಆಗಿದೆ ಎಂದರು.

ಇದನ್ನೂ ಓದಿ: ಬಿಜೆಪಿ-ಜೆಡಿಎಸ್ ಮೈತ್ರಿ: ಕಾಂಗ್ರೆಸ್​ಗೆ ನಡುಕ ಶುರು ಎಂದ ಹೆಚ್​ಡಿ ಕುಮಾರಸ್ವಾಮಿ

ರಾಷ್ಟ್ರ ರಾಜಕರಣ ವಿಚಾರವಾಗಿ ಮಾತನಾಡಿದ ಅವರು ಕೆಲವರು ಅವರ ಅಭಿಪ್ರಾಯ ಹೇಳುತ್ತಾರೆ. ನಾನು ರಾಷ್ಟ್ರ ರಾಜಕಾರಣಕ್ಕೆ ಹೋಗಲ್ಲ. ಮೋದಿ ಅವರು ನೇರವಾಗಿ ಮುಖ್ಯಮಂತ್ರಿ ಆದರು, ಪ್ರಧಾನ ಮಂತ್ರಿ ಆದರು. ಪ್ರಜಾಪ್ರಭುತ್ವದಲ್ಲಿ ಏನಾಬೇಕಾದರೂ ಆಗಬಹುದು. ನಾನು ಮೋದಿ ಅವರನ್ನು ಬೈಯಲ್ಲ. ಸುಮ್ಮ ಸುಮ್ನೆ ಟೀಕೆ ಮಾಡಲ್ಲ. ಸಮಸ್ಯೆ ಮೇಲೆ ನಾನು ಮಾತಾಡುತ್ತೇನೆ ಎಂದು ಹೇಳಿದರು.

ನಿನ್ನೆ ಕ್ಯಾಬಿನೆಟ್ ನಲ್ಲಿ ಒಂದು ತೀರ್ಮಾನ ಆಗಿದೆ. ವಿದ್ಯಾವಿಕಾಸ ಯೋಜನೆಯಲ್ಲಿ ಕಳಪೆ ಮಟ್ಟದ ಬಟ್ಟೆ ಕೊಟ್ಟಿದ್ದರು. ಅದರ ತನಿಖೆ ಮಾಡುತ್ತಿದ್ದೇವೆ. ಎಮ್​ಡಿ ಸಸ್ಪೆಂಡ್ ಮಾಡಿದ್ದೇವೆ. ಕಳಪೆ ಬಟ್ಟೆಯ ಹಣ ವಾಪಸ್ ಪಡೆಯಲು ಸೂಚನೆ ಕೊಟ್ಟಿದ್ದೇವೆ. ಹಿಜಾಬ್ ವಿಚಾರ ಕೋರ್ಟ್​ನಲ್ಲಿದೆ ಎಂದು ಹೇಳಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ