AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಾನೊಬ್ಬ ಹಿಂದುಳಿದವನು ಅಂತಾ ನೋಟಿಸ್ ಕೊಡುತ್ತಿದ್ದೀರಾ: ಸಿದ್ದರಾಮಯ್ಯ ವಿರುದ್ಧ ಬಿಕೆ ಹರಿಪ್ರಸಾದ್ ವಾಗ್ದಾಳಿ

ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಪದೇಪದೇ ವಾಗ್ದಾಳಿ ನಡೆಸುತ್ತಿರುವ ವಿಧಾನ ಪರಿಷತ್ ಕಾಂಗ್ರೆಸ್ ಸದಸ್ಯ ಬಿಕೆ ಹರಿಪ್ರಸಾದ್, ಪಕ್ಷದಿಂದ ನೋಟಿಸ್ ಕೊಟ್ಟಿರುವ ವಿಚಾರವಾಗಿ ಸಿದ್ದರಾಮಯ್ಯ ವಿರುದ್ಧ ಪರೋಕ್ಷವಾಗಿ ಗುಡುಗಿದ್ದಾರೆ. ನೋಟಿಸ್ ವಿಚಾರದಲ್ಲಿ ತಾರತಮ್ಯ ಮಾಡಬಾರದಿತ್ತು. ನಾನು ಒಬ್ಬ ಹಿಂದುಳಿದವನು ಅಂತಾ ನೋಟಿಸ್ ಕೊಡುತ್ತೀರಾ ಎಂದು ಪ್ರಶ್ನಿಸಿದರು.

ನಾನೊಬ್ಬ ಹಿಂದುಳಿದವನು ಅಂತಾ ನೋಟಿಸ್ ಕೊಡುತ್ತಿದ್ದೀರಾ: ಸಿದ್ದರಾಮಯ್ಯ ವಿರುದ್ಧ ಬಿಕೆ ಹರಿಪ್ರಸಾದ್ ವಾಗ್ದಾಳಿ
ಸಿದ್ದರಾಮಯ್ಯ ವಿರುದ್ಧ ಮತ್ತೆ ವಾಗ್ದಾಳಿ ನಡೆಸಿದ ಬಿಕೆ ಹರಿಪ್ರಸಾದ್
Pramod Shastri G
| Edited By: |

Updated on: Dec 09, 2023 | 4:43 PM

Share

ಬೆಳಗಾವಿ, ಡಿ.9: ನೋಟಿಸ್ ವಿಚಾರದಲ್ಲಿ ತಾರತಮ್ಯ ಮಾಡಬಾರದಿತ್ತು. ನಾನು ಒಬ್ಬ ಹಿಂದುಳಿದವನು ಅಂತಾ ನೋಟಿಸ್ ಕೊಡುತ್ತೀರಾ ಎಂದು ಪರೋಕ್ಷವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ವಿರುದ್ಧ ವಿಧಾನ ಪರಿಷತ್ ಕಾಂಗ್ರೆಸ್ ಸದಸ್ಯ ಬಿಕೆ ಹರಿಪ್ರಸಾದ್ (BK Hariprasad) ವಾಗ್ದಾಳಿ ನಡೆಸಿದ್ದಾರೆ. ತಮಗೆ ಮಾತ್ರ ನೋಟಿಸ್ ಕೊಟ್ಟಿರುವ ವಿಚಾರವಾಗಿ ಮಾತನಾಡಿದರು.

ಈ ಹಿಂದೆ ಮುಖ್ಯಮಂತ್ರಿ ಸ್ಥಾನದ ವಿಚಾರವಾಗಿ ಮುಂದೆಯೂ ನಾನೇ ಸಿಎಂ ಆಗಿರುತ್ತೇನೆ ಎಂದು ಸಿದ್ದರಾಮಯ್ಯ ಹೇಳಿದ್ದರು. ಇದನ್ನೇ ಮುಂದಿಟ್ಟುಕೊಂಡು ವಾಗ್ದಾಳಿ ನಡೆಸಿದ ಹರಿಪ್ರಸಾದ್, ಕೆಲವರು ಹೈಕಮಾಂಡ್ ನಿರ್ಧಾರವನ್ನೇ ಪ್ರಶ್ನೆ ಮಾಡುತ್ತಾರೆ. ನಾನು ಯಾವತ್ತು ಹೈಕಮಾಂಡ್ ನಿರ್ಧಾರ ಪ್ರಶ್ನೆ ಮಾಡಿದವನಲ್ಲ. ಕೆಲವರು ಕುತಂತ್ರ ಮಾಡಿದಾಗ ಅದನ್ನ ಪ್ರಶ್ನೆ ಮಾಡುತ್ತೇನೆ ಎಂದರು.

ಅಲ್ಲದೆ, ನನ್ನ ನೋಟಿಸ್​ಗೆ ನಾನು ಉತ್ತರ ಕೊಟ್ಟಾಗಿದೆ. ಬಳಿಕ ಎರಡು ಸಿಡಬ್ಲ್ಯೂಸಿ ಸಭೆಯಲ್ಲೂ ಭಾಗಿಯಾಗಿದ್ದೇನೆ. ಆದರೆ ಇವರು ಮಾಡುತ್ತಾ ಇರುವುದೇನು? ಇವರಿಗೆ ಯಾರು ಸ್ವಾತಂತ್ರ್ಯ ಕೊಟ್ಟಿಲ್ಲ. ಮನಸ್ಸಿಗೆ ಬಂದ ಹಾಗೆ ಇವರು ಮಾಡಲು ಆಗಲ್ಲ. ಪಕ್ಷದ ನಿಯಮ ಇದೆ ಅದರ ಚೌಕಟ್ಟಿನಲ್ಲಿ ಕೆಲಸ ಮಾಡಬೇಕು. ಒಂದು ಹಂತ ಇದೆ ಅಲ್ಲಿವರೆಗೂ ತಡೆದುಕೊಳ್ಳುತ್ತೇವೆ. ಅದಾದ ಬಳಿಕ ಭಾರಿ ಕಷ್ಟ ಆಗುತ್ತದೆ ಎಂದರು.

ಇದನ್ನೂ ಓದಿ: ರಾಜಕಾರಣದಲ್ಲಿ ನನಗೆ ಯಾವತ್ತೂ ವಿಪಕ್ಷದಿಂದ ತೊಂದರೆ ಆಗಿಲ್ಲ: ಬಿಕೆ ಹರಿಪ್ರಸಾದ್

ನಾನು ಕಾಂಗ್ರೆಸ್ ಪಕ್ಷದ ಸಿದ್ದಾಂತದ ಬಗ್ಗೆ ನಂಬಿಕೆ ಇಟ್ಟುಕೊಂಡಿರುವವನು. ನಾನು ಕಾಂಗ್ರೆಸ್ ಪಕ್ಷದ ಸಾಮಾಜಿಕ ನ್ಯಾಯದ ಬಗ್ಗೆ ನಂಬಿಕೆ ಇಟ್ಟುಕೊಂಡವನು. ಅದರಲ್ಲಿ ಗೌಡ್ರು, ಲಿಂಗಾಯಿತರು, ಬ್ರಾಹ್ಮಣರು, ಎಸ್​ಸಿ ಎಸ್​ಟಿ ಹಿಂದುಳಿದವರು ಎಲ್ಲರೂ ಇರುತ್ತಾರೆ. ನಮ್ಮ ಸಭೆ ಆದ ಬಳಿಕ ಅವರು ಸಾಲು ಸಾಲು ಅಹಿಂದ ಸಮಾರಂಭ ಆಗುತ್ತಿದೆ. ಆದರೆ ನನಗೆ ಅದರಲ್ಲಿ ನನಗೆ ನಂಬಿಕೆ ಇಲ್ಲ. ನಮ್ಮನ್ನ ದೂರ ಇಟ್ಟೇ ಮಾಡುತ್ತಿರುವುದು ಬಹಳ ಸಂತೋಷ. ನಾನು ಕಾಂಗ್ರೆಸ್ ಪಕ್ಚದ ಸಿದ್ಧಾಂತವನ್ನೇ ಹೇಳಿಕೊಂಡು ಹೋಗುತ್ತೇನೆ ಎಂದರು.

ಡಿಸೆಂಬರ್ 30 ರಂದ ಸಿದ್ದರಾಮಯ್ಯಗೆ ಅಹಿಂದ ಮೂಲಕ ಅಭಿನಂದನ ಸಮಾರಂಭ ವಿಚಾರವಾಗಿ ಮಾತನಾಡಿದ ಹರಿಪ್ರಸಾದ್, ಈಗ ಅಹಿಂದ ಸಮಾವೇಶ ಅಂದರೆ ನೀವು ಕೇವಲ ಅಹಿಂದ ವರ್ಗದವರನ್ನ ಕರೆಯಬೇಕು. ಈಡಿ ಕಾಂಗ್ರೆಸ್ ಅವರನ್ನ ಕರೆಸಿ ಮಾಡುವುದಲ್ಲ. ಅದಾಗ್ಯೂ ಮಾಡುತ್ತಿದ್ದಾರೆ. ಮಾಡಿಕೊಂಡು ಹೋಗಲಿ. ಅವರಿಗೆ ಸ್ವಾತಂತ್ರ್ಯ ಇದೆ. ಆದರೆ ನಾವು ಯಾರು ಕಾರ್ಯಕ್ರಮದಲ್ಲಿ ಭಾಗಿಯಾಗುವುದಿಲ್ಲ ಎಂದರು.

ಹರಿಪ್ರಸಾದ್ ವರ್ಸಸ್ ಸಿದ್ದರಾಮಯ್ಯ

ಹಿಂದುಳಿದ ವರ್ಗ ಅಂದರೆ ಹರಿಪ್ರಸಾದ್ ವರ್ಸಸ್ ಸಿದ್ದರಾಮಯ್ಯ ಆಗುತ್ತಿದೆಯಾ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಹರಿಪ್ರಸಾದ್, ನಾವಿಬ್ಬರೇ ಹಿಂದುಳಿದ ವರ್ಗದ ನಾಯಕರಲ್ಲ. ಅನೇಕರಿದ್ದಾರೆ. ನಾನು ನಿನ್ನೆ ಮೊನ್ನೆ ರಾಜಕೀಯಕ್ಕೆ ಬಂದವನಲ್ಲ. ಉಳಿದವರು ಏನು ಮಾಡಿದ್ದಾರೆ ಎಂಬ ಕುರಿತು ಚರ್ಚೆಗೆ ಉತ್ತರ ಕೊಡಲು ನಾನು ತಯಾರಿದ್ದೇನೆ ಎಂದರು.

ನಿಮ್ಮನ್ನು ಟಾರ್ಗೇಟ್ ಮಾಡುತ್ತಿದ್ದಾರಾ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಹರಿಪ್ರಸಾದ್, ಸಂಪುಟ ಸಚಿವರ ರೇಸ್ ನಲ್ಲಿ ನಾನು ಇರಲಿಲ್ಲ.‌ ಮೊದಲೇ ಹೇಳಿದ್ದೆ. ಆದರೆ ಇವರು ನಾವು ಮಾಡುತ್ತಿದ್ದೇವೆ ಅಂತ ಸೌಜನ್ಯಕ್ಕಾದರು ಹೇಳಬೇಕಿತ್ತು. ನಾವು ಮೂವರು ಶಿಷ್ಟಾಚಾರದ ಪ್ರಕಾರ ಸ್ಥಾನಮಾನದಲ್ಲಿದ್ದೆವು. ಬೇಕಾದ ಹಾಗೆ ಮಾಡಿಕೊಳ್ಳುತ್ತೇವೆ ಎಂದರೆ ಮಾಡಿಕೊಳ್ಳಲಿ. ನಮ್ಮದೇನು ಅಭ್ಯಂತರ ಇಲ್ಲ. ಮೊದಲು ಒಂದು ಬಾರಿ ಲಿಂಗಾಯಿತರನ್ನ ವಿಭಾಗಿಸಲು ಹೋಗಿ ಏನಾಗಿದೆ ಅಂತಾ ನೋಡಿದ್ದೇವೆ. ಈಗ ಹಿಂದುಳಿದವರನ್ನ ವಿಭಾಗಿಸಲು ಹೋಗುತ್ತಿದ್ದಾರೆ. ಮುಂದೇನಾಗುತ್ತೋ ನೋಡೋಣ ಎಂದರು.

ಈಡಿಗ ಸಮಾಜದ ಅಮೃತ ಮಹೋತ್ಸವದಿಂದ ಅಂತರ ಕಾಯ್ದುಕೊಂಡ ವಿಚಾರವಾಗಿ ಟಿವಿ9 ಜೊತೆ ಮಾತನಾಡಿದ ಅವರು, ಇದು ಈಡಿಗ ಸಂಘದವರು ಮಾಡುತ್ತಿದ್ದಾರೆ. ಸಂಘಕ್ಕೂ ಸಮಾಜಕ್ಕೂ ವ್ಯತ್ಯಾಸ ಇದೆ. ಸಮಾಜದಲ್ಲಿ 26 ಉಪ ಪಂಗಡ ಇದೆ. 55 ಲಕ್ಷ ಜನ ನಮ್ಮ ಸಮಾಜದಲ್ಲಿ ಇದ್ದಾರೆ. ಆದರೆ ಈ ಸಂಘದಲ್ಲಿ 12 ಸಾವಿರ ಸದಸ್ಯರು ಇದ್ದಾರೆ. ಸಮಾಜದ ಪ್ರಮುಖ ಸ್ವಾಮೀಜಿ ಬಿಟ್ಟು ಕಾರ್ಯಕ್ರಮ ಮಾಡುತ್ತಿದ್ದಾರೆ ಎಂದರು.

ಇದನ್ನೂ ಓದಿ: ಮೌಲ್ವಿ ತನ್ವೀರ್ ಜೊತೆ ವ್ಯಾಪಾರ ಪಾಲುದಾರ ಆರೋಪ: ಸಿದ್ದರಾಮಯ್ಯಗೆ ಸವಾಲು ಹಾಕಿದ ಯತ್ನಾಳ್

ಸಂಘ ಆರಂಭವಾಗಿ 79 ವರ್ಷ ಆಗಿದೆ. ಇದರ ಸಂಭ್ರಮ ಯಾವತ್ತು ಮಾಡಿಲ್ಲ. ಈಗ ಏಕೆ ಕಾರ್ಯಕ್ರಮ ಮಾಡುತ್ತಿದ್ದಾರೆ? ಇದು ರಾಜಕೀಯ ಪ್ರೇರಿತ ಮತ್ತು ಕುತಂತ್ರ ಎಂದು ಹೇಳಿದ ಬಿಕೆ ಹರಿಪ್ರಸಾದ್, ನಾನು ಈಡಿಗ ಸಮಾಜದ ಕಾರ್ಯಕ್ರಮಕ್ಕೆ ಹೋಗಲ್ಲ. ಸ್ವಂತಕ್ಕಾಗಿ ಸಂಘ ಮಾಡಿದರೆ ತಪ್ಪಾಗುತ್ತದೆ. ಎಲ್ಲಾ ಸ್ವಾಮಿಜಿಗಳನ್ನ ಕರೆಯಬೇಕು ಎಂದರು.

ಸಿದ್ದರಾಮಯ್ಯ ಹೆಸರು ಹೇಳದೆ ಮತ್ತೆ ಗುಡುಗಿದ ಬಿಕೆ‌ ಹರಿಪ್ರಸಾದ್, ಮಂಗಳೂರಿನ ಕೋಟಿ ಚನ್ನಯ್ಯ ಪಾರ್ಕ್ ಅಭಿವೃದ್ಧಿಗೆ 5 ಕೋಟಿ ಅನುದಾನ ಕೇಳಿದ್ದೆ. ಐದು ರೂಪಾಯಿ ಸಹ ನೀಡಿಲ್ಲ. ಮಂಗಳೂರು ವಿವಿಯಲ್ಲಿ ನಾರಾಯಣ ಗುರು ಅಧ್ಯಯನ ಕೇಂದ್ರಕ್ಕೆ ನಾನು 1 ಕೋಟಿ ಕೇಳಿದ್ದೆ. ಇದುವರೆಗೂ ಕೊಟ್ಟಿಲ್ಲ. ಸುಮ್ಮನೆ ಭಾಷಣ ಹೊಡೆಯುತ್ತಾ ಇರುತ್ತಾರೆ. ಆದರೆ ಎಲ್ಲೂ ಹಣ ಬಂದಿಲ್ಲ ಎಂದರು.

ನನ್ನ ಬೇಡಿಕೆ ಯಾವುದು ಇಡೇರಲಿಲ್ಲ. ಬೇರೆ ಸಮುದಾಯದವರಿಗೆ ಬೇಕಾದ ಸಮುದಾಯವರಿಗೆ ಪ್ರತಿಮೆ ನಿರ್ಮಾಣಕ್ಕೆ ನೂರು ಕೋಟಿ ಕೊಟ್ಟಿದ್ದಾರೆ. ನಾವು ಅಷ್ಟೋಂದು ಕೀಳು ಮಟ್ಟದವರಲ್ಲ. ಅವರು ಮಾಡಿಕೊಂಡು ಹೋಗಿಲ್ಲ. ಇದು ರಾಜಕೀಯ ಪ್ರೇರಿತ ಎಂದರು.

ಸಿದ್ದರಾಮಯ್ಯ ಅವರತ್ತ ಬೆಟ್ಟು ಮಾಡುತ್ತಿದ್ದೀರಾ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ರಾಜಕೀಯ ಅಂದ ಮೇಲೆ ಅದರಲ್ಲಿ ಎಲ್ಲರೂ ಸೇರುತ್ತಾರೆ. ಯಾರದ್ದು ಹೆಸರು ಹೇಳುವುದಿಲ್ಲ. ಅರ್ಥ ಆಗುವವರಿಗೆ ಆಗುತ್ತದೆ ಎಂದರು.

ಸಿಎಂ ಹಾಗೂ ಡಿಸಿಎಂಗೆ ಕಪ್ಪು ಪಟ್ಟಿ ಪ್ರದರ್ಶನ ಮಾಡುತ್ತೇವೆ ಎಂದು ಈಡಿಗ ಯುವಕರ ಹೇಳಿಕೆ ವಿಚಾರವಾಗಿ ಮಾತನಾಡಿದ ಹರಿಪ್ರಸಾದ್, ಕೆಲವು ಮೈಸೂರಿನವರು ಕರೆ ಕೊಟ್ಟಿದ್ದರು. ಕಪ್ಪು ಪಟ್ಟಿ ಪ್ರದರ್ಶನ ಮಾಡೋದು ಬೇಡ. ಹೋರಾಟ ಮಾಡಲು ನಾವೆಲ್ಲ ಇದ್ದೇವೆ. ಇವರಿಗೆ ಒಂದು ಕೋಟಿ ಕೊಡಿಸಲು ಆಗದವರು ಸಂಘಕ್ಕೆ ಏನು ಮಾಡುತ್ತಾರೆ ಎಂಬುದನ್ನು ನೋಡೋಣ ಎಂದು ಸಿದ್ದರಾಮಯ್ಯಗೆ ಟಾಂಗ್ ಕೊಟ್ಟರು.

ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ