Leelavathi No More; ವಿನೋದ್ ತಾಯಿಯನ್ನು ನೋಡಿಕೊಂಡ ರೀತಿ ಪ್ರತಿಯೊಬ್ಬರಿಗೂ ಮಾದರಿ ಮತ್ತು ಅನುಕರಣೀಯ: ಡಿಕೆ ಶಿವಕುಮಾರ್
ಅಗಲಿರುವ ಲೀಲಾವತಿಯವರ ಹೆಸರು ಶಾಶ್ವತವಾಗಿಸುವ ನಿಟ್ಟಿನಲ್ಲಿ ಸಾಧ್ಯವಿರುವ ಎಲ್ಲ ಕೆಲಸಗಳನ್ನು ತಮ್ಮ ಸರ್ಕಾರ ಮಾಡುವುದು ಎಂದು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹೇಳಿದರು. ಅವರ ಹೆಸರಿನಲ್ಲಿ ಸ್ಮಾರಕವೊಂದನ್ನು ನಿರ್ಮಿಸುವ ಬಗ್ಗೆಯೂ ತಮ್ಮ ಸರ್ಕಾರ ಚಿಂತನೆ ನಡೆಸಲಿದೆ ಎಂದು ಹೇಳಿದ ಅವರು ಯಾವುದನ್ನೂ ಅವಸರಲ್ಲಿ ಹೇಳಲಾಗದು, ಹೇಳಿದ್ದನ್ನು ಮಾಡಿ ತೋರಿಸುವ ಸರ್ಕಾರ ನಮ್ಮದು ಎಂದರು.
ಬೆಂಗಳೂರು: ರವೀಂದ್ರ ಕಲಾಕ್ಷೇತ್ರದಲ್ಲಿ ಅಗಲಿದ ಕನ್ನಡದ ಹಿರಿಯ ನಟಿ ಲೀಲಾವತಿಯವರ (Leelavathi) ಅಂತಿಮ ದರ್ಶನ ಪಡೆದ ಬಳಿಕ ಮಾಧ್ಯಮದವರೊಂದಿಗೆ ಮಾತಾಡಿದ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ (DK Shivakumar), ವಿನೋದ್ ರಾಜ್ (Vinod Raj) ಮಾಡಿದ ತಾಯಿ ಸೇವೆಯನ್ನು ಮನಸಾರೆ ಕೊಂಡಾಡಿದರು. ಸಾಮಾನ್ಯವಾಗಿ ಕಲಾವಿದರು ಸ್ಥಿತಿವಂತರಾಗಿರುತ್ತಾರೆ ಆದರೆ ಲೀಲಮ್ಮ ಶ್ರೀಮಂತೆಯಾಗಿರಲಿಲ್ಲ, ನೆಲಮಂಗಲ ಬಳಿಯಿದ್ದ ನಾಲ್ನೈದು ಎಕರೆ ಜಮೀನಲ್ಲಿ ಕೃಷಿ ಮಾಡಿಕೊಂಡು ಬದುಕು ನಡೆಸಿದರು. ಲೀಲಮ್ಮನ ನೆರಳಿನಂತಿದ್ದ ವಿನೋದ್ ತಮ್ಮ ತಾಯಿಯನ್ನು ನೋಡಿಕೊಂಡು ಆರೈಕೆ ಮಾಡಿದ ರೀತಿ ಎಲ್ಲರಿಗೂ ಮಾದರಿಯಾಗಿದೆ ಎಂದು ಶಿವಕುಮಾರ್ ಹೇಳಿದರು. ಆದರ್ಶಮಯ ಮತ್ತು ಸರಳ ಬದುಕು ನಡೆಸಿದ ಲೀಲಾವತಿ ರಾಜ್ಯದ ನಾಯಕರಲ್ಲದೆ, ಡಾ ಎಸ್ ರಾಧಾಕೃಷ್ಣನ್, ಇಂದಿರಾಗಾಂಧಿಯವರಿಂದ ಬೇಷ್ ಅನಿಸಿಕೊಂಡಿದ್ದ ಕಲಾವಿದೆಯಾಗಿದ್ದರು. ಅವರು ಸೊಲದೇವನಹಳ್ಳಿಯಲ್ಲಿ ಕಟ್ಟಿಸಿರುವ ಆಸ್ಪತ್ರೆ ಪಶು ವೈದ್ಯಕೀಯ ಆಸ್ಪತ್ರೆಗೆ ಸರ್ಕಾರ ಯಾವ ರೀತಿಯಲ್ಲಿ ಸಹಾಯ ಮಾಡಬಹುದೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ಚರ್ಚಿಸುವುದಾಗಿ ಶಿವಕುಮಾರ್ ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ