ಚಿತ್ರದುರ್ಗದಲ್ಲಿ ಬಿಕೆ ಹರಿಪ್ರಸಾದ್ ಶಕ್ತಿ ಪ್ರದರ್ಶನ: ಹಿಂದುಳಿದ, ಅತಿ ಹಿಂದುಳಿದ ವರ್ಗಗಳ ಮುಖಂಡರ ಸಭೆ
ಕರ್ನಾಟಕದಲ್ಲಿ ಕಾಂತರಾಜ್ ನೇತೃತ್ವದ ಸಮಿತಿಯಿಂದ ಜನಗಣತಿ ವರದಿ ಸಿದ್ಧಪಡಿಸಲಾಗಿದೆ. ಆದರೆ, ಕಾರಣಾಂತರದಿಂದ ರಾಜ್ಯದಲ್ಲೂ ಜನಗಣತಿ ವರದಿ ಜಾರಿ ಆಗಿಲ್ಲ. ಎರಡೂ ವರದಿಗಳೂ ಶೀಘ್ರ ಜಾರಿಗೊಳಿಸಬೇಕು. ಲೋಪದೋಷಗಳು ಇದ್ದರೂ ತಿದ್ದುಪಡಿಗೊಳಿಸಿ ಜಾರಿಗೊಳಿಸಬೇಕು ಎಂದು ಬಿಕೆ ಹರಿಪ್ರಸಾದ್ ಆಗ್ರಹಿಸಿದ್ದಾರೆ.
ಚಿತ್ರದುರ್ಗ, ಅಕ್ಟೋಬರ್ 27: ಈ ಹಿಂದೆ ಸಿಎಂ ಸಿದ್ದರಾಮಯ್ಯ ವಿರುದ್ಧ ಮುನಿಸಿಕೊಂಡು ಹಿಂದುಳಿದ ವರ್ಗಗಳ ಸಭೆ ನಡೆಸಿ ಶಕ್ತಿ ಪ್ರದರ್ಶನ ಮಾಡಿದ್ದ ಕಾಂಗ್ರೆಸ್ (Congress) ಎಂಎಲ್ಸಿ ಬಿಕೆ ಹರಿಪ್ರಸಾದ್ (BK Hariprasad) ಇದೀಗ ಮತ್ತೆ ಅಲ್ಲಲ್ಲಿ ಸಭೆ ನಡೆಸುತ್ತಿದ್ದಾರೆ. ಅದರಂತೆ, ಚಿತ್ರದುರ್ಗದಲ್ಲಿ ಹಿಂದುಳಿದ, ಅತಿ ಹಿಂದುಳಿದ ವರ್ಗಗಳ ಮುಖಂಡರ ಸಭೆ ನಡೆಸಿದ್ದು, ರಾಜ್ಯ, ರಾಷ್ಟ್ರದಲ್ಲಿ ಜನಗಣತಿ & ಜನಗಣತಿ ವರದಿ ಜಾರಿಗೆ ಆಗ್ರಹಿಸಿದ್ದಾರೆ. ಹಿಂದುಳಿದ, ಅತಿ ಹಿಂದುಳಿದ ವರ್ಗಗಳ ಮುಖಂಡರ ಪೂರ್ವಭಾವಿ ಸಭೆ ನಡೆಸಿದ ಅವರು, ಜಿಲ್ಲೆಯಲ್ಲಿ ಹಿಂದುಳಿದ, ಅತಿ ಹಿಂದುಳಿದ ವರ್ಗಗಳ ಸಮಾವೇಶಕ್ಕೆ ಸಿದ್ಧತೆಯನ್ನೂ ನಡೆಸಿದ್ದಾರೆ.
ಬಳಿಕ ಮಾಧ್ಯಮ ಪ್ರತಿನಿಧಿಗಳನ್ನು ಉದ್ದೇಶಿಸಿ ಮಾತನಾಡಿದ ಅವರು, ಜನಗಣತಿ ಆಗಬೇಕೆಂದು ಈಗಾಗಲೇ ರಾಹುಲ್ ಗಾಂಧಿ ಹೇಳಿದ್ದಾರೆ. ಕಾಂಗ್ರೆಸ್ ವರ್ಕಿಂಗ್ ಕಮಿಟಿಯಿಂದಲೂ ಈ ಬಗ್ಗೆ ತೀರ್ಮಾನ ಆಗಿದೆ. ಸಣ್ಣ ಸಮುದಾಯದ ಜಾಗೃತಿಗಾಗಿ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ. ಜನಗಣತಿ ಬಗ್ಗೆ ಕೆಲವರು ತಪ್ಪು ವದಂತಿ ಹರಡುತ್ತಿದ್ದಾರೆ. ಜನಗಣತಿ ಎಂದರೆ ಮೀಸಲಾತಿ ಅಲ್ಲ, ಉದ್ಯೋಗ ಅವಕಾಶ ಅಲ್ಲ. ಕೇಂದ್ರ, ರಾಜ್ಯ ಸರ್ಕಾರಗಳು ಬಜೆಟ್ ಮಂಡಿಸುತ್ತವೆ. ಆಗ ಶಿಕ್ಷಣ, ಆರೋಗ್ಯ, ಉದ್ಯೋಗಕ್ಕೆ ಎಷ್ಟು ಹಣ ನೀಡಬೇಕೆಂಬುದು ತಿಳಿಯುತ್ತದೆ. 2011ರಲ್ಲಿ ಯುಪಿಎ ಸರ್ಕಾರದಿಂದ ಜನಗಣತಿ ಆಗಿತ್ತು. 2011ರ ಜನಗಣತಿ ವರದಿ ಜಾರಿಗೆ ಬರಲಿಲ್ಲ. 2017ರಲ್ಲಿ ಕೇಂದ್ರ ಬಿಜೆಪಿ ಸರ್ಕಾರ ಜನಗಣತಿ ವರದಿ ಬಹಿರಂಗ ಪಡಿಸಲ್ಲ ಎಂದು ಹೇಳಿತ್ತು ಎಂದು ಹೇಳಿದರು.
ಇದನ್ನೂ ಓದಿ: ಫ್ಯಾಷನ್ಗಾಗಿ ಹುಲಿ ಉಗುರು, ಇತರೆ ವಸ್ತು ಬಳಕೆ ಸರಿಯಲ್ಲ: ಎಂಎಲ್ಸಿ ಬಿಕೆ ಹರಿಪ್ರಸಾದ್
ಕರ್ನಾಟಕದಲ್ಲಿ ಕಾಂತರಾಜ್ ನೇತೃತ್ವದ ಸಮಿತಿಯಿಂದ ಜನಗಣತಿ ವರದಿ ಸಿದ್ಧಪಡಿಸಲಾಗಿದೆ. ಆದರೆ, ಕಾರಣಾಂತರದಿಂದ ರಾಜ್ಯದಲ್ಲೂ ಜನಗಣತಿ ವರದಿ ಜಾರಿ ಆಗಿಲ್ಲ. ಎರಡೂ ವರದಿಗಳೂ ಶೀಘ್ರ ಜಾರಿಗೊಳಿಸಬೇಕು. ಲೋಪದೋಷಗಳು ಇದ್ದರೂ ತಿದ್ದುಪಡಿಗೊಳಿಸಿ ಜಾರಿಗೊಳಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.
ಸಿದ್ದರಾಮಯ್ಯ ಸಂಪುಟದಲ್ಲಿ ಸಚಿವ ಸ್ಥಾನ ಸಿಗದಿರುವ ಬಗ್ಗೆ ಈ ಹಿಂದೆ ಹಲವು ಬಾರಿ ಅಸಮಾಧಾನ ವ್ಯಕ್ತಪಡಿಸಿದ್ದ ಹರಿಪ್ರಸಾದ್, ನಂತರ ಬೆಂಗಳೂರಿನಲ್ಲಿ ಬೃಹತ್ ಸಮಾವೇಶವನ್ನೂ ಆಯೋಜಿಸಿದ್ದರು. ಬಿಲ್ಲವ ಸಮುದಾಯದ ಸಮಾವೇಶ ನಡೆಸಿದ್ದ ಅವರು ನಂತರ ಹಿಂದುಳಿದ ಹಾಗೂ ಅತಿ ಹಿಂದುಳಿದ ವರ್ಗಗಳನ್ನು ಒಗ್ಗೂಡಿಸುವ ಕೆಲಸಕ್ಕೆ ಕೈಹಾಕಿದ್ದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ