ತಾಪಂ, ಜಿಪಂ ಚುನಾವಣೆ ಮೇಲೆ ಕಣ್ಣು: ಬಿಜೆಪಿ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಭಾರೀ ಪೈಪೋಟಿ, ಜಿಲ್ಲಾ ಸಚಿವ ಮಾಧುಸ್ವಾಮಿ ಮೇಲೆ ಒತ್ತಡ

ತುಮಕೂರು: ತುಮಕೂರು ಜಿಲ್ಲೆಯ ಬಿಜೆಪಿ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಮಾಜಿ ಶಾಸಕ ಬಿ ಸುರೇಶ್ ಗೌಡ ರಾಜೀನಾಮೆ ನೀಡಿದ ಬಳಿಕ ಈ ಸ್ಥಾನಕ್ಕೆ ಬಾರಿ ಪೈಪೋಟಿ ಕೇಳಿಬರುತ್ತಿದೆ. ಜಿಲ್ಲೆಯ ಬಿಜೆಪಿ ಜಿಲ್ಲಾಧ್ಯಕ್ಷ ಸ್ಥಾನ ಅಲಂಕರಿಸಲು ಬಣ ರಾಜಕೀಯ ನಡೆಸಲಾಗುತ್ತಿದೆ. ಈಗಾಗಲೇ ಹಲವರ ಹೆಸರು ಮುಂಚೂಣಿಗೆ ಬಂದಿವೆ. ಪ್ರಸ್ತುತ ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಆಗಿರುವ ಹೆಬ್ಬಾಕ ರವಿ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ರ ಆಪ್ತ ಬಳಗದಲ್ಲಿ ಗುರುತಿಸಿಕೊಂಡಿರುವ ಲಕ್ಷ್ಮೀಶ್ ಹಾಗೂ ಮಾಜಿ ಸಚಿವ ಸೊಗಡು […]

ತಾಪಂ, ಜಿಪಂ ಚುನಾವಣೆ ಮೇಲೆ ಕಣ್ಣು: ಬಿಜೆಪಿ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಭಾರೀ ಪೈಪೋಟಿ, ಜಿಲ್ಲಾ ಸಚಿವ ಮಾಧುಸ್ವಾಮಿ ಮೇಲೆ ಒತ್ತಡ
ಹೆಬ್ಬಾಕ ರವಿ, ಸುರೇಶ್ ಗೌಡ
Follow us
TV9 Web
| Updated By: ಸಾಧು ಶ್ರೀನಾಥ್​

Updated on:Sep 30, 2021 | 10:25 AM

ತುಮಕೂರು: ತುಮಕೂರು ಜಿಲ್ಲೆಯ ಬಿಜೆಪಿ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಮಾಜಿ ಶಾಸಕ ಬಿ ಸುರೇಶ್ ಗೌಡ ರಾಜೀನಾಮೆ ನೀಡಿದ ಬಳಿಕ ಈ ಸ್ಥಾನಕ್ಕೆ ಬಾರಿ ಪೈಪೋಟಿ ಕೇಳಿಬರುತ್ತಿದೆ. ಜಿಲ್ಲೆಯ ಬಿಜೆಪಿ ಜಿಲ್ಲಾಧ್ಯಕ್ಷ ಸ್ಥಾನ ಅಲಂಕರಿಸಲು ಬಣ ರಾಜಕೀಯ ನಡೆಸಲಾಗುತ್ತಿದೆ. ಈಗಾಗಲೇ ಹಲವರ ಹೆಸರು ಮುಂಚೂಣಿಗೆ ಬಂದಿವೆ.

ಪ್ರಸ್ತುತ ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಆಗಿರುವ ಹೆಬ್ಬಾಕ ರವಿ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ರ ಆಪ್ತ ಬಳಗದಲ್ಲಿ ಗುರುತಿಸಿಕೊಂಡಿರುವ ಲಕ್ಷ್ಮೀಶ್ ಹಾಗೂ ಮಾಜಿ ಸಚಿವ ಸೊಗಡು ಶಿವಣ್ಣ ಸೇರಿದಂತೆ ಹಲವರ ಹೆಸರು ಮುನ್ನೆಲೆಗೆ ಬಂದಿದೆ. ಈ ಮಧ್ಯೆ ತಡರಾತ್ರಿ ಮಾಜಿ ಶಾಸಕ ಸುರೇಶ್ ಗೌಡ ಮಾಜಿ ಸಿಎಂ ಯಡಿಯೂರಪ್ಪ ರನ್ನ ಭೇಟಿ ಮಾಡಿದ್ದರು ಎನ್ನಲಾಗಿದ್ದು, ಭೇಟಿ ಬಳಿಕವೂ ಮತ್ತೆ ಸ್ಥಾನದಲ್ಲಿ ಮುಂದುವರೆಯುವುದಿಲ್ಲ ಎಂದು ಹೇಳಿದ್ದಾರೆ.

ಹೀಗಾಗಿ ಇತ್ತ ಜಿಲ್ಲೆಯಲ್ಲಿ ಆಕಾಂಕ್ಷಿತರ ಪಟ್ಟಿ ಕೂಡ ಜೋರಾಗಿ ನಡೆಯುತ್ತಿದ್ದು ಜಿಲ್ಲೆಯಲ್ಲಿ ಬಣದ ರಾಜಕೀಯ ಶುರುವಾಗಿದೆ. ಗುಪ್ತ ಸಭೆಗಳನ್ನ ನಡೆಸಿ ತಮ್ಮ ನಾಯಕರುಗಳ ಮೂಲಕ ಒತ್ತಡ ಹೇರುವ ತಂತ್ರವನ್ನ ಕೆಲವರು ಅನುಸರಿಸುತ್ತಿದ್ದಾರೆ. ಇನ್ನು ಹೆಬ್ಬಾಕ ರವಿ ಸಂಸದ ಜಿಎಸ್ ಬಸವರಾಜ್ ರಿಗೆ ಆಪ್ತರಾಗಿದ್ದು ಇವರು ಮೂಲಕ ಜಿಲ್ಲಾಧ್ಯಕ್ಷ ಸ್ಥಾನ ಪಡೆಯಲು ಕಸರತ್ತು ನಡೆಸುತ್ತಿದ್ದಾರೆ.

ಜೊತೆಗೆ ಜಿಲ್ಲಾ ಉಸ್ತುವಾರಿ ಸಚಿವ ಮಾಧುಸ್ವಾಮಿ ಯನ್ನ ಕೂಡ ಭೇಟಿ ಮಾಡುತ್ತಿದ್ದಾರೆ. ಮತ್ತೊಂದು ಕಡೆ ಬಿಜೆಪಿಯಲ್ಲಿ ಸಕ್ರಿಯವಾಗಿ ಭಾಗಿಯಾಗಿರುವ ಲಕ್ಷ್ಮೀಶ್ ಹೆಸರು ಕೂಡ ಬಲವಾಗಿ ಕೇಳಿಬರುತ್ತಿದೆ. ಇದರ ನಡುವೆ ಮಾಜಿ ಸಚಿವ ಸೊಗಡು ಶಿವಣ್ಣ ಹಾಗೂ ಸಿದ್ದಗಂಗಾ ಆಸ್ಪತ್ರೆ ವೈದ್ಯರಾಗಿರುವ ಡಾ ಪರಮೇಶ್ ರ ಹೆಸರು ಕೂಡ ಮುಂಚೂಣಿಯಲ್ಲಿ ಇದೆ.

ಕೆಲವು ದಿನಗಳಲ್ಲಿ ತಾಪಂ ಜಿಪಂ ಚುನಾವಣೆ ಬರುತ್ತಿದ್ದು, ಸಧ್ಯ ಜಿಲ್ಲೆಯ ಜಿಲ್ಲಾಧ್ಯಕ್ಷ ಸ್ಥಾನ ಮಹತ್ವ ಪಡೆದು ಕೊಂಡಿದೆ. ಸಧ್ಯ ಜಿಲ್ಲೆಯಲ್ಲಿ ಎರಡ್ಮೂರು ಬಣಗಳು ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಪೈಪೋಟಿ ನಡೆಸುತ್ತಿವೆ. ಯಾರಾಗ್ತಾರೆ ಅನ್ನೋದು ಜಿಲ್ಲೆಯಲ್ಲಿ ಕುತೂಹಲಕ್ಕೆ ಕಾರಣವಾಗಿದೆ.

ಇದನ್ನೂ ಓದಿ: ಮೊದಲು ಕೆರೆಗೆ ನೀರು, ಆಮೇಲೆ ವೋಟ್​ -ಮಾಜಿ MLA ಸುರೇಶ್‌ ಗೌಡಗೆ ಸಾರ್ವಜನಿಕರ ಚಾರ್ಜ್​

ಇದನ್ನೂ ಓದಿ: ಕೈ ತೊರೆದು ಜೆಡಿಎಸ್​​ಗೆ ಬಂದ ಶಿವರಾಮೇ ಗೌಡ ಪುತ್ರ ಚೇತನ್​; ಅಪ್ಪ-ಮಗ ಇಬ್ಬರೂ ಈಗ ಒಂದೇ ಪಕ್ಷದಲ್ಲಿ

Published On - 10:21 am, Thu, 30 September 21