ಸಿದ್ದರಾಮಯ್ಯಗೆ ಆರ್​ಎಸ್​ಎಸ್​ ಶಾಖೆಗೆ ಬರುವಂತೆ ಆಹ್ವಾನಿಸಿದ ಸಿ ಟಿ ರವಿ

Karnataka Politics: ವಿಪಕ್ಷ ನಾಯಕ ಸಿದ್ದರಾಮಯ್ಯ, ಆರ್​ಎಸ್ಎಸ್ ಎಂದರೆ ಏನು? ಆರ್​ಎಸ್​ಎಸ್​ಗೂ ಬಿಜೆಪಿಗೂ ಏನು ಸಂಬಂಧ? ಎಂದು ಪ್ರಶ್ನಿಸಿದ್ದರು.

ಸಿದ್ದರಾಮಯ್ಯಗೆ ಆರ್​ಎಸ್​ಎಸ್​ ಶಾಖೆಗೆ ಬರುವಂತೆ ಆಹ್ವಾನಿಸಿದ ಸಿ ಟಿ ರವಿ
ಸಿ ಟಿ ರವಿ ಮತ್ತು ಸಿದ್ದರಾಮಯ್ಯ
Updated By: guruganesh bhat

Updated on: Sep 29, 2021 | 6:56 PM

ಬೆಂಗಳೂರು: ವಿಪಕ್ಷ ನಾಯಕ ಸಿದ್ದರಾಮಯ್ಯ ಮತ್ತು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ನಡುವಣ ಕಾಳಗ ತಾರಕಕ್ಕೇರುತ್ತಲೇ ಇದೆ. ಉಭಯ ಮುಖಂಡರು ಟ್ವಟರ್​ನಲ್ಲಿ ಪರಸ್ಪರ ಕಾಲೆಳೆದುಕೊಳ್ಳುತ್ತಿದ್ದಾರೆ. ಸಂವಿಧಾನ, ಆರ್​ಎಸ್​ಎಸ್​, ತಾಲಿಬಾನ್ ಮುಂತಾದ ಪದಗಳನ್ನು ಎಳೆದುತಂದು ಇಬ್ಬರೂ ಕಚ್ಚಾಡಿಕೊಳ್ಳುತ್ತಿದ್ದಾರೆ. ಈ ಮಧ್ಯೆ ಸಿದ್ದರಾಮಯ್ಯಗೆ ಸಿ.ಟಿ.ರವಿ ಆರ್​ಎಸ್​ಎಸ್​ ಶಾಖೆಗೆ ಬರುವಂತೆ ಪರೋಕ್ಷ ಆಹ್ವಾನ ನೀಡಿದ್ದಾರೆ.

ಸಿದ್ದರಾಮಯ್ಯನವರೇ, ಆರ್‌ಎಸ್‌ಎಸ್‌ ಅಂದರೇನು ಎಂಬುದು ನಿಮ್ಮ ಘನ ಹೃದಯಕ್ಕೆ ಅರ್ಥವಾಗಬೇಕಾದರೆ ಮೊದಲು ನೀವು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಶಾಖೆಗೆ ಬರಬೇಕು. ಆರ್‌ಎಸ್‌ಎಸ್‌ ಎಂಬುದನ್ನು ಹೊರಗಿನಿಂದ ಅರ್ಥ ಮಾಡಿಕೊಳ್ಳುವುದು ಕಷ್ಟವಾಗುತ್ತದೆ. ಏಕೆಂದರೆ ಅದು ಕೊಡುವ ಶಿಕ್ಷಣ, ಪ್ರೇರಣೆಯನ್ನು ಹತ್ತಿರದಿಂದ ನೋಡಿದಾಗ ನಿಮಗೆ ಅರ್ಥವಾಗಬಹುದು ಎಂದು ಶಾಸಕರೂ ಆದ ಸಿ.ಟಿ.ರವಿ ಪರೋಕ್ಷವಾಗಿ ಟಾಂಗ್ ನೀಡುತ್ತಲೇ ಆರ್​ಎಸ್​ಎಸ್​ ಶಾಖೆಗೆ ಬರುವಂತೆ ಆಹ್ವಾನವನ್ನೂ ನೀಡಿದ್ದಾರೆ.

ಅದಕ್ಕೂ ಮುನ್ನ ವಿಪಕ್ಷ ನಾಯಕ ಸಿದ್ದರಾಮಯ್ಯ, ಆರ್​ಎಸ್ಎಸ್ ಎಂದರೆ ಏನು? ಆರ್​ಎಸ್​ಎಸ್​ಗೂ ಬಿಜೆಪಿಗೂ ಏನು ಸಂಬಂಧ? ಆರ್​ಎಸ್​ಎಸ್​ ಏನು ಸಾಮಾಜಿಕ ಸೇವಾ ಸಂಘಟನೆಯೇ? ಸಾರ್ವಜನಿಕ ದತ್ತಿಯೇ? ಇಲ್ಲವೇ ಬಿಜೆಪಿ ಎಂಬ ರಾಜಕೀಯ ಪಕ್ಷಕ್ಕೆ ನಾಯಕರನ್ನು ಉತ್ಪಾದಿಸಿ ಕೊಡುವ ಕಾರ್ಖಾನೆಯೇ? ಎಂದು ಪ್ರಶ್ನಿಸಿದ್ದರು.

ನಿಮ್ಮ ಪಕ್ಷದಲ್ಲೇ ಕೇಂದ್ರದಲ್ಲಿ ವಿತ್ತ ಸಚಿವರಾಗಿ, 40 ವರ್ಷ ರಾಜಕೀಯ ಜೀವನದಲ್ಲಿ ಇದ್ದು 13ನೇ ರಾಷ್ಟ್ರಪತಿಯಾಗಿ ನಿಧನರಾದ ಪ್ರಣವ್‌ ಮುಖರ್ಜಿ ಅವರ ಜೀವನ ಚರಿತ್ರೆಯನ್ನು ಒಮ್ಮೆ ಓದಿ , ಆರ್‌ಎಸ್‌ಎಸ್‌ ಅಂದರೇನು ಎಂಬುದನ್ನು ಅವರು ವಿವರಿಸಿದ್ದಾರೆ. ಆಗಲಾದರೂ ಆರ್‌ಎಸ್‌ಎಸ್‌ ಬಗ್ಗೆ ನಿಮ್ಮ ಧೋರಣೆ ಬದಲಾಗಬಹುದು ಎಂದು ಸಹ ಸಿ.ಟಿ.ರವಿ ವಿಪಕ್ಷ ನಾಯಕ ಸಿದ್ದರಾಮಯ್ಯಗೆ ಕಟು ಉತ್ತರ ನೀಡಿದ್ದಾರೆ.

ಇದನ್ನೂ ಓದಿ: 

Amazon: ಅಮೆಜಾನ್ ಅಂದರೆ ಈಸ್ಟ್ ಇಂಡಿಯಾ 2.0: ಆರ್​ಎಸ್​ಎಸ್​ ಮುಖವಾಣಿ ಪಾಂಚಜನ್ಯ ಆರೋಪ

ಸಿದ್ದರಾಮಯ್ಯ ದೊಡ್ಡ ಭಯೋತ್ಪಾದಕ ಅನಿಸುತ್ತಿದೆ: ಮಂಗಳೂರಿನಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್​ ಕಟೀಲು ಹೇಳಿಕೆ