ಮಂಡ್ಯ: ಜಿಂಕೆ ಬೇಟೆಯಾಡಿ ಹೆಗಲ ಮೇಲೆ ಹೊತ್ತು ಬರುತ್ತಿದ್ದವರಿಗೆ ಅರಣ್ಯಾಧಿಕಾರಿಗಳಿಂದ ಗುಂಡೇಟು; ಒಬ್ಬ ಸೆರೆ, ಮೂವರು ಪರಾರಿ

ಬೇಟೆಗೆಂದು ಅರಣ್ಯಕ್ಕೆ ತೆರಳಿದ್ದ ಈ ತಂಡದವರು ಬಂದೂಕು ಉಪಯೋಗಿಸಿ ಜಿಂಕೆಯೊಂದನ್ನು ಕೊಂದಿದ್ದಾರೆ ಎಂದು ತಿಳಿದುಬಂದಿದೆ. ಬಸವನಬೆಟ್ಟ ಅರಣ್ಯ ಪ್ರದೇಶದಲ್ಲಿ ಶಿಕಾರಿಗೆಂದು ಇವರು ತೆರಳಿದ್ದು, ಅದೇ ಸಂದರ್ಭದಲ್ಲಿ ವನಪಾಲಕರು ಗಸ್ತಿಗೆ ತೆರಳಿದ ಪರಿಣಾಮ ವಿಷಯ ಬೆಳಕಿಗೆ ಬಂದಿದೆ.

ಮಂಡ್ಯ: ಜಿಂಕೆ ಬೇಟೆಯಾಡಿ ಹೆಗಲ ಮೇಲೆ ಹೊತ್ತು ಬರುತ್ತಿದ್ದವರಿಗೆ ಅರಣ್ಯಾಧಿಕಾರಿಗಳಿಂದ ಗುಂಡೇಟು; ಒಬ್ಬ ಸೆರೆ, ಮೂವರು ಪರಾರಿ
ಸ್ಥಳ ಪರಿಶೀಲನೆ ಮಾಡುತ್ತಿರುವ ಅಧಿಕಾರಿಗಳು
Follow us
TV9 Web
| Updated By: Skanda

Updated on: Sep 03, 2021 | 12:52 PM

ಮಂಡ್ಯ: ವನ್ಯಪ್ರಾಣಿಗಳ ಬೇಟೆಯಲ್ಲಿ ನಿರತರಾಗಿದ್ದ ನಾಲ್ಕು ಮಂದಿ ಕಳ್ಳರ ತಂಡವೊಂದು ಗಸ್ತಿನಲ್ಲಿದ್ದ ಅರಣ್ಯಾಧಿಕಾರಿಗಳಿಗೆ ಎದುರಾಗಿ ಗುಂಡೇಟು ತಿಂದ ಘಟನೆ ಮಂಡ್ಯ ಜಿಲ್ಲೆ ಮಳವಳ್ಳಿ ತಾಲ್ಲೂಕಿನ ಬಸವನಬೆಟ್ಟದ ಬಳಿ ನಡೆದಿದೆ. ನಾಲ್ವರು ಕಳ್ಳರು ಜಿಂಕೆಯೊಂದನ್ನು ಕೊಂದು ಹೆಗಲ ಮೇಲೆ ಹೊತ್ತುಕೊಂಡು ಬರುತ್ತಿದ್ದರು ಎನ್ನಲಾಗಿದ್ದು, ಈ ವೇಳೆ ಗಸ್ತಿನಲ್ಲಿದ್ದ ವನಪಾಲಕರಿಗೆ ಅಚಾನಕ್​ ಆಗಿ ಎದುರಾಗಿದ್ದಾರೆ. ತಕ್ಷಣವೇ ಎಲ್ಲರೂ ತಪ್ಪಿಸಿಕೊಳ್ಳಲು ಯತ್ನಿಸಿದರಾದರೂ ಎಚ್ಚೆತ್ತ ವನಪಾಲಕರು ಶೂಟೌಟ್​ ಮಾಡಿದ ಪರಿಣಾಮ ವೆಂಕಟೇಶ್ ಎಂಬಾತ ಗುಂಡೇಟು ತಿಂದು ಸಿಕ್ಕಿಹಾಕಿಕೊಂಡಿದ್ದಾನೆ. ಇನ್ನುಳಿದ ಮೂವರು ಮಾತ್ರ ಪರಾರಿಯಾಗಿದ್ದಾರೆ.

ಬೇಟೆಗೆಂದು ಅರಣ್ಯಕ್ಕೆ ತೆರಳಿದ್ದ ಈ ತಂಡದವರು ಬಂದೂಕು ಉಪಯೋಗಿಸಿ ಜಿಂಕೆಯೊಂದನ್ನು ಕೊಂದಿದ್ದಾರೆ ಎಂದು ತಿಳಿದುಬಂದಿದೆ. ಬಸವನಬೆಟ್ಟ ಅರಣ್ಯ ಪ್ರದೇಶದಲ್ಲಿ ಶಿಕಾರಿಗೆಂದು ಇವರು ತೆರಳಿದ್ದು, ಅದೇ ಸಂದರ್ಭದಲ್ಲಿ ವನಪಾಲಕರು ಗಸ್ತಿಗೆ ತೆರಳಿದ ಪರಿಣಾಮ ವಿಷಯ ಬೆಳಕಿಗೆ ಬಂದಿದೆ. ಹಲಗೂರು ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು, ಗುಂಡೇಟು ತಿಂದ ವೆಂಕಟೇಶ್ ಎಂಬಾತನಿಗೆ ಮಂಡ್ಯದ ಮಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಅಂತೆಯೇ ತಪ್ಪಿಸಿಕೊಂಡ ಮೂವರ ಬಗ್ಗೆ ಮಾಹಿತಿ ಕಲೆ ಹಾಕಲಾಗಿದ್ದು, ತನಿಖೆ ಮುಂದುವರೆದಿದೆ.

DEER HUNTER

ಗುಂಡೇಟು ತಿಂದ ಕಳ್ಳ

ಬಲೆಗೆ ಬಿದ್ದ ಮರಗಳ್ಳ ಶಿವಮೊಗ್ಗ: ಶಿವಮೊಗ್ಗ ಶಂಕರ ವಲಯ ವ್ಯಾಪ್ತಿಯಲ್ಲಿ ಗಂಧದ ಮರಗಳ ಕಳ್ಳತನ ಜೋರಾಗಿ ನಡೆಯುತ್ತಿದೆ. ಹೀಗಿರುವಾಗಲೇ ಶಿವಮೊಗ್ಗ ಹೊರವಲಯದಲ್ಲಿರುವ ಸೋಮಿನಕೊಪ್ಪದ ಹೇಮಣ್ಣ ಎನ್ನುವ ವ್ಯಕ್ತಿಯು ಅನೇಕ ವರ್ಷಗಳಿಂದ ಅಕ್ರಮವಾಗಿ ಶ್ರೀಗಂಧ ಮರದ ದಂಧೆಯಲ್ಲಿ ತೊಡಗಿರುವ ವಿಚಾರ ಬೆಳಕಿಗೆ ಬಂದಿದೆ. ಶ್ರೀಗಂಧ ಮರ ಕಡಿದು, ಬಳಿಕ ಅದನ್ನು ತುಂಡುಗಳನ್ನು ಮಾಡಿ ಈತ ಮಾರಾಟ ಮಾಡುತ್ತಿದ್ದ.

ಇಂದು ಕೂಡಾ ಬೈಕ್ ಮೇಲೆ ಸುಮಾರು 60 ಕೆಜಿ ಶ್ರೀಗಂಧ ಮರದ ತುಂಡುಗಳನ್ನು ಸಾಗಾಟ ಮಾಡುತ್ತಿದ್ದನು. ಶಂಕರ ವಲಯ ಆರ್​ಎಫ್​ಓ ಗಿರೀಶ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸುವಾಗ ಈತ ಸಿಕ್ಕಿಬಿದ್ದಿದ್ದಾನೆ. ಶಿವಮೊಗ್ಗ ತಾಲೂಕಿನ ಬಿಕೋನಹಳ್ಳಿ ಬಳಿ ಅಧಿಕಾರಿಗಳು ಹೇಮಣ್ಣನ ಬೈಕ್ ಪರಿಶೀಲನೆ ಮಾಡಿದ್ದು, ಬೈಕ್ ಮತ್ತು ಏಳು ಲಕ್ಷ ರೂಪಾಯಿ ಮೌಲ್ಯದ ಶ್ರೀಗಂಧ ಮರದ ತುಂಡುಗಳನ್ನು ಅಧಿಕಾರಿಗಳು ಜಪ್ತಿ ಮಾಡಿದ್ದಾರೆ.

ಈ ನಡುವೆ ಅರಣ್ಯ ಅಧಿಕಾರಿಗಳು ಮತ್ತು ಫಾರೆಸ್ಟರ್ ಹಾಗೂ ವಾಚರ್​ಗಳು ಕಠಿಣ ಕ್ರಮ ತೆಗೆದುಕೊಳ್ಳಲು ವಿಫಲವಾಗಿದ್ದಾರೆ. ಹೀಗಾಗಿ ಮಲೆನಾಡಿನಲ್ಲಿ ಅರಣ್ಯ ಸಂಪತ್ತು ಲೂಟಿಯಾಗುತ್ತಿದೆ. ಬಲೆಬಾಳುವ ಸಾಗುವಾನಿ, ಬೀಟೆ, ಶ್ರೀಗಂಧ ಮರಗಳನ್ನು ಅಕ್ರಮವಾಗಿ ಸಾಗಾಟ ಮಾಡಲಾಗುತ್ತಿದೆ. ಸದ್ಯ ಒಬ್ಬ ಆರೋಪಿಯನ್ನು ಅಧಿಕಾರಿಗಳು ಬಂಧಿಸಿದ್ದು, ಅರಣ್ಯ ಸಂಪತ್ತನ್ನು ಕಾಪಾಡಲು ಇನ್ನೂ ಹೆಚ್ಚಿನ ಕ್ರಮದ ಅಗತ್ಯತೆ ಇದೆ ಎನ್ನುವುದು ಇಲ್ಲಿನ ಸ್ಥಳೀಯರ ಅಭಿಪ್ರಾಯ.

ವಿಚಾರಣೆ ವೇಳೆ ಆರೋಪಿ ಹೇಮಣ್ಣನ ಹಿಂದೆ ದೊಡ್ಡ ಕಳ್ಳತನದ ಗುಂಪು ಇರುವುದು ತಿಳಿದಿದೆ. ಬೆಲೆಬಾಳುವ ಶ್ರೀಗಂಧ ಮರಗಳ ತುಂಡಿನಿಂದ ಕರಕುಶಲ ವಸ್ತುಗಳನ್ನು ತಯಾರು ಮಾಡಿ ಅಕ್ರಮವಾಗಿ ಮಾರಾಟ ಮಾಡುತ್ತಿರುವುದು ಬೆಳಕಿಗೆ ಬಂದಿದೆ. ಸದ್ಯ ಈತನ ಹಿಂದೆ ಇರುವ ಗಂಧದ ಮರದ ವ್ಯಾಪಾರಸ್ಥರು ಸೇರಿದಂತೆ, ಇತರೆ ಅಕ್ರಮ ದಂಧೆಕೋರರನ್ನು ಅರಣ್ಯಾಧಿಕಾರಿಗಳು ಮತ್ತು ಸ್ಥಳೀಯ ಪೊಲೀಸರು ಪತ್ತೆ ಹಚ್ಚುತ್ತಿದ್ದಾರೆ.

ಇದನ್ನೂ ಓದಿ: ಚಿಕ್ಕಮಗಳೂರು ಪೊಲೀಸರ ಬೃಹತ್​ ಬೇಟೆ; 1 ಕ್ವಿಂಟಲ್​ಗೂ ಹೆಚ್ಚು ತೂಕದ ಒಣ ಗಾಂಜಾ ತರಕಾರಿ ಗಾಡಿಯಲ್ಲಿ ಪತ್ತೆ, ಮೂವರು ವಶಕ್ಕೆ

ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್