ಗೋ ಹತ್ಯೆ, ಮತಾಂತರ ಕಾಯ್ದೆ ವಾಪಾಸ್ ಹಿಂಪಡೆಯುವ ದುಸ್ಸಾಹಸ ಬೇಡ: ಪೇಜಾವರ ಶ್ರೀ

|

Updated on: Jun 19, 2023 | 8:52 PM

ರಾಜ್ಯ ಸರ್ಕಾರದಿಂದ ಗೋ ಹತ್ಯೆ ಮತಾಂತರ ಕಾಯ್ದೆ ವಾಪಾಸ್​ ವಿಚಾರವಾಗಿ ಉಡುಪಿ ಪೇಜಾವರ ವಿಶ್ವ ಪ್ರಸನ್ನ ತೀರ್ಥ ಸ್ವಾಮೀಜಿ ಸಿಡಿಮಿಡಿಗೊಂಡಿದ್ದಾರೆ. ರಾಜ್ಯದ ಜನರ ಅಭಿಪ್ರಾಯವನ್ನು ಸಂಗ್ರಹ ಮಾಡಿ. ಅದನ್ನು ಗಮನಿಸಿಕೊಂಡು ತೀರ್ಮಾನ ಕೈಗೊಳ್ಳಿ ಎಂದು ಸಿಎಂ ಸಿದ್ದರಾಮಯ್ಯಗೆ ಸಲಹೆ ನೀಡಿದ್ದಾರೆ.

ಗೋ ಹತ್ಯೆ, ಮತಾಂತರ ಕಾಯ್ದೆ ವಾಪಾಸ್ ಹಿಂಪಡೆಯುವ ದುಸ್ಸಾಹಸ ಬೇಡ: ಪೇಜಾವರ ಶ್ರೀ
ಉಡುಪಿ ಪೇಜಾವರ ವಿಶ್ವ ಪ್ರಸನ್ನ ತೀರ್ಥ ಸ್ವಾಮೀಜಿ (ಸಂಗ್ರಹ ಚಿತ್ರ)
Follow us on

ಉಡುಪಿ: ಹೊಸ ಸರ್ಕಾರ ಎರಡು ಕಾಯ್ದೆಗಳನ್ನು ಹಿಂಪಡೆಯುವ ನಿರ್ಧಾರ ಮಾಡಿದೆ. ಇದು ಅತ್ಯಂತ ಕಳವಳಕಾರಿ ಸಂಗತಿ. ಕಾನೂನು ಹಿಂಪಡೆಯುವ ದುಸ್ಸಾಹಸವನ್ನು ಮಾಡಬೇಡಿ ಎಂದು ಉಡುಪಿ ಪೇಜಾವರ ವಿಶ್ವ ಪ್ರಸನ್ನ ತೀರ್ಥ ಸ್ವಾಮೀಜಿ (Pejawar Sri) ಹೇಳಿದರು. ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ರಾಜ್ಯದ ಜನರ ಅಭಿಪ್ರಾಯವನ್ನು ಸಂಗ್ರಹ ಮಾಡಿ. ಅದನ್ನು ಗಮನಿಸಿಕೊಂಡು ತೀರ್ಮಾನ ಕೈಗೊಳ್ಳಿ ಎಂದು ಸಿಎಂ ಸಿದ್ದರಾಮಯ್ಯ ಸರ್ಕಾರಕ್ಕೆ ಪೇಜಾವರ ಸ್ವಾಮೀಜಿ ಸಲಹೆ ನೀಡಿದ್ದಾರೆ.

ಮತಾಂತರದಿಂದ ಹಲವಾರು ಕುಟುಂಬಗಳು ಛಿದ್ರವಾಗಿವೆ

ಹಿಂದಿನ ಸರ್ಕಾರ ಸಮಾಜದಲ್ಲಿದ್ದ ಎರಡು ಗೊಂದಲಗಳನ್ನು ಪರಿಹರಿಸಲು ಕಾಯ್ದೆ ತಂದಿತ್ತು. ಮತಾಂತರ ಮತ್ತು ಗೋ ಹತ್ಯೆ ನಿಷೇಧ ಕಾಯ್ದೆ ಜಾರಿಗೆ ತಂದು ಗೊಂದಲ ನಿವಾರಿಸಿತ್ತು. ಮತಾಂತರದಿಂದ ಹಲವಾರು ಕುಟುಂಬಗಳು ಛಿದ್ರವಾದದ್ದನ್ನು ನಾವು ಕಂಡಿದ್ದೆವು. ಗಂಡ ಹೆಂಡತಿ, ತಾಯಿ ಮಕ್ಕಳ ವೈಮನಸ್ಸಿಗೆ ಮತಾಂತರ ಕಾರಣವಾಗಿತ್ತು.

ಇದನ್ನೂ ಓದಿ: ಸಿಎಂ ಕುರ್ಚಿಗಾಗಿ ಫೈಟ್: ಸಿದ್ದರಾಮಯ್ಯನವರೇ ಹೆಗ್ಗಣ ಬಿದ್ದಿರುವುದು ನಿಮ್ಮ ತಟ್ಟೆಯಲ್ಲಿ ಎಂದ ಆರ್ ಅಶೋಕ

ಹೆಣ್ಮಕ್ಕಳು ಹಸು ಕಟ್ಟಿ ಹಾಲು ಮಾರಿ ಜೀವನ ಸಾಗಿಸುತ್ತಿದ್ದರು. ಕಳ್ಳಕಾಕರು ತಲ್ವಾರು ಝಳಪಿಸಿ ಹಸು ಕದ್ದೊಯ್ಯೋದು ಹೆಚ್ಚಾಯ್ತು. ಹಸು ಸಾಕುವ ಮಹಿಳೆಯರಿಗೆ ಆಸರೆ ಇಲ್ಲದಂತಾಗುತ್ತಿತ್ತು. ಇಂತಹ ಸಮಸ್ಯೆಯನ್ನು ಗಮನಿಸಿ ಹಿಂದಿನ ಸರ್ಕಾರ ಗೋ ಹತ್ಯೆ ನಿಷೇಧ ಕಾಯ್ದೆ ಜಾರಿಗೆ ತಂದಿತು ಎಂದು ಹೇಳದಿರು.

ಗೋಹತ್ಯೆ ನಿಷೇಧ ಕಾಯ್ದೆ ಬಗ್ಗೆ ಸಿದ್ಧರಾಮಯ್ಯ ಹೇಳಿದಿಷ್ಟು

ಇತ್ತೀಚೆಗೆ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತಾಡಿದ ಸಿಎಂ ಸಿದ್ದರಾಮಯ್ಯ, ಗೋಹತ್ಯೆ ನಿಷೇಧ ಕಾಯ್ದೆಯನ್ನು ವಾಪಸ್ಸು ಪಡೆಯುವ ಬಗ್ಗೆ ಇನ್ನೂ ಯಾವುದೇ ತೀರ್ಮಾನ ತೆಗೆದುಕೊಂಡಿಲ್ಲ. ಸಂಪುಟ ಸಭೆಯಲ್ಲಿ ಚರ್ಚೆ ನಡೆಸಿದ ಬಳಿಕ ಒಂದು ನಿರ್ಧಾರಕ್ಕೆ ಬರಲಾಗುತ್ತದೆ ಎಂದು ಹೇಳಿದ್ದರು.

ಇದನ್ನೂ ಓದಿ: ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಮೇಯರ್, ಉಪ ಮೇಯರ್ ಚುನಾವಣೆ; ಶುರುವಾಯ್ತು ರೆಸಾರ್ಟ್ ರಾಜಕಾರಣ

1964 ಕಾಯ್ದೆ ಪ್ರಕಾರ, 12 ವರ್ಷಗಳ ಕಾಲ ದುಡಿದು ವಯಸ್ಸಾದ ರಾಸುಗಳನ್ನು, ಕೃಷಿ ಚಟುವಟಿಕೆಗಳಿಗೆ ಅಯೋಗ್ಯವೆನಿಸುವ ಮತ್ತು ನಿಷ್ಪ್ರಯೋಜಕ ದನಕರುಗಳನ್ನು ವಧೆ ಮಾಡಬಹುದಾಗಿದೆ, ಸುಮಾರು 6 ದಶಕಗಳಿಂದ ಈ ಕಾಯ್ದೆ ಜಾರಿಯಲ್ಲಿತ್ತು. ಆದರೆ ಬಿಜೆಪಿ ಅಧಿಕಾರಕ್ಕೆ ಬಂದಾಗಲೆಲ್ಲ ಅದನ್ನು ತಿದ್ದುಪಡಿ ಮಾಡಿದೆ ಎಂದಿದ್ದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.