ಕೆಡಿಪಿ ಸಭೆಗೆ ಗೈರಾಗಿದ್ದ PWD ಅಧಿಕಾರಿಯನ್ನು ಸಸ್ಪೆಂಡ್ ಮಾಡುವಂತೆ ಡಿಸಿಎಂ ಡಿಕೆ ಶಿವಕುಮಾರ್ ಸೂಚನೆ

| Updated By: ಗಂಗಾಧರ​ ಬ. ಸಾಬೋಜಿ

Updated on: Sep 25, 2023 | 4:11 PM

ಬನಶಂಕರಿಯ ಬೆಂಗಳೂರು ನಗರ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಇಂದು ಡಿಸಿಎಂ ಡಿಕೆ ಶಿವಕುಮಾರ್​ ಅಧ್ಯಕ್ಷತೆಯಲ್ಲಿ ಮೊದಲನೇ ತ್ರೈಮಾಸಿಕ ಕೆಡಿಪಿ ಸಭೆ ಮಾಡಲಾಗಿದ್ದು, ಸಭೆಗೆ ಗೈರಾಗಿದ್ದ ಲೋಕೋಪಯೋಗಿ ಇಲಾಖೆ ಅಧಿಕಾರಿಯನ್ನ ಸಸ್ಪೆಂಡ್ ಮಾಡುವಂತೆ ಸೂಚನೆ ನೀಡಿದ್ದಾರೆ.

ಕೆಡಿಪಿ ಸಭೆಗೆ ಗೈರಾಗಿದ್ದ PWD ಅಧಿಕಾರಿಯನ್ನು ಸಸ್ಪೆಂಡ್ ಮಾಡುವಂತೆ ಡಿಸಿಎಂ ಡಿಕೆ ಶಿವಕುಮಾರ್ ಸೂಚನೆ
ಡಿಸಿಎಂ ಡಿ.ಕೆ.ಶಿವಕುಮಾರ್
Follow us on

ಬೆಂಗಳೂರು, ಸೆಪ್ಟೆಂಬರ್​​ 25: ಬನಶಂಕರಿಯ ಬೆಂಗಳೂರು ನಗರ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಇಂದು ಡಿಸಿಎಂ ಡಿಕೆ ಶಿವಕುಮಾರ್ (DK Shivakumar)​ ಅಧ್ಯಕ್ಷತೆಯಲ್ಲಿ ಮೊದಲನೇ ತ್ರೈಮಾಸಿಕ ಕೆಡಿಪಿ ಸಭೆ ಮಾಡಲಾಗಿದ್ದು, ಸಭೆಗೆ ಗೈರಾಗಿದ್ದ ಲೋಕೋಪಯೋಗಿ ಇಲಾಖೆ ಅಧಿಕಾರಿಯನ್ನ ಸಸ್ಪೆಂಡ್ ಮಾಡುವಂತೆ ಸೂಚನೆ ನೀಡಿದ್ದಾರೆ. ಜನತಾ ದರ್ಶನ ಸಿದ್ಧತೆಗೆ ಹೋಗಿದ್ದಾರೆಂದು ಅಧಿಕಾರಿಗಳಿಂದ ಸಬೂಬು ನೀಡಿದ್ದು, ಹಾಗಿದ್ದರೆ ಇದ್ಯಾವ ಸಭೆ ಎಂದು ಅಧಿಕಾರಿಗಳನ್ನು ಡಿಕೆ ಶಿವಕುಮಾರ್​ ಪ್ರಶ್ನಿಸಿದ್ದಾರೆ.

ನ್ಯಾಯಾಲಯದ ಕೇಸ್​​ಗಳಿಗೆ ಹಾಜರಾಗುವುದನ್ನು ಬಿಟ್ಟರೆ, ಬೇರೆ ಕಾರಣಗಳಿಂದ ಗೈರಾದ ಅಧಿಕಾರಿಗಳ ಮಾಹಿತಿಯನ್ನು ಡಿಸಿಎಂ ಡಿಕೆ ಶಿವಕುಮಾರ್​ ಪಡೆದುಕೊಂಡಿದ್ದಾರೆ.

ಧಿಕಾರಿಗಳಿಗೆ ಎಚ್ಚರಿಕೆ ನೀಡಿದ ಡಿಕೆ ಶಿವಕುಮಾರ್

ಕೆಡಿಪಿ ಸಭೆಯಲ್ಲಿ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿರುವ ಡಿ.ಕೆ.ಶಿವಕುಮಾರ್​, 7-8 ಅಧಿಕಾರಿಗಳು ಬಿಟ್ಟು ಬೇರೆ ಯಾರ ಮುಖವೂ ನಾನು ನೋಡಿಲ್ಲ. ಜಿಲ್ಲಾ ಉಸ್ತುವಾರಿ ಸಚಿವರನ್ನು ಬಂದು ಭೇಟಿ‌ ಮಾಡುವ ಸೌಜನ್ಯವಿಲ್ಲ. ನಿಮ್ಮ ಇಲಾಖೆಯಲ್ಲಾದ ಕೆಲಸದ ಬಗ್ಗೆ ಯಾವುದೇ ಮಾಹಿತಿ‌ ಕೊಟ್ಟಿಲ್ಲ. ಬನ್ನೇರುಘಟ್ಟದಲ್ಲಿ ಪ್ರಾಣಿಗಳು ಮೃತಪಟ್ಟಿವೆ, ಯಾರೂ ವರದಿ ಕೊಡಲಿಲ್ಲ. ಜಿಲ್ಲಾ ಪಂಚಾಯತ್ ಹೇಗೆ ಕೆಲಸ ಮಾಡುತ್ತೆ ಅಂತ ನನಗೆ ಗೊತ್ತಿದೆ ಎಂದು ಕಿಡಿಕಾರಿದ್ದಾರೆ.

ಇದನ್ನೂ ಓದಿ: ಅನ್ಯಾಯ ತಪ್ಪಿಸಲು ಪ್ರಧಾನಿ ಮೋದಿ ಮಧ್ಯಸ್ಥಿಕೆ ವಹಿಸಿ ಮಾತುಕತೆ ನಡೆಸುವುದೇ ಪರಿಹಾರ; ಸಿಎಂ ಸಿದ್ದರಾಮಯ್ಯ

ನಿಮ್ಮ ಬಳಿ ಬರುವ ಸಾರ್ವಜನಿಕರನ್ನು ಕೇವಲ ಹಣದಿಂದ ಅಳೆಯಬೇಡಿ. ಭ್ರಷ್ಟಾಚಾರ ಬಿಟ್ಟು ಪಾರದರ್ಶಕ ಆಡಳಿತ. ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳು ಜನರಿಗೆ ತಲುಪಬೇಕು. ಮೊದಲು ಕುಡಿಯುವ ನೀರಿಗೆ ಆದ್ಯತೆ ನೀಡುವಂತೆ ಸೂಚನೆ ನೀಡಿದ್ದಾರೆ.

ಇದನ್ನೂ ಓದಿ: ಕಾಂಗ್ರೆಸ್​ನವರಿಗೆ ಕರ್ನಾಟಕದ ಬಗ್ಗೆ ಚಿಂತೆಯಿಲ್ಲ, ಜೋಕರ್​​ನನ್ನು ಪ್ರಧಾನಿ ಮಾಡುವುದಷ್ಟೇ ಯತ್ನ; ಬಸನಗೌಡ ಪಾಟೀಲ್ ವಾಗ್ದಾಳಿ

ಹೊಸ ಸರ್ಕಾರ ಬಂದಿದೆ. ನಮ್ಮದೆಯಾದ ಕಲ್ಪನೆಗಳು ಇದ್ದಾವೆ. ಸರ್ಕಾರ ಹಲವು ಯೋಜನೆ ‌ಜಾರಿಗೆ ತಂದಿದೆ.
ಶಾಲೆ, ಕುಡಿಯುವ ನೀರು, ರಸ್ತೆ, ವಿದ್ಯುತ್ ಸೇರಿದಂತೆ ನಮ್ಮದೆಯಾದ ಯೋಜನೆಗಳು ಇದ್ದಾವೆ. ಅದಕ್ಕೆ ತಕ್ಕಂತೆ ನೀವು ಕೆಲಸ ಮಾಡಬೇಕು ಎಂದು ಹೇಳಿದ್ದಾರೆ.

ಕೆ.ಡಿ.ಪಿ ಸಭೆಯಲ್ಲಿ ಸಂಸದ ಸುರೇಶ್, ಶಾಸಕರಾದ ಸೋಮಶೇಖರ್, ಶಿವಣ್ಣ, ಕೃಷ್ಣಪ್ಪ, ವಿಧಾನಪರಿಷತ್ ಸದಸ್ಯರಾದ ಯು.ಬಿ. ವೆಂಕಟೇಶ್, ಶರವಣ, ಗೋಪಿನಾಥ ರೆಡ್ಡಿ ಮತ್ತು ಬಿಬಿಎಂಪಿ ಆಯುಕ್ತ ತುಷಾರ್ ಗಿರಿನಾಥ್ ಸೇರಿದಂತೆ ಹಲವು ಅಧಿಕಾರಿಗಳು ಭಾಗಿ ಆಗಿದ್ದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.