ಸ್ವಾತಂತ್ರ್ಯದ ಒಂದು ದಿನ ಮುನ್ನ ನಡೆದ ರಕ್ತದೋಕುಳಿ ವಿಷಯ ಮರೆಮಾಚಿದ ಕಾಂಗ್ರೆಸ್: ಬಸವರಾಜ ಬೊಮ್ಮಾಯಿ

ಬೆಂಗಳೂರಿನ ಬಸವನಗುಡಿಯಲ್ಲಿ ನಡೆದ ದೇಶ ವಿಭಜನೆ-ಒಂದು ದುರಂತ ಕಥೆ ಕಾರ್ಯಕ್ರಮದಲ್ಲಿ ಮಾತನಾಡಿದ ಬಸವರಾಜ ಬೊಮ್ಮಾಯಿ, ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು. ಅಲ್ಲದೆ, ತಾಯಿ ಹೇಳಿದ ನೈಜ ಘಟನೆಯನ್ನು ನೆನೆದು ಭಾವುಕರಾದರು.

ಸ್ವಾತಂತ್ರ್ಯದ ಒಂದು ದಿನ ಮುನ್ನ ನಡೆದ ರಕ್ತದೋಕುಳಿ ವಿಷಯ ಮರೆಮಾಚಿದ ಕಾಂಗ್ರೆಸ್: ಬಸವರಾಜ ಬೊಮ್ಮಾಯಿ
ಬಸವರಾಜ ಬೊಮ್ಮಾಯಿ
Edited By:

Updated on: Aug 14, 2023 | 9:50 PM

ಬೆಂಗಳೂರು, ಆಗಸ್ಟ್ 14: ಸ್ವಾತಂತ್ರ್ಯೋತ್ಸವಕ್ಕೂ ಒಂದು ದಿನ ಮೊದಲು ರಕ್ತದೋಕುಳಿ ನಡೆದಿತ್ತು. ವಿಶ್ವದ ಇತಿಹಾಸದಲ್ಲಿ ಈ ರೀತಿ ಘಟನೆ ನಡೆದಿಲ್ಲ. ಆದರೆ ದೇಶದ ಚುಕ್ಕಾಣಿ ಹಿಡಿದ ಕಾಂಗ್ರೆಸ್ ಈ ವಿಷಯವನ್ನು ಮರೆಮಾಚಿತು ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ಹೇಳಿದ್ದಾರೆ. ಬಸವನಗುಡಿಯಲ್ಲಿ ನಡೆದ ದೇಶ ವಿಭಜನೆ-ಒಂದು ದುರಂತ ಕಥೆ ಕಾರ್ಯಕ್ರಮದಲ್ಲಿ ಈ ಹೇಳಿಕೆ ನೀಡಿದರು.

ಹೃದಯವನ್ನು ಕತ್ತರಿಸಿರುವ ಗಾಯ ಇನ್ನೂ ಮಾಸಿಲ್ಲ. ದೇಶದ ಜನರಿಗೆ ಸ್ವಾತಂತ್ರ್ಯ ಹೋರಾಟವನ್ನು ಕಲಿಸಲು ಯಾರೂ ಬರಬೇಕಾಗಿರಲಿಲ್ಲ. ಕಾಂಗ್ರೆಸ್ ಸ್ಥಾಪನೆಗೆ ನೂರಾರು ವರ್ಷ ಮೊದಲು ಕಿತ್ತೂರು ಚೆನ್ನಮ್ಮ, ರಾಯಣ್ಣ, ವೀರಸಿಂಧೂರ ಲಕ್ಷ್ಮಣ ಸೇರಿ ಅನೇಕರು ಬ್ರಿಟಿಷರ ವಿರುದ್ಧ ಕತ್ತಿ ಎತ್ತಿದ್ದರು. ಆದರೆ, ಸ್ವಾತಂತ್ರ್ಯ ಹೋರಾಟ ಎಂದ ಕೂಡಲೇ ಗಾಂಧಿ, ನೆಹರು ಎಂದು ಹೇಳುತ್ತಾರೆ ಎಂದರು.

ಇತಿಹಾಸ ಬಲ್ಲವರು ಭವಿಷ್ಯ ನಿರ್ಮಾಣ ಮಾಡುತ್ತಾರೆ ಎಂದು ಹೇಳಿದ ಬೊಮ್ಮಾಯಿ, ಜವಾಹರ್ ಲಾಲ್ ನೆಹರು ಕಾರಣಕ್ಕೆ ಭಾರತ ದೇಶ ವಿಭಜನೆಯಾಯ್ತು. ಆದರೆ ಅಧಿಕಾರದ ಆಸೆಗೆ ಕಾಂಗ್ರೆಸ್ ಇಂದೂ ಪುಷ್ಟೀಕರಣ ಮುಂದುವರಿಸಿದೆ ಎಂದರು.

ಇದನ್ನೂ ಓದಿ: ಕೆಂಪಣ್ಣ ಕ್ಲೀನ್‌ಚಿಟ್ ಕೊಟ್ಟರೆ ಬಿಲ್ ಬಿಡುಗಡೆಯಾಗುತ್ತಾ? ಎಟಿಎಂ ಸರ್ಕಾರ ಎಂಬುದು ಮತ್ತೆ ನಿಜವಾಗುತ್ತಿದೆ; ಬೊಮ್ಮಾಯಿ ಆಕ್ರೋಶ

ಜಗತ್ತಿನಲ್ಲೇ ಅಲ್ಪಸಂಖ್ಯಾತರು ಸುರಕ್ಷಿತವಾಗಿರುವುದು ಭಾರತದಲ್ಲಿ ಮಾತ್ರ. ಆದರೆ ಅಲ್ಪಸಂಖ್ಯಾತರಿಗೆ ರಕ್ಷಣೆಯಿಲ್ಲ ಎಂದು ಕಾಂಗ್ರೆಸ್​ನವರು ಹೇಳುತ್ತಿದ್ದಾರೆ. ಬ್ರಿಟಿಷರ ಉದ್ದೇಶವನ್ನು ಈಡೇರಿಸಲು ಕೆಲ ಶಕ್ತಿಗಳು ಪ್ರಯತ್ನಿಸುತ್ತಿವೆ. ಭಾರತವನ್ನು ಉಳಿಸಲು, ಬೆಳೆಸಲು ನರೇಂದ್ರ ಮೋದಿ ನಾಯಕತ್ವ ಬೇಕು ಎಂದರು.

ತಾಯಿ ನೆನೆದು ಭಾವುಕರಾದ ಬೊಮ್ಮಾಯಿ‌

ನಾರಾಯಣ ಎಂಬ ಬಾಲಕ ಅನೇಕ ವರ್ಷದ ಹಿಂದೆ ಬ್ರಿಟಿಷರ ಗುಂಡಿಗೆ ಬಲಿಯಾದ. ವಂದೇ ಮಾತರಂ ಹೇಳಿದ್ದಕ್ಕೆ 12 ವರ್ಷದ ಬಾಲಕ ದೇಶಕ್ಕೆ ಪ್ರಾಣ ಕೊಟ್ಟ. ಅವನ ಪ್ರತಿಮೆ ಸ್ಥಾಪಿಸು ಎಂದು ನಾನು‌ ವಿಧಾನ ಪರಿಷತ್ ಸದಸ್ಯನಾದಾಗ ತಾಯಿ ಒಂದು ಮಾತು ಹೇಳಿದ್ದರು ಎಂದು ಹೇಳುವಾಗ ಬೊಮ್ಮಾಯಿ ಅವರು ಭಾವುಕರಾದರು.

ಭಾರತದ ಏಕತೆ, ಅಖಂಡತೆ ಮುಖ್ಯ. ಸಂಕುಚಿತ ಪ್ರಾದೇಶಿಕ ಶಕ್ತಿಗಳಿಗೆ ದೇಶವನ್ನು ಒಪ್ಪಿಸಬಾರದು. ಭಾರತವನ್ನು ಉಳಿಸಲು, ಬೆಳೆಸಲು ಪ್ರಬಲ ನಾಯಕತ್ವ ಬೇಕು. ಅದನ್ನು ನರೇಂದ್ರ ಮೋದಿ ಮಾತ್ರ ನೀಡಲು ಸಾಧ್ಯ ಎಂದು ಬೊಮ್ಮಾಯಿ ಹೇಳಿದರು.

ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ