ಕೈ ತೊರೆದು ಜೆಡಿಎಸ್ಗೆ ಬಂದ ಶಿವರಾಮೇ ಗೌಡ ಪುತ್ರ ಚೇತನ್; ಅಪ್ಪ-ಮಗ ಇಬ್ಬರೂ ಈಗ ಒಂದೇ ಪಕ್ಷದಲ್ಲಿ
ಇಲ್ಲಿಯ ತನಕ ಶಿವರಾಮೇಗೌಡ ಹಾಗೂ ಅವರ ಮಗ ಬೇರೆ ಬೇರೆ ಪಕ್ಷ ಎಂಬ ಮಾತುಗಳು ಹಲವು ಬಾರಿ ಕೇಳಿಬಂದಿದ್ದವು. ಅಪ್ಪ ಜೆಡಿಎಸ್, ಮಗ ಕಾಂಗ್ರೆಸ್ ಎಂಬ ಮಾತು ಸಾಧಾರಣವಾಗಿತ್ತು. ಆದರೆ, ಈಗ ಅದಕ್ಕೆ ಅಂತ್ಯ ಹಾಡಲೆಂದೇ ಚೇತನ್ ಗೌಡ ಜೆಡಿಎಸ್ನತ್ತ ಮುಖ ಮಾಡಿರುವಂತಿದೆ.
ಮಂಡ್ಯ: ಪದ್ಮನಾಭನಗರ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದಿಂದ ಚುನಾವಣೆಗೆ ನಿಂತು ಆರ್.ಅಶೋಕ್ ಎದುರು ಪರಾಜಯ ಗಳಿಸಿದ ಚೇತನ್ ಗೌಡ ಇದೀಗ ಕಾಂಗ್ರೆಸ್ ತೊರೆದು ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ. ಮಂಡ್ಯ ಮಾಜಿ ಸಂಸದ ಶಿವರಾಮೇಗೌಡ ಅವರ ಪುತ್ರನಾಗಿರುವ ಚೇತನ್ ಗೌಡ ರಾಜಕೀಯ ಭವಿಷ್ಯಕ್ಕಾಗಿ ಮತ್ತೆ ಜಿಲ್ಲಾ ಪಂಚಾಯತ್‌ನಿಂದ ಸ್ಪರ್ಧೆ ಮಾಡಲಿದ್ದು, ಜೆಡಿಎಸ್‌ನಿಂದ ಜಿಲ್ಲಾ ಪಂಚಾಯತಿಗೆ ಸ್ಪರ್ಧಿಸಲು ಸಿದ್ದತೆಯನ್ನೂ ಆರಂಭಿಸಿದ್ದಾರೆ.
ಕೈ ನಾಯಕರನ್ನ ಭೇಟಿಯಾಗಿ ಕಾಂಗ್ರೆಸ್ ಪಕ್ಷಕ್ಕೆ ಚೇತನ್ ರಾಜೀನಾಮೆ ನೀಡಿದ್ದು, ಈಗಾಗಲೇ ಜೆಡಿಎಸ್ ಪಕ್ಷ ಸೇರ್ಪಡೆಗೆ ವರಿಷ್ಠರ ಸಮ್ಮತಿ ಸಿಕ್ಕಿದೆ. ಹೀಗಾಗಿ ಕೆಲವೇ ದಿನಗಳಲ್ಲಿ ಮಂಡ್ಯ ಜೆಡಿಎಸ್ ನಾಯಕರ ಸಮ್ಮುಖದಲ್ಲಿ ಪಕ್ಷಕ್ಕೆ ಸೇರ್ಪಡೆಯಾಗಲಿದ್ದಾರೆ. ಇಲ್ಲಿಯ ತನಕ ಶಿವರಾಮೇಗೌಡ ಹಾಗೂ ಅವರ ಮಗ ಬೇರೆ ಬೇರೆ ಪಕ್ಷ ಎಂಬ ಮಾತುಗಳು ಹಲವು ಬಾರಿ ಕೇಳಿಬಂದಿದ್ದವು. ಅಪ್ಪ ಜೆಡಿಎಸ್, ಮಗ ಕಾಂಗ್ರೆಸ್ ಎಂಬ ಮಾತು ಸಾಧಾರಣವಾಗಿತ್ತು. ಆದರೆ, ಈಗ ಅದಕ್ಕೆ ಅಂತ್ಯ ಹಾಡಲೆಂದೇ ಚೇತನ್ ಗೌಡ ಜೆಡಿಎಸ್ನತ್ತ ಮುಖ ಮಾಡಿರುವಂತಿದೆ.
ತಂದೆ ಮಗ ಬೇರೆ ಬೇರೆ ಪಕ್ಷ ಎಂಬ ಟೀಕೆಗಳಿದ್ದವು. ತಂದೆಯ ಮಾರ್ಗದರ್ಶನದಂತೆ ನಡೆಯಲು ಜೆಡಿಎಸ್ ಸೇರಿದ್ದೇನೆ. ವರಿಷ್ಠರ ಆಶೀರ್ವಾದ ಪಡೆದು ಜಿಲ್ಲಾ ಪಂಚಾಯತ್‌ಗೆ ಸ್ಪರ್ಧಿಸುತ್ತೇನೆ ಎಂದು ನಾಗಮಂಗಲದಲ್ಲಿ ಚೇತನ್ ಗೌಡ ಹೇಳಿಕೆ ನೀಡಿದ್ದಾರೆ. ಮಂಡ್ಯ ಜಿಲ್ಲೆ ನಾಗಮಂಗಲದ ಬಿಂಡಿಗನವಿಲೆ ಜಿ.ಪಂ ಕ್ಷೇತ್ರದಿಂದ ಸ್ಪರ್ಧೆಗೆ ತಯಾರಿ ನಡೆದಿದ್ದು, ಕಾರ್ಯಕರ್ತರು, ಅಭಿಮಾನಿಗಳ ಒತ್ತಾಯದಂತೆ ಚೇತನ್ ಸ್ಪರ್ಧೆ ಮಾಡಲಿದ್ದಾರೆ.
ಪದ್ಮನಾಭನಗರ MLA ಚುನಾವಣೆಯಲ್ಲಿ ಆರ್ ಅಶೋಕ್ ವಿರುದ್ಧ ಸೋತಿದ್ದ ಚೇತನ್ ಗೌಡ ಜೆಡಿಎಸ್ ಸೇರುತ್ತಿರುವ ಬಗ್ಗೆ ಅವರ ತಂದೆ, ಮಂಡ್ಯ ಮಾಜಿ ಸಂಸದ ಶಿವರಾಮೇಗೌಡ ಪ್ರತಿಕ್ರಿಯಿಸಿ, ಮಗನನ್ನ ಜೆಡಿಎಸ್ಗೆ ಕರೆತರಲಾಗಿದೆ. ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಆಸೆ ಇದೆ. ಹಾಗಂತ ನಾನು ಜೆಡಿಎಸ್‌ನಿಂದ ಸ್ಪರ್ಧೆ ಮಾಡಿದರೆ ಹಾಲಿ ಶಾಸಕ ಸುರೇಶ್‌ಗೌಡರನ್ನ ಮನೆಗೆ ಕಳುಹಿಸಲ್ಲ. ಆತನಿಗೆ ನನಗಿಂತ ಹೆಚ್ಚು ಭಾಷೆ ಗೊತ್ತಿದೆ. ಹಾಗಾಗಿ ಅವ್ರನ್ನ ಲೋಕಸಭೆಗೆ ಪ್ರಮೋಷನ್ ಮಾಡೋಣ ಎಂದಿದ್ದಾರೆ. ಮುಂದಿನ ಚುನಾವಣೆಯಲ್ಲಿ ನಾನು ಅಥವಾ ಎಂಎಲ್ಸಿ ಅಪ್ಪಾಜಿಗೌಡ ಅಭ್ಯರ್ಥಿಯಾಗುತ್ತೇವೆ ಎನ್ನುವುದನ್ನೂ ಮಾಜಿ ಸಂಸದ ಶಿವರಾಮೇಗೌಡ ನಾಗಮಂಗಲದಲ್ಲಿ ಮಾತನಾಡುವಾಗ ಹೇಳಿದ್ದಾರೆ.
ಇದನ್ನೂ ಓದಿ: ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ವಿರುದ್ಧ ಕಿಕ್ಬ್ಯಾಕ್ ಅರೋಪ; ಅಮಾನತಿಗೆ ಜೆಡಿಎಸ್ ಶಾಸಕ ಸಾ.ರಾ. ಮಹೇಶ್ ಆಗ್ರಹ
ಸುಮಲತಾದು ಕಠೋರ ಹೃದಯ; ನಟಿ ರಮ್ಯಾಗೆ ಆದ ಸ್ಥಿತಿ ಸುಮಲತಾಗೂ ಆಗುತ್ತೆ: ಎಲ್. ಆರ್. ಶಿವರಾಮೇಗೌಡ ಭವಿಷ್ಯ
Published On - 9:59 am, Sat, 4 September 21