ಬಿಜೆಪಿ ಕಾರ್ಯಕರ್ತರ ನೈತಿಕ ಸ್ಥೈರ್ಯ ಕುಗ್ಗಿಸಲು ಡಿಕೆ ಶಿವಕುಮಾರ್ ಆಟ: ಶಾಸಕ ಯತ್ನಾಳ್

|

Updated on: Jun 25, 2023 | 9:53 PM

ಬಿಜೆಪಿ ನಾಯಕರು ಮತ್ತು ಕಾಂಗ್ರೆಸ್ ನಾಯಕರ ನಡುವೆ ಹೊಂದಾಣಿಕೆ ರಾಜಕಾರಣ ನಡೆದಿದೆ ಎಂಬ ಬಿಜೆಪಿಯ ಕೆಲ ನಾಯಕರ ಆರೋಪದ ನಡುವೆಯೂ ಡಿಸಿಎಂ ಡಿಕೆ ಶಿವಕುಮಾರ್ ಅವರು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿಯಾಗಿದ್ದಾರೆ. ಇದರ ಹಿಂದಿನ ಉದ್ದೇಶವನ್ನು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಬಿಚ್ಚಿಟ್ಟಿದ್ದಾರೆ.

ಬಿಜೆಪಿ ಕಾರ್ಯಕರ್ತರ ನೈತಿಕ ಸ್ಥೈರ್ಯ ಕುಗ್ಗಿಸಲು ಡಿಕೆ ಶಿವಕುಮಾರ್ ಆಟ: ಶಾಸಕ ಯತ್ನಾಳ್
ಬಿಜೆಪಿ ಕಾರ್ಯಕರ್ತರ ನೈತಿಕ ಸ್ಥೈರ್ಯ ಕುಗ್ಗಿಸಲು ಡಿಕೆ ಶಿವಕುಮಾರ್ ಬಿಜೆಪಿ ನಾಯಕರನ್ನು ಭೇಟಿಯಾಗುತ್ತಿದ್ದಾರೆ ಎಂದು ಹೇಳಿದ ಯತ್ನಾಳ್
Follow us on

ಬೆಳಗಾವಿ: ಬಿಜೆಪಿ ಕಾರ್ಯಕರ್ತರ ನೈತಿಕ ಸ್ಥೈರ್ಯ ಕುಂದಿಸಲು ಡಿಸಿಎಂ ಡಿಕೆ ಶಿವಕುಮಾರ್ (DK Shivakumar) ಅವರು ಆಟ ಆಡುತ್ತಿದ್ದಾರೆ ಎಂದು ವಿಜಯಪುರದ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ (Basanagouda Patil Yatnal) ಆರೋಪಿಸಿದ್ದಾರೆ. ಬಿಜೆಪಿ ನಾಯಕರು ಮತ್ತು ಕಾಂಗ್ರೆಸ್ ನಾಯಕರ ನಡುವೆ ಹೊಂದಾಣಿಕೆ ರಾಜಕಾರಣ ನಡೆದಿದೆ ಎಂಬ ಬಿಜೆಪಿಯ ಕೆಲ ನಾಯಕರ ಆರೋಪದ ನಡುವೆಯೂ ಡಿಸಿಎಂ ಡಿಕೆ ಶಿವಕುಮಾರ್ ಅವರು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ (Basavaraj Bommai) ಅವರನ್ನು ಭೇಟಿಯಾಗಿದ್ದಾರೆ. ಇದರ ಹಿಂದಿನ ಉದ್ದೇಶವನ್ನು ಯತ್ನಾಳ್ ಬಿಚ್ಚಿಟ್ಟಿದ್ದಾರೆ.

ಜಿಲ್ಲೆಯ ಚಿಕ್ಕೋಡಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ನಾಯಕರು ಬಿಜೆಪಿ ನಾಯಕರನ್ನು ಭೇಟಿಯಾದರೆ ಬಿಜೆಪಿ ಕಾರ್ಯಕರ್ತರ ಮನೋಬಲ ಕುಸಿಯುತ್ತದೆ ಎಂಬ ಕಾರಣಕ್ಕೆ ಭೇಟಿಯಾಗುತ್ತಿದ್ದಾರೆ. ಕೈ ನಾಯಕರು ಈ ರೀತಿ ಭೇಟಿಯಾದರೆ ನಾವು ಯಾಕೆ ಪಕ್ಷ ಕಟ್ಟಬೇಕೆಂಬ ಭಾವನೆ ಕಾರ್ಯಕರ್ತರಲ್ಲಿ ಮೂಡಿಸಲು ಡಿಕೆ ಶಿವಕುಮಾರ್ ಆಟ ಆಡುತ್ತಿದ್ದಾರೆ. ಇದೇ ಕಾರಣಕ್ಕೆ ಡಿ.ಕೆ.ಶಿವಕುಮಾರ್ ಅವ​ರನ್ನು ಮನೆಗೆ ಕರೆಸಿಕೊಳ್ಳಬೇಡಿ ಎಂದು ಬೊಮ್ಮಾಯಿ ಅವರಿಗೆ ಸಲಹೆ ನೀಡಿದ್ದೇನೆ ಎಂದು ಹೇಳುವ ಮೂಲ ತಮ್ಮ ಹೇಳಿಕೆಗೆ ಸಮಜಾಯಿಷಿ ನೀಡಿದರು.

ಇದನ್ನೂ ಓದಿ: ಪ್ರಧಾನಿ ಮೋದಿ ಸೋಲಲ್ಲ, ರಾಹುಲ್ ಗಾಂಧಿಗೆ ಮದುವೆ ಆಗಲ್ಲ: ಬಸವರಾಜ ಬೊಮ್ಮಾಯಿ

ನಮ್ಮ ನಾಯಕರನ್ನು ಭೇಟಿಯಾಗಲೇ ಬೇಕು ಅಂದರೆ ವಿಧಾನಸೌಧದಲ್ಲಿ ಭೇಟಿಯಾಗಿ ಚರ್ಚೆ ಮಾಡಲಿ. ಯಾವುದೇ ವಿಪಕ್ಷ ನಾಯಕರಿಗೆ ಕರೆ ಮಾಡಲ್ಲವೆಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಹೀಗಿದ್ದಾಗ ನಾವು ಯಾಕೆ ಆಡಳಿತ ಪಕ್ಷದವರನ್ನು ಭೇಟಿಯಾಗಬೇಕು? ಕಾಂಗ್ರೆಸ್ ನಾಯಕರನ್ನು ಭೇಟಿಯಾಗುವ ಬದಲು ನಮ್ಮ ಕಾರ್ಯಕರ್ತರನ್ನು ಭೇಟಿಯಾಗಿ ಎಂದರು.

ನಮ್ಮ ಮುಂದಿನ ಟಾರ್ಗೆಟ್​ ಲೋಕಸಭಾ ಚುನಾವಣೆ: ಯತ್ನಾಳ್

ರಾಜ್ಯ ಬಿಜೆಪಿ ಘಟಕದ ಯಾವುದೇ ನಾಯಕರ ನಡುವೆ ಭಿನ್ನಾಭಿಪ್ರಾಯವಿಲ್ಲ ಎಂದು ಹೇಳಿದ ಯತ್ನಾಳ್, ಬಸವರಾಜ ಬೊಮ್ಮಾಯಿ, ನಾನು ಅಥವಾ ಯಾರೇ ವಿಪಕ್ಷ ನಾಯಕರಾಗಲಿ ನಮ್ಮ ಮುಂದಿನ ಟಾರ್ಗೆಟ್​ ಲೋಕಸಭಾ ಚುನಾವಣೆ ಮಾತ್ರ. ವಿಧಾನಸಭಾ ಚುನಾವಣೆಯಲ್ಲಿ ಆದ ಸೋಲಿನ ಸೇಡನ್ನು ನಾವು ತೀರಿಸಿಕೊಳ್ಳಬೇಕು. ರಾಜ್ಯದಲ್ಲಿ ಹೊಂದಾಣಿಕೆ ಆಗಿರುವ ಬಗ್ಗೆ ಪಕ್ಷದ ವೇದಿಕೆಯಲ್ಲಿ ಚರ್ಚಿಸುತ್ತೇವೆ. ಲೋಕಸಭಾ ಚುನಾವಣೆಯೊಳಗೆ ಎಲ್ಲವನ್ನೂ ತಿದ್ದಿಕೊಳ್ಳುವ ಕೆಲಸ ಆಗುತ್ತದೆ ಎಂದರು.

ಬಸವರಾಜ ಬೊಮ್ಮಾಯಿ ನಾನು ಎಂದು ಜಗಳ ಮಾಡಿಕೊಂಡಿಲ್ಲ. ನಮ್ಮ ನಡುವೆ ಜಗಳ ಹಚ್ಚಬೇಡಿ. ಜಗಳ ಏನಿದ್ದರೂ ಸಿದ್ದರಾಮಯ್ಯ ಮತ್ತು ಶಿವಕುಮಾರ್ ನಡುವೆ ಇದೆ. ನಮ್ಮ ಸುತ್ತ ಯಾರು ಬರಬೇಡಿ ಸಿದ್ದಹಾಗೂ ಶಿವಕುಮಾರ್ ನಡುವೆ ಜಂಗಿ ಕುಸ್ತಿ ನಡೆಯುತ್ತಿದೆ ಎಂದರು.

ಯತ್ನಾಳ್ ಮತ್ತು ನನ್ನದು ಒಂದೇ ಡಿಎನ್​ಎ, ಅದು ಬಿಜೆಪಿ ಡಿಎನ್​ಎ ಎಂದ ಬೊಮ್ಮಾಯಿ

ನನ್ನ ಹಾಗೂ ಯತ್ನಾಳ್ ನಡುವೆ ಯಾವುದೇ ಭಿನ್ನಾಭಿಪ್ರಾಯವಿಲ್ಲ ಎಂದು ಚಿಕ್ಕೋಡಿಯಲ್ಲಿ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ನಾವು ಒಗ್ಗಟ್ಟಾಗಿ ಕಾಂಗ್ರೆಸ್ ಸೋಲಿಸುವ ಕುರಿತು ಮಾತನಾಡಿದ್ದೇವೆ ಹೊರತು ಮತ್ತೇನೂ ಅಲ್ಲ. ಬೆಳಗ್ಗೆಯಿಂದ ನಾವೆಲ್ಲರೂ ಒಟ್ಟಿಗೆ ಇದ್ದೇವೆ. ಅವರ ಕಾರಿನಲ್ಲೇ ಬಂದಿದ್ದೇನೆ. ಇಬ್ಬರೂ ಅಣ್ಣತಮ್ಮಂದಿರ ಹಾಗೆ ಇದ್ದೇವೆ. ಇಬ್ಬರದ್ದೂ ಮೂವತ್ತು ವರ್ಷಗಳ ದೋಸ್ತಿ. ರಾಜಕಾರಣ ಮೀರಿ ನಮ್ಮಿಬ್ಬರ ಸ್ನೇಹವಿದೆ. ಅವರದೇ ಆದ ಶೈಲಿಯಲ್ಲಿ ಆ ರೀತಿ ಹೇಳಿದ್ದಾರೆ. ಅವರು ಸಾರ್ವಜನಿಕವಾಗಿಯೇ ಹೇಳಿದ್ದಾರೆ. ನಾನು ಸಾರ್ವಜನಿಕವಾಗಿಯೇ ಸ್ಪಷ್ಟಿಕರಣ ಕೊಟ್ಟಿದ್ದೇನೆ. ಈಗಲೂ ಹೇಳುತ್ತೇನೆ ನಮ್ಮಿಬ್ಬರದ್ದು ಒಂದೇ ಡಿಎನ್‌ಎ, ಅದು ಬಿಜೆಪಿ ಡಿಎನ್‌ಎ ಎಂದರು.

ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ