ಹುಬ್ಬಳ್ಳಿ, (ಡಿಸೆಂಬರ್ 10): ಬೆಂಗಳೂರಿನ ಅರಮನೆ ಮೈದಾನದಲ್ಲಿ ಈಡಿಗ ಸಮಾವೇಶ (Ediga Community Convention) ನಡೆಸುತ್ತಿರುವುದರ ವಿರುದ್ಧ ಕಾಂಗ್ರೆಸ್ ವಿಧಾನಪರಿಷತ್ ಬಿಕೆ ಹರಿಪ್ರಸಾದ್ ಮತ್ತೆ ಕೆರಳ ಕೆಂಡವಾಗಿದ್ದಾರೆ. ರಾಜಕೀಯ ಕುತಂತ್ರಕ್ಕೆ ನಾನು ಬಗ್ಗಲ್ಲ. ಸಿದ್ದರಾಮಯ್ಯ 2006ರಲ್ಲಿ ಪಕ್ಷ ಬಂದಿದ್ದು, ಅಷ್ಟೇನು ಪರಿಚಯವಿಲ್ಲ. ಯಾವ ಕಾರಣಕ್ಕೆ ಅಧಿಕಾರಕ್ಕೆ ಬಂದಿದ್ದೇವೆ, ಅದನ್ನು ಈಡೇರಿಸಬೇಕು ಎಂದು ಬಿಕೆ ಹರಿಪ್ರಸಾದ್ (BK Hariprasad ಮತ್ತೆ ಸಿಎಂ ಸಿದ್ದರಾಮಯ್ಯ (Siddaramaiah) ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಹುಬ್ಬಳ್ಳಿಯಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಹರಿಪ್ರಸಾದ್, ದೊಡ್ಡ ದೊಡ್ಡ ನಾಯಕರು ಈಡಿಗ ಸಂಘವನ್ನು ಕಟ್ಟಿದ್ದಾರೆ. ಆದರೆ ಇತ್ತೀಚೆಗೆ ಬಂದವರು ಸಮಾಜದಲ್ಲಿ ಏನು ಮಾಡಿದ್ದಾರೆ. ರಾಜಕೀಯ ಕುತಂತ್ರದ ಸಮಾವೇಶ, ಇದರಿಂದ ಒಳ್ಳೆಯದಾಗಲ್ಲ. ಗುರುನಾರಾಯಣ ಅಧ್ಯಯನ ಪೀಠಕ್ಕೆ ಅನುದಾನವನ್ನು ಕೊಟ್ಟಿಲ್ಲ. ಸಮಾಜದ ಹಿತದೃಷ್ಟಿಯಿಂದ ಏನು ಮಾಡಿದ್ದಾರೆಂದು ಹೇಳಬೇಕು. ರಾಜಕೀಯ ಪ್ರೇರಿತ ಸಮಾವೇಶದಲ್ಲಿ ನಾವು ಭಾಗಿಯಾಗುವುದಿಲ್ಲ. ಪ್ರಣಾವನಂದ ಸ್ವಾಮೀಜಿ ಉಪವಾಸ ಸತ್ಯಾಗ್ರಹಕ್ಕೆ ಶುಭವಾಗಲಿ ಎಂದು ಹೇಳಿದರು.
ಸಮಾಜ ಒಡೆಯೋ ಪ್ರಯತ್ನ ಮಾಡಿದ್ರೆ ಮುಂದೆ ಏನಾಗತ್ತೆ ನೋಡೋಣ. ಪ್ರಣಾವನಂದ ಸ್ವಾಮೀಜಿ ಸತ್ಯಾಗ್ರಹ ಸಮುದಾಯದ ಪರ. ಹಿಂದುಳಿದ, ಅತಿ ಹಿಂದುಳಿದವರ ಪರ ಸತ್ಯಾಗ್ರಹ ಮಾಡುತ್ತಿದ್ದು, ಅವರಿಗೆ ಒಳ್ಳೆಯಾದಗಲಿ. ಪ್ರಣಾವನಂದ ಸ್ವಾಮೀಜಿಗೆ ಜಾಸ್ತಿ ಹುಳುಕು ಗೊತ್ತಿದೆ. ಅದಕ್ಕಾಗಿ ಅವರನ್ಮ ದೂರ ಇಟ್ಟಿದ್ದಾರೆ . ಸ್ವಾಮೀಜಿ ನಮ್ಮಜಾತಿಯವರು ಅಲ್ಲ ಅಂದ್ರು. ಅವರ ಪಾದ ಪೂಜೆ ಮಾಡಿದವರು ಯಾರು ಎಂದು ಪ್ರಶ್ನಿಸಿದ ಹರಿಪ್ರಸಾದ್, ಇವರೇನು ಜಾತಿ ಪ್ರಮಾಣ ಪತ್ರ ಕೊಡುವುದಕ್ಕೆ ತಹಶೀಲ್ದಾರ್ ಏನು ಎಂದು ವಾಗ್ದಾಳಿ ನಡೆಸಿದರು.
ಸಂಘ ಮಾಡಿಡುವುದಕ್ಕೆ ಒಳ್ಳೆಯದಕ್ಕೆ. 1944 ರಲ್ಲಿ ಸಂಘ ಹುಟ್ಟುಕೊಂಡಿದೆ. 75 ವರ್ಷದಲ್ಲಿ ಬರೀ 12500 ಜನ ಇದ್ದಾರೆ. ಅವರು ಮಾತ್ರ ಈಡೀಗರಾ. ಕೇವಲ ಕೆಲವರ ಕಪಿಮುಷ್ಟಿಯಲ್ಲಿದೆ. ಕೆಲ ವ್ಯಾಪಾರಿಗಳು ಸಂಘ ಮಾಡಿಕೊಂಡಿದ್ದಾರೆ. ಸಂಪೂರ್ಣವಾಗಿ ಸಂಘ ವ್ಯಾಪಾರಕ್ಕೆ ಇದೆ. 26 ಒಳ ಪಂಗಡದವರನ್ನು ಸದಸ್ಯರನ್ನ ಮಾಡಿದ್ದಾರಾ. ಸಮಾವೇಶದ ಕುರಿತು ಯಾರ ಹತ್ತಿರ ಚರ್ಚೆ ಮಾಡಿದ್ದಾರೆ. ಮುಖ್ಯಮಂತ್ರಿಗಳ ಕಚೇರಿಯಲ್ಲಿ ಕೂತು ನಾಲ್ಕ ಜನ ಸಮಾವೇಶ ಮಾಡಿದ್ರೆ ಆಗಲ್ಲ. ಸಮುದಾಯದ ಜನ ಕುತಂತ್ರಕ್ಕೆ, ಷಡ್ಯಂತ್ರಕ್ಕೆ ಬಲಿಯಾಗಬೇಡಿ ಎಂದು ಹರಿಪ್ರಸಾದ್ ತಮ್ಮ ಸಮುದಾಯದ ಜನಕ್ಕೆ ಮನವಿ ಮಾಡಿದರು.
ನಾನು ಮಂತ್ರಿ ಅಗಬೇಕು ಎನ್ನುವುದು ಇಲ್ಲ. ಸಿದ್ದರಾಮಯ್ಯ ಪರ ಮಾತಾಡಿದ್ರೆ ಮಂತ್ರಿ ಆಗುತ್ತಾರೆ ಎನ್ನುವುದು ತಪ್ಪು. ಅದಕ್ಕೂ ಇದಕ್ಕೂ ಸಂಬಂಧ ಇಲ್ಲ. ನಾನು ಮಂತ್ರಿ ಆಗಬೇಕು ಎಂದು ಯಾರ ಹತ್ತಿರ ಕೇಳಿಲ್ಲ. ನಾನು ಬೇರೆಯವರ ತರಹ ಬಹಿಷ್ಕಾರ ಮಾಡಿಲ್ಲ. ಯಾರ ಮಂತ್ರಿ ಆಗಿದ್ದಾರಲ್ವಾ ಅವರು ಬಹಿಷ್ಕಾರ ಮಾಡಿದ್ರು ನಂತರ ಅವರನ್ನು ಮಂತ್ರಿ ಮಾಡಿದರು ಎಂದರು.
ಇನ್ನಷ್ಟು ರಾಜಕೀಯ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ