ನನ್ನನ್ನು ಸಿಎಂ ಮಾಡಿದ್ರೆ ವಾಪಸ್​​ ಬರುವುದಾಗಿ ಹೇಳಿದ್ದ ಶಾಸಕರು: ಸಮ್ಮಿಶ್ರ ಸರ್ಕಾರದ ಅವಧಿಯ ರಹಸ್ಯ ಬಿಚ್ಚಿಟ್ಟ ಡಿಕೆ ಶಿವಕುಮಾರ್

| Updated By: Ganapathi Sharma

Updated on: Nov 15, 2023 | 5:05 PM

ನನ್ನ ಸಿಎಂ ಮಾಡಿದ್ರೆ ವಾಪಸ್​​ ಬರುವುದಾಗಿ ಮುಂಬೈಗೆ ತೆರಳಿದ್ದ ಶಾಸಕರು ಹೇಳಿದ್ದರು. ಮುಂಬೈನಲ್ಲಿದ್ದ ಎಸ್.ಟಿ.ಸೋಮಶೇಖರ್​, ಗೋಪಾಲಯ್ಯ ಹಾಗೆ ಹೇಳಿದ್ದರು. ಅಂದಿನ ಸಿಎಂ ಕುಮಾರಸ್ವಾಮಿಗೆ ಖುದ್ದು ಕರೆ ಮಾಡಿ ಹೇಳಿದ್ದರು ಎಂದು ಡಿಕೆ ಶಿವಕುಮಾರ್ ಬಹಿರಂಗಪಡಿಸಿದ್ದಾರೆ.

ನನ್ನನ್ನು ಸಿಎಂ ಮಾಡಿದ್ರೆ ವಾಪಸ್​​ ಬರುವುದಾಗಿ ಹೇಳಿದ್ದ ಶಾಸಕರು: ಸಮ್ಮಿಶ್ರ ಸರ್ಕಾರದ ಅವಧಿಯ ರಹಸ್ಯ ಬಿಚ್ಚಿಟ್ಟ ಡಿಕೆ ಶಿವಕುಮಾರ್
ಡಿಕೆ ಶಿವಕುಮಾರ್
Follow us on

ಬೆಂಗಳೂರು, ನವೆಂಬರ್ 15: ರಾಜ್ಯದಲ್ಲಿ ಆಡಳಿತಾರೂಢ ಕಾಂಗ್ರೆಸ್ ಹಾಗೂ ಜೆಡಿಎಸ್ ನಡುವಣ ವಾಕ್ಸಮರ ತಾರಕಕ್ಕೇರಿದೆ. ಜೆಡಿಎಸ್ ನಾಯಕ ಹೆಚ್​ಡಿ ಕುಮಾರಸ್ವಾಮಿ (HD Kumaraswamy) ಅವರು ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ (DK Shivakumar) ವಿರುದ್ಧ ಟೀಕಾ ಪ್ರಹಾರ ನಡೆಸುತ್ತಿದ್ದಾರೆ. ಮತ್ತೊಂದಡೆ ಕಾಂಗ್ರೆಸ್ ಕೂಡ ಜೆಡಿಎಸ್ ಹಾಗೂ ಕುಮಾರಸ್ವಾಮಿ ವಿರುದ್ಧ ವಾಗ್ದಾಳಿ ತೀವ್ರಗೊಳಿಸಿದೆ. ಈ ಮಧ್ಯೆ, ಜೆಡಿಎಸ್ ಹಾಗೂ ಕಾಂಗ್ರೆಸ್ ಮೈತ್ರಿ ಸರ್ಕಾರದ ಅವಧಿಯಲ್ಲಿ ನಡೆದ ವಿದ್ಯಮಾನಗಳ ಬಗ್ಗೆ ಡಿಕೆ ಶಿವಕುಮಾರ್ ಸ್ಫೋಟಕ ಮಾಹಿತಿ ಬಹಿರಂಗಪಡಿಸಿದ್ದಾರೆ.

ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಮಾತನಾಡಿದ ಡಿಕೆ ಶವಕುಮಾರ್, ‘ನನ್ನ ಸಿಎಂ ಮಾಡಿದ್ರೆ ವಾಪಸ್​​ ಬರುವುದಾಗಿ ಮುಂಬೈಗೆ ತೆರಳಿದ್ದ ಶಾಸಕರು ಹೇಳಿದ್ದರು. ಮುಂಬೈನಲ್ಲಿದ್ದ ಎಸ್.ಟಿ.ಸೋಮಶೇಖರ್​, ಗೋಪಾಲಯ್ಯ ಹಾಗೆ ಹೇಳಿದ್ದರು. ಅಂದಿನ ಸಿಎಂ ಕುಮಾರಸ್ವಾಮಿಗೆ ಖುದ್ದು ಕರೆ ಮಾಡಿ ಹೇಳಿದ್ದರು. ಡಿಕೆ ಶಿವಕುಮಾರ್ ಅವರನ್ನು ಮುಖ್ಯಮಂತ್ರಿ ಮಾಡುವುದಾದರೆ ವಾಪಸ್​ ಬರುತ್ತೇವೆ ಎಂದು ಹೇಳಿದ್ದರು. ಆದರೆ, ಶಾಸಕರ ಬೇಡಿಕೆ ಬಗ್ಗೆ ಕುಮಾರಸ್ವಾಮಿ ಆಗ ಬಾಯಿ ಬಿಡಲೇ ಇಲ್ಲ’ ಎಂದು ಹೇಳಿದ್ದಾರೆ.

ಶಾಸಕರ ಬೇಡಿಕೆ ಬಗ್ಗೆ ಆಗ ಬಾಯಿ ಬಿಡದೇ ಇದ್ದ ಕುಮಾರಸ್ವಾಮಿ ಈಗ ಬೇಕಿದ್ದರೆ 19 ಶಾಸಕರು ಬೆಂಬಲ ಕೊಡ್ತೀವಿ ಎಂದು ಹೇಳ್ತಾರೆ. ಡಿ.ಕೆ.ಶಿವಕುಮಾರ್ ಸಿಎಂ ಆದರೆ ಬೆಂಬಲ ಕೊಡುತ್ತೇವೆ ಅಂತಾರೆ. ಹೆಚ್​.ಡಿ.ಕುಮಾರಸ್ವಾಮಿ ಮಾತನ್ನು ನಂಬುವುದಕ್ಕೆ ನಾವು ದಡ್ಡರಾ ಎಂದು ಪ್ರಶ್ನಿಸಿದ್ದಾರೆ.

ಇದನ್ನೂ ಓದಿ: ಜೆಡಿಎಸ್ ನಾಯಕರನ್ನು ಪಕ್ಷಕ್ಕೆ ಬರಮಾಡಿಕೊಂಡ ಬಳಿಕ ಮುಖ್ಯಮಂತ್ರಿ ಸಿದ್ದರಾಮಯ್ಯ ನಮೋನಮಃ ಎಂದು ಯಾಕೆ ಹೇಳಿದರು?

ಕೆಲವು ದಿನಗಳ ಹಿಂದೆ, ಡಿ.ಕೆ.ಶಿವಕುಮಾರ್ ಸಿಎಂ ಆದರೆ ಬೆಂಬಲ ಕೊಡುತ್ತೇವೆ ಎಂದು ಕುಮಾರಸ್ವಾಮಿ ವ್ಯಂಗ್ಯವಾಗಿ ಹೇಳಿದ್ದರು.

ಇನ್ನಷ್ಟು ರಾಜಕೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ