ಗೃಹ ಸಚಿವರ ಮನೆಗೆ ಸಿಎಂ ಸಿದ್ದರಾಮಯ್ಯ ದಿಢೀರ್ ಭೇಟಿ​; ಕುತೂಹಲ ಕೆರಳಿಸಿರುವ ಬೆಳವಣಿಗೆ

| Updated By: ಕಿರಣ್ ಹನುಮಂತ್​ ಮಾದಾರ್

Updated on: Oct 27, 2023 | 11:02 PM

ನಿನ್ನೆ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಜೊತೆ ಸಿಎಂ ಸಿದ್ದರಾಮಯ್ಯ ಸಂಧಾನ ಮಾಡಿಸಿದ್ದರು. ಇಂದು ಗೃಹ ಸಚಿವರ ಮನೆಯಲ್ಲಿ ಔತಣಕೂಟ ಏರ್ಪಡಿಸಿ. ಈ ಮೂಲಕವೇ ರಾಜಕೀಯ ವಿಚಾರಗಳ ಚರ್ಚೆ ನಡೆಯಲಿದದು, ತಡರಾತ್ರಿ ತನಕ ಮೀಟಿಂಗ್ ನಡೆಯುವ ಸಾಧ್ಯತೆಯಿದೆ.

ಗೃಹ ಸಚಿವರ ಮನೆಗೆ ಸಿಎಂ ಸಿದ್ದರಾಮಯ್ಯ ದಿಢೀರ್ ಭೇಟಿ​; ಕುತೂಹಲ ಕೆರಳಿಸಿರುವ ಬೆಳವಣಿಗೆ
ಸಿದ್ದರಾಮಯ್ಯ, ಪರಮೇಶ್ವರ್​
Follow us on

ಬೆಂಗಳೂರು, ಅ.27: ರಾಜ್ಯದ ಹುಲಿ ಉಗುರು ಪ್ರಕರಣದ ಕಾವು ಜೋರಾಗಿದೆ. ಇದರ ಬೆನ್ನಲ್ಲೇ ಇದೀಗ ಗೃಹ ಸಚಿವ ಪರಮೇಶ್ವರ್ ನಿವಾಸಕ್ಕೆ ಸಿಎಂ ಸಿದ್ದರಾಮಯ್ಯ (Siddaramaiah) ಅವರು ದಿಢೀರ್ ಭೇಟಿ ನೀಡಿದ್ದಾರೆ. ಹೌದು, ಬೆಂಗಳೂರಿನ ಸದಾಶಿವನಗರದಲ್ಲಿರುವ ಪರಮೇಶ್ವರ್(G Parameshwara)ನಿವಾಸದಲ್ಲಿ ಕಳೆದ ಒಂದೂವರೆ ತಾಸಿನಿಂದಲೂ ಸಮಾಲೋಚನೆ ನಡೆಯುತ್ತಿದೆ. ಇಂದು(ಅ.27) ಮಧ್ಯಾಹ್ನ ಸಿಎಂ ಜೊತೆ ಡಿಸಿಎಂ ಡಿಕೆ ಶಿವಕುಮಾರ್​  2 ಗಂಟೆಗೂ ಹೆಚ್ಚು ಕಾಲ ಚರ್ಚೆ ನಡೆಸಿದ್ದರು. ಹೀಗಾಗಿ ಈ ಎಲ್ಲಾ ಬೆಳವಣಿಗೆ ಭಾರಿ ಕುತೂಹಲ ಕೆರಳಿಸಿದೆ.

ಗೃಹ ಸಚಿವ ಪರಮೇಶ್ವರ್ ಮನೆಯಲ್ಲಿ ಡಿನ್ನರ್ ಅರೇಂಜ್ಮೆಂಟ್

ಇನ್ನು ಸಿಎಂ ಬರುವುದಕ್ಕೂ ಮುಂಚಿತವಾಗಿ ಗೃಹ ಸಚಿವರ ಮನೆಯಲ್ಲಿ ಸಚಿವ ಸತೀಶ್ ಜಾರಕಿಹೊಳಿ ಇದ್ದರು. ಸಿಎಂ ಸಿದ್ದರಾಮಯ್ಯ ಬಂದ ಬಳಿಕ ಒಟ್ಟಿಗೆ ಭೋಜನ ಮಾಡಿಕೊಂಡೆ ರಾಜಕೀಯದ ಹಲವು ವಿಚಾರಗಳ ಕುರಿತು ಚರ್ಚೆ ನಡೆಸಿದ್ದಾರೆ. ಇತ್ತೀಚಿಗೆ ಡಿಕೆ ಶಿವಕುಮಾರ್ ಹಾಗೂ ಲಕ್ಷ್ಮೀ ಹೆಬ್ಬಾಳ್ಕರ್ ಮೇಲೆ ಜಾರಕಿಹೊಳಿ ಅಸಮಧಾನಗೊಂಡಿದ್ದರು. ಬಳಿಕ ಶಾಸಕರ ಮೂಲಕ ಶಕ್ತಿ ಪ್ರದರ್ಶನಕ್ಕೆ ಸತೀಶ್ ಜಾರಕಿಹೊಳಿ ಮುಂದಾಗಿದ್ದರು.

ಇದನ್ನೂ ಓದಿ:‘ಕಲೆಕ್ಷನ್ ಮಾಸ್ಟರ್’ಎಂದು ಸಿಎಂ ಸಿದ್ದರಾಮಯ್ಯ ಫೋಟೋ ಪೋಸ್ಟ್: ಶಾಸಕ ಹರೀಶ್ ಪೂಂಜ ವಿರುದ್ಧ FIR

ಕೂತುಹಲ ಮೂಡಿಸಿದ ಸಿಎಂ ಬಣದ ರಾಜಕೀಯ ನಡೆ

ನಿನ್ನೆ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಜೊತೆ ಸಿಎಂ ಸಿದ್ದರಾಮಯ್ಯ ಸಂಧಾನ ಮಾಡಿಸಿದ್ದರು. ಇಂದು ಗೃಹ ಸಚಿವರ ಮನೆಯಲ್ಲಿ ಔತಣಕೂಟ ಏರ್ಪಡಿಸಿ. ಈ ಮೂಲಕವೇ ರಾಜಕೀಯ ವಿಚಾರಗಳ ಚರ್ಚೆ ನಡೆಯಲಿದದು, ತಡರಾತ್ರಿ ತನಕ ಮೀಟಿಂಗ್ ನಡೆಯುವ ಸಾಧ್ಯತೆಯಿದೆ. ಇನ್ನು ಈ ವೇಳೆ ಸಿಎಂ ಗೆ ಸಚಿವ ಮಹಾದೇವಪ್ಪ ಸಾಥ್​ ನೀಡಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ