ಹಿಪ್ ರಿಪ್ಲೇಸ್ಮೆಂಟ್ ಸರ್ಜರಿ ನಂತರ ವಾಕರ್ ಸಹಾಯದಿಂದ ನಡೆಯಲು ಪ್ರಯತ್ನಿಸುತ್ತಿರುವ ತೆಲಂಗಾಣ ಮಾಜಿ ಸಿಎಂ ಕೆಸಿಆರ್

ಹಿಪ್ ರಿಪ್ಲೇಸ್ಮೆಂಟ್ ಸರ್ಜರಿ ನಂತರ ವಾಕರ್ ಸಹಾಯದಿಂದ ನಡೆಯಲು ಪ್ರಯತ್ನಿಸುತ್ತಿರುವ ತೆಲಂಗಾಣ ಮಾಜಿ ಸಿಎಂ ಕೆಸಿಆರ್

ಅರುಣ್​ ಕುಮಾರ್​ ಬೆಳ್ಳಿ
|

Updated on: Dec 09, 2023 | 3:28 PM

ದುರಾದೃಷ್ಟ, ಕೆಟ್ಟ ಸಮಯ ಕಾಡಲಾರಂಭಿಸಿದರೆ ಹಲವಾರು ವಿಧಗಳಲ್ಲಿ ಮತ್ತು ಎಡೆಬಿಡದೆ ಕಾಡುತ್ತದೆ ಅಂತ ಹೇಳುತ್ತಾರೆ. ತೆಲಂಗಾಣದ ಪ್ರಪ್ರಥಮ ಮುಖ್ಯಮಂತ್ರಿಯೆಂಬ ಹೆಗ್ಗಳಿಕೆಯೊಂದಿಗೆ ಎರಡು ಅವಧಿಗಳಿಗೆ ರಾಜ್ಯವಾಳಿದ ಕೆ ಚಂದ್ರಶೇಖರ್ ರಾವ್ ಸೋಲಿನ ಆಘಾತದಿಂದ ಚೇತರಿಸಿಕೊಳ್ಳುವ ಮೊದಲೇ ಬಚ್ಚಲು ಮನೆಯಲ್ಲಿ ಬಿದ್ದು ಸೊಂಟದ ಮೂಳೆ ಮುರಿದುಕೊಂಡಿದ್ದಾರೆ.

ಹೈದರಾಬಾದ್: ವಿಧಾನ ಸಭಾ ಚುನಾವಣೆಯಲ್ಲಿ ಸೋತ ಬಳಿಕ, ಫಲಿತಾಂಶ ಪ್ರಕಟವಾದ ಡಿಸೆಂಬರ್ 3 ರಂದೇ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿ ನಗರದ ಹೊರವಲುದಲ್ಲಿರುವ ತಮ್ಮ ತೋಟದ ಮನೆಯಲ್ಲಿ ವಿಶ್ರಮಿಸುತ್ತಿದ್ದ ಕೆ ಚಂದ್ರಶೇಖರ್ ರಾವ್ (K Chandrasekhar Rao) ಗುರುವಾರದಂದು ಅಲ್ಲಿನ ವಾಷ್ ರೂಮಲ್ಲಿ ಬಿದ್ದು ಸೊಂಟದ ಮೂಳೆ (hip bone) ಮುರಿದುಕೊಂಡ ಸಂಗತಿ ಈಗಾಗಲೇ ವರದಿ ಮಾಡಿದ್ದೇವೆ. ರಾವ್ ಅವರನ್ನು ಕೂಡಲೇ ಹೈದರಾಬಾದ್ ನಗರದ ಒಂದು ಪ್ರತಿಷ್ಠಿತ ಖಾಸಗಿ ಅಸ್ಪತ್ರೆಗೆ ದಾಖಲಿಸಲಾಗಿತ್ತು. ಸೊಂಟದ ಮೂಳೆ ಮುರಿದಿರುವುದನ್ನು ಸಿಟಿ ಸ್ಕ್ಯಾನ್ ಮೂಲಕ ಖಚಿತಪಡಿಸಿಕೊಂಡ ಅಲ್ಲಿನ ಪರಿಣಿತ ವೈದ್ಯರ ತಂಡ ರಾವ್ ಅವರ ಹಿಪ್ ರಿಪ್ಲೇಸ್ಮೆಂಟ್ ಸರ್ಜರಿ (hip replacement surgery) ನಡೆಸಿದ್ದಾರೆ. ಆಪರೇಶನ್ ನಂತರ ಆಸ್ಪತ್ರೆಯಲ್ಲಿ ಚೇತರಿಸಿಕೊಳ್ಳುತ್ತಿರುವ ಮಾಜಿ ಮುಖ್ಯಮಂತ್ರಿಯವರಿಗೆ ತಜ್ಞ ಮೂಳೆ ಸರ್ಜನ್ ಮತ್ತು ವೈದ್ಯಕೀಯ ಸಿಬ್ಬಂದಿ ವಾಕರ್ ಸಹಾಯದಿಂದ ವಾರ್ಡ್ ಹೊರಭಾಗದಲ್ಲಿ ನಡೆದಾಡಿಸಲು ಪ್ರಯತ್ನಿಸುತ್ತಿರುವ ದೃಶ್ಯಗಳನ್ನು ವಿಡಿಯೋದಲ್ಲಿ ನೋಡಬಹುದು. ಅವರನ್ನು ಇನ್ನೂ ಎಷ್ಟು ದಿನ ಆಸ್ಪತ್ರೆಯಲ್ಲಿ ಇರಿಸಿಕೊಳ್ಳಲಾಗುತ್ತದೆ ಅಂತ ಮಾಹಿತಿ ಲಭ್ಯವಾಗಿಲ್ಲ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ