ಬೆಂಗಳೂರು: ಪ್ರಿಯಾಂಕ್ ಖರ್ಗೆ ವಿರುದ್ಧ ಸಚಿವ ಸುಧಾಕರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಟ್ವೀಟ್ ಮೂಲಕ ಆಕ್ರೋಶ ವ್ಯಕ್ತಪಡಿಸಿದ ಡಾಕೆ ಸುಧಾಕರ್, ಪ್ರಿಯಾಂಕ್ ಖರ್ಗೆಯವರೇ ನಿಮ್ಮ ಸಾಂದರ್ಭಿಕ ಮರೆವು, ಜಾಣ ಕುರುಡು, ಕೀಳು ರಾಜಕೀಯದ ಆಲೋಚನೆಗಳು ಯಾರನ್ನ ಮೆಚ್ಚಿಸಲು ಎನ್ನುವುದು ಜನರಿಗೆ ತಿಳಿದಿದೆ. ಸಚಿವರಿಗೆ ಸರ್ಕಾರದ ಪರ ಮಾತಾಡುವ ಹೊಣೆ ಇದೆ. ಸಾಮೂಹಿಕ ಹೊಣೆಗಾರಿಕೆ ಇದೆ ಎನ್ನುವುದನ್ನು ಮರೆತದ್ದೇಕೆ? ಎಂದು
ಪ್ರಶ್ನಿಸಿದ್ದಾರೆ.
ಇದು ಕಾಂಗ್ರೆಸ್ ಮುಖಂಡರ ಹತಾಶೆ, ಜನರ ದಾರಿ ತಪ್ಪಿಸುವ ಆತುರದ ಪ್ರದರ್ಶನವಲ್ಲದೆ ಮತ್ತೇನಲ್ಲ. ಈ ಕೀಳು ರಾಜಕೀಯ ಕಾಂಗ್ರೆಸ್ಸಿಗೇ ಸರಿ. ಪ್ರಿಯಾಂಕ್ ಖರ್ಗೆ ಐಟಿ ಬಿಟಿ ಸಚಿವರಾಗಿದ್ದರು. ನಂತರ ಸಮಾಜ ಕಲ್ಯಾಣ ಖಾತೆಯ ಸಚಿವರಾಗಿದ್ದರು. ಆಗ ಕೇವಲ ಇಲಾಖೆ ಬಗ್ಗೆ ಮಾತ್ರ ಮಾತನಾಡಿದ್ದರಾ? ಇದನ್ನು ಪ್ರಿಯಾಂಕ್ ಖರ್ಗೆ ಒಮ್ಮೆ ನೆನಪು ಮಾಡಿಕೊಳ್ಳಲಿ. ಕಾಂಗ್ರೆಸ್ನ ಅಪಪ್ರಚಾರ, ಸುಳ್ಳಿನ ರಾಜಕಾರಣ ಬಿಜೆಪಿ ಸಹಿಸುವುದಿಲ್ಲ ಎಂದು ಡಾ. ಕೆ ಸುಧಾಕರ್ ಟ್ವೀಟ್ ಮಾಡಿದ್ದಾರೆ.
ನಿಮ್ಮ ಹುಳುಕುಗಳನ್ನು ಮುಚ್ಚಿಕೊಳ್ಳಲು ಇನ್ನೊಬ್ಬರ ಮೇಲೆ ನೂರು ಸುಳ್ಳು ಹೇಳುವ ನಿಮ್ಮ ಕುತಂತ್ರಗಳನ್ನು ಜನರ ಮುಂದಿಡಲೇಬೇಕು. ಈ ಕೆಲಸವನ್ನು ಕೇವಲ ಸಚಿವರು ಮಾತ್ರವಲ್ಲ, ಪ್ರತಿ ಬಿಜೆಪಿ ಕಾರ್ಯಕರ್ತ ನಾಟಕ ಬಯಲು ಮಾಡುತ್ತಾರೆ. ಕಾಂಗ್ರೆಸ್ ನಾಟಕವನ್ನು ಬಯಲಿಗೆಳೆಯಲು ಸಿದ್ಧರಾಗಿದ್ದಾರೆ ಎಂದು ಆರೋಗ್ಯ ಇಲಾಖೆ ಸಚಿವ ಡಾ. ಕೆ ಸುಧಾಕರ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಮಾನ್ಯ @PriyankKharge ಅವರ ಸಾಂದರ್ಭಿಕ ಮರೆವು, ಜಾಣ ಕುರುಡು, ಕೀಳು ರಾಜಕೀಯದ ಆಲೋಚನೆಗಳು ಯಾರನ್ನು ಮೆಚ್ಚಿಸಲು ಎನ್ನುವುದು ಜನರಿಗೆ ತಿಳಿದಿದೆ. ಚಳಿ,ಮಳೆ,ಗಾಳಿಗಳ ಕಷ್ಟ ಅರಿಯದ ಅವರು ಆನುವಂಶಿಕ ನೆರಳಿನಲ್ಲೇ ವಿಹರಿಸಲಿ, ಆದರೆ ಸಂಪುಟ ಸಚಿವರಿಗೆ ಸರ್ಕಾರದ ಪರವಾಗಿ ಮಾತನಾಡುವ ಸಾಮೂಹಿಕ ಹೊಣೆಗಾರಿಕೆ ಇದೆ ಎನ್ನುವುದನ್ನು ಮರೆತದ್ದೇಕೆ? (1/3) pic.twitter.com/Iq7bDTTNOS
— Dr Sudhakar K (@mla_sudhakar) November 14, 2021
ಇದನ್ನೂ ಓದಿ
ಆಟದಿಂದ ವಂಚಿತರಾದ ಮಕ್ಕಳು; ಆಟದ ಮೈದಾನದಲ್ಲಿ ಗೋವಿನಜೋಳ ಬೆಳೆ, ಗ್ರಾಮಸ್ಥರಿಂದ ಆಕ್ರೋಶ
ಬೆಂಗಳೂರು: ಕೊವಿಡ್ ಲಸಿಕೆ ಪೂರೈಸುವುದಕ್ಕೆ ಡ್ರೋನ್ ಬಳಕೆ; 10 ನಿಮಿಷದಲ್ಲಿ 14 ಕಿ.ಮೀ ದೂರ ಸಾಗಾಟ